For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ಕ್ರೂರ ಮನಸ್ಸನ್ನ ಕೊಲ್ಲುವ 'ಪ್ರಯಾಣ'

  By Bharath Kumar
  |

  ಒಂದು ಬಸ್ಸು. ಅದರಲ್ಲಿ ಒಂದಷ್ಟು ಹೊಸ ಕನಸು, ಹೊಸ ಬದುಕು ರೂಪಿಸಿಕೊಳ್ಳಲು ನಿರ್ಧರಿಸಿದವರು. ಒಬ್ಬೊಬ್ಬರದ್ದು ಒಂದೊಂದು ಆಸೆ, ಒಂದೊಂದು ಕಥೆ ಇಟ್ಕೊಂಡು ಪ್ರಯಾಣ ಆರಂಭವಾಗುತ್ತೆ. ಆಗಲೇ 'ಪ್ರಯಾಣಿಕರ ಗಮನಕ್ಕೆ' ಬರೋದು ನಾವು ಅಪಾಯದಲ್ಲಿದ್ದೇವೆ ಅಂತ. ಪೂರ್ತಿ ವಿಮರ್ಶೆ ಮುಂದೆ ಓದಿರಿ....

  Rating:
  3.0/5

  ಚಿತ್ರ: ಪ್ರಯಾಣಿಕರ ಗಮನಕ್ಕೆ
  ನಿರ್ದೇಶನ: ಮನೋಹರ್
  ನಿರ್ಮಾಣ: ಸುರೇಶ್
  ಸಂಗೀತ: ವಿಜೇತ್
  ಛಾಯಾಗ್ರಹಣ: ಕಿರಣ್ ಹಂಪಾಪುರ
  ಕಲಾವಿದರು: ಭರತ್, ಲೋಕೇಶ್ ಕುಮಾರ್, ಅಮಿತಾ ರಂಗನಾಥ್, ರಾಜ್ ದೀಪಕ್ ಶೆಟ್ಟಿ ಮತ್ತು ಇತರರು
  ಬಿಡುಗಡೆ: ಜುಲೈ 27, 2018

  ಕಥೆ ಸಾಮಾನ್ಯ

  ಕಥೆ ಸಾಮಾನ್ಯ

  ಪ್ರಯಾಣಿಕ ಗಮನಕ್ಕೆ...ಇದು ಬಸ್ ನಲ್ಲೇ ಸಾಗುವ ಜರ್ನಿ ಸಿನಿಮಾ. ಬೆಂಗಳೂರಿನಿಂದ ಹೈದ್ರಾಬಾದ್ ಗೆ ಹೋಗಬೇಕೆಂಬ ಪ್ರಯಾಣಿಕರ ಜೊತೆ ಸಾಗುವ ಚಿತ್ರಕಥೆ. ಈ ಬಸ್ ನಲ್ಲಿ ಪ್ರೀತಿಸಿ ಓಡಿ ಬಂದ ಜೋಡಿ, ಗರ್ಭಿಣಿ ಹೆಂಗಸು, ಪುಟ್ಟ ಹುಡುಗಿ, ವ್ಯಕ್ತಿ ಅಜ್ಜ, ಕೋಪಿಷ್ಟ ವ್ಯಕ್ತಿ ಸೇರಿದಂತೆ ಇತರೆ ಕೆಲವು ಪಾತ್ರಗಳು ಬರುತ್ತೆ. ಇವರ ಪ್ರಯಾಣ ಹೇಗಿರುತ್ತೆ.? ಈ ಪ್ರಯಾಣದಲ್ಲಿ ಎದುರಾಗುವ ಕಷ್ಟಗಳೇನು ಎನ್ನುವುದು ಇಡೀ ಸಿನಿಮಾ. ಈ ಕಥೆ ತುಂಬಾ ಸಾಮಾನ್ಯವೆನಿಸುತ್ತೆ. ಯಾಕಂದ್ರೆ, ಬಸ್ ಪ್ರಯಾಣ ಆಧಾರಿತವಾಗಿ ಹಲವು ಸಿನಿಮಾಗಳು ಬಂದಿದೆ.

  ಕುತೂಹಲ ಮೂಡಿಸುವ ಇಂಟರ್ ವಲ್

  ಕುತೂಹಲ ಮೂಡಿಸುವ ಇಂಟರ್ ವಲ್

  ಹೀಗೆ, ಎಲ್ಲ ಸರಳವಾಗಿ ಸಾಗುವ ಕಥೆಯಲ್ಲಿ ಮಧ್ಯಂತರ ಟ್ವಿಸ್ಟ್ ಕೊಡುತ್ತೆ. ಆ ರೋಚಕತೆ ನೋಡುಗರನ್ನ ಹಿಡಿದಿಡುತ್ತೆ. ಅಸಲಿ ಕಥೆ ಆರಂಭವಾಗುವುದೇ ಅಲ್ಲಿಂದ. ಪ್ರಯಾಣಿಕರು ಸಮಸ್ಯೆಗೆ ಸಿಲುಕಿರುವುದು ಸೆಕೆಂಡ್ ಹಾಫ್ ಚಿತ್ರಕಥೆ. ನಂತರ ಅವರನ್ನ ಕಾಪಾಡಲು ಪೊಲೀಸರು ಹೇಗೆ ಕಾರ್ಯತಂತ್ರ ರೂಪಿಸುತ್ತಾರೆ ಎಂಬುದು ಕ್ಲೈಮ್ಯಾಕ್ಸ್.

  ನಟನೆ ಹೇಗಿದೆ.?

  ನಟನೆ ಹೇಗಿದೆ.?

  ಇಲ್ಲಿ ಯಾವ ಪಾತ್ರವೂ ಹೀರೋ ಅಲ್ಲ. ಕಥೆಯೇ ನಾಯಕ. ಬಸ್ ಡ್ರೈವರ್ ಪಾತ್ರದಲ್ಲಿ ಭರತ್ ಹಾಗೂ ಕ್ಲೀನರ್ ಪಾತ್ರದಲ್ಲಿ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಟ ಲೋಕೇಶ್‌ ನೈಜವಾಗಿ ಅಭಿನಯಿಸಿದ್ದಾರೆ. ಲೋಕೇಶ್‌ ತಮ್ಮ ಕಾಮಿಡಿ ಮೂಲಕ ಕೆಲವು ಕಡೆ ನಗಿಸ್ತಾರೆ. ರಾಜ್ ದೀಪಕ್ ಶೆಟ್ಟಿ ಪೊಲೀಸ್ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ ಮತ್ತು ಇಷ್ಟವಾಗ್ತಾರೆ. ಅಮಿತಾ ರಂಗನಾಥ್ ಅವರ ಬೋಲ್ಡ್ ಆಕ್ಟಿಂಗ್ ಚಿತ್ರಕ್ಕೆ ಎನರ್ಜಿ ನೀಡುತ್ತೆ.

  ರೋಚಕತೆ ಕಮ್ಮಿ

  ರೋಚಕತೆ ಕಮ್ಮಿ

  ಚಿತ್ರದ ಮೊದಲಾರ್ಧ ಬರಿ ಪಾತ್ರಗಳನ್ನ ಪರಿಚಯಿಸುವಲ್ಲಿ ಮುಗಿದುಹೋಗುತ್ತೆ. ಕೆಲವು ಕಡೆ ರೋಚಕತೆ ಹುಟ್ಟಿಸಿದರು, ಅದು ಸಿನಿಮಾ ಪೂರ್ತಿ ಹಿಡಿದಿಡುವಲ್ಲಿ ಹಿನ್ನಡೆಯಾಗಿದೆ. ರಾತ್ರಿಯ ಮೆಜೆಸ್ಟಿಕ್ ನ್ನ ಸುಂದರವಾಗಿ ತೋರಿಸಿದ್ದು, ಬಹುತೇಕ ಬಸ್ ನಲ್ಲೇ ಶೂಟಿಂಗ್ ಆಗಿದೆ. ಎರಡು ಹಾಡುಗಳಿದ್ದು ಸಂದರ್ಭಕ್ಕೆ ಓಕೆ ಅನಿಸುತ್ತೆ. ಹಿನ್ನೆಲೆ ಸಂಗೀತ ಪೂರಕವಾಗಿದೆ.

  ಕ್ರೂರವನ್ನ ಕೊಲ್ಲುವ ಪ್ರೀತಿ

  ಕ್ರೂರವನ್ನ ಕೊಲ್ಲುವ ಪ್ರೀತಿ

  ಅಂತಿಮವಾಗಿ ಈ ಚಿತ್ರದಿಂದ ಒಂದು ಸಂದೇಶ ಪಡೆಯಬಹುದು. ದ್ವೇಷ, ಮೋಹ, ಆಮಿಷ ಎಲ್ಲವೂ ಪ್ರೀತಿ, ಸಂಬಂಧಗಳ ಮೌಲ್ಯದ ಮುಂದೆ ಸಾಯುತ್ತೆ. ಅಂತಿಮವಾಗಿ ಮನುಷ್ಯತ್ವವೇ ಗೆಲ್ಲುವುದು. ಈ ಜರ್ನಿಯಲ್ಲಿ ಪ್ರೀತಿ ಇದೆ, ಸಂಬಂಧ ಇದೆ, ಕಾಮಿಡಿ ಇದೆ, ದ್ವೇಷ ಇದೆ, ಮನುಷ್ಯತ್ವ ಇದೆ, ಕೆಟ್ಟದನ್ನ ಮಾಡುವುದು ಮಾತ್ರವಲ್ಲ, ಕೆಟ್ಟ ಆಲೋಚನೆ ಮಾಡುವುದು ತಪ್ಪು ಎಂಬುದೇ ಚಿತ್ರ.

  ಕೊನೆಯದಾಗಿ ಅಭಿಪ್ರಾಯ

  ಕೊನೆಯದಾಗಿ ಅಭಿಪ್ರಾಯ

  ಈ ರೀತಿ ಬಸ್ ಜರ್ನಿ ಕುರಿತಂತೆ ಹಲವು ಸಿನಿಮಾಗಳು ಬಂದಿದೆ. ಜಗ್ಗೇಶ್ ಅಭಿನಯಿಸಿದ್ದ 'ಲಿಪ್ಟ್ ಕೊಡ್ಲ', 'ಲಾಸ್ಟ್ ಬಸ್', ವಿಷ್ಣುವರ್ಧನ್ ಅಭಿನಯಿಸಿದ್ದ 'ಏಕದಂತ' ಚಿತ್ರಗಳಂತೆ 'ಪ್ರಯಾಣಿಕರ ಗಮನಕ್ಕೆ' ಕೂಡ ಒಂದು. ಆದ್ರೆ, ಈ ಬಸ್ ನಲ್ಲಿ ಆಗುವ ದುರಂತ ಬೇರೆ ಅಷ್ಟೇ. ಈ ಹಳೆ ಸಿನಿಮಾಗಳನ್ನ ನೋಡಿದವರಿಗೆ 'ಪ್ರಯಾಣಿಕರ ಗಮನಕ್ಕೆ' ಚಿತ್ರದಲ್ಲಿ ಹೊಸ ಅನುಭವ ಸಿಗಲ್ಲ. ಆದ್ರೆ, ಹೊಸಬರ ಈ ಪ್ರಯತ್ನ ನೋಡುಗರಿಗೆ ಎಲ್ಲಿಯೂ ಬೋರ್ ಮಾಡಿಸಲ್ಲ. ಇದು ಪ್ರೇಕ್ಷಕರಿಗೆ ಸಮಾಧಾನ ನೀಡುತ್ತೆ.

  English summary
  Comedy khiladigalu lokesh kumar and Bharath starrer Prayanikara gamanakke movie has released today (july 27th). here is the movie review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X