»   » ಚಿತ್ರ ವಿಮರ್ಶೆ: ವಿಮರ್ಶಕರ ದೃಷ್ಟಿಕೋನದಲ್ಲಿ 'ಕ'

ಚಿತ್ರ ವಿಮರ್ಶೆ: ವಿಮರ್ಶಕರ ದೃಷ್ಟಿಕೋನದಲ್ಲಿ 'ಕ'

Posted By:
Subscribe to Filmibeat Kannada

ತನ್ನ ವಿಭಿನ್ನ ಶೀರ್ಷಿಕೆಯಿಂದ ಚಿತ್ರರಸಿಕರ ಗಮನಸೆಳೆದ ಚಿತ್ರ 'ಕ'. ಆರಂಭದಿಂದಲೂ ಭಿನ್ನ ಪ್ರಚಾರ ನೀಡುತ್ತಾ ಬಂದ ಈ ಚಿತ್ರದ ಬಗ್ಗೆ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖ್ಯಾತ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರ ಪುತ್ರ ಹೆಸರಾಂತ ಡಿಸೈನರ್ ಸಾಯಿ ಕೃಷ್ಣ ಅವರ ಚೊಚ್ಚಲ ಪ್ರಯತ್ನವಿದು.

ಮೊದಲ ಪ್ರಯತ್ನದಲ್ಲಿ ಸಾಯಿ ಕೃಷ್ಣ ಅವರು ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಾಯಿ ಕೃಷ್ಣ ಅವರು ‘ಕ' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಅಲ್ಲದೆ ಸ್ವಂತ ಲಾಂಛನದಲ್ಲಿ ನಿರ್ಮಿಸಿದ ಚಿತ್ರ. ಸೆನ್ಸಾರ್ ನಲ್ಲಿ ಯು/ಎ ಅರ್ಹತಾ ಪತ್ರ ಸ್ವೀಕರಿಸಿರುವ 'ಕ' ...‘ಪ್ಯಾರ್ ರಿಸ್ಕ್ ಔರ್ ಮೋಹಬತ್...ಎಂಬ ಉಪಶೀರ್ಷಿಕೆ ಇಟ್ಟುಕೊಂಡಿದೆ. [ಕನ್ನಡ ಚಿತ್ರ ವಿಮರ್ಶೆಗಳು]


ಜಯಣ್ಣ ಕಂಬೈನ್ಸ್ ಅರ್ಪಿಸುವ ಸಂಗೀತ ಮೂವೀಸ್ ಅವರ ‘ಕ' ಚಿತ್ರದ ನಿರ್ಮಾಪಕರು ರಾಜಮ್ಮ ಸಾಯಿಪ್ರಕಾಶ್. ಶರತ್, ಮೋನಿಶ್ ನಾಗರಾಜ್, ವಿಶಾಲ್ ನಾಯರ್, ಶೈನ್ ಶೆಟ್ಟಿ ಜೊತೆಗ ಪವಿತ್ರ, ಅನುಷ, ಪಲ್ಲವಿ, ದೀಪ, ದೀಪ್ತಿ ಸಹ ತಾರಾಗಣದಲ್ಲಿ ಇದ್ದಾರೆ. ಛಾಯಾಗ್ರಹಣ ಸ್ಟೀವ್ ಬೆಂಜಮಿನ್, ಸಂಗೀತ ಗಣೇಶ್ ನಾರಾಯಣ ಅವರದು. ವಿವಿಧ ಪತ್ರಿಕೆಗಳು ಕಂಡಂತೆ 'ಕ' ಚಿತ್ರದ ವಿಮರ್ಶೆ ಇಲ್ಲಿದೆ.

ಪಾಸ್ ರಿಸಲ್ಟು - ಉದಯವಾಣಿ
'ಕ'ನಲ್ಲಿ ಅದೆಷ್ಟೋ ಪ್ರೇಮಕಥೆಗಳಿವೆ. ಕೆಲವು ಪ್ರೇಮಕಥೆಗಳು ಸುಖಾಂತ್ಯ ಕಂಡರೆ, ಕೆಲವು ದುಖಾಂತ್ಯ ಕಾಣುತ್ತವೆ, ಇನ್ನೂ ಕೆಲವು ಕಥೆಗಳು ದಾರುಣ ಅಂತ್ಯ ಕಾಣುತ್ತವೆ. ಅಂತ್ಯ ಹೇಗಾದರೂ ಇರಲಿ, 'ಕ'ಡೆಗೂ ನಿಜವಾದ ಪ್ರೀತಿ ಮಾತ್ರ ಉಳಿಯುತ್ತದೆ ಎಂಬುದನ್ನು ಚಿತ್ರ ಸಾರುತ್ತದೆ. ಬಹುಶಃ ಕಥೆ ಮತ್ತು ಪಾತ್ರಗಳನ್ನು ಒಂದಿಷ್ಟು ಕಡಿಮೆ ಮಾಡಿದ್ದರೆ, ಸಾಯಿ ನಿಜಕ್ಕೂ ಗೆಲ್ಲುತ್ತಿದ್ದರೇನೋ.'ಕ'ಥೆಯೇ ಬೇರೆ ಇರುತ್ತಿತ್ತು - ವಿಜಯವಾಣಿ
ಸಾಯಿಪ್ರಕಾಶ್ ರಂಹ ಹಿರಿಯ ನಿರ್ದೇಶಕನ ಪುತ್ರನಾಗಿ, ಸಿನಿಮಾ ಪೋಸ್ಟರ್ ಡಿಸೈನರ್ ಆಗಿ ಬಣ್ಣದ ಲೋಕದ ಆಳ ಅಗಲ ಬಲ್ಲವರಂತೆ 'ಕ' ಕಟ್ಟಿಕೊಟ್ಟಿದ್ದಾರವರು. ಪ್ರೀತಿ ಅರಸುವಾಗ ಅದು ಕಾಲಹರಣದಂತೆ ಕಾಣುತ್ತದೆ, ಒಡಮೂಡಿದ ಮೇಲೆ ಸಿಹಿಯಾದ ಹೂರಣ. ಕ ಪ್ರಥಮಾರ್ಧ ಹಾಗೂ ದ್ವಿತೀಯಾರ್ಧಗಳೂ ಹಾಗೇ. ನಾಟಕದ ತಾಲೀಮಿನಂತೆ, ಧಾರಾವಾಹಿಯಂತೆ, ಸಾಕ್ಷ್ಯಚಿತ್ರದಂತೆ...ಸಾಗಿ ಕ್ಲೈಮ್ಯಾಕ್ಸ್ ನಲ್ಲಿ ಶೀರ್ಷಿಕೆ ಗೀತೆಗೆ ಬರುವ ಹೊತ್ತಿಗೆ ಸಿನಿಮಾ ಅನ್ನಿಸುತ್ತದೆ!ಮನಮುಟ್ಟದ ಪ್ರೇಮ 'ಕ'ಥೆ - ಪ್ರಜಾವಾಣಿ
ಆನೆ ನಡೆದದ್ದೇ ದಾರಿ ಹಾದಿ ಎನ್ನುವಂತೆ ತೆರೆಯ ಮೇಲೆ ಚಿತ್ರಕಥೆ ಸಾಗುತ್ತಿದ್ದರೆ ಯವುದೇ ರಸಾನುಭವವಿಲ್ಲದಂತೆ ಪ್ರೇಕ್ಷಕ ನಿಶ್ಚಿಂತೆಯಿಂದ ಕುರ್ಚಿಗೆ ಒರಗಬಹುದು! ಎತ್ತಕಡೆಯಿಂದ ನೋಡಿದರೂ ಈ ಪ್ರೇಮಕಥೆ ಹಿತವಾಗಿ ಕಾಣಿಸುವುದಿಲ್ಲ. ಅದೇ ಹಳೆ ಬಾಟಲಿ, ಹಳೆ ಮದ್ಯ. ಹೇಳುವ ಧಾಟಿಯಲ್ಲೂ ವಿಶೇಷವೇನಿಲ್ಲ. ಇತ್ತೀಚಿನ ಪ್ರೇಮಕಥೆಗಳಲ್ಲಿ ವಿಜೃಂಭಿಸುವ ಮಚ್ಚು ಲಾಂಗುಗಳನ್ನು ಇಲ್ಲಿ ದೂರವಿಟ್ಟಿದ್ದಾರೆ ಎನ್ನುವುದೇ ಮೆಚ್ಚುವ ಅಂಶ.


Ka movie review

ಪ್ರೀತಿಯ ಕವಲು - ಹೊಸ ದಿಗಂತ
ಕಥೆ ತುಂಬಾ ಸಿಂಪಲ್. ಪ್ರೇಮಿಗಳ ದಿನದಂದು ನಡೆಯುವ ಕಥೆಗೆ ಒಂದಷ್ಟು ಸಿನಿಮೀಯ ಟಚ್ ನೀಡಲಾಗಿದೆ. ಕಥೆ ಒಂದೇ ದಿನದಲ್ಲಿ ನಡೆದರೂ ಪಾತ್ರವರ್ಗ ಮಾತ್ರ ತುಂಬಾ ದೊಡ್ಡದು. ಮೊದಲ ನಿರ್ದೇಶನ ಎಂಬುದಕ್ಕೆ ಗ್ರೇಸ್ ಮಾರ್ಕ್ಸ್ ಕೊಟ್ಟರೂ, ಸಾಯಿ ಉತ್ತೀರ್ಣರಾಗಲು ಮತ್ತಷ್ಟು ಶ್ರಮಪಡುವ ಅಗತ್ಯವಿದೆ.
English summary
Kannada movie 'Ka' critics review. The film opened to mostly mixed reviews. The romantic entertainer written and directed by Sai Krishna. The film is the first anthology film in Kannada with fresh talents.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada