»   » 'ಮುಕುಂದ ಮುರಾರಿ'ಯ ಮಾತಿನ ಸಮರಕ್ಕೆ ವಿಮರ್ಶಕರ ರೆಸ್ಪಾನ್ಸ್ ಹೇಗಿದೆ?

'ಮುಕುಂದ ಮುರಾರಿ'ಯ ಮಾತಿನ ಸಮರಕ್ಕೆ ವಿಮರ್ಶಕರ ರೆಸ್ಪಾನ್ಸ್ ಹೇಗಿದೆ?

Posted By:
Subscribe to Filmibeat Kannada

ಆಸ್ತಿಕ-ನಾಸ್ತಿಕರ ನಡುವಿನ ವಾದ-ವಿವಾದ ಮತ್ತು ತರ್ಕಗಳ 'ಮುಕುಂದ ಮುರಾರಿ' ಚಿತ್ರದಲ್ಲಿ, ಸ್ಟಾರ್ ನಟರಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರ ಜುಗಲ್ ಬಂದಿ ಅಭಿಮಾನಿಗಳಿಗೆ ಹಿಡಿಸಿದೆ.

ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ನಟನೆಯ ಹಿಂದಿ ಸಿನಿಮಾ 'ಓ ಮೈ ಗಾಡ್' ರೀಮೇಕ್ ಇದಾದ್ರೂ, ಕನ್ನಡಕ್ಕೆ ತಂದಾಗ ಇಲ್ಲಿನ ನೇಟಿವಿಟಿಗೆ ತಕ್ಕಂತೆ ನಂದ ಕಿಶೋರ್ ಅವರು ಕೊಂಚ ಮಾರ್ಪಾಡು ಮಾಡಿದ್ದಾರೆ.


ಸುದೀಪ್, ಉಪೇಂದ್ರ, ನಿಖಿತಾ ತುಕ್ರಾಲ್, ರವಿಶಂಕರ್, ಅವಿನಾಶ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ಮುಕುಂದ ಮುರಾರಿ' ನಿನ್ನೆ (ಅಕ್ಟೋಬರ್ 28) ಇಡೀ ಕರ್ನಾಟಕದಾದ್ಯಂತ ತೆರೆ ಕಂಡಿದೆ.[ವಿಮರ್ಶೆ: 'ಮುಕುಂದ'ನ ಸವಾಲಿಗೆ ಪರಮಾತ್ಮ 'ಮುರಾರಿ' ಪರಾರಿ....]


ರೀಮೇಕ್ ಸಿನಿಮಾ ಆದ್ರೂ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದ್ದು, ವಿಮರ್ಶಕರು ಕೂಡ ತಮ್ಮ ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 'ಮುಕುಂದ ಮುರಾರಿ'ಗೆ ವಿಮರ್ಶಕರು ನೀಡಿದ ವಿಮರ್ಶೆಯ ಕಲೆಕ್ಷನ್ಸ್ ನೋಡೋಣ, ಮುಂದೆ ಓದಿ....


'ದೇವರ ಆಟ ಬಲ್ಲವರಾರು?' -ವಿಜಯ ಕರ್ನಾಟಕ

ನಾಸ್ತಿಕ ಮತ್ತು ಆಸ್ತಿಕ ವಾದಗಳ ಜಂಗಿ ನಿಕಾಲಿ ಕುಸ್ತಿ ಇಂದು ನೆನ್ನೆಯದ್ದಲ್ಲ. ದೇವರ ಇರುವಿಕೆಯನ್ನು ಪ್ರಶ್ನಿಸುವ ಮತ್ತು ದೇವರ ಬಗ್ಗೆ ಅಪಾರ ಭಕ್ತಿ ಇರುವ ಅನೇಕ ಚಿತ್ರಗಳು ಈಗಾಗಲೇ ತೆರೆಕಂಡಿವೆ. ಎರಡೂ ತಮ್ಮದೇ ಆದ ವಾದವನ್ನು ಮನರಂಜನೆಯನ್ನು ಕೊಡುತ್ತಲೇ ಮಂಡಿಸಿವೆ. ಆದರೆ, ಎರಡೂ ವಾದಗಳನ್ನು ತೆರೆಯ ಮೇಲೆ ತರುವ ಪ್ರಯತ್ನ ನಡೆದಿರುವುದು ಕಡಿಮೆ. ‘ಮುಕುಂದ ಮುರಾರಿ'ಯಲ್ಲಿ ಅಂತಹ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ನಂದಕಿಶೋರ್. ಬಾಲಿವುಡ್‌ನ ‘ಓ ಮೈ ಗಾಡ್' ಸಿನಿಮಾದ ರೀಮೇಕ್ ಚಿತ್ರ ಇದಾಗಿದ್ದರೂ, ಈ ನೆಲದ ಭಾವನಗೆ ಸರಿ ಹೊಂದುವಂತಹ ಒಂದಿಷ್ಟು ದೃಶ್ಯಗಳು ಸೇರ್ಪಡೆ ಆಗಿವೆ. ಹಾಗಾಗಿ ‘ಮುಕುಂದ ಮುರಾರಿ' ಕನ್ನಡದ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಾರೆ. ರೇಟಿಂಗ್: 3/5. -ಶರಣು ಹುಲ್ಲೂರು.[ಟ್ವಿಟ್ಟರ್ ವಿಮರ್ಶೆ: 'ಮುಕುಂದ ಮುರಾರಿ'ಯ ಜುಗಲ್ ಬಂದಿಗೆ ಭಕ್ತರು ಏನಂದ್ರು ಗೊತ್ತಾ?]


'ಆ ಥಾಲಿ...ಬಡಿಸಿದ ಎಲೆ ಬೇರೆ' -ಪ್ರಜಾವಾಣಿ

ಮೂಲ ಚಿತ್ರದ ಜತೆಗೆ ಇದನ್ನು ಹೋಲಿಸಿ ನೋಡದೆ ವಿಧಿಯಿಲ್ಲ. ಅಲ್ಲಿ ಪರೇಶ್ ರಾವಲ್ ಮಾಡಿದ ಪಾತ್ರವನ್ನು ಇಲ್ಲಿ ಉಪೇಂದ್ರ ನಿರ್ವಹಿಸಿದ್ದಾರೆ. ಅದರಲ್ಲೇ ಹಾವಭಾವದ ಅಜಗಜಾಂತರ ಕಾಣುತ್ತದೆ. ಕೃಷ್ಣನಾಗಿ ಅಲ್ಲಿ ಅಕ್ಷಯ್ ಕುಮಾರ್ ‘ಬಿಲ್ಡಪ್' ಇಲ್ಲದೆ ಕಾಣಿಸಿಕೊಂಡಿದ್ದರು. ಇಲ್ಲಿ ಸುದೀಪ್ ಆ ಜಾಗದಲ್ಲಿ ಹೆಚ್ಚೇ ಪ್ರಭಾವಳಿಗಳೊಂದಿಗೆ ಅಭಿನಯಿಸಿದ್ದಾರೆ. ಮೂಲ ಚಿತ್ರದಲ್ಲಿ ಕೋರ್ಟ್ ಸನ್ನಿವೇಶಗಳಿಗೆ ಮಹತ್ವ ಸಿಕ್ಕಿತ್ತು. ಕನ್ನಡದಲ್ಲಿ ಕಿರುತೆರೆ ಮಟ್ಟಿಗೆ ಟಿ.ಎನ್. ಸೀತಾರಾಂ ಆ ವೇದಿಕೆಯನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಂಡು ಜನಪ್ರಿಯರಾಗಿರುವುದರಿಂದಲೋ ಏನೋ, ನಂದಕಿಶೋರ್ ಚಿತ್ರಕಥೆಯನ್ನು ಬದಲಾಯಿಸಿ ವಾಗ್ವಾದಕ್ಕೇ ಹೆಚ್ಚಿನ ಒತ್ತು ನೀಡಿದ್ದಾರೆ. -ವಿಶಾಖ ಎನ್.[ಸುದೀಪ್-ಉಪೇಂದ್ರ ಜೋಡಿಯ 'ಮುಕುಂದ ಮುರಾರಿ' ನೋಡಲು 6 ಕಾರಣಗಳು..]


'ದೇವರು ಬಂದು ಹೃದಯ ತಟ್ಟಿದ!' - ಕನ್ನಡ ಪ್ರಭ

ಧಾರ್ಮಿಕ ಭಾವನೆಗಳೊಂದಿಗೆ ಬೆಸೆದುಕೊಂಡಿರುವ ಚರ್ಚೆಯೊಂದು ಅಷ್ಟೇ ಸೂಕ್ಷ್ಮವಾಗಿ ಸಿನಿಮಾ ಕತೆಯಾಗಿ ತೆರೆದುಕೊಳ್ಳುತ್ತದೆ. ಮೂಲ ಚಿತ್ರವನ್ನು ನೋಡಿದವರಿಗೆ ಈ ಚಿತ್ರ ಸಾಧಾರಣ ಎನಿಸಬಹುದು. ಈ ನಡುವೆ ಕೋರ್ಟ್ ನಲ್ಲಿ ನಡೆಯುವ ವಾದದಲ್ಲಿ ಕೇಳಿಬರುವ ಸಂಭಾಷಣೆಗಳು ಕಿಕ್ ಕೊಡುತ್ತವೆ. ಹಾಗೆ ದೇವರು ಎಂದರೇನು ಎನ್ನುವ ಮುಕುಂದನ ಮಾತುಗಳು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತವೆ. ಹಾಗೆ ನೋಡಿದರೆ ಕನ್ನಡ ಚಿತ್ರರಂಗದ ಮಟ್ಟಿಗೆ ದೇವರ ಮೇಲಿನ ನಂಬಿಕೆ, ದೇವರ ಅಸ್ತಿತ್ವವನ್ನು ಖಡಕ್ ಆಗಿ ಪ್ರಶ್ನಿಸಿದವರು ಉಪೇಂದ್ರ. ರೇಟಿಂಗ್: 3/5. -ಆರ್.ಕೇಶವಮೂರ್ತಿ


'ಆಲಾರೇ ಆLAWರೇ...ಮುಕುಂದ ಮುರಾರೇ....' -ವಿಜಯವಾಣಿ

'ಅಂಗಡಿ ಮಾಲೀಕನೊಬ್ಬ ವಿಮೆ ಪರಿಹಾರಕ್ಕಾಗಿ ದೇವರ ವಿರುದ್ಧವೇ ಕೇಸ್ ಹಾಕುವ ರೀಲ್ ಸ್ಟೋರಿ ಚಿತ್ರವೇ 'ಮುಕುಂದ ಮುರಾರಿ'. 'ಐ ಯಾಮ್ ಗಾಡ್, ಗಾಡ್ ಈಸ್ ಗ್ರೇಟ್' ಎನ್ನುವ ಉಪೇಂದ್ರ ದೇವರನ್ನೇ ಕೋರ್ಟಿಗೆಳೆಯುವ ಮುಕುಂದನ ಪಾತ್ರದಲ್ಲಿ ತಮ್ಮ ಎಂದಿನ ಮ್ಯಾನರಿಸಂನಲ್ಲಿ ರಂಜಿಸಿದ್ದಾರೆ. ದೇವರನ್ನು ನಂಬದೆ 'ನಾನು' ದೇವರೆನ್ನುವ ಅವರು, ಕೊನೆಗೆ 'ನೀನು' ದೇವರು ಎಂದು ಒಪ್ಪುವುದೇ ಕ್ಲೈಮ್ಯಾಕ್ಸ್. ಕಲಿಯುಗದ ಕೃಷ್ಣನಾಗಿ ಸುದೀಪ್ ಯಾವ ಕಿಚ್ಚನ್ನು ತೋರಿಸದೆ ಕೂಲ್ ಆಗಿ ನಟಿಸಿದ್ದಾರೆ. ನಂಬಿಕೆ-ಮೂಢನಂಬಿಕೆಯನ್ನು ಆಸ್ತಿಕತೆ-ನಾಸ್ತಿಕತೆಯ ಹಂದರದಲ್ಲಿ ಹೆಣೆದ ಕಥೆಯೇ ಚಿತ್ರಕಥೆ.


'ಇಲ್ಲ ಅನ್ನೋರಿಗೆ ಮುಕುಂದ, ಇದೆ ಅನ್ನೋರಿಗೆ ಮುರಾರಿ' -ಉದಯವಾಣಿ

ಈ ಚಿತ್ರದ ಎರಡು ಅದ್ಭುತ ವಿಚಾರಗಳೆಂದರೆ ಒಂದು ಪಾತ್ರ ಹಂಚಿಕೆ, ಇನ್ನೊಂದು ಉಪೇಂದ್ರ ಅವರ ಮಾತುಗಳ ಬಳಕೆ. ಎರಡೂ ಚಿತ್ರವನ್ನು ನೋಡಿಸಿಕೊಂಡು ಹೋಗಿಬಿಡುತ್ತದೆ. 'ಡೈಲಾಗಲ್ಲೇ ದೇವ್ರನ್ನ ತೋರುಸ್ಬಿಟ್ಟೆ' ಅನ್ನುವ ಚಿತ್ರದ ಡೈಲಾಗಿನಂತೆ ಇಡೀ ಚಿತ್ರ ನಿಂತಿರುವುದು ಉಪೇಂದ್ರ ಮತ್ತು ಅವರ ಮಾತುಗಳ ಮೇಲೆ. ಮೂಲದಲ್ಲಿ ಇರುವ ಸನ್ನಿವೇಶ, ಸಂದರ್ಭ, ಹೆಚ್ಚು ಕಡಿಮೆ ಯಥಾರ್ಥದ ಮಾತುಗಳೆಲ್ಲಾ ಈ ಚಿತ್ರಕ್ಕೂ ಟ್ರಾನ್ಸ್ ಫರ್ ಆಗಿದ್ದರೂ ನಿಮಗೆ ಇಷ್ಟವಾಗುವುದು ಉಪೇಂದ್ರ ಅವರು ಆ ಮಾತುಗಳನ್ನು ಆಡುವ ರೀತಿಯಿಂದಾಗಿ. -ವಿಕಾಸ್ ನೇಗಿಲೋಣಿ.


English summary
Kannada Movie 'Mukunda Murrari' Critics Review. Kannada Actor Sudeep, Kannada Actor Upendra, Actress Nikitha Thukral starrer 'Mukunda Murrari' has received mixed response from the critics. Here is the collection of reviews by Top News Papers of Karnataka. The movie is directed by Nanda Kishore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada