twitter
    For Quick Alerts
    ALLOW NOTIFICATIONS  
    For Daily Alerts

    'ಮಾದ ಮತ್ತು ಮಾನಸಿ' ಪ್ರೇಮಕಥೆಗೆ ವಿಮರ್ಶಕರ ಅಭಿಪ್ರಾಯವೇನು?

    By Bharath Kumar
    |

    ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಶೃತಿ ಹರಿಹರನ್ ಅಭಿನಯದ 'ಮಾದ ಮತ್ತು ಮಾನಸಿ' ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಪ್ರಜ್ವಲ್ ದೇವರಾಜ್ ಅಭಿಮಾನಿಗಳಂತೂ 'ಮಾದ ಮತ್ತು ಮಾನಸಿ' ಚಿತ್ರವನ್ನ ನೋಡಿ ಫುಲ್ ದಿಲ್ ಖುಷ್ ಆಗಿದ್ದಾರೆ. ಪ್ರೇಕ್ಷಕರನ್ನ ರಂಜಿಸಿದ 'ಮಾದ ಮತ್ತು ಮಾನಸಿ' ಚಿತ್ರವನ್ನ ವಿಮರ್ಶಕರು ಒಪ್ಪಿಕೊಂಡ್ರಾ?[ವಿಮರ್ಶೆ: 'ಮಾದ ಮತ್ತು ಮಾನಸಿ'ಯ ದುರಂತ ಪ್ರೇಮ ಕಥೆ]

    ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಮಾದ ಮತ್ತು ಮಾನಸಿ' ಚಿತ್ರದ ವಿಮರ್ಶೆಯ ಕಲೆಕ್ಷನ್ ಇಲ್ಲಿದೆ ಓದಿರಿ....

    ಮೋಡಿ ಮಾಡದ ಮಾದ ಮತ್ತು ಮಾನಸಿ- ವಿಜಯ ಕರ್ನಾಟಕ

    ಮೋಡಿ ಮಾಡದ ಮಾದ ಮತ್ತು ಮಾನಸಿ- ವಿಜಯ ಕರ್ನಾಟಕ

    ''ತರ್ಕವಿಲ್ಲದ ಕತೆ ಮತ್ತು ಪೇಲವ ನಿರ್ದೇಶನದಿಂದ ಚಿತ್ರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತದೆ. ಪ್ರಾರಂಭದಲ್ಲೇ ತೋರಿಸುವ ಅನುಶ್ರೀ ಅಭಿನಯದ ಹಾಡಿನಲ್ಲಿ ಮಾದ ಮತ್ತು ಮಾನಸಿಯ ರೋಮ್ಯಾನ್ಸ್ ತೋರಿಸಲಾಗುತ್ತದೆ. ಆದರೆ, ಕತೆಯೇ ಬೇರೆ. ಚಿತ್ರದುದ್ದಕ್ಕೂ ಕುಡುಕರು, ಪೋಲಿಗಳು ಹೆಜ್ಜೆ ಹೆಜ್ಜೆಗೆ ಸಿಗುತ್ತಾರೆ. ಇವರ ಮಧ್ಯೆ ನಾಯಕಿ ಬಳಲುತ್ತಾಳೆ, ಹೀರೊ ಬಿಲ್ಡಪ್ ಕೊಡುತ್ತಾನೆ. ಅಚ್ಚರಿ ಉಂಟು ಮಾಡುವ ಪ್ರಯತ್ನದಲ್ಲಿ ಕತೆಗೆ ಇಟ್ಟಿರುವ ಟ್ವಿಸ್ಟ್ ಗಳು ಲಾಜಿಕ್‌ ಇಲ್ಲದೆ ಕೃತಕವಾಗಿ ಕಾಣುತ್ತವೆ. ರೇಪ್‌ ಆಗಿದ್ದು ಹೆಣ್ಣಿಗೆ ಗೊತ್ತಾಗುತ್ತೋ ಇಲ್ಲವೋ ಎಂಬ ಗೊಂದಲ ಪ್ರೇಕ್ಷಕನದ್ದಾಗುತ್ತದೆ. ಪಾತ್ರ ಪೋಷಣೆ ದುರ್ಬಲವಾಗಿದೆ. ದ್ವಿತಿಯಾರ್ಧದಲ್ಲಿ ಪ್ರೇಮಿಯಿಂದ ತಿರಸ್ಕೃತಗೊಂಡ ನಂತರ ಪ್ರೇಕ್ಷಕನಿಗೆ ಹುಟ್ಟುವ ನಿರೀಕ್ಷೆ ಠುಸ್ ಎನ್ನುತ್ತದೆ. ಅಲ್ಲಲ್ಲಿ ಕೆಟ್ಟ ಸಂಭಾಷಣೆಯ ಜೋಕ್ ಗಳು ಕಿರಿಕಿರಿಯುಂಟು ಮಾಡುತ್ತದೆ. ಡ್ರೋನ್ ನಲ್ಲಿ ಸೆರೆ ಹಿಡಿದ ದೃಶ್ಯಗಳು ಕಣ್ಣಿಗೆ ಹಿತ ಅನ್ನಿಸಿದರೂ ಸಿನಿಮಾಗೆ ಯಾವ ರೀತಿಯಲ್ಲೂ ಸಪೋರ್ಟ್ ಮಾಡೋಲ್ಲ. ಅಪಕ್ವ ನಿರ್ದೇಶನ, ದುರ್ಬಲ ತಾಂತ್ರಿಕತೆ ಚಿತ್ರವನ್ನು ಇನ್ನಷ್ಟು ನೀರಸ ಮಾಡಿದೆ''.- ರೇಟಿಂಗ್ 2/5

    ಉಪೇಕ್ಷೆಯ ಮದ ಮತ್ತು ಪ್ರೇಕ್ಷಕನ ಘಾಸಿ- ಕನ್ನಡ ಪ್ರಭ

    ಉಪೇಕ್ಷೆಯ ಮದ ಮತ್ತು ಪ್ರೇಕ್ಷಕನ ಘಾಸಿ- ಕನ್ನಡ ಪ್ರಭ

    ''ಸೂತ್ರ ಸಂಬಂಧವೇ ಇಲ್ಲದ ಒಂದು ಫೈಟ್ ನಿಂದ ಪ್ರಾರಂಭವಾಗುವ ಸಿನೆಮಾ, ಓತಪ್ರೇತವಾಗಿ ಕಥೆ ಹೆಣೆಯುತ್ತಾ, ಹತ್ತು ಹಲವು ಹಳಸು ಎನ್ನುವಂತಹ ಘಟನೆಗಳನ್ನು ಹೆಣೆಯುತ್ತಾ, ಅರ್ಥವಿಲ್ಲದ ಮತ್ತು ತಪ್ಪು ಸಂದೇಶ ನೀಡುವ ಸಂಭಾಷಣೆಗಳೊಂದಿಗೆ ಓಡುವ ಸಿನೆಮಾ ಮಧ್ಯಂತರದ ಹೊತ್ತಿಗೆ ಪ್ರೇಕ್ಷಕನಲ್ಲಿ ಆಕ್ರೋಶದ ಹೊಗೆ ಹೊತ್ತಿಸುವ ತಾಕತ್ತು ಹೊಂದಿದೆ. ಪ್ರಜ್ವಲ್ ದೇವರಾಜ್ ಆಗಲಿ, ಶ್ರುತಿ ಹರಿಹರನ್ ಆಗಲಿ ಪರಿಪೂರ್ಣವಾದ ನಟನೆ ನೀಡಿಲ್ಲ. ಉಳಿದ ಪೋಷಕ ವರ್ಗದ ನಟನೆ ಕೂಡ ಅಷ್ಟಕ್ಕಷ್ಟೇ. ಅಲ್ಲಲ್ಲಿ ಕೆಟ್ಟ ಹಾಸ್ಯ ಕೂಡ ಹಾಸುಹೊಕ್ಕು ಗಾಯದ ಮೇಲೆ ಬರೆಯನ್ನು ಎಳೆದ ಅನುಭವ ನೀಡುತ್ತದೆ. ಮನೋಮೂರ್ತಿ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳಲ್ಲಿ, ಸಾಹಿತ್ಯವು ಸ್ಪಷ್ಟವಾಗಿ ಕೇಳಿಸುವುದಿಲ್ಲ, ಇತ್ತ ನೀರಸ ಕಥೆಯಿಂದ ಬೇಸರಗೊಂಡ ಪ್ರೇಕ್ಷಕನ ಮನಸ್ಸನ್ನು ಹೊರತಂದು ಉಲ್ಲಾಸವನ್ನೂ ನೀಡುವುದಿಲ್ಲ. ಕಥೆ-ಚಿತ್ರಕಥೆಯ ಪರಿಕಲ್ಪನೆಯಲ್ಲಿ ಯಾವುದೇ ಹೊಸತನವಿಲ್ಲದೆ-ಪರಿಶ್ರಮವಿಲ್ಲದೆ ಸಿನಿಮಾ ಕೊಟ್ಟಿದ್ದಾರೆ ನಿರ್ದೇಶಕ ಸತೀಶ್ ಪ್ರಧಾನ್.

    ಅವಳದು ಪ್ರ'ಮಾದ', ಅವನದು 'ಮಾನಸಿ'ಕ!- ಉದಯವಾಣಿ

    ಅವಳದು ಪ್ರ'ಮಾದ', ಅವನದು 'ಮಾನಸಿ'ಕ!- ಉದಯವಾಣಿ

    ''ಮಾದ ಮತ್ತು ಮಾನಸಿ' ಕಥೆಯಲ್ಲಿ ಒಂದಷ್ಟು ಕಲರ್‌ಪುಲ್ ಅಂಶ ಬಿಟ್ಟರೆ, ಉಳಿದಿದೆಲ್ಲವೂ ಮಾದನ "ಮಾನಸಿ'ಕ ಹಿಂಸೆಯೇ ಜಾಸ್ತಿ. ನಿರ್ದೇಶಕರ ಕಥೆಯಲ್ಲಿ ಹೊಸತನ್ನು ನಿರೀಕ್ಷಿಸುವಂತಿಲ್ಲ. ಮಾದ, ಮಾನಸಿಯ ಕದ್ದು ಮುಚ್ಚೋ ಪ್ರೀತಿಯಲ್ಲಿ ಹೇಳಿಕೊಳ್ಳುವಂತಹ ವಿಶೇಷತೆಯೂ ಇಲ್ಲ. ಚಿತ್ರದಲ್ಲಿ ಎಲ್ಲವೂ ಆಡಂಬರ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಅದೆಲ್ಲಾ ಅಷ್ಟೊಂದು ಬೇಕಿರಲಿಲ್ಲವೇನೋ ಎಂದೆನಿಸುವುದುಂಟು. ಮೊದಲರ್ಧ ಮಂದಗತಿಯಲ್ಲೇ ಸಾಗುವ ಸಿನಿಮಾ, ದ್ವಿತಿಯಾರ್ಧ ಕೊಂಚ ವೇಗ ಪಡೆದುಕೊಂಡರೂ, ರೈಲಿನ ಹಾಗೆ ಎಳೆದಿರುವುದು ನೋಡುಗನ ತಾಳ್ಮೆ ಕೆಣಕುವುದು ಸುಳ್ಳಲ್ಲ. ರಂಗಾಯಣ ರಘು, ಶೋಭರಾಜ್, ಪವನ್‌ ಸೇರಿದಂತೆ ಅಲ್ಲಲ್ಲಿ ಬರುವ ಕಲಾವಿದರೆಲ್ಲರೂ ತಮ್ಮ ಕೆಲಸಕ್ಕೆ ಮೋಸ ಮಾಡಿಲ್ಲ. ಮನೋಮೂರ್ತಿ ಸಂಗೀತದಲ್ಲಿ ಮೆಲೋಡಿ ಮಾಯವಾಗಿದೆ. ಅವರತನ ಕಳೆದುಕೊಂಡು ಇಲ್ಲಿ ಅಬ್ಬರದ ಸಂಗೀತ ಕೊಟ್ಟಿರುವುದೇ ಅಚ್ಚರಿ. ಕೆ.ಎಸ್‌.ಚಂದ್ರಶೇಖರ್‌ ಕ್ಯಾಮೆರಾ ಕೈಚಳಕದಲ್ಲಿ ಮಾದನ ಖದರು, ಮಾನಸಿಯ ಗ್ಲಾಮರ್ ಪರವಾಗಿಲ್ಲ. ಚಿತ್ರ ಅದ್ಧೂರಿಯಾಗಿದೆ. ಕಥೆಯಲ್ಲಿ, ನಿರೂಪಣೆಯಲ್ಲಿ ಆ ಅದ್ಧೂರಿತನ ಕಳೆದು ಹೋಗಿದೆ. ಎಲ್ಲವನ್ನೂ ಇನ್ನಷ್ಟು ಬಿಗಿ ಹಿಡಿತದಿಂದ ನಿಭಾಯಿಸಿದ್ದರೆ, ಆ ಅದ್ಧೂರಿತನಕ್ಕೊಂದು ಅರ್ಥ ಸಿಗುತ್ತಿತ್ತು''.

    ಹಳಿ ತಪ್ಪಿದ ಮಾದ ಮಾನಸಿ - ವಿಜಯವಾಣಿ

    ಹಳಿ ತಪ್ಪಿದ ಮಾದ ಮಾನಸಿ - ವಿಜಯವಾಣಿ

    ''ಮಾದ ಮತ್ತು ಮಾನಸಿ ಕಥೆಯಲ್ಲಿ ವಿಶೇತೆಯೇನೂ ಇಲ್ಲ. ಸರಳವಾಗಿ ಹೇಳಬಹುದಾದ ಕಥೆಯನ್ನ ಜಟಿಲಗೊಳಿಸಿದ್ದಾರೆ. ಮಾದನಿಗೆ ಮಾನಸಿ ಮೇಲೆ ಪ್ರೀತಿ, ಆದರೆ, ಮಾನಸಿಗೆ ಸಹಪಾಠಿ ದೀಪಕ್ ಮೇಲೆ ಒಲವು. ಹಾಗಾಗಿ, ದೀಪಕ್ ಮತ್ತು ಮಾನಸಿಯನ್ನ ಒಂದು ಮಾಡುವ ಹೊಣೆ ಮಾದನ ಪಾಲಿಗೆ ಬರುತ್ತೆ. ಹೀಗೆ ಸಾಗುವ ಪಯಣದಲ್ಲಿ ಸಂಕಷ್ಟಗಳೇ ಚಿತ್ರ ಜೀವಾಳ. ಒಂದರ ಮೇಲೊಂದು ಆಘಾತಗಳು ಮಾದನಿಗೆ ದೆಉರಾಗುತ್ತೆ. ಅಂತಿಮವಾಗಿ ಮಾನಸಿ-ದೀಪಕ್ ಒಂದಾಗ್ತಾರ? ಅಥವಾ ಮಾದನ ಮೇಲೆ ಮಾನಸಿಗೆ ಲವ್ ಆಗುತ್ತಾ? ಅನ್ನೋದೇ ಕಥಾಕೌತುಕ. ಪ್ರಜ್ವಲ್, ಶೃತಿ ಅವರ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ನಿರ್ಮಾಣದ ಜತೆಗೆ ಸಂಗೀತ ನಿರ್ದೇಶನ ಕೂಡ ಮನೋಮೂರ್ತಿ ಅವರದ್ದೇ ಆಗಿರುವುದರಿಂದ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹಾಗಂತ ಎಲ್ಲ ಹಾಡುಗಳು ಮಧುರವಾಗಿದೆ ಎಂದಲ್ಲ. ಚಂದ್ರಶೇಖರ್ ಅವರ ಕ್ಯಾಮರಾ ವರ್ಕ್ ಗೆ ಹೆಚ್ಚಿನ ಮಾರ್ಕ್ಸ್''.

    'Madha Mathu Manasi Movie Review - Bangalore mirror

    'Madha Mathu Manasi Movie Review - Bangalore mirror

    ''Madha Mathu Manasi could not have come at a worse time in his career. The film makes you wince every minute with its pedestrian storyline laced with patriarchal misogyny, silly dialogues and boring incidents. The only saving grace in the film is the cinematography of Chandrashekar. The director takes the audience on a tiring journey, that you desperately want to end at the earliest. Perhaps the director did not tell composer Mano Murthy the mood of the songs. The placement of the songs is as bad as their disconnect with the scenes around them. A forgettable film for everyone concerned and a bad experience for the audience''.

    English summary
    Kannada actor Prajwal Devaraj, Kannada Actress Sruthi Hariharan starrer 'Maada mattu Manasi' has received mixed response from the critics. Here is the collection of 'Maada mattu Manasi' reviews by Top News Papers of Karnataka.
    Saturday, November 26, 2016, 11:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X