For Quick Alerts
  ALLOW NOTIFICATIONS  
  For Daily Alerts

  ಪ್ರೇಕ್ಷಕ ಕಂಡಂತೆ ಥ್ರಿಲ್ಲಿಂಗ್ ಆಗಿದೆ 'ಕತ್ತಲೆಕೋಣೆ'

  By ರವಿರಾಜ್ ಬೈಂದೂರು
  |

  ಪತ್ರಕರ್ತ ಸಂದೇಶ್ ಶೆಟ್ಟಿ ಅಜ್ರಿಯವರ ನಿರ್ದೇಶನ ಹಾಗೂ ನಟನೆಯಲ್ಲಿ ಮೂಡಿ ಬಂದಿರುವ ನೈಜ ಘಟನೆಯಾದಾರಿತ ಕತ್ತಲೆಕೋಣೆ ಸಿನಿಮಾ ಕಳೆದ ವಾರ ರಾಜ್ಯಾದ್ಯಂತ ತೆರೆಕಂಡಿದೆ. ಈ ಸಿನಿಮಾ ನೋಡಿದ ಪ್ರೇಕ್ಷಕನ ಅಭಿಪ್ರಾಯ ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.

  ಕತ್ತಲೆಕೋಣೆ ಸಿನಿಮಾದಲ್ಲಿ ಯಾರಿಗೂ ಕಾಣದ ಕತ್ತಲ ಜಗತ್ತಿನ ಕರಾಳ ಮುಖಗಳನ್ನು ಪರಿಚಯಿಸುವ ಪ್ರಯತ್ನ ಮಾಡುವುದರ ಜೊತೆಗೆ ಪತ್ರಿಕೋದ್ಯಮದ ಇನ್ನೊಂದು ಕರಾಳ ಮುಖವನ್ನು ನಮ್ಮ ಮುಂದೆ ತೆರೆದಿಡುವ ಪ್ರಯತ್ನವನ್ನು ಮಾಡಿದ್ದಾರೆ.

  ಒಂದೆಡೆ ಮಾಫಿಯಾದ ಕ್ರೂರ ಜಗತ್ತು, ಇನ್ನೊಂದೆಡೆ ತಂದೆ ತಾಯಿಯ ವಿರೋಧ ಕಟ್ಟಿಕೊಂಡು ಸೈನಿಕನಾಗುವ ಕನಸು ಹೊತ್ತು ಹುಚ್ಚನಂತಾಡುವ ಸ್ಯಾಂಡಿ ಎಂಬ ಹುಡುಗನ ವಿಚಿತ್ರ ಪಾಡು ಆತನ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವ ಕ್ರೂರ ಪ್ರಪಂಚವನ್ನು ಚಿತ್ರ ಎಳೆ ಎಳೆಯಾಗಿ ತೆರೆದಿಡುತ್ತಾ ಸಾಗುತ್ತದೆ. ಪೂರ್ತಿ ವಿಮರ್ಶೆ ಮುಂದೆ ಓದಿ....

  ಪತ್ರಿಕೋದ್ಯಮ ಜೊತೆಗೆ ಕಥೆ

  ಪತ್ರಿಕೋದ್ಯಮ ಜೊತೆಗೆ ಕಥೆ

  ಚಿತ್ರವನ್ನು ಅಚ್ಚುಕಟ್ಟಾಗಿ ನಿರ್ದೇಶನ ಮಾಡಿರುವ ಸಂದೇಶ್ ಅವರು ಚಿತ್ರದಲ್ಲಿ ಪತ್ರಿಕೆಯೊಂದರ ಸಂಪಾದಕರಾಗಿ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದುದ್ದಕ್ಕೂ ಕತ್ತಲೆಕೋಣೆಯ ರಹಸ್ಯ ಬೇದಿಸುತ್ತ ಸಾಗುತ್ತಾರೆ. ಸ್ಥಳೀಯ ಪ್ರತಿಭೆ ಸುನಿಲ್ ಉಪ್ಪುಂದ ಪತ್ರಿಕಾ ವರದಿಗಾರನಾಗಿ ಒಂದೊಳ್ಳೆ ಪಾತ್ರಕ್ಕೆ ಅಷ್ಟೇ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ನಾಯಕ ಸಂದೇಶ್ ಅವರಿಗೆ ಜೊತೆಯಾಗಿ ಹೆನಿಕಾ ರಾವ್ ನಟಿಸಿದ್ದು ಪತ್ರಿಕಾ ವರದಿಗಾರ ಪಾತ್ರದಾರಿ ಸುನಿಲ್ ಉಪ್ಪುಂದ ತಂಗಿಯಾಗಿ ನಾಯಕನಿಗೆ ಕತ್ತಲಕೋಣೆಯ ರಹಸ್ಯಗಳ ಸುಳಿವು ನೀಡುತ್ತ ನಾಯಕನೊಂದಿಗೆ ಹೆಜ್ಜೆ ಹಾಕಿದ್ದಾರೆ.

  ಕಾಡುವ ಸೈಕೋ ಸ್ಯಾಂಡಿ

  ಕಾಡುವ ಸೈಕೋ ಸ್ಯಾಂಡಿ

  ಸೈಕೊ ಸ್ಯಾಂಡಿಯ ಪಾತೃದಲ್ಲಿ 'ವೈಶಾಖ್ ಅಮಿನ್'ರವರ ಮನೋಜ್ನ ಅಭಿನಯ ಪ್ರೇಕ್ಷಕರ ಗಮನ ಸೇಳೆಯುತ್ತದೆ. ಅಲ್ಲದೆ ಸೈನಿಕರ ವಿರುದ್ಧ ಮಾತಾಡುವವರು, ದೇಶ ದ್ರೋಹದ ಮಾತನಾಡುವವರು ಸ್ವಂತ ತಂದೆ ತಾಯಿಯಾದರು ಸರಿಯೆ ಅವರನ್ನು ಕೊಂದೇ ಬಿಡಬೇಕು ಎನುತ್ತ ಸೈನಿಕರ ಕುರಿತು ತುಚ್ಚವಾಗಿ ಮಾತನಾಡುವ ತಂದೆಯತ್ತ ಬಂದುಕಿನ ಗುರಿ ಇಡುವ ಸ್ಯಾಂಡಿಯ ಡೈಲಾಗ್ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ. ಮಾಧಕ ವ್ಯಸನಿ ಸೈಕೊ ಸ್ಯಾಂಡಿಯ ಪಾತ್ರ ಚಿತ್ರ ಮುಗಿಸಿ ಹೊರಬಂದ ಮೇಲು ಕಾಡುತ್ತದೆ. ಹಾಗೂ ಚಿತ್ರದಲ್ಲಿ ಆತನ ಜೊತೆಗಾರ ಸ್ನೇಹಿತನ ಕಾಮಿಡಿ ಅಭಿನಯ ಕೂಡ ಸಾಕಷ್ಟು ಗಮನ ಸೆಳೆಯುತ್ತದೆ. ಪ್ರೇಕ್ಷಕರನ್ನು ಬಿದ್ದು ಬಿದ್ದು ನಗಿಸುತ್ತದೆ.

  ಗಮನ ಸೆಳೆಯುವ ಸ್ಪೆಷಲ್ ಎಂಟ್ರಿ

  ಗಮನ ಸೆಳೆಯುವ ಸ್ಪೆಷಲ್ ಎಂಟ್ರಿ

  ಪತ್ರಕರ್ತ ಅಶ್ವತ್ ಆಚಾರ್ಯ ಎಡಬೆಟ್ಟು ಮಾಫಿಯಾ ಜಗತ್ತಿನೊಂದಿಗೆ ಕೈ ಜೋಡಿಸುವ ಭೃಷ್ಟ ಪೋಲಿಸ್ ಠಾಣಾಧಿಕಾರಿಯ ಪಾತೃದಲ್ಲಿ ಕಾಣಿಸಿಕೊಂಡಿದ್ದು ಖಡಕ್ಕಾಗಿ ಅಭಿನಯಿಸಿದ್ದಾರೆ. ಅಲ್ಲದೆ ಹೀರೋ ಗೆಟಪ್ನಲ್ಲಿ ಒಂದು ಹಾಡಿನ ಮೂಲಕ ಸಿ.ಬಿ.ಐ ಪಾತ್ರಧಾರಿಯಾಗಿ ಹೃತಿಕ್ ಮುರ್ಡೇಶ್ವರ್ ಎಂಟ್ರಿ ಕತೆಗೊಂದು ತಿರುವು ಕೊಡುತ್ತದೆ. ಜೊತೆಗೆ ಚಿತ್ರದ ಇಂಟರ್ವಲ್ ತನಕ ನಮ್ಮ ಕುಂದಗನ್ನಡದ ಖ್ಯಾತ ಹಾಸ್ಯ ನಟರಾದ ರಘು ಪಾಂಡೇಶ್ವರ್ ಅವರ ಕಾಮಿಡಿ ಚಿತ್ರದ ಗಂಭೀರ ಸನ್ನಿವೇಶಗಳ ನಡುವೆಯೂ ಪ್ರೇಕ್ಷಕರನ್ನು ನಗಿಸುತ್ತಾರೆ.‌

  ಬೋರ್ ಮಾಡದ ಚಿತ್ರಕಥೆ

  ಬೋರ್ ಮಾಡದ ಚಿತ್ರಕಥೆ

  ಮೆಹಬೂಬ್ ಸಾಬ್ ಹಾಡಿರುವ ಒಂಟಿ ಕಾನನದಿ ಹಾಡು ಹಾಗೂ ಅದರ ಸುಂದರ ಸಾಹಿತ್ಯ ಅದ್ಭುತ. ಅಲ್ಲದೆ "ಕಾಡುತಿಹೆ..." ನಾಯಕ ನಾಯಕಿಯ ರೊಮ್ಯಾಂಟಿಕ್ ಸಾಂಗ್ ಚಿತ್ರಮಂದಿರದಿಂದ ಹೊರ ಬಂದ ಮೇಲೆ ಮತ್ತೆ ಮತ್ತೆ ಗುನುಗಿಸುತ್ತದೆ. ಇದು ಹೊಸಬರ ತಂಡವಾದರು ಚಿತ್ರದಲ್ಲಿ ಕೂಡ ಅಭಿನಯಿಸಿದ ಎಲ್ಲಾ ನಟರು ಕೂಡ ಯಾವ ಅನುಭವಿ ನಟರಿಗೂ ಕಡಿಮೆ ಇಲ್ಲದಂತೆ ಅಚ್ಚುಕಟ್ಟಾಗಿ ಅಭಿನಯಿಸಿದ್ದು ಚಿತ್ರದ ಪ್ರತಿಯೊಂದು ಪಾತ್ರಗಳು ಕೂಡ ನೆನಪಿನಲ್ಲುಳಿಯುವಂತದ್ದು. ಚಿತ್ರ ಪ್ರೇಕ್ಷಕನಿಗೆ ಯಾವುದೇ ರೀತಿ ಬೋರಿಂಗ್ ಆಗದಂತೆ ಕತೆ ಕೊನೆಯವರೆಗೂ ಕುತೂಹಲ ಕಾದಿರಿಸಿಕೊಂಡು ಸಾಗುತ್ತದೆ. ಈ ನಿಟ್ಟಿನಲ್ಲಿ ನಿರ್ದೇಶಕ, ನಟ ಸಂದೇಶ್ ಶೆಟ್ಟಿ ಅಜ್ರಿ ನಟನಾಗಿ ನಿರ್ದೇಶಕನಾಗಿ ಈ ಎರಡು ರಂಗದಲ್ಲೂ ಕೂಡ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಕತ್ತಲೆಕೋಣೆಯ 2ನೇ ಭಾಗ

  ಕತ್ತಲೆಕೋಣೆಯ 2ನೇ ಭಾಗ

  ಚಿತ್ರದ ಕೊನೆಯಲ್ಲಿ ಎಲ್ಲ ಪಾತೃಗಳು ಪ್ರಶ್ನೆಗಳಾಗಿ ಉಳಿದು ಹೋದರು ಅದಕ್ಕೆ ಉತ್ತರಕ್ಕಾಗಿ ಕತ್ತಲೆಕೋಣೆಯ ಮುಂದಿನ ಬಾಗಿಲು ತೆರೆಯುವವರೆಗೆ(ಕತ್ತಲೆಕೋಣೆಯ 2ನೇ ಭಾಗ) ಕಾಯಲೆ ಬೇಕು. ಜೊತೆಗೆ ಕತ್ತಲೆಕೋಣೆಯ ರಹಸ್ಯವೇನು. ಕತ್ತಲೆಕೋಣೆಯಲ್ಲಂತದ್ದೇನಿದೆ ಎಂದು ತಿಳಿಯಲು ಒಮ್ಮೆ ನೀವು ಚಿತ್ರ ನೀವು ಚಿತ್ರದಲ್ಲಿ ಒಂದಷ್ಟು ಮನರಂಜನೆಯ ಜೊತೆಗೆ ಹಳ್ಳಿಯ ಮುಗ್ದ ಜನರನ್ನು ಈ ಮಾಫಿಯಾ ಜಗತ್ತು ಹೇಗೆ ಬಲಿತೆಗೆದುಕೊಳ್ಳುತ್ತದೆ ಎನ್ನುವ ಸಮಾಜಿಕ ಕಾಳಜಿಯ ಸಂದೇಶವನ್ನು ನೋಡಬಹುದು.

  English summary
  Kannada movie kathale kone has released on August 10th. movie get a positive response from audience. the movie directed by Sandesh Shetty ajri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X