»   » ಲವ್ಲಿ ಸ್ಟಾರ್ 'ಮಸ್ತ್ ಮೊಹಬ್ಬತ್' ಗೆ ವಿಮರ್ಶಕರು ಏನಂದ್ರು

ಲವ್ಲಿ ಸ್ಟಾರ್ 'ಮಸ್ತ್ ಮೊಹಬ್ಬತ್' ಗೆ ವಿಮರ್ಶಕರು ಏನಂದ್ರು

Posted By:
Subscribe to Filmibeat Kannada

ಪ್ರೀತಿ ಪ್ರೇಮವನ್ನು ಸಿನಿಮಾ ರೂಪಕ್ಕೆ ತರುವ ಹಲವಾರು ಸಿನಿಮಾಗಳು ಈಗಾಗಲೇ ನಮ್ಮ ಸ್ಯಾಂಡಲ್ ವುಡ್ ಸಿನಿ ಪಯಣದಲ್ಲಿ ಬಂದು ಹೋಗಿದೆ. ಅದಕ್ಕೆ ಇದೀಗ ಹೊಸ ಸೇರ್ಪಡೆ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಪರಭಾಷಾ ನಟಿ ಪೂನಂ ಭಾಜ್ವಾ ನಟನೆಯ 'ಮಸ್ತ್ ಮೊಹಬ್ಬತ್' ಚಿತ್ರ.

ನಿರ್ದೇಶಕ ಮೋಹನ್ ಮಾಳಗಿ ಆಕ್ಷನ್-ಕಟ್ ಹೇಳಿರುವ 'ಮಸ್ತ್ ಮೊಹಬ್ಬತ್' ಸಿನಿಮಾ ಇಡೀ ಕರ್ನಾಟಕದಾದ್ಯಂತ ನಿನ್ನೆ (ಜನವರಿ 22) ಗ್ರ್ಯಾಂಡ್ ರಿಲೀಸ್ ಆಗಿದೆ.


ಕಂಪನಿಯೊಂದರ ಸಿ.ಇ ಓ ಮತ್ತು ಕಾಲ್ ಗರ್ಲ್ ಒಬ್ಬಳ ನಡುವೆ ನಡೆಯುವ ಇಡೀ ಪ್ರೇಮ ಪ್ರಸಂಗವೇ 'ಮಸ್ತ್ ಮೊಹಬ್ಬತ್'


ಒಂದು ಜೀವನ ಮತ್ತು ಒಂದು ಪ್ರೀತಿಯ ಸುತ್ತ ಸುತ್ತುವ ಕಥೆಯನ್ನ ಹೇಳಿರುವ ನಿರ್ದೇಶಕ ಮೋಹನ್ ಮಾಳಗಿ ಅವರ 'ಮಸ್ತ್ ಮೊಹಬ್ಬತ್' ಬಗ್ಗೆ ಕನ್ನಡ ದಿನಪತ್ರಿಕೆಯ ಖ್ಯಾತ ವಿಮರ್ಶಕರು ಡಿಫರೆಂಟ್ ಆಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ಲವ್ಲಿ ಸ್ಟಾರ್ ಪ್ರೇಮ್ ನಿಜ ಜೀವನದ ಕಥೆ ಸಿನಿಮಾ ಆಗುತ್ತಾ?]


'ನೆನಪಿರಲಿ' ಪ್ರೇಮ್ ಮತ್ತು ನಟಿ ಪೂನಂ ಭಾಜ್ವಾ, ಕಾಮಿಡಿ ನಟ ಚಿಕ್ಕಣ್ಣ, ಶಕೀಲಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಮಸ್ತ್ ಮೊಹಬ್ಬತ್' ಚಿತ್ರದ ವಿಮರ್ಶಕರ ವಿಮರ್ಶೆಯನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...


'ಮಸ್ತ್ ಅಲ್ಲದ ಮೊಹಬ್ಬತ್' - ಪ್ರಜಾವಾಣಿ

ದಿನದ ಇಪ್ಪತ್ತನಾಲ್ಕು ಗಂಟೆಯೂ ಕೆಲಸ ಕೆಲಸ ಎಂದೆನ್ನುತ್ತ ‘ಬಿಜಿ'ಯಾಗಿರುವ ಶ್ರೀ (ಪ್ರೇಮ್), ಒಂದಷ್ಟು ಶಾಂತಿ- ನೆಮ್ಮದಿ ಪಡೆಯಲೆಂದು ಊಟಿಗೆ ಹೋಗುತ್ತಾನೆ. ಕುಟುಂಬದಿಂದ ದೂರವಾಗಿ, ಮೋಸದಿಂದ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿರುವ ಮಾಯಾ (ಪೂನಂ) ದಾರಿ ಮಧ್ಯೆ ಆತನಿಗೆ ಆಕಸ್ಮಿಕವಾಗಿ ಸಿಗುತ್ತಾಳೆ. ಇಬ್ಬರ ಮಧ್ಯೆ ಮೂಡುವ ಪ್ರೀತಿ ಏನೆಲ್ಲ ಕಂಟಕಗಳನ್ನು ಎದುರಿಸಿಯೂ ಹೇಗೆ ಸಫಲವಾಗುತ್ತದೆ ಎಂಬುದನ್ನು ಸುದೀರ್ಘವಾಗಿ ತೋರಿಸಲಾಗಿದೆ. ಗಟ್ಟಿಯಾದ ಚಿತ್ರಕಥೆ ಇರದೇ ಹೋದರೆ ಏನಾಗಬಹುದೋ, ಅದು ‘ಮಸ್ತ್ ಮೊಹಬ್ಬತ್‌'ನಲ್ಲಿ ಸಂಭವಿಸಿದೆ!. - ಆನಂದತೀರ್ಥ ಪ್ಯಾಟಿ.


'ಮನಸ್ಸಲ್ಲಿ ಉಳಿಯದ ಮೊಹಬ್ಬತ್' - ವಿಜಯ ಕರ್ನಾಟಕ

ಇತ್ತೀಚಿನ ದಿನಗಳಲ್ಲಿ ಕಾಲ್‌ಗರ್ಲ್ ಬದುಕಿನ ಬಗ್ಗೆ ತುಂಬಾ ಸಿನಿಮಾಗಳು ನಿರ್ಮಾಣ ಆಗುತ್ತಿವೆ. 'ಮಸ್ತ್ ಮೊಹಬ್ಬತ್' ಚಿತ್ರದ ಕತೆಯೂ ಹಾಗೆಯೇ ಇದೆ. ಹಾಗಂತ ಇದು ಗಂಭೀರ ಚಿತ್ರವೇನೂ ಅಲ್ಲ. ಅವಳ ನರಕದ ಬದುಕನ್ನೂ ಇದು ಅನಾವರಣಗೊಳಿಸುವುದಿಲ್ಲ. ನಾಯಕಿಯ ಪಾತ್ರಕ್ಕೆ ಅಂಥದ್ದೊಂದು ಹಿನ್ನೆಲೆ ಕೊಟ್ಟು, ತೆಳುವಾದ ಪ್ರೇಮಕತೆಯನ್ನು ಹೇಳಿದ್ದಾರೆ ನಿರ್ದೇಶಕ ಮೋಹನ್ ಮಾಳಗಿ. ಹೀಗಾಗಿ ಸಿನಿಮಾ ಮುಗಿದ ನಂತರ ಇದು ಕಾಲ್‌ಗರ್ಲ್ ಬದುಕಿನ ಕತೆಯೋ, ಅಥವಾ ಮಾಮೂಲು ಲವ್‌ಸ್ಟೋರಿಯೋ ಎಂಬ ಗೊಂದಲ ಪ್ರೇಕ್ಷಕರಿಗೆ ಆಗುವುದು ಸಹಜ. - ಶರಣು ಹುಲ್ಲೂರು.


'ಮೋಹಕ ಕತೆಯ ಮೊಹಬ್ಬತ್' - ಕನ್ನಡ ಪ್ರಭ

ತನ್ನ ಪ್ರಿಯತಮೆ ಕಾಲ್ ಗರ್ಲ್ ಎನ್ನುವುದು ನಾಯಕನಿಗೆ ಗೊತ್ತಾಗುವ ಹೊತ್ತಿಗೆ ಕಥೆಯ ಅರ್ಧ ಭಾಗ ಮುಗಿದಿರುತ್ತದೆ. ಅಷ್ಟಾಗಿಯೂ ನಾಯಕ ಆಕೆಯನ್ನು ತಿರಸ್ಕರಿಸಲು ಬಯಸುವುದಿಲ್ಲ. 'ಕಳೆದು ಹೋದ ಜೀವನದ ಬಗ್ಗೆ ಯೋಚಿಸುವುದಕ್ಕಿಂತ ನಾಳಿನ ಭವಿಷ್ಯದ ಬಗ್ಗೆ ಚಿಂತಿಸುವುದು ಒಳ್ಳೆಯದು ಎಂಬ ಮಾದರಿ ಹೆಜ್ಜೆ ಇಡಲು ಮುಂದಾಗುತ್ತಾನೆ. ಆ ಮೂಲಕ ಪ್ರೀತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಆತನದು. ಆದರೆ ಅಷ್ಟು ಸುಲಭವಾಗಿರುವುದಿಲ್ಲ. ಆ ಹೊತ್ತಿಗಾಗಲೇ ನಾಯಕಿಯ ಬದುಕು, ಮುಳ್ಳಿನ ಮೇಲೆ ಬಿದ್ದ ಬಟ್ಟೆಯಂತಾಗಿರುತ್ತದೆ. ಅಲ್ಲಿಂದ ಕಥೆಯು ನೋಡುಗನಲ್ಲಿ ಮತ್ತಷ್ಟು ಕುತೂಹಲ ಹುಟ್ಟಿಸುವುದೇ 'ಮಸ್ತ್ ಮೊಹಬ್ಬತ್'ನ ವಿಶೇಷ. - ದೇಶಾದ್ರಿ ಹೊಸ್ಮನೆ.


'ಸ್ವಲ್ಪ ಸುಸ್ತು ಸ್ವಲ್ಪ ಮಸ್ತು!'- ಉದಯವಾಣಿ

ಕಥೆಯೇನೂ ಹೊಸತಲ್ಲ. ಈ ಹಿಂದೆ ಬಂದುಹೋದಂತಹ ಕತೆಯಾದರೂ, ಅದಕ್ಕೆ ತಕ್ಕಮಟ್ಟಿಗೆ ಹೊಸ ರೂಪ ಕೊಟ್ಟು ಒಂದೇ ಚೌಕಟ್ಟಿನಲ್ಲಿ ಹಿಡಿದಿಡಲು ಪ್ರಯತ್ನಿಸಿರುವ ನಿರ್ದೇಶಕರ ಕೆಲಸವನ್ನು ತೆಗಳುವಂತಿಲ್ಲ, ಮೊದಲರ್ಧ ಪ್ರೀತಿ ಮಿಶ್ರಿತ ಹಾಸ್ಯದಲ್ಲೇ ಸಾಗುವ ಚಿತ್ರ, ದ್ವಿತೀಯಾರ್ಧದಲ್ಲಿ ಗಂಭೀರತೆ ಪಡೆದುಕೊಳ್ಳುತ್ತೆ. ಹಾಗಂತ ತುಂಬಾ ಗಂಭೀರತೆಯಿಂದ ನೋಡುವ ಸಿನಿಮಾವಂತೂ ಅಲ್ಲ. ಆದರೆ ಒಮ್ಮೆ ಹುಟ್ಟಿಕೊಳ್ಳುವ ಪ್ರೀತಿಗೆ ಎಲ್ಲವನ್ನೂ ಮೆಟ್ಟಿ ನಿಲ್ಲುವ, ಎಲ್ಲೆಯನ್ನು ಮೀರುವ ತಾಕತ್ತು ಇದೆಯೆಂಬುದನ್ನು ಇಲ್ಲಿ ನೋಡುಗರಿಗೆ ನಾಟುವಂತೆ ಚಿತ್ರಿಸಿದ್ದಾರೆ ನಿರ್ದೇಶಕರು. ಆ ಕಾರಣಕ್ಕೆ 'ಮೊಹಬ್ಬತ್'ಗೆ 'ಮಸ್ತ್' ಸರ್ಟಿಫಿಕೆಟ್ ಕೊಡಲಡ್ಡಿಯಿಲ್ಲ!. - ವಿಜಯ್ ಭರಮಸಾಗರ.


English summary
Kannada Movie 'Mast Mohabbath' Critics Review. Actor Prem, Actress Poonam Bajwa Starrer 'Mast Mohabbath' has received mixed response from the critics. here is the collection of reviews by Top News Papers of Karnataka. The movie is directed by Mohan Malagi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada