For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ವಿಮರ್ಶೆ: 'ಮುಕುಂದ ಮುರಾರಿ'ಯ ಜುಗಲ್ ಬಂದಿಗೆ ಭಕ್ತರು ಏನಂದ್ರು ಗೊತ್ತಾ?

  By Bharath Kumar
  |

  ಅಂತೂ ಇಂತೂ ಸ್ಯಾಂಡಲ್ ವುಡ್ ಪರೆದೆ ಮೇಲೆ 'ಮುಕುಂದ ಮುರಾರಿ' ಬಂದೇ ಬಿಡ್ತು. ಹಲವು ದಿನಗಳಿಂದ ಅಭಿಮಾನಿಗಳನ್ನ ಕಾಡುತ್ತಿದ್ದ ಕುತೂಹಲಕ್ಕೆ ತೆರೆಬಿತ್ತು. ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಅವರನ್ನ ಒಂದೇ ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳಬೇಕು ಅಂತ ಕಾಯುತ್ತಿದ್ದ ಅವರ ಫ್ಯಾನ್ಸ್ ಬೆಳಿಗ್ಗೆನೆ ಸಿನಿಮಾ ನೋಡಿ ಫುಲ್ ಖುಷಿಯಾಗಿದ್ದಾರೆ.

  ಹೌದು, 'ಮುಕುಂದ ಮುರಾರಿ' ಚಿತ್ರಕ್ಕಾಗಿ ಬಕ ಪಕ್ಷಿಗಳಂತೆ ಕಾದು ಕುಂತಿದ್ದ ಚಿತ್ರಪ್ರೇಮಿಗಳು ಫಸ್ಟ್ ಡೇ, ಫಸ್ಟ್ ಶೋನೇ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.

  'ಮುಕುಂದ ಮುರಾರಿ' ಇಂದು ರಾಜ್ಯಾದ್ಯಂತ ಸುಮಾರು 290ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದ್ದು, ಹಲವು ಕಡೆ ಬೆಳಿಗ್ಗೆ 6 ಗಂಟೆಯಿಂದನೇ 'ಮುಕುಂದ ಮುರಾರಿ'ಯ ದರ್ಶನವಾಗಿದೆ. ಪೋಸ್ಟರ್, ಟೀಸರ್ ಹೀಗೆ ಹಲವು ವಿಷಯಗಳಿಗೆ ನಿರೀಕ್ಷೆ ಹುಟ್ಟುಹಾಕಿದ್ದ ಈ ಚಿತ್ರಕ್ಕೆ ಮೊದಲ ದಿನ ಭರ್ಜರಿ ಒಪನಿಂಗ್ ಸಿಕ್ಕಿದೆ.[ಸುದೀಪ್-ಉಪೇಂದ್ರ ಜೋಡಿಯ 'ಮುಕುಂದ ಮುರಾರಿ' ನೋಡಲು 6 ಕಾರಣಗಳು..]

  ನಂದಕಿಶೋರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸುದೀಪ್-ಉಪೇಂದ್ರ ಜೊತೆಯಲ್ಲಿ ರವಿಶಂಕರ್, ಅವಿನಾಶ್, ನಿಖಿತಾ ತುಕ್ರಾಲ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.ಈಗಾಗಲೇ ಸಿನಿಮಾ ನೋಡಿ ಖುಷಿಯಲ್ಲಿರುವ ಸುದೀಪ್ ಹಾಗೂ ಉಪ್ಪಿಯ ಅಭಿಮಾನಿಗಳು ಹಾಗೂ ಇನ್ನೂ ಚಿತ್ರಮಂದಿರದಲ್ಲಿ ಕೂತು ಸಿನಿಮಾ ನೋಡುತ್ತಿರುವ ಅಭಿಮಾನಿಗಳು, 'ಮುಕುಂದ ಮುರಾರಿ' ಹೇಗಿದೆ ಅಂತ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಹಾಗಾದ್ರೆ, 'ಮುಕುಂದ ಮುರಾರಿ' ಚಿತ್ರವನ್ನ ನೋಡಿದ ಪ್ರೇಕ್ಷಕರು, ಮೊದಲ ಪ್ರತಿಕ್ರಿಯೆ ಏನು ಅಂತ ಇಲ್ಲಿದೆ ನೋಡಿ.

  ಉಪ್ಪಿ ಟಚ್

  ಉಪ್ಪಿ ಟಚ್

  ''ಮುಕುಂದ ಮುರಾರಿ'ಯ ಮೊದಲಾರ್ಧ, ಮೂಲ ಚಿತ್ರಕ್ಕೆ ನ್ಯಾಯ ಒದಗಿಸಿದೆ. ಅದಕ್ಕೆ ಉಪ್ಪಿಯ ಟಚ್ ಸೇರಿದೆ''.-ನಮ್ ಸಿನಿಮಾ

  ಅಭಿನಯ ಹೇಗಿದೆ

  ಅಭಿನಯ ಹೇಗಿದೆ

  ''ಮುಕುಂದ ಮುರಾರಿ' ಸಿನಿಮಾ ಒಂದು ಘನ ಸಂದೇಶ ನೀಡುವ ಉತ್ತಮ ಮನರಂಜನೆ ಚಿತ್ರ. ಉಪೇಂದ್ರ ಅಭಿನಯ ಅದ್ಬುತ. ಸುದೀಪ್ ಅಭಿನಯದಲ್ಲಿ ಭವ್ಯತೆಯಿದೆ''

  ದೈವಿಕ ಅನುಭವ

  ದೈವಿಕ ಅನುಭವ

  ''ಬೆಳಿಗ್ಗೆ ಶೋ 'ಮುಕುಂದ ಮುರಾರಿ' ಸಿನಿಮಾ ನೋಡಿ ಹೊರ ಬಂದಾಗ, ದೈವಿಕ ಅನುಭವ ಆಗುತ್ತೆ.'' ಥ್ಯಾಂಕ್ಸ್ ಉಪ್ಪಿ ಸರ್, ಸುದೀಪ್ ಸರ್ ಹಾಗೂ ನಂದ ಸರ್''- ಕುಮಾರ್ ಎಂ ರಾವ್

  'ಮುಕುಂದ ಮುರಾರಿ'ಯ ಟೈಮ್

  'ಮುಕುಂದ ಮುರಾರಿ'ಯ ಟೈಮ್

  ''136 ನಿಮಿಷ, 45 ಸೆಕೆಂಡ್, 1 ಮ್ಯೂಟ್''-ಸಿನಿಲೋಕ

  ಉಪೇಂದ್ರ ಸೂಪರ್

  ಉಪೇಂದ್ರ ಸೂಪರ್

  ''ಮೊದಲಾರ್ಧ ಉತ್ತಮವಾಗಿದೆ. ಕೋರ್ಟ್ ಸನ್ನಿವೇಶಗಳಲ್ಲಿ ಉಪೇಂದ್ರ ಅಭಿನಯ ಹಾಗೂ ಡೈಲಾಗ್ ಸೂಪರ್ ಆಗಿದೆ. ಫಸ್ಟ್ ಹಾಫ್ ಗೆ ಮೊದಲು ಸುದೀಪ್ ಪ್ರವೇಶ ಆಗುತ್ತೆ''-ಸಿನಿಲೋಕ

  ದೀಪಾವಳಿ ಧಮಾಕ

  ದೀಪಾವಳಿ ಧಮಾಕ

  ''ಅದ್ಬುತ ಚಿತ್ರ, ಮನರಂಜನೆಯ ಜೊತೆ, ಉತ್ತಮವಾದ ಸಂದೇಶವಿದೆ. ದೀಪಾವಳಿ ಧಮಾಕ''

  English summary
  Kannada actors Upendra and Sudeep starerr Movie 'Mukunda Murari' has hit the screens today (October 28th). 'Mukunda Murari'' is receiving positive response in twitter. the movie directed by nandakishore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X