twitter
    For Quick Alerts
    ALLOW NOTIFICATIONS  
    For Daily Alerts

    'ಹಾಫ್ ಮೆಂಟ್ಲು' ನೋಡಿ ವಿಮರ್ಶಕರು ಏನಂದ್ರು?

    By Suneetha
    |

    ಚೊಚ್ಚಲ ನಿರ್ದೇಶಕ ಲಕ್ಷ್ಮಿ ದಿನೇಶ್ ಆಕ್ಷನ್-ಕಟ್ ಹೇಳಿದ್ದ, ವಿಭಿನ್ನ ಲವ್ ಸ್ಟೋರಿ ಆಧಾರಿತ ಕಥೆಯನ್ನು ಹೊಂದಿರುವ 'ಹಾಫ್ ಮೆಂಟ್ಲು' ಚಿತ್ರ ಅಂತೂ ಇಂತೂ ಈ ವಾರ ತೆರೆ ಯಶಸ್ವಿಯಾಗಿ ತೆರೆ ಕಂಡಿದೆ.

    'ಇಂತಿ ನಿನ್ನ ಪ್ರೀತಿಯ' ಚಿತ್ರದ ಖ್ಯಾತಿಯ ನಟಿ ಸೋನು ಗೌಡ ಹಾಗೂ ನಟ ಸಂದೀಪ್ ಗೌಡ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದ 'ಹಾಫ್ ಮೆಂಟ್ಲು' ಸಿನಿಮಾ ಬಿಡುಗಡೆ ಕಾಣದೆ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು.[ನೀವು 'ಹಾಫ್ ಮೆಂಟ್ಲು' ಆಗೋ ಸಿನಿಮಾ ಬರ್ತಿದೆ]

    ಇದೀಗ ಜಿ.ಶಿವಕುಮಾರ ಅಂಡ್ ಸನ್ಸ್ ಬಂಡವಾಳ ಹೂಡಿರುವ 'ಹಾಫ್ ಮೆಂಟ್ಲು' ಎಂಬ ರೋಮ್ಯಾಂಟಿಕ್ ಸಿನಿಮಾ ಇಡೀ ರಾಜ್ಯಾದ್ಯಂತ ತೆರೆಕಂಡಿದ್ದು, ಚಿತ್ರಕ್ಕೆ ವಿಮರ್ಶಕರು ವಿಭಿನ್ನ ಕಾಮೆಂಟ್ ಮಾಡಿದ್ದಾರೆ.['ಹಾಫ್ ಮೆಂಟ್ಲು' ರಾತ್ರಿ ಶೂಟಿಂಗ್ ನಲ್ಲಿ ಏನಾಯ್ತು?]

    ಹುಡುಗಿಗಾಗಿ, ಹುಡುಗಿಯಿಂದ, ಹುಡುಗಿಗೋಸ್ಕರ ಹುಚ್ಚನಾದ ಮತ್ತೊಬ್ಬ ಹುಡುಗನ ಹೃದಯ ವಿದ್ರಾವಕ ಕಥೆಯನ್ನಾಧರಿತ 'ಹಾಫ್ ಮೆಂಟ್ಲು' ಚಿತ್ರಕ್ಕೆ ಖ್ಯಾತ ದಿನಪತ್ರಿಕೆಯ ವಿಮರ್ಶಕರು ವ್ಯಕ್ತಪಡಿಸಿದ ವಿಮರ್ಶೆಗಳ ಕಲೆಕ್ಷನ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

    ನೋಡಿದವರಿಗೆ 'ಹಾಫ್ ಮೆಂಟ್ಲು'- ವಿಜಯ ಕರ್ನಾಟಕ

    ನೋಡಿದವರಿಗೆ 'ಹಾಫ್ ಮೆಂಟ್ಲು'- ವಿಜಯ ಕರ್ನಾಟಕ

    ಸಂದೀಪ್‌ ಗೌಡ ಮತ್ತು ಸೋನು ಗೌಡ ನಾಯಕ ನಾಯಕಿಯಾಗಿ ನಟಿಸಿರುವ ಈ ಚಿತ್ರದ ಕತೆ ಏನು ಎನ್ನುವುದನ್ನು ಚಿತ್ರದ ಹೆಸರೇ ಹೇಳಿಬಿಡುತ್ತದೆ. ನಾಯಕ ಅರೆ ಹುಚ್ಚನೋ, ಬುದ್ಧಿಮಾಂದ್ಯನೋ ಎಂಬ ಅನುಮಾನಗಳನ್ನು ಇಟ್ಟುಕೊಂಡೇ ಸಿನಿಮಾ ನೋಡಬೇಕಾಗುತ್ತದೆ. ನಾಯಕನಿಗೆ ಎಲ್ಲರಂತೆ ಸಹಜವಾಗಿ ಯೋಚಿಸುವ ಶಕ್ತಿ ಇಲ್ಲ. ತಿಳಿವಳಿಕೆಯೂ ಕಮ್ಮಿ. ಕೆಲ ಸಂದರ್ಭಗಳಲ್ಲಿ ಮಗುವಿನಂತೆ ಯೋಚಿಸುತ್ತಾನೆ. ತಾಯಿಯನ್ನು ಅನಾಥ ಆಶ್ರಮದಲ್ಲಿ ಬಿಟ್ಟು ತಾನು ಒಂಟಿಯಾಗಿದ್ದುಬಿಡುವ ಇವನಿಗೆ ಸುಂದರ ಹುಡುಗಿ ಮಧು ಎಂಬುವವಳ ಜತೆ ಲವ್‌ ಆಗುತ್ತದೆ! ಕೈ ಮೇಲೆ ಅವಳ ಹೆಸರನ್ನೇ ಟ್ಯಾಟೋ ಹಾಕಿಸಿಕೊಂಡು ಅವಳನ್ನು ಕಾಪಾಡುತ್ತಾನೆ. ಕೆಟ್ಟ ದೃಷ್ಟಿಯಲ್ಲಿ ಅವಳನ್ನು ನೋಡುವವರನ್ನು ತದುಕುತ್ತಾನೆ.- ಪದ್ಮಾ ಶಿವಮೊಗ್ಗ.

    'ಅರೆಬೆಂದ 1/2 ಮೆಂಟಲ್ಲಾಗ್ ಒಂದು ಲವ್ ಸ್ಟೋರಿ'- ಕನ್ನಡ ಪ್ರಭ

    'ಅರೆಬೆಂದ 1/2 ಮೆಂಟಲ್ಲಾಗ್ ಒಂದು ಲವ್ ಸ್ಟೋರಿ'- ಕನ್ನಡ ಪ್ರಭ

    ನಾಯಕ ನಟ ಪ್ರೀತಿಗೆ ಬಿದ್ದ 14ನೇ ದಿನ ಹೂ ಕೊಳ್ಳಲು ಹೋದಾಗ, ಹೂವು ಮಾರುವ ಮಹಿಳೆ ಮಲ್ಲಿಗೆ ಕೊಳ್ಳಲು ಹೇಳುತ್ತಾಳೆ. ಮಲ್ಲಿಗೆ ಹೂವು ಕಾಮದ ಸಂಕೇತ, ರೋಸ್ ಪ್ರೀತಿಯ ಸಂಕೇತ ಎಂದು ಭಾಷಣ ಬಿಗಿಯುವ ನಾಯಕನಿಗೆ, ಮಲ್ಲಿಗೆ ಹೂವು ಕೊಂಡು ಪಲ್ಲಂಗದ ಮೇಲೆ ಗಂಡಸಾಗ್ತೀಯೋ ಅಥವಾ ಗುಲಾಬಿ ಹಿಡಿದು ಗೆಣಸಾಗ್ತೀಯೋ ಯೋಚನೆ ಮಾಡು ಎನ್ನುವ ಮಹಿಳೆಯ ಮಾತುಗಳು ಸಿನಿಮಾಗೆ ಮೂಡ್ ಸೆಟ್ ಮಾಡುತ್ತವೆ. ಅಲ್ಲಿಂದ ಆರಂಭವಾಗುವ 'ಹಾಫ್ ಮೆಂಟ್ಲು' ನಾಯಕ ನಟನ ಸ್ವಗತಕ್ಕೆ, ಹುಚ್ಚು ಪ್ರೀತಿಗೆ ಮೊದಲೆಲ್ಲಿ ಕೊನೆಯೆಲ್ಲಿ?.

    'ಪಾಗಲ್ ಪ್ರೇಮಿಯ ಪರಿಶುದ್ಧ ಕನವರಿಕೆ' - ಉದಯವಾಣಿ

    'ಪಾಗಲ್ ಪ್ರೇಮಿಯ ಪರಿಶುದ್ಧ ಕನವರಿಕೆ' - ಉದಯವಾಣಿ

    ಸ್ಮಶಾನದ ಗೇಟು ಪಕ್ಕದಲ್ಲಿ 'ಮ್ಯಾನ್ ಬಿಹೈಂಡ್ ಫೀಲಿಂಗ್ಸ್' ಎಂಬ ಟ್ಯಾಗ್ ಲೈನ್ ಇಟ್ಟು ಇಂಟರ್ ವಲ್ ಬರುತ್ತದೆ. ಅಲ್ಲಿಗೆ ಇದು ದೆವ್ವದ ಜೊತೆಗಿನ ಲವ್ ಸ್ಟೋರಿನಾ ಅಥವಾ ಮತ್ತೆ 'ಆತ್ಮ' ಆಟವೋ ಎಂಬ ಸಣ್ಣ ಅನುಮಾನ ಪ್ರೇಕ್ಷಕರಲ್ಲಿ ಮೂಡುತ್ತದೆ. ಇಂಟರ್ ವಲ್ ನಲ್ಲಿ ಹೊಟ್ಟೆ ತಣ್ಣಗೆ ಮಾಡಿಕೊಂಡು ಬಂದು ಕೂತ ಪ್ರೇಕ್ಷಕನ ಲೆಕ್ಕಾಚಾರ ಉಲ್ಟಾ ಆಗಿರುತ್ತದೆ. ಅದೃಷ್ಟವಶಾತ್, ಇದು ದೆವ್ವದ, ಆತ್ಮದ ಸಿನಿಮಾವಂತೂ ಆಗಿರೋದಿಲ್ಲ. ನೇರಾನೇರ ಒಂದು ಲವ್ ಸ್ಟೋರಿ. ಹಾಗಾದರೆ ಸ್ಮಶಾನದ ಎದುರು ನಾಯಕ ಯಾಕೆ ಹೋಗುತ್ತಾನೆಂದು ನೀವು ಕೇಳಬಹುದು. ಅಷ್ಟೊಂದು ಕುತೂಹಲವಿದ್ದರೆ ನೀವು ಸಿನಿಮಾ ನೋಡಿ. - ರವಿಪ್ರಕಾಶ್ ರೈ.

    'Psycho-Stalker Strikes Again' - The Hindu

    'Psycho-Stalker Strikes Again' - The Hindu

    Through a string of double entendre dialogues and the droning voice of the hero, the filmmaker tells us that when men fall in love, it is pure and real, while women first fall for the man's money and walk all over his feelings. There is a ridiculous dialogue in the film where another jilted lover says that men are like idlis, hence pure; women are like dosas (nobody knows what this metaphor is supposed to mean but the man was serious about it when he said it.) Half Mentalu, with its half-baked plot and misunderstood idea of love drives you mad, for sure.

    English summary
    Kannada Movie 'Half Mentalu' Critics Review. Kannada Actor Sandeep Gowda, Kannada Actress Sonu Gowda in the lead role. The movie is directed by Lakshmi Dinesh.
    Saturday, April 2, 2016, 13:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X