»   » ಟ್ವಿಟ್ಟರ್ ವಿಮರ್ಶೆ: 'ಅಲಮೇಲಮ್ಮ'ದಲ್ಲಿ ಅನನ್ಯ ಟೀಚರ್, ರಿಷಿ ಕಾಂಬಿನೇಷನ್ ಸೂಪರ್

ಟ್ವಿಟ್ಟರ್ ವಿಮರ್ಶೆ: 'ಅಲಮೇಲಮ್ಮ'ದಲ್ಲಿ ಅನನ್ಯ ಟೀಚರ್, ರಿಷಿ ಕಾಂಬಿನೇಷನ್ ಸೂಪರ್

Posted By:
Subscribe to Filmibeat Kannada

ಸಿಂಪಲ್ ವಿಷಯಗಳನ್ನೇ ಇಟ್ಟುಕೊಂಡು ರಸವತ್ತಾಗಿ ಹೇಳುವ ಮೂಲಕ ಪ್ರೇಕ್ಷಕರನ್ನು ರಂಜಿಸುವ ನಿರ್ದೇಶಕ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿರುವ ಬಹು ನಿರೀಕ್ಷಿತ ಸಿನಿಮಾ 'ಆಪರೇಷನ್ ಅಲಮೇಲಮ್ಮ' ಇಂದು ತೆರೆಕಂಡಿದೆ.

ಟ್ರೈಲರ್, ಹಾಡುಗಳು, ಮೇಕಿಂಗ್ ದೃಷ್ಟಿಯಿಂದ ಮಾತ್ರವಲ್ಲದೇ, ಸರಳ ಕ್ರೈಮ್ ಕತೆಯನ್ನು ಹಾಸ್ಯಮಯವಾಗಿ ಹೇಳಲಾಗಿದೆ ಎಂದು ಸುನಿ ರವರು ಹೇಳಿದ್ದ ದೃಷ್ಟಿಯಿಂದಲೂ ಸಿನಿ ಪ್ರಿಯರಿಗೆ ಈ ಚಿತ್ರದ ಬಗ್ಗೆ ಭಾರಿ ಕುತೂಹಲವಿತ್ತು. ಚಿತ್ರದ ಬಗ್ಗೆ ಇದ್ದ ಎಲ್ಲಾ ಕ್ಯೂರಿಯಾಸಿಟಿಗೆ ಇಂದು ತೆರೆಬಿದ್ದಿದೆ. ಇಂದು 'ಆಪರೇಷನ್ ಅಲಮೇಲಮ್ಮ' ಚಿತ್ರವನ್ನು ಫಸ್ಟ್ ಶೋ ನೋಡಿದವರು ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಚಿತ್ರದ ಬಗ್ಗೆ ಏನೆಲ್ಲಾ ಹೇಳಿದ್ದಾರೆ ಎಂಬುದು ಈ ಕೆಳಗಿನಂತಿದೆ..

ಸ್ಕ್ರೀನ್ ಪ್ಲೇ ಸೂಪರ್

'ಇಂಟರ್ ವಲ್ ವರೆಗೆ ರಿಷಿ ಅಭಿನಯ ಅದ್ಭುತ. ಶ್ರದ್ಧಾ ಶ್ರೀನಾಥ್ ರವರು ತೆರೆ ಮೇಲೆ ರಾಕಿಂಗ್ ಆಗಿ ಕಾಣುತ್ತಾರೆ. ಸಿಂಪಲ್ ಸುನಿಯ ಸ್ಕ್ರೀನ್ ಪ್ಲೇ ಸೂಪರ್' -ನಮ್‌ಸಿನಿಮಾ.ಕಾಂ

ಅತ್ಯುತ್ತಮ ಚಿತ್ರ

'ಚಿತ್ರ ಮಧ್ಯಾಂತರದವರೆಗೆ ತುಂಬಾ ಉತ್ಸಾಹಭರಿತವಾಗಿದೆ. ಶ್ರದ್ಧಾ ಶ್ರೀನಾಥ್ ಮತ್ತು ರಿಷಿ ರವರ ಕಾಂಬಿನೇಷನ್ ಸೂಪರ್. ಜುದಾಹ್ ಸ್ಯಾಂಡಿ ರವರ ಮ್ಯೂಸಿಕ್ ಎಕ್ಸಲೆಂಟ್' -ಸಿನಿಲೋಕ

ಚಿತ್ರ ಕತೆ ಬಗ್ಗೆ

'ಚಿತ್ರ ಕತೆ, ಸಂಭಾಷಣೆ ಎಲ್ಲವೂ ಉತ್ತಮ ಮನರಂಜನೆ ನೀಡುತ್ತದೆ. ಸುನಿ ರವರ ನಿರ್ದೇಶನ ಅತ್ಯುದ್ಭುತವಾಗಿದೆ. ಎಂಟರ್‌ಟೈನರ್ ಆಫ್ ದಿ ಇಯರ್. ರೇಟಿಂಗ್ 4/5' -ಮಯೂರ್ ಸ್ಟುಡಿಯೋಸ್

ಕಾಂಬಿನೇಷನ್ ಅದ್ಭುತ

'ರಿಷಿ ಆಕ್ಟಿಂಗ್ ಅದ್ಭುತವಾಗಿದೆ. ಸಖತ್ತಾಗಿ ಅಭಿನಯಿಸಿದ್ದಾರೆ. ರಿಷಿ ಮತ್ತು ಶ್ರದ್ಧಾ ಕಾಂಬಿನೇಷನ್ ಸೂಪರ್. ಚಿತ್ರ ಬಿಗ್ ಹಿಟ್ ಆಗುವ ಭರವಸೆ ಇದೆ' - Ikyatha

ಕಿಡ್ನಾಪಲ್ಲಿ ಒಂದ್ ಲವ್ ಸ್ಟೋರಿ

"ಚಿತ್ರದ ಬಗ್ಗೆ ಒಂದೇ ಲೈನ್ ನಲ್ಲಿ ಹೇಳುದಾದರೆ, 'ಕಿಡ್ನಾಪಲ್ಲಿ ಒಂದ್ ಲವ್ ಸ್ಟೋರಿ' ಮನರಂಜನೆ ಸೂಪರ್" - ಎಸ್ ಶ್ಯಾಮ್ ಪ್ರಸಾದ್

English summary
Kannada Actress Shraddha Srinath and Rishi Starrer 'Operation Alamelamma' movie has hit the screens todya (july 21). This movie is receving good response from twitter. Suni directorial 'Operation Alamelamma' twitter review is here..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada