»   » ಫಸ್ಟ್ ರಿವ್ಯೂ : ಮಫ್ತಿ ಚಿತ್ರ ನೋಡಿ ಜೈಹೋ ಎಂದ ಪ್ರೇಕ್ಷಕರು

ಫಸ್ಟ್ ರಿವ್ಯೂ : ಮಫ್ತಿ ಚಿತ್ರ ನೋಡಿ ಜೈಹೋ ಎಂದ ಪ್ರೇಕ್ಷಕರು

Posted By:
Subscribe to Filmibeat Kannada
ಮಫ್ತಿ ಸಿನಿಮಾದ ವಿಮರ್ಶೆ | Mufti Cinema First Review | Filmibeat Kannada

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಮಫ್ತಿ ಚಿತ್ರ ಇಂದು(ಡಿಸೆಂಬರ್ 1) ರಾಜ್ಯಾದ್ಯಂತ ತೆರೆಕಂಡಿದೆ. ಒಂದು ವರ್ಷದ ಬಳಿಕ ಶ್ರೀ ಮುರಳಿ ಅಭಿನಯದ ಸಿನಿಮಾ ತೆರೆಗೆ ಬಂದಿದ್ದು ರಾಜ್ಯದ 350ಕ್ಕೂ ಹೆಚ್ಚು ಸಿನಿಮಾಮಂದಿರದಲ್ಲಿ ಚಿತ್ರ ರಿಲೀಸ್ ಆಗಿದೆ. ಬೆಂಗಳೂರಿನ ಹಲವಾರು ಚಿತ್ರಮಂದಿರದಲ್ಲಿ ಬೆಳ್ಳಂಬೆಳ್ಳಿಗ್ಗೆ 5ಗಂಟೆಗೆ ಚಿತ್ರ ಪ್ರದರ್ಶನ ಪ್ರಾರಂಭವಾಗಿದ್ದು ಮಫ್ತಿ ಚಿತ್ರ ನೋಡಿದ ಪ್ರೇಕ್ಷಕರು ಜೈಹೋ ಎಂದಿದ್ದಾರೆ.

ಒಂದು ವರ್ಷದಿಂದ ಕಾತುರದಿಂದ ಕಾದಿದ್ದ ಶ್ರೀ ಮುರಳಿ ಅಭಿಮಾನಿಗಳು ಮಫ್ತಿ ಸಿನಿಮಾ ತುಂಬಾನೇ ಇಷ್ಟವಾಗಿದೆ. ಮಫ್ತಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶ್ರೀ ಮುರಳಿ ಮಿಂಚಿದ್ದು ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿರೋದು ತೆರೆಮೇಲೆ ಕಾಣುತ್ತೆ. ಉಗ್ರಂ ಮತ್ತು ರಥಾವರ ಸಿನಿಮಾ ನೋಡಿ ಶ್ರೀ ಮುರಳಿಯವರನ್ನ ಇಷ್ಟಪಟ್ಟಿದ್ದ ಸಿನಿಪ್ರಿಯರಿಗೆ ಮಫ್ತಿ ಚಿತ್ರವೂ ಇಷ್ಟವಾಗಲಿದೆ.

ಮಫ್ತಿ ಸಿನಿಮಾದ ಸಿಂಪಲ್ ಕತೆಯನ್ನ ತೆರೆಮೇಲೆ ಪ್ರೆಸೆಂಟ್ ಮಾಡಿರೋ ರೀತಿ ತುಂಬಾ ಚೆನ್ನಾಗಿದೆ. ಭೈರತಿ ರಣಗಲ್ ಪಾತ್ರದಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಸೆಕೆಂಡ್ ಆಫ್ ನಲ್ಲಿ ಬರೋ ಶಿವಣ್ಣ ಎಂಟ್ರಿಗೆ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಸಾಕಷ್ಟು ದಿನಗಳ ನಂತರ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿರೋ ಛಾಯಾಸಿಂಗ್ ಅಭಿನಯ ತುಂಬಾ ಚೆನ್ನಾಗಿದೆ. ನಾಯಕಿ ಶಾನ್ವಿ ಶ್ರೀವತ್ಸಾ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

Kannada movie 'Mufti' review

ನಿರ್ದೇಶಕ ನರ್ತನ್ ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಗೆಲವು ಸಾಧಿಸಿದ್ದಾರೆ. ಸಂತೆಯಲ್ಲಿ ನಿಂತ ಕಬೀರ ಸಿನಿಮಾ ಖ್ಯಾತಿಯ ಕ್ಯಾಮೆರಾಮ್ಯಾನ್ ನವೀನ್ ಕುಮಾರ್ ಸಿನಿಮಾಟೋಗ್ರಾಫಿ ಚಿತ್ರಕ್ಕೆ ಪ್ಲಸ್ ಪಾಯಿಂಟ್ . ಮಫ್ತಿ ಸಿನಿಮಾದಲ್ಲಿ ಮೂರು ಹಾಡುಗಳಿದ್ದು ರವಿಬಸ್ರೂರು ಹಿನ್ನಲೆ ಸಂಗೀತ ನೋಡುಗರಿಗೆ ಖುಷಿ ಕೊಡುತ್ತೆ

English summary
Srimurali and Shiva Rajkumar starrer kannada movie 'Mufti' review. 'Mufti' is an action entertainer and is a treat for Srimurali Fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada