»   »  ಶಿವಣ್ಣ, ಶ್ರೀಮುರಳಿಯ 'ಮಫ್ತಿ' ಬಗ್ಗೆ ವಿಮರ್ಶಕರು ಏನಂದ್ರು..?

ಶಿವಣ್ಣ, ಶ್ರೀಮುರಳಿಯ 'ಮಫ್ತಿ' ಬಗ್ಗೆ ವಿಮರ್ಶಕರು ಏನಂದ್ರು..?

Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಮಫ್ತಿ' ಸಿನಿಮಾ ನಿನ್ನೆ ರಿಲೀಸ್ ಆಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಚಿತ್ರದ ಮೇಕಿಂಗ್, ಶಿವಣ್ಣ ಅಭಿನಯ... ಎರಡನ್ನೂ ಹಾಡಿ ಹೊಗಳುತ್ತಿದ್ದಾರೆ. ಮಾಸ್ ಮತ್ತು ಕ್ಲಾಸ್ ಎರಡೂ ಅಂಶಗಳು ಬೆರತಿರುವ ಈ ಸಿನಿಮಾ ಅಭಿಮಾನಿಗಳಿಗೆ ಬಹಳ ಇಷ್ಟ ಆಗಿದೆ.

  'ಮಫ್ತಿ' ಸಿನಿಮಾವನ್ನು ಸದ್ಯ ವಿಮರ್ಶಕರು ಸಹ ನೋಡಿದ್ದಾರೆ. ಪ್ರತಿವಾರದಂತೆ ಈ ವಾರವೂ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯವನ್ನು ಬರೆದಿದ್ದಾರೆ. 'ಮಫ್ತಿ'ಯೊಳಗಿದೆ ಭಾವನೆಗಳ ಹೊಡೆದಾಟ, 'ಮಫ್ತಿ'ಯಲ್ಲಿ ಮಾಸ್-ಕ್ಲಾಸ್ ಮಿಶ್ರಣ, ಮನುಷ್ಯತ್ವ ಮತ್ತು ಕರ್ತವ್ಯದ ನಡುವಿನ ಮಫ್ತಿ, ಎಂದು ಚಿತ್ರದ ಬಗ್ಗೆ ಬಣ್ಣಿಸಿದ್ದಾರೆ.

  ಅಂದಹಾಗೆ, ಕನ್ನಡದ ಜನಪ್ರಿಯ ಪತ್ರಿಕೆಗಳಲ್ಲಿ ಬಂದ 'ಮಫ್ತಿ' ಸಿನಿಮಾದ ವಿಮರ್ಶೆಗಳ ಸಂಗ್ರಹ ಇಲ್ಲಿದೆ. ಮುಂದೆ ಓದಿ...

  'ಮಫ್ತಿ'ಯಲ್ಲಿ ಮಾಸ್-ಕ್ಲಾಸ್ ಮಿಶ್ರಣ - ವಿಜಯವಾಣಿ

  ಮಫ್ತಿಯಲ್ಲಿ ಬರುವ ಓರ್ವ ಪೊಲೀಸ್ ಅಧಿಕಾರಿ ಕಾನೂನು-ಸುವ್ಯವಸ್ಥೆ ಜತೆಗೆ ಸಂಬಂಧಗಳನ್ನೂ ಕಾಪಾಡುತ್ತಾನೆ. ಇದು ‘ಮಫ್ತಿ' ಚಿತ್ರದ ಒನ್​ಲೈನ್ ಕಥೆ. ಚಿತ್ರದ ಮೊದಲರ್ಧದಲ್ಲಿ ಬಿತ್ತರಗೊಳ್ಳುವ ಭೂಗತ ಜಗತ್ತಿನ ದೃಶ್ಯಾವಳಿಗಳು ಲಾಜಿಕ್ ಮರೆಸುವಷ್ಟು ಶ್ರೀಮಂತವಾಗಿ ಮೂಡಿಬಂದಿವೆ. ಅದರ ಸಂಪೂರ್ಣ ಶ್ರೇಯಸ್ಸು ಸಲ್ಲಬೇಕಾದ್ದು ಛಾಯಾಗ್ರಾಹಕ ನವೀನ್​ಕುಮಾರ್​ಗೆ. ಸನ್ನಿವೇಶಗಳ ತಾಕತ್ತು ಹೆಚ್ಚಿಸುವಲ್ಲಿ ರವಿ ಬಸ್ರೂರು ಹಿನ್ನೆಲೆ ಸಂಗೀತ ಇನ್ನಷ್ಟು ಶ್ರಮಿಸಬಹುದಾಗಿತ್ತು. ಆರಂಭದಿಂದ ಅಂತ್ಯದವರೆಗೆ ಶ್ರೀಮುರಳಿ ಅವರದ್ದು ಒಂದೇ ರೀತಿಯ ಭಾವ-ಭಂಗಿ. ಮಧ್ಯಂತರದ ವೇಳೆಗೆ ಶಿವರಾಜ್​ಕುಮಾರ್ ಎಂಟ್ರಿ ನೀಡಿದಾಗಲೇ ಚಿತ್ರದ ಇನ್ನೊಂದು ಮಗ್ಗಲು ಅನಾವರಣವಾಗುತ್ತದೆ. ಶಾನ್ವಿ ಶ್ರೀವಾಸ್ತವ ಇಲ್ಲಿ ಪೋಷಕ ನಟಿ!. ಸಾಹಸ ದೃಶ್ಯಗಳಲ್ಲಿ ಹೊಸತನದ ಕೊರತೆ. ಹೆಚ್ಚೇನನ್ನೂ ಪ್ರಶ್ನೆ ಮಾಡದೆ, ಅಭಿಮಾನದ ಗುಂಗಿನಲ್ಲಿ ನೋಡಿದರೆ ‘ಮಫ್ತಿ' ಮನರಂಜನೆ ನೀಡುತ್ತದೆ. - ವಿಜಯವಾಣಿ

  'ಮಫ್ತಿ'ಯೊಳಗಿದೆ ಭಾವನೆಗಳ ಹೊಡೆದಾಟ - ವಿಜಯಕರ್ನಾಟಕ

  'ಮಫ್ತಿ' ಸಿನಿಮಾದಲ್ಲಿ ಒಬ್ಬ ಅಂಡರ್‌ ಕವರ್‌ ಕಾಪ್‌ ಮತ್ತು ಡಾನ್ ನಡುವಿನ ಕತೆಯಿದ್ದು, ಇಬ್ಬರ ನಡುವಿನ ಭಾವನಾತ್ಮಕ ಕಾಳಗವನ್ನು ವಿಭಿನ್ನವಾಗಿ ಚಿತ್ರಿಸಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದ ಸಿನಿಮಾಟೋಗ್ರಫಿ ಮತ್ತು ನಿರ್ದೇಶಕರು ಶೂಟಿಂಗ್ ಗಾಗಿ ಆಯ್ಕೆ ಮಾಡಿಕೊಂಡಿರುವ ಲೊಕೇಶನ್ಸ್. ಸಿನಿಮಾದ ಪ್ರತಿ ದೃಶ್ಯವೂ ಸೊಗಸಾಗಿದೆ. ಈ ಕ್ರೆಡಿಟ್‌ ಸಂಪೂರ್ಣ ಸಿನಿಮಾಟೋಗ್ರಾಫರ್ ನವೀನ್ ಕುಮಾರ್‌ಗೆ ಸಲ್ಲಬೇಕು. ಅದರಲ್ಲೂ ಭೈರತಿ ರಣಗಲ್ಲು ಪಾತ್ರಕ್ಕೆ ಶಿವರಾಜ್ ಕುಮಾರ್‌ ಅವರ ಆಯ್ಕೆ ಸಿನಿಮಾವನ್ನು ಬೇರೆ ಲೆವೆಲ್‌ಗೆ ತೆಗೆದುಕೊಂಡು ಹೋಗಿದೆ. ಚಿತ್ರದ ಮೊದಲರ್ಧ ಶ್ರೀಮುರಳಿ ಚಿತ್ರವನ್ನು ಆವರಿಸಿಕೊಂಡಿದ್ದರೆ, ಉಳಿದಾರ್ಧ ಶಿವರಾಜ್ ಕುಮಾರ್‌ಗೆ ಮೀಸಲಾಗಿದೆ. ಇಡೀ ಸಿನಿಮಾದಲ್ಲಿ ಕಲಾವಿದರಿಗೂ ಹೆಚ್ಚಿಗೆ ಮಾತಿಲ್ಲದಿದ್ದರೂ, ಅವರಾಡುವ ಪ್ರತಿ ಮಾತು ಕತ್ತಿಯಷ್ಟೇ ಮೊನಚಾಗಿವೆ. ತಮ್ಮ ಸಂಭಾಷಣೆಯ ಮೂಲಕ ರಾಮ್‌ ಲಕ್ಷ್ಮಣ್‌ ಸಿನಿಮಾಗೆ ಶಕ್ತಿ ತುಂಬಿದ್ದಾರೆ. ತನ್ನ ಚೊಚ್ಚಲ ಸಿನಿಮಾದಲ್ಲಿಯೇ ಇಬ್ಬರು ಸ್ಟಾರ್‌ ನಟರನ್ನಿಟ್ಟುಕೊಂಡು, ಎಲ್ಲಿಯೂ ಕಾಂಪ್ರಮೈಸ್ ಆಗದೇ ಸಿನಿಮಾ ಮಾಡಿದ್ದಾರೆ ನಿರ್ದೇಶಕರು. - ಹರೀಶ್ ಬಸವರಾಜ್

  'ಮಫ್ತಿ' ವಿಮರ್ಶೆ : ಹಿತವನು ಬಯಸುವ ಕಡು ರಾಕ್ಷಸನ ಕಥೆ !

  ಮನುಷ್ಯತ್ವ ಮತ್ತು ಕರ್ತವ್ಯದ ನಡುವೆ - ಉದಯವಾಣಿ

  "ಮಫ್ತಿ' ಎಂಬ ಹೆಸರೇ ಹೇಳುವಂತೆ ಇದೊಂದು ಅಂಡರ್‌ಕವರ್‌ ಕಾಪ್‌ ಸಿನಿಮಾ. ಚಿತ್ರದ ಕಥೆ ಕೇಳುತ್ತಿದ್ದಂತೆಯೇ, ಹಲವು ಟ್ರಾಕ್‌ಗಳು ಅಥವಾ ದೃಶ್ಯಗಳು ನಿಮ್ಮ ನೆನಪಿಗೆ ಬರಬಹುದು. ಹಾಗಂತ ಇದು ರೀಮೇಕ್ ಎನ್ನುವುದಕ್ಕೆ ಸಾಧ್ಯತೆ ಇಲ್ಲ. ಇಲ್ಲಿ ಪ್ರೇಕ್ಷಕ ನಗುವುದಿರಲಿ, ಉಸಿರಾಡುವುದಕ್ಕೂ ಅವಕಾಶ ಕೊಡಬಾರದು. ಸೀಟಿಗೆ ಅಂಟಿಕೊಂಡು ಗಂಭೀರವಾಗಿ ಚಿತ್ರ ನೋಡುತ್ತಾ ಹೋಗಬೇಕು. ಆದರೆ, ಕಥೆ ಬಹಳ ಗಂಭೀರವಾಗಿದೆ ಎನ್ನುವಾಗ ಲವ್ವು, ಕಾಮಿಡಿ ಟ್ರಾಕ್‌ ತರುತ್ತಾರೆ. ಹಾಗೆ ನೋಡಿದರೆ, ಚಿತ್ರಕ್ಕೆ ನಾಯಕಿಯಾಗಲೀ ಅಥವಾ ಕಾಮಿಡಿ ನಟರ ಅವಶ್ಯಕತೆಯೇ ಇರಲಿಲ್ಲ. ಅವರಿಗೆ ಮಾಡುವುದಕ್ಕೆ ಹೆಚ್ಚು ಕೆಲಸವೂ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಕಾಣದ ಒಂದಿಷ್ಟು ಹೊಸ ಮತ್ತು ಒರಟಾದ ವಾತಾವರಣವನ್ನು ಇಲ್ಲಿ ತೋರಿಸಲಾಗಿದೆ. ಈ ಪರಿಸರವನ್ನು ಕೊಟ್ಟ ಛಾಯಾಗ್ರಾಹಕ ನವೀನ್‌ ಕುಮಾರ್‌ ಮತ್ತು ಅದಕ್ಕೆ ಪೂರಕವಾದ ಹಿನ್ನೆಲೆ ಸಂಗೀತ ಕೊಟ್ಟ ರವಿ ಬಸ್ರೂರು ಇಬ್ಬರ ಕೆಲಸವನ್ನು ಮೆಚ್ಚದಿರುವದಕ್ಕೆ ಸಾಧ್ಯವೇ ಇಲ್ಲ. ಮೊದಲಾರ್ಧವೆಲ್ಲಾ ಮುರಳಿ ಆವರಿಸಿಕೊಂಡರೆ, ದ್ವಿತೀಯಾರ್ಧದಲ್ಲಿ ಶಿವರಾಜಕುಮಾರ್‌ ಇಷ್ಟವಾಗುತ್ತಾರೆ. - ಚೇತನ್ ನಾಡಿಗರ್.

  ಮಫ್ತಿ -ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರಿಗೆ ರಸದೌತಣ

  Mufti Movie Review - Times Of India

  The premise for Mufti is simple, as the title suggests. An undercover cop in guise of a member of the don goes into the system to take it on. What elevates the film is the title, which also works for the don that he targets, who has his own motives for the path that he has chosen. The film has the needed mass introductions and fights, but these don't go overboard and there is a dichotomy that plays in the mind of the protagonist through the course of the film, which is handled through subtlety. The film has some terrific performances. While one might feel Sriimurali still has a hangover from Ugramm, his agility in fights and intensity in certain crucial scenes draw whistles. Shivarajkumar enters at a critical point in the narrative and his swagger and body language, coupled with the Robin Hood-like role gets you to root for him too.

  Mufti might not be that completely flawless film, but that is its essence, for it shows how there are multiple hues of grey between the black and white that most stick to when judging people. This is definitely one of the more interesting narratives that have been told on Sandalwood screen this year and it is worth that visit to the halls if intriguing and innovative commercial dramas are what you like.

  English summary
  Read Srimurali and Shiva Rajkumar starrer kannada movie 'Mufti' critics review.
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more