Just In
Don't Miss!
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Lifestyle
ಆರೋಗ್ಯಕರ ಋತುಚಕ್ರಕ್ಕೆ ಇಲ್ಲಿವೆ ಕೆಲವೊಂದು ಯೋಗಾಸನಗಳು
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Premier padmini reveiw: ಬಂಧ-ಅನುಬಂಧಗಳ ಭಾವನಾತ್ಮಕ ಮಿಶ್ರಣ
ಕನ್ನಡ ಚಿತ್ರರಂಗದಲ್ಲಿ ಕೌಟುಂಬಿಕ ಸಿನಿಮಾಗಳು ಕಡಿಮೆಯಾಗುತ್ತಿವೆ ಎಂಬ ಆಪಾದನೆ ಇದೆ. ಈ ಆಪಾದನೆಗೆ ತಕ್ಕ ಉತ್ತರ ಈ ಪ್ರೀಮಿಯರ್ ಪದ್ಮಿನಿ. ಮದುವೆ, ವಿಚ್ಛೇದನ, ಪ್ರೀತಿ, ಸ್ನೇಹ, ಬಂಧ, ಸಂಬಂಧ, ಭಾವನೆಗಳು ಸೇರಿದ ಮಿಶ್ರಣ ಇದರಲ್ಲಿದೆ. ಸಂಪೂರ್ಣವಾಗಿ ಕೌಟುಂಬಿಕ ಮನರಂಜನೆ ಹೊಂದಿರುವ ಸಿನಿಮಾ. ಪೂರ್ತಿ ವಿಮರ್ಶೆ ಮುಂದೆ ಓದಿ...

ಭಾವನೆಗಳು ತುಂಬಿದ ಪ್ರಯಾಣ
ಪತಿಯಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ನಿಂತಿರುವ ಪತ್ನಿ (ಮಧುಬಾಲ). ತನ್ನವರು ಯಾರೂ ಇಲ್ಲ, ತಾನೊಬ್ಬ ಒಂಟಿ ಎಂದು ಖಿನ್ನತೆಗೆ ಒಳಗಾಗುತ್ತಿರುವ ಪತಿ (ಜಗ್ಗೇಶ್). ಇವರಿಬ್ಬರ ದಾಂಪತ್ಯ ಜೀವನದ ಸುತ್ತ ಹಣೆದಿರುವ ಸಾಂಸಾರಿಕ ಕಥೆ. ಈ ಪಾತ್ರಗಳಿಗೆ ಅಂಟಿಕೊಂಡಿರುವ ಮತ್ತಷ್ಟು ಉಪಕಥೆಗಳು ನೋಡುಗರ ಕಣ್ಣನ್ನು ಒದ್ದೆ ಮಾಡುತ್ತಾ ಸಾಗುತ್ತೆ. ಅಲ್ಲಲ್ಲಿ ನಗಿಸುತ್ತಾ, ಮತ್ತೆ ಭಾವನಾತ್ಮಕವಾಗಿ ಮನ ಮುಟ್ಟುತ್ತಾ ಇಡೀ ಸಿನಿಮಾ ಬಂಧ, ಸಂಬಂಧ, ಭಾವನೆಯಿಂದಲೇ ಕರೆದುಕೊಂಡು ಹೋಗುತ್ತೆ.

ಕೌಟುಂಬಿಕ ಸೂತ್ರಕ್ಕೆ ಹಿಡಿದ ಕನ್ನಡಿ
ಇದು ಕಂಪ್ಲೀಟ್ ಕೌಟುಂಬಿಕ ಸಿನಿಮಾ. ಮೊದಲ ದೃಶ್ಯದಿಂದ ಹಿಡಿದು ಕೊನೆಯವರೆಗೂ ತನ್ನ ಸಾಂಸಾರಿಕ ಸೂತ್ರವ ಬಿಟ್ಟು ಹೊರಬರುವುದಿಲ್ಲ. ಸಾಂಸಾರಿಕ ಜಂಜಾಟ, ಕಚ್ಚಾಟ, ಭಿನ್ನಾಭಿಪ್ರಾಯ, ಅನುಮಾನ, ಅಪರ್ಥ ಇವೇ ಹೈಲೈಟ್. ಸಾಮಾನ್ಯ ಕುಟುಂಬಗಳಲ್ಲಿ ನಡೆಯುವ ಅಥವಾ ನಮ್ಮ ಕಣ್ಣೆದುರು ನಡೆದಿರುವ ಕೆಲವು ಘಟನೆಗಳು ತೆರೆಮೇಲೆ ಬರೋದ್ರಿಂದ ನೋಡುಗರಿಗೆ ಕನೆಕ್ಟ್ ಆಗುತ್ತೆ. ಹಾಗಾಗಿಯೇ ರೋಚಕತೆ, ಅಬ್ಬರ, ಘರ್ಜನೆ, ಆಕ್ಷನ್ ಹೀಗೆ ಕೆಲವೊಂದನ್ನ ಇಲ್ಲಿ ನಿರೀಕ್ಷೆ ಮಾಡುವಂತಿಲ್ಲ. ತುಂಬಾ ಸಮಾಧಾನವಾಗಿ ಈ ಚಿತ್ರ ನೋಡಬೇಕು ಅಷ್ಟೆ.

ಜಗ್ಗೇಶ್ ಹೊಸ ರೀತಿಯ ಪಾತ್ರ
ಜಗ್ಗೇಶ್ ಅವರ ರೆಗ್ಯುಲರ್ ಕಾಮಿಡಿ, ಮ್ಯಾನರಿಸಂ ಇಲ್ಲಿಲ್ಲ. ಜವಾಬ್ದಾರಿಯುತ ಕುಟುಂಬದ ವ್ಯಕ್ತಿಯಾಗಿ ಇಷ್ಟವಾಗ್ತಾರೆ. ಜಗ್ಗೇಶ್ ಪತ್ನಿ ಪಾತ್ರದಲ್ಲಿ ಮಧುಬಾಲ ತಕ್ಕ ಅಭಿನಯ. ಮುಖ್ಯ ಪಾತ್ರವೊಂದರಲ್ಲಿ ಸುಧಾರಾಣಿ ನಟಿಸಿದ್ದು ಕಥೆಗೆ ಟ್ವಿಸ್ಟ್ ಕೊಡ್ತಾರೆ. ಹಿತಾ ಚಂದ್ರಶೇಖರ್ ಮತ್ತು ವಿವೇಕ್ ಸಿಂಹ ಪಾತ್ರಗಳು ಇಂದಿನ ಜನರೇಷನ್ ಗೆ ಸೂಕ್ತವಾಗಿದ್ದು, ಅದಕ್ಕೆ ಜೀವ ತುಂಬಿದ್ದಾರೆ. ಜಗ್ಗೇಶ್ ಬಿಟ್ಟರೇ 'ಗೀತಾ ಬ್ಯಾಂಗಲ್ ಸ್ಟೋರ್' ಖ್ಯಾತಿಯ ಪ್ರಮೋದ್ ಅವರದ್ದು ಪ್ರಧಾನ ಪಾತ್ರ. ಅದಕ್ಕೆ ತಕ್ಕ ಪ್ರಶಂಸೆ ಕೂಡ ಪ್ರೇಕ್ಷಕರಿಂದ ಅವರಿಗೆ ಸಿಗುತ್ತೆ. ಹಿರಿಯ ನಟ ದತ್ತಣ್ಣ ಸಣ್ಣದೊಂದು ಪಾತ್ರ ಮಾಡಿದರೂ, ಜೋಶ್ ಕೊಟ್ಟು ಹೋಗ್ತಾರೆ.

ಟೆಕ್ನಿಕಲಿ ಸಿನಿಮಾ ಹೇಗಿದೆ?
ಕಥೆ ಮತ್ತು ಚಿತ್ರಕಥೆಯಲ್ಲಿ ಸಾಮಾನ್ಯವೆನಿಸಿಕೊಳ್ಳುವ ಪ್ರೀಮಿಯರ್ ಪದ್ಮಿನಿ ಪ್ರೊಡಕ್ಷನ್ ನಲ್ಲೂ ಚೊಕ್ಕವಾಗಿದೆ. ಅದ್ವೈತ ಗುರುಮೂರ್ತಿ ಕ್ಯಾಮೆರಾ, ಅರ್ಜುನ್ ಜನ್ಯ ಸಂಗೀತ ಸಾಥ್ ನೀಡಿದೆ. ಚಿತ್ರಕಥೆ ಸರಳವಾಗಿದ್ದು, ಅದಕ್ಕೆ ತಕ್ಕಂತೆ ನಿರ್ದೇಶಕ ರಮೇಶ್ ಇಂದಿರಾ ಕೆಲಸ ಮಾಡಿದ್ದಾರೆ. ಇತ್ತೀಚಿನ ಧಾರಾವಾಹಿಗಳಂತೂ ಬರಿ ಫ್ಯಾಮಿಲಿ ಗಲಾಟೆನೇ ಹೆಚ್ಚಾಗಿದೆ. ಧಾರಾವಾಹಿಗಳನ್ನ ಫಾಲೋ ಮಾಡೋರಿಗೆ ಈ ಚಿತ್ರದ ಕೆಲವು ಅಂಶಗಳು ಧಾರಾವಾಹಿ ಫೀಲ್ ಕೊಡುತ್ತೆ. ಬಹುಶಃ ಈ ಭಾವನೆ ಹೊರಗಿಟ್ಟು ನೋಡಿದ್ರೆ ಸಿನಿಮಾ ಇಷ್ಟ ಆಗಬಹುದು.

ಕೊನೆಯ ಮಾತು...........
ಸಿನಿಮಾವನ್ನ ಎಂಜಾಯ್ ಮಾಡಬಹುದು. ಅದಕ್ಕೆ ತಾಳ್ಮೆ ಇರಬೇಕು. ಮಾಸ್ ಪ್ರೇಕ್ಷಕರಿಗೆ ಕಷ್ಟವಾಗಬಹುದು. ಕ್ಲಾಸ್ ಆಡಿಯೆನ್ಸ್ ಗೆ, ಫ್ಯಾಮಿಲಿ ಆಡಿಯೆನ್ಸ್ ಗೆ ಇದು ಖುಷಿ ಕೊಡುತ್ತೆ. ಅದರಲ್ಲೂ ಎಮೋಷನಲಿ ಕನೆಕ್ಟ್ ಆಗುವ ಜನರಿಗೆ ಈ ಚಿತ್ರ ಸಿಕ್ಕಾಪಟ್ಟೆ ಇಷ್ಟ ಆಗುತ್ತೆ. ಯಾಕಂದ್ರೆ, ಇದು ಎಮೋಷನಲ್ ಎಂಟರ್ ಟೈನ್ಮೆಂಟ್.