For Quick Alerts
  ALLOW NOTIFICATIONS  
  For Daily Alerts

  'ನಟರಾಜ ಸರ್ವೀಸ್' ನೋಡಿದ ವಿಮರ್ಶಕರು ಮಾಡಿದ ಕಾಮೆಂಟ್ಸ್ ಏನು.?

  By Harshitha
  |

  ಕಾಮಿಡಿ ಕಿಲಾಡಿ ಶರಣ್ ಹಾಗೂ ಮಯೂರಿ ಜೋಡಿ ಆಗಿ ಅಭಿನಯಿಸಿರುವ, ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿರುವ 'ನಟರಾಜ ಸರ್ವೀಸ್' ಚಿತ್ರಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.

  ಶರಣ್ ಅಪ್ಪಟ ಅಭಿಮಾನಿಗಳಂತೂ 'ನಟರಾಜ ಸರ್ವೀಸ್' ನೋಡಿ ಬಾಯ್ತುಂಬಾ ನಕ್ಕಿದ್ದಾರೆ. ಪ್ರೇಕ್ಷಕರಿಗೆ ಇಷ್ಟವಾಗಿರುವ 'ನಟರಾಜ ಸರ್ವೀಸ್' ವಿಮರ್ಶಕರ ಮನವೂ ಗೆಲ್ಲುವಲ್ಲಿ ಯಶಸ್ವಿ ಆಯ್ತಾ.? [ವಿಮರ್ಶೆ: ನಟರಾಜ 'ಸೂಪರ್', ಸರ್ವೀಸ್ 'ಸುಮಾರು']

  ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ನಟರಾಜ ಸರ್ವೀಸ್' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ, ಓದಿರಿ....

  ಲಾಂಗ್ ಜರ್ನಿ ರಾಂಗ್ ಜರ್ನಿ: ಉದಯವಾಣಿ

  ಲಾಂಗ್ ಜರ್ನಿ ರಾಂಗ್ ಜರ್ನಿ: ಉದಯವಾಣಿ

  ''ಅವನೊಬ್ಬ ಕಳ್ಳ! ಅಲ್ಲಲ್ಲ ಹುಟ್ಟು ಕಳ್ಳ!! - ಜೈಲ್ ನಲ್ಲಿ ಅನ್ನ ಸಾಂಬಾರ್ ತಿನ್ನೋಕ್ಕಾಗಿಯೇ ಸಣ್ಣಪುಟ್ಟ ಕಳ್ಳತನ ಮಾಡಿ , ಜೈಲು ಸೇರೋ ಚಾಣಾಕ್ಷ. ರಿಲೀಸ್ ದಿನ ಬಂದರೂ, ಜೈಲ್ ನಿಂದ ಹೊರಗೆ ಹೋಗದೆ, "ನಿಮ್ ಜೈಲ್ ನಲ್ಲಿ ಸಾಂಬಾರ್ ಚೆನ್ನಾಗ್ ಮಾಡ್ತಾರೆ, ಇನ್ನೂ ಒಂದ್ ವಾರ ಇಲ್ಲೇ "ಕಕ್ಕಸ್' ತೊಳ್ಕಂಡ್ ಇದ್ಬಿಡ್ತೀನಿ' ಅನ್ನೋ ಭೂಪ. ನೂರು ರುಪಾಯಿ ಕದಿಯೋಕೂ ಗೊತ್ತಿಲ್ಲದ ಅವ್ನು, ಬ್ಯಾಂಕ್‌ ದರೋಡೆಯ ಅಪಖ್ಯಾತಿಗೊಳಗಾಗುತ್ತಾನೆ. ಅಲ್ಲಿಂದ "ನಟರಾಜ'ನ ಕಾಲ್ನಡಿಗೆ ಶುರು. ಇದು "ನಟರಾಜ ಸರ್ವೀಸ್' ಚಿತ್ರದ ಒನ್ ಲೈನ್‌. ನಿರ್ದೇಶಕರ ಕಥೆಯಲ್ಲೇನೋ ಒಂದಷ್ಟು ಮಜ ಇದೆ. ಆದರೆ, ನಿರೂಪಣೆಯಲ್ಲೇ ಸಾಕಷ್ಟು ಗಿಜಿಬಿಜಿ ಎನಿಸಿದೆ. ಮೊದಲರ್ಧ ಜಾಲಿಯಾಗಿಯೇ ಸಾಗುವ ಸಿನಿಮಾ, ದ್ವಿತಿಯಾರ್ಧ, ನಟರಾಜ ಕಾಡು-ನಾಡು ಅಲೆದಲೆದು ಸುಸ್ತಾಗೋ ರೀತಿ, ನೋಡುಗ ಕೂಡ ತೆರೆಯ ಮೇಲಿನ ಆ ಫ‌ಜೀತಿಗಳನ್ನೆಲ್ಲ ನೋಡಿ ಸುಸ್ತ್ ಬೀಳ್ತಾನೆ. ಒಂದೇ ಮಾತಲ್ಲಿ ಹೇಳುವುದಾದರೆ, ಶರಣ್ ನಗಿಸುವ ಹಿಂದಿನ ಸಿನಿಮಾಗಳನ್ನು ಮನಸ್ಸಲ್ಲಿಟ್ಟುಕೊಂಡು ಹೋದರೆ, ಇಲ್ಲಿ ಅಷ್ಟಾಗಿ ನಗೆಯ ಹೂರಣ ಸಿಗಲ್ಲ. ಅಲ್ಲಲ್ಲಿ ನೆಪಮಾತ್ರಕ್ಕೆ ಜಾರಿ ಬಂದು ಹೋಗುವ ಕಾಮಿಡಿ, ನೋಡುಗನ ತಾಳ್ಮೆಯನ್ನು ಸುಧಾರಿಸುತ್ತದೆ. ಸಿನಿಮಾದಲ್ಲಿ ಗಟ್ಟಿತನ ಹುಡುಕುವಂತಿಲ್ಲ. ಸುಮ್ಮನೆ "ಕಳ್ಳ ಪೊಲೀಸ್‌' ಆಟ ನೋಡಿಕೊಂಡು ಬರಬೇಕಷ್ಟೇ'' - ವಿಜಯ್ ಭರಮಸಾಗರ

  ತೆಳು ಹಾಸ್ಯದ 'ನಟರಾಜ ಸರ್ವೀಸ್' : ವಿಜಯ ಕರ್ನಾಟಕ

  ತೆಳು ಹಾಸ್ಯದ 'ನಟರಾಜ ಸರ್ವೀಸ್' : ವಿಜಯ ಕರ್ನಾಟಕ

  ಪವನ್ ಒಡೆಯರ್ ಮತ್ತು ಶರಣ್ ಜೋಡಿಯ ಚಿತ್ರ ಎನ್ನುವ ಕಾರಣಕ್ಕೆ ಸ್ವಲ್ಪ ಜಾಸ್ತಿ ಕಾಮಿಡಿ ನಿರೀಕ್ಷೆ ಮಾಡಿಕೊಂಡು ಹೋದರೆ ಈ ಚಿತ್ರ ಕೊಂಚ ನಿರಾಶೆ ಆಗುತ್ತದೆ. ಚಿತ್ರದ ಕಾನ್ಸೆಪ್ಟ್ ಚೆನ್ನಾಗಿದೆ. ಮೊದಲರ್ಧ ಚುರುಕಾಗಿದೆ. ಆದರೆ, ಕತೆಗಾಗಿ ಜ್ಯೋತಿಷ್ಯವನ್ನು ನಿಜವೆಂದು ನಂಬಿಸುವ ಅನಾರೋಗ್ಯಕರ ನಿಲುವಿಗೆ ನಿರ್ದೇಶಕರು ಬದ್ಧರಾಗಿದ್ದಾರೆ. ದ್ವಿತಿಯಾರ್ಧ ನಟರಾಜ ಸರ್ವಿಸ್‌ನಂತೆಯೇ ಸಾಗುತ್ತದೆ. ಸಾವುಗಳು, ಅಪಘಾತಗಳು ಪವಾಡದಂತೆ ನಡೆಯುತ್ತವೆ. ಹಾಸ್ಯಕ್ಕೆ ಹಾತೊರೆದು ಕೂತ ಪ್ರೇಕ್ಷಕನ ಮೇಲೆ ಕಾಮಿಡಿಯ ತುಂತುರು ಮಳೆಯಾಗುತ್ತದೆ. ಉಳಿದಂತೆ ಶರಣ್, ಮಯೂರಿ ಚೆನ್ನಾಗಿ ನಟಿಸಿದ್ದಾರೆ. ಛಾಯಾಗ್ರಹಣ ಸಪ್ಪೆ. ಒಂದೆರಡು ಹಾಡುಗಳು ಚೆನ್ನಾಗಿವೆ. ಅನೂಪ್ ಸಂಗೀತ ಚಿತ್ರಕ್ಕೆ ಚೇತರಿಕೆ ತಂದಿದೆ. ವಿಚಿತ್ರವೆಂದರೆ ಪವನ್ ಒಡೆಯರ್ ಹಿಂದಿನ ಚಿತ್ರಗಳ ಮ್ಯಾಜಿಕ್ ಇಲ್ಲಿ ಕಾಣಿಸುವುದಿಲ್ಲ - ಪದ್ಮ ಶಿವಮೊಗ್ಗ

  ಹಿಮ್ಮುಖ ನಡಿಗೆಯ ಸರ್ಕಸ್ : ಪ್ರಜಾವಾಣಿ

  ಹಿಮ್ಮುಖ ನಡಿಗೆಯ ಸರ್ಕಸ್ : ಪ್ರಜಾವಾಣಿ

  ಸರಳರೇಖೆ ಎಳೆಯುವುದು ಸುಲಭ; ಸರಳವಾದರೂ ಸುಂದರ ಎಂಬಂಥ ಸಿನಿಮಾ ಮಾಡುವುದು ಕಷ್ಟ. ನಿರ್ದೇಶಕ ಪವನ್ ಒಡೆಯರ್ ಚಿತ್ರ ಹೆಣೆಯುವುದರಲ್ಲಿ ಸರಳ ಸೂತ್ರ ನೆಚ್ಚಿಕೊಂಡವರು. ‘ಗೋವಿಂದಾಯ ನಮಃ', ‘ಗೂಗ್ಲಿ' ಯಶಸ್ಸಿನ ನಂತರ ಅವರ ಆತ್ಮವಿಶ್ವಾಸ ಈ ನಿಟ್ಟಿನಲ್ಲಿ ಹೆಚ್ಚಾಗಿರಲಿಕ್ಕೂ ಸಾಕು. ‘ರಣವಿಕ್ರಮ' ಸಿನಿಮಾ ಮಾಡುವಾಗ ಅವರು ಎಂದಿಗಿಂತ ಹೆಚ್ಚು ಬುದ್ಧಿ ಖರ್ಚು ಮಾಡಿದ್ದರು. ‘ನಟರಾಜ ಸರ್ವೀಸ್' ಚಿತ್ರದಲ್ಲಿ ಅವರು ಮತ್ತೆ ಕಡಿಮೆ ಬುದ್ಧಿ ಖರ್ಚು ಮಾಡುವ ಹಾದಿಗೆ ಹೊರಳಿದ್ದಾರೆ. ಬ್ರೇನ್ ಲೆಸ್ ಹಾಸ್ಯ ಅಥವಾ ತರ್ಕದ ಹಂಗಿಲ್ಲದ ಹಾಸ್ಯ ನೆಚ್ಚಿಕೊಂಡು ಕೆಲವು ಸಿನಿಮಾಗಳು ಗೆದ್ದಿರಬಹುದು. ಆದರೆ, ಸರಳವಾಗಿರುವುದು ಸುಲಭ ಅಲ್ಲ ಎನ್ನುವುದರಲ್ಲಿಯೇ ಇನ್ನೊಂದು ಸತ್ಯ ಅಡಗಿದೆ. ಅದು ಪವನ್ ಒಡೆಯರ್ ಅವರಿಗೆ ಈ ಚಿತ್ರದ ಮಟ್ಟಿಗಂತೂ ದಕ್ಕಿಲ್ಲ - ವಿಶಾಖ.ಎನ್

  Nataraja Service Movie Review - Times of India

  Nataraja Service Movie Review - Times of India

  One of the biggest plus points of Pavan Wadeyar's Nataraja Service is the fact that it is under two hours of screen time. But, the pace of the screenplay, sadly, makes the film seem much longer than that. The film, as such, is strung together by two plots with a wafer thin thread. The story in totality is quite predictable, with some of the dialogues seeming two decades too late at least. What keeps the film chugging along, despite its pace, is the performance of the two leads.Sharan entertains in his trademark style, trying to ensure his impeccable comic timing salvages some rather tasteless humour at times. Mayuri, who has impressed with her two releases thus far, follows it up with another good act with her theatrics and expressions. The lead pair have a rather interesting and quirky chemistry that keeps helps the viewers' minds from wandering off the screen at most times - Sunayana Suresh

  Simple story sans Pavan and Sharan’s signature style - The New Indian Express

  Simple story sans Pavan and Sharan’s signature style - The New Indian Express

  Nataraja Service by Pavan Wadeyar offers a classic example of the thought, ‘When the judgment is weak, the prejudice is strong'. It is unusual that a director of his calibre could be influenced by ignorance. Nataraja Service does not hold the signature style of Pavan and neither that of the hero, Sharan. What it does is provide for sprinkles of laughter garnished amply with a slow paced narration - A Sharadhaa

  An unfunny ‘walk’ - Deccan Chronicle

  An unfunny ‘walk’ - Deccan Chronicle

  After all the attention which included a song, and then the publicity over demonetised notes which went awfully wrong, Nataraja is finally here and so is the 'walk the talk'! ‘Nataraja Service' refers to one of the most commonly used slangs when someone has no other option but to walk to reach his/her destination. With actor Sharan in the lead, the walk was obviously meant to be accompanied with comedy attached to unusual twists and turns right till the end - Shashiprasad.S.M

  English summary
  Kannada Actor Sharan starrer 'Nataraja Service' has received mixed response from the critics. Here is the collection of 'Nataraja Service' reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X