»   » 'ಅಲಮೇಲಮ್ಮ' ವಿಮರ್ಶೆ: ಸಿಂಪಲ್ಲಾಗ್ ಒಂದು 'ಕಿಡ್ನಾಪ್' ಸ್ಟೋರಿ

'ಅಲಮೇಲಮ್ಮ' ವಿಮರ್ಶೆ: ಸಿಂಪಲ್ಲಾಗ್ ಒಂದು 'ಕಿಡ್ನಾಪ್' ಸ್ಟೋರಿ

Posted By:
Subscribe to Filmibeat Kannada

'ಆಪರೇಷನ್ ಅಲಮೇಲಮ್ಮ'......ಈ ಟೈಟಲ್ ಹೇಳುವಾಗೆ ಚಿತ್ರದಲ್ಲೊಂದು ಆಪರೇಷನ್ ನಡೆಯುತ್ತೆ. ಆದ್ರೆ, ಈ 'ಆಪರೇಷನ್' ಯಾರಿಗಾಗಿ ನಡೆಯುತ್ತೆ ಎಂಬುದು ಚಿತ್ರದ ದೊಡ್ಡ ಸಸ್ಪೆನ್ಸ್. ಚಿತ್ರದ ಕೊನೆವರೆಗೂ ಕುತೂಹಲವಾಗಿ ಚಿತ್ರಕಥೆ ಮಾಡಲಾಗಿದೆ. ಏನಾಯ್ತು? ಯಾರು ಎಂಬ ಸಸ್ಪೆನ್ಸ್, ಚಿತ್ರದ ಕ್ಲೈಮ್ಯಾಕ್ಸ್ ವರೆಗೂ ಪ್ರೇಕ್ಷಕರನ್ನ ಹಿಡಿದಿಡುತ್ತೆ. ಈ ಮೂಲಕ ಸಿಂಪಲ್ ಸುನಿಯ ಅಲಮೇಲಮ್ಮನ 'ಆಪರೇಷನ್' ಯಶಸ್ವಿಯಾಗಿದೆ.. ಪೂರ್ತಿ ವಿರ್ಮಶೆ ಮುಂದೆ ಓದಿ......

Rating:
3.5/5

ಚಿತ್ರ: ಆಪರೇಷನ್ ಅಲಮೇಲಮ್ಮ
ನಿರ್ದೇಶನ: ಸಿಂಪಲ್ ಸುನಿ
ಸಂಗೀತ: ಜುಡಾ ಸ್ಯಾಂಡಿ
ಛಾಯಾಗ್ರಹಣ: ಅಭಿಷೇಕ್ ಕಾಸರಗೂಡು
ಸಂಕಲನ: ಸಚಿನ್
ತಾರಾಗಣ: ರಿಷಿ, ಶ್ರದ್ಧಾ ಶ್ರೀನಾಥ್, ರಾಜೇಶ್ ನಟರಂಗ, ಅರುಣಾ ಬಾಲರಾಜ್, ಮತ್ತು ಇತತರು
ಬಿಡುಗಡೆ ದಿನಾಂಕ: ಜುಲೈ 21, 2017

'ಅಲಮೇಲಮ್ಮ'ನ ಕಥಾಹಂದರ

ನಾಯಕ ಪರಮೇಶ್ ಅಲಿಯಾಸ್ ಪರ್ಮಿ ತರಕಾರಿ ವ್ಯಾಪಾರಿ. ತಾನು ಮದುವೆಯಾಗುವ ಹುಡುಗಿ ಸಾಧಾರಣವಾಗಿದ್ದರೂ ಪರವಾಗಿಲ್ಲ, ಆದರೆ ಆರೇಂಜ್ ಮ್ಯಾರೇಜ್ ಆಗಬೇಕು ಎನ್ನುವುದು ಆತನ ಆಸೆ. ಹಾಗಿದ್ದಾಗಲೇ ಆತನ ಕಣ್ಣಿಗೆ ಬೀಳುವುದು ಅನನ್ಯ ಟೀಚರ್‌. ಎಲ್ಲ ಹುಡುಗಿಯರಂತೆ ಆಸೆಗಳಿದ್ದರೂ, ತಾಯಿಯ ಆರೋಗ್ಯದ ದೃಷ್ಠಿಯಿಂದ ಮನೆಯ ಜವಾಬ್ದಾರಿ ಹೊತ್ತಿರುತ್ತಾಳೆ. ಇವರಿಬ್ಬರ ಮಧ್ಯೆ ಒಂದು ನಿವಿರಾದ ಪ್ರೇಮಕಥೆ. ಎಲ್ಲಾ ಪ್ರೇಮಿಗಳಿಂತೆ ಸಿನಿಮಾ, ಪಾರ್ಕ್, ಡ್ಯುಯೆಟ್ ಅಂತ ಓಡಾಡುತ್ತಿರುತ್ತಾರೆ. ಹೀಗೆ, ಎಲ್ಲ ಚೆನ್ನಾಗಿ ಸಾಗುತ್ತಿರುವಾಗಲೇ ಅಪಹರಣ ಪ್ರಕರಣದಲ್ಲಿ ನಾಯಕ ಸಿಲುಕಿಕೊಳ್ಳುತ್ತಾನೆ.

ಅಸಲಿ 'ಆಪರೇಷನ್' ಶುರು

ದೊಡ್ಡ ಉದ್ಯಮಿ ಮಗ ಅಪಹರಣಕ್ಕೋಳಗಾಗುತ್ತಾನೆ. ಈ ಕಿಡ್ನಾಪ್ ಮಾಡಿದ್ದು ಯಾರು? ಈ ಕಿಡ್ನಾಪ್ ಯಾಕಾಯ್ತು? ಅವರನ್ನ ಹೇಗೆ ಹಿಡಿಯುವುದು ಎಂಬ ಹಲವು ಪ್ರಶ್ನೆಗಳೊಂದಿಗೆ ಕಳ್ಳ-ಪೊಲೀಸ್ ಆಟ ನಡೆಯುತ್ತೆ. ಈ 'ಆಪರೇಷನ್'ನಲ್ಲಿ ಆಕಸ್ಮಾತ್ ಆಗಿ ಸಿಕ್ಕಿ ಬೀಳುವ ನಾಯಕ ಹೇಗೆ ಇದರಿಂದ ಹೊರಬರುತ್ತಾನೆ ಎಂಬುದು ಚಿತ್ರದ ದ್ವೀತಿಯಾರ್ಧ. ಚಿತ್ರದ ಮೊದಲಾರ್ಧ ಲವಲವಿಕೆಯಿಂದ ಕೂಡಿದ್ದರೇ, ಚಿತ್ರದ ಅಸಲಿ ಕಥೆ ಶುರುವಾಗುವುದೇ ಮಧ್ಯಂತರದ ನಂತರ.

ಈ ಅಲಮೇಲಮ್ಮ ಯಾರು?

ಚಿತ್ರದಲ್ಲಿ ಶ್ರದ್ಧಾ ಅನನ್ಯ ಟೀಚರ್. ಇನ್ನು ನಾಯಕ ರಿಷಿ ತರಕಾರಿ ವ್ಯಾಪಾರಿ. ಹಾಗಿದ್ರೆ, ಈ ಅಲಮೇಲಮ್ಮ ಯಾರು? ಇದು ಚಿತ್ರದ ಬಹುದೊಡ್ಡ ಸಸ್ಪೆನ್ಸ್. ಉದ್ಯಮಿ ಮಗನನ್ನ ಕಿಡ್ನಾಪ್ ಮಾಡುವುದು ಯಾರು? ಅಷ್ಟಕ್ಕೂ, ಈ ಅಲಮೇಲಮ್ಮ ಯಾರು ಎಂಬುದನ್ನ ಚಿತ್ರಮಂದಿರದಲ್ಲೇ ನೋಡಿ ಎಂಜಾಯ್ ಮಾಡಿ.

ರಿಷಿ ಅಭಿನಯ ಹೇಗಿದೆ?

ಮಿಡಲ್ ಕ್ಲಾಸ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಯಕ ರಿಷಿ ಅವರದ್ದು ಚಿತ್ರದ ಪ್ರಧಾನ ಪಾತ್ರ. ಅದಕ್ಕೆ ತಕ್ಕ ಅಭಿನಯ ತಮ್ಮ ಚೊಚ್ಚಲ ಚಿತ್ರದಲ್ಲಿ ನೀಡಿದ್ದಾರೆ. ಇಲ್ಲಿ ರಿಷಿಗೆ ಫೈಟ್ಸ್, ಡ್ಯಾನ್ಸ್ ಇಲ್ಲ. ಕಥೆಗೆ ಹೋಲುವಂತೆ ಗೆಟಪ್, ಲುಕ್ ಹಾಗೂ ಮ್ಯಾನರಿಸಂನಿಂದ ಭರವಸೆ ಮೂಡಿಸಿದ್ದಾರೆ.

ಶ್ರದ್ಧಾ ಶ್ರೀನಾಥ್

ನಟಿ ಶ್ರದ್ಧಾ ಶ್ರೀನಾಥ್ ಅವರ ಮತ್ತೊಂದು ಡಿ-ಗ್ಲಾಮರ್ ಪಾತ್ರವಿದು. ಮಧ್ಯಮ ಕುಟುಂಬದ ಸಾಮಾನ್ಯ ಹುಡುಗಿ ಪಾತ್ರವನ್ನ ಶ್ರದ್ಧಾ ಶ್ರೀನಾಥ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಗಮನ ಸೆಳೆಯುವ ರಾಜೇಶ್ ನಟರಂಗ

'ಆಪರೇಷನ್ ಆಲಮೇಲಮ್ಮ' ಚಿತ್ರದಲ್ಲಿ ಒಂದು ಮಟ್ಟಕ್ಕೆ ಅನುಭವಿ ಕಲಾವಿದ ಅಂದ್ರೆ ರಾಜೇಶ್ ನಟರಂಗ. ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜೇಶ್ ನಟರಂಗ ಗಮನ ಸೆಳೆಯುತ್ತಾರೆ. ಉಳಿದಂತೆ ಅರುಣಾ ಬಾಲರಾಜ್, ರಾಜೇಶ್ ರಾಮಕೃಷ್ಣ ಅವರು ಕೂಡ ಇಷ್ಟವಾಗುತ್ತಾರೆ.

ಸಿಂಪಲ್ ಸುನಿಯ ನಿರ್ದೇಶನ

ಎರಡೆರೆಡು ಲವ್ ಸ್ಟೋರಿ ಹಾಗೂ ಕಾಮಿಡಿ ಎಂಟರ್ ಟೈನ್ ಮೆಂಟ್ ಮೂಲಕ ತನ್ನದೇ ಶೈಲಿಯ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದ ಸಿಂಪಲ್ ಸುನಿ ಈ ಚಿತ್ರದ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸರಳವಾದ ಕಥೆಯನ್ನ, ಅಷ್ಟೇ ಸರಳವಾಗಿ, ಕುತೂಹಲಭರಿತವಾಗಿ ಪ್ರೇಕ್ಷಕರಿಗೆ ನೀಡಿದ್ದಾರೆ. ಈ ಹಿಂದಿನಂತೆ ಕಾಮಿಡಿಯನ್ನ ಬಿಟ್ಟಿಲ್ಲ. ಜೊತೆಗೆ ಸಸ್ಪೆನ್ಸ್, ಥ್ರಿಲ್ಲಿಂಗ್ ಎನಿಸುವಂತಹ ಚಿತ್ರಕಥೆ ಮಾಡಿದ್ದಾರೆ. ಆರಂಭದಲ್ಲಿ ಚಿತ್ರಕಥೆ ಸ್ವಲ್ಪ ನಿಧಾನವೆನಿಸಿದರೂ, ದ್ವಿತೀಯಾರ್ಧದಲ್ಲಿ ನೋಡುಗರನ್ನ ಹಿಡಿದಿಡುತ್ತೆ.

ತಾಂತ್ರಿಕವಾಗಿ 'ಅಲಮೇಲಮ್ಮ'

'ಆಪರೇಷನ್ ಅಲಮೇಲಮ್ಮ' ಚಿತ್ರದ ''ಅಲಗ ಅಲಗ'' ಹಾಡನ್ನ ಖುಷಿಯಿಂದ ಕೇಳಬಹುದು. ಜುಡಾ ಸ್ಯಾಂಡಿ ಅವರ ಹಿನ್ನಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ತಾಂತ್ರಿಕವಾಗಿ ಸಿನಿಮಾ ಗಮನಿಸಿದ್ರೆ ಅಭಿಷೇಕ್ ಕಾಸರಗೂಡು ಅವರ ಛಾಯಾಗ್ರಹಣ ಹೆಚ್ಚು ಅಂಕಗಳಿಸುತ್ತೆ.

ಕೊನೆಯ ಮಾತು

ಹೀರೋ ಹೀರೋಯಿನ್ ಗೆ ಬಿಲ್ಡಪ್ ಕೋಡೊಕೆ ಡ್ಯಾನ್ಸ್ ಇಲ್ಲ ಜೊತೆಗೆ ಫೈಟ್ ಇಲ್ಲ. ಐಟಂ ಡ್ಯಾನ್ಸ್, ಡಬಲ್ ಮೀನಿಂಗ್ ಡೈಲಾಗ್ಸ್ ಇಲ್ಲಿಲ್ಲ. ಇದೊಂದು ಕಥೆ ಪ್ರಧಾನವಾದ ಸಿನಿಮಾ. ಕಥೆಗೆ ಸೂಕ್ತವಾದ ಕಲಾವಿದರು. ಅದಕ್ಕೆ ತಕ್ಕ ಅಭಿನಯ. ಆಗಾಗ ನಾಯಕನ ಪಂಚಿಂಗ್ ಡೈಲಾಗ್ಸ್ ಪ್ರೇಕ್ಷಕರನ್ನ ನಗಿಸುತ್ತೆ. ರಿಷಿ, ಶ್ರದ್ಧಾ ಲವ್ ಸ್ಟೋರಿ ಇಷ್ಟವಾಗುತ್ತೆ. ಒಂದೇ ಮಾತಿನಲ್ಲಿ ಹೇಳುವುದಾದರೇ ಆಸಕ್ತಿಯಿಂದ, ಕುತೂಹಲದಿಂದ ಕೊನೆಯವರೆಗೂ ಆರಾಮಾಗಿ 'ಆಲಮೇಲಮ್ಮ'ನ ಆಪರೇಷನ್ ನೋಡುವುದಕ್ಕೆ ಯಾವುದೇ ಅಡ್ಡಿಯಿಲ್ಲ.

English summary
Kannada Actress Shraddha Srinath and Actor Rishi Starrer Kannada Movie Operation Alamelamma has hit the screens today (July 21st). The Movie Gets Positive Respons From Audience. Directed By Simple Suni. Here is the Movie review.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada