»   » ವಿಮರ್ಶೆ: ನೋಡುಗರ ಪರಿಕಲ್ಪನೆ ಬದಲಾಯಿಸುವ 'ನಾನು ಅವನಲ್ಲ...ಅವಳು'

ವಿಮರ್ಶೆ: ನೋಡುಗರ ಪರಿಕಲ್ಪನೆ ಬದಲಾಯಿಸುವ 'ನಾನು ಅವನಲ್ಲ...ಅವಳು'

Posted By:
Subscribe to Filmibeat Kannada

'ಹೆಣ್ಣಾಗಿ ಹುಟ್ಟುವುದು ಕಷ್ಟವಲ್ಲ, ಹುಟ್ಟಿದ್ಮೇಲೆ ಹೆಣ್ಣಾಗುವುದು ಕಷ್ಟ'...ಅನ್ನುವ ಮಾತಿನಿಂದ ಶುರುವಾಗುವ ಎರಡು ರಾಷ್ಟ್ರ ಪ್ರಶಸ್ತಿ ಪಡೆದಿರುವ 'ನಾನು ಅವನಲ್ಲ...ಅವಳು' ಸಿನಿಮಾ ಅಕ್ಷರಶಃ ಮಂಗಳಮುಖಿಯರ ನೋವಿನ ಕಥೆಯನ್ನ ಬಿಚ್ಚಿಟ್ಟಿದೆ.


ಮಂಗಳಮುಖಿಯರ ವಾಸ್ತವ ಬದುಕು, ಅವರ ಮಾನಸಿಕ ತುಮುಲವನ್ನು ಸೂಕ್ಷ್ಮವಾಗಿ ತೆರೆಮೇಲೆ ತಂದಿರುವ 'ನಾನು ಅವನಲ್ಲ...ಅವಳು' ನಿಜಕ್ಕೂ ಎಲ್ಲರೂ ನೋಡಲೇಬೇಕಾದ ಸಿನಿಮಾ.[ಶಿವರಾಜ್ ಕುಮಾರ್ ಮೆಚ್ಚಿದ 'ನಾನು ಅವನಲ್ಲ, ಅವಳು']

'ನಾನು ಅವನಲ್ಲ...ಅವಳು' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......


Rating:
4.0/5

ನಿರ್ದೇಶನ : ಬಿ.ಎಸ್.ಲಿಂಗದೇವರು
ನಿರ್ಮಾಣ : ರವಿ.ಆರ್.ಗರಣಿ
ಮೂಲ ಕಥೆ : ಲಿವಿಂಗ್ ಸ್ಮೈಲ್ ವಿದ್ಯಾ
ಚಿತ್ರಕಥೆ : ಬಿ.ಎಸ್.ಲಿಂಗದೇವರು
ತಾರಾಗಣ : ಸಂಚಾರಿ ವಿಜಯ್
ಸಂಗೀತ : ಅನೂಪ್ ಸೀಳಿನ್
ಛಾಯಾಗ್ರಹಣ : ಅಶೋಕ್.ವಿ.ರಾಮನ್
ಬಿಡುಗಡೆ : 25/09/2015


ಕಥಾಹಂದರ

ಮಂಗಳಮುಖಿ ಲಿವಿಂಗ್ ಸ್ಮೈಲ್ ವಿದ್ಯಾ ಅವರ ನಿಜ ಬದುಕಿನ ಕಥೆ 'ನಾನು ಅವನಲ್ಲ...ಅವಳು' ಸಿನಿಮಾ. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಮಾದೇಶ, ಮನಸೋಇಚ್ಛೆಯಿಂದ ವಿದ್ಯಾ ಆಗಿ ಬದಲಾಗುವ ಪ್ರಕ್ರಿಯೆಯೇ ಈ ಸಿನಿಮಾದ ಹೂರಣ.[ಆರ್.ಜಿ.ವಿ ನಿರ್ದೇಶನದಲ್ಲಿ ಕನ್ನಡದ ರಾಷ್ಟ್ರ ಪ್ರಶಸ್ತಿ ವಿಜೇತ]


ಮಂಗಳಮುಖಿಯರ ನೈಜ ಚಿತ್ರಣ

ಮಂಗಳಮುಖಿಯರ ಮನದಾಳದ ಬೇಗುದಿ, ಕುಟುಂಬ ಮತ್ತು ಸಮಾಜದ ನಿರ್ಲಕ್ಷ್ಯ, ತಮ್ಮದೇ ಆದ ಕತ್ತಲ ಬದುಕಿನ ಜೀವನವನ್ನು ತೆರೆಮೇಲೆ ನೈಜವಾಗಿ ಕಟ್ಟಿಕೊಡುವುದರಲ್ಲಿ ನಿರ್ದೇಶಕ ಬಿ.ಎಸ್.ಲಿಂಗದೇವರು ಯಶಸ್ವಿಯಾಗಿದ್ದಾರೆ. ಅಷ್ಟೇ ಸೂಕ್ಷ್ಮವಾಗಿ ಪೂನಾ, ಹೈದರಾಬಾದ್ ಮತ್ತು ಕಡಪಾದಲ್ಲಿರುವ ಮಂಗಳಮುಖಿಯರ ಅಡ್ಡಗಳಲ್ಲೇ ಚಿತ್ರೀಕರಿಸಿ, ಚಿತ್ರಕ್ಕೆ ನೈಜ ಸ್ಪರ್ಶ ನೀಡಿದ್ದಾರೆ.
ಸಂಚಾರಿ ವಿಜಯ್ ನಟನೆ ಸೂಪರ್.!

ಮಂಗಳಮುಖಿ ವಿದ್ಯಾ ಆಗಿ ನಟಿಸಿರುವ ಸಂಚಾರಿ ವಿಜಯ್ ಅಭಿನಯದ ಬಗ್ಗೆ ತುಟಿ ಬಿಚ್ಚುವಹಾಗಿಲ್ಲ. ರಾಷ್ಟ್ರ ಪ್ರಶಸ್ತಿಗೆ ಸಂಚಾರಿ ವಿಜಯ್ ನಟನೆ 100% ಅರ್ಹ.! ಉಳಿದ ಪ್ರಮುಖ ಪಾತ್ರಗಳಲ್ಲಿ ಮಂಗಳಮುಖಿಯರೇ ಕಾಣಿಸಿಕೊಂಡಿರುವುದರಿಂದ ಸಿನಿಮಾ ವಾಸ್ತವ ಜಗತ್ತಿಗೆ ಹತ್ತಿರವಾಗಿದೆ.


ಸಮಾಜಕ್ಕೆ ಉತ್ತಮ ಸಂದೇಶ

ಮಂಗಳಮುಖಿಯರೆಂದರೆ ಚಪ್ಪಾಳೆ, ಗಡುಸು ಧ್ವನಿ, ಭಿಕ್ಷಾಟನೆ, ವೇಶ್ಯಾವಾಟಿಕೆ ಅಷ್ಟೇ ಅಂತ ಕೀಳಾಗಿ ಕಾಣುವ ನಮ್ಮ ಸಮಾಜದ ಅಂಕುಡೊಂಕಿಗೆ 'ನಾನು ಅವನಲ್ಲ...ಅವಳು' ಸಿನಿಮಾ ಕನ್ನಡಿ ಹಿಡಿದ ಹಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ತೃತೀಯ ಲಿಂಗಿಗಳಿಗೂ ಸೂಕ್ತ ಸ್ಥಾನಮಾನ ಸಿಗಲಿ ಅನ್ನೋದು ಚಿತ್ರತಂಡದ ಆಶಯ.


'ನಾನು ಅವನಲ್ಲ...ಅವಳು' ಮಿಸ್ ಮಾಡ್ಬೇಡಿ

ಸದಾ ಕಮರ್ಶಿಯಲ್ ಸಿನಿಮಾ, ಹೊಡಿ ಬಡಿ ಚಿತ್ರಗಳನ್ನೇ ನೋಡಿ ನೋಡಿ ಬೇಸರವಾಗಿದ್ರೆ ಈ ವೀಕೆಂಡ್ ನಲ್ಲಿ 'ನಾನು ಅವನಲ್ಲ...ಅವಳು' ಚಿತ್ರವನ್ನ ಮಿಸ್ ಮಾಡ್ಬೇಡಿ. ಅನೇಕರಿಗೆ ಗೊತ್ತಿಲ್ಲದ ಕತ್ತಲೆ ಜಗತ್ತು ಈ ಚಿತ್ರದಲ್ಲಿದೆ.


English summary
Two National Awards winning Kannada Movie 'Naanu Avanalla..Avalu' is based on a life of Transgender Vidya. 'Naanu Avanalla..Avalu' film review is here

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada