»   » ಟ್ವಿಟ್ಟರ್ ವಿಮರ್ಶೆ: 'ರಾಜರಥ' ನೋಡಿ ಬಂದವರ ಕಥೆ ಮತ್ತು ವ್ಯಥೆ

ಟ್ವಿಟ್ಟರ್ ವಿಮರ್ಶೆ: 'ರಾಜರಥ' ನೋಡಿ ಬಂದವರ ಕಥೆ ಮತ್ತು ವ್ಯಥೆ

Posted By:
Subscribe to Filmibeat Kannada
ರಾಜರಥ ಸಿನಿಮಾ ರಾಜ್ಯದಾದ್ಯಂತ ಬಿಡುಗಡೆ | ಟ್ವಿಟ್ಟರ್ ವಿಮರ್ಶೆ | Filmibeat Kannada

'ರಂಗಿತರಂಗ' ಚಿತ್ರದ ನಂತರ ಭಂಡಾರಿ ಬ್ರದರ್ಸ್ ನಿರ್ಮಾಣದಲ್ಲಿ ತಯಾರಾಗಿದ್ದ ರಾಜರಥ ಸಿನಿಮಾ ಇಂದು (ಮಾರ್ಚ್ 23) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ಮೇಕಿಂಗ್, ಟ್ರೈಲರ್ ನಿಂದ ಬಹಳ ಕುತೂಹಲ ಮೂಡಿಸಿದ್ದ 'ರಾಜರಥ'ದಲ್ಲಿ ಕನ್ನಡ ಕಲಾಭಿಮಾನಿಗಳು ಪ್ರಯಾಣ ಮಾಡುತ್ತಿದ್ದಾರೆ.

ನಿರೂಪ್ ಭಂಡಾರಿ ನಾಯಕನಾಗಿದ್ದು, ಅವಂತಿಕಾ ಶೆಟ್ಟಿ ನಾಯಕಿಯಾಗಿದ್ದಾರೆ. ವಿಶೇಷ ಪಾತ್ರದಲ್ಲಿ ತಮಿಳು ನಟ ಆರ್ಯ ಮತ್ತು ರವಿಶಂಕರ್ ಕಾಣಿಸಿಕೊಂಡಿದ್ದಾರೆ. ಇನ್ನು ಪುನೀತ್ ರಾಜ್ ಕುಮಾರ್ ಕೂಡ ಈ ಚಿತ್ರಕ್ಕೆ ಸಾಥ್ ಕೊಟ್ಟಿದ್ದು, 'ರಾಜರಥ' ನೋಡುವವರಿಗೆ ಸರ್ಪ್ರೈಸ್ ಆಗಿರಲಿದೆ.

ಹೀಗೆ ಸಿನಿಮಾ ಬಿಡುಗಡೆಗೂ ಮುಂಚೆ ಇಷ್ಟಲ್ಲಾ ಗಮನ ಸೆಳೆದಿದ್ದ 'ರಾಜರಥ' ಸಿನಿಮಾ ರಿಲೀಸ್ ಆದ್ಮೇಲೆ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ನೋಡಿ ಮೆಚ್ಚಿಕೊಂಡವರು ಇದ್ದಾರೆ. ಅದೇ ರೀತಿ ಸಿನಿಮಾದಿಂದ ಬೇಸರ ಮಾಡಿಕೊಂಡು ಬಂದವರು ಇದ್ದಾರೆ. ಹಾಗಿದ್ರೆ, 'ರಾಜರಥ' ನೋಡಿ ಪ್ರೇಕ್ಷಕ ಪ್ರಭುಗಳು ಏನಂದ್ರು.? ಮುಂದೆ ಓದಿ.....

ಜನ ಮೆಚ್ಚಿದ ರಾಜರಥ

''ರಾಜರಥ ನೋಡಲು ತುಂಬಾ ಚೆನ್ನಾಗಿದೆ. ಅನೂಪ್ ಭಂಡಾರಿ ಸುಪ್ರೀಂ ಮತ್ತು ನಿರೂಪ್ ಭಂಡಾರಿಯ ಮುಗ್ದತೆ ಚಿತ್ರಕ್ಕೆ ಶಕ್ತಿ ತುಂಬಿದೆ. ಹಿನ್ನೆಲೆ ಸಂಗೀತ ಸೂಪರ್ ಆಗಿದೆ'' ಎಂದು ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಫ್ರೆಶ್ 'ರಾಜರಥ' ಇಷ್ಟವಾಯಿತು

''ಅನೂಪ್ ಭಂಡಾರಿಯ ರಾಜರಥ ಫ್ರೆಶ್ ಆಗಿದೆ. ಕಾಮಿಡಿ ಇಷ್ಟವಾಗುತ್ತೆ. ತಾಂತ್ರಿಕವಾಗಿ ಸಿನಿಮಾ ಗೆದ್ದಿದೆ. ಚಿತ್ರಕಥೆ ಎಲ್ಲದಕ್ಕಿಂತ ಉತ್ತಮವಾಗಿದೆ. ಅಂತಿಮವಾಗಿ ಹೇಳುವುದಾದರೇ ಸಿನಿಮಾ ಆವರೇಜ್ ಎನಿಸಿಕೊಳ್ಳುತ್ತೆ'' ಎಂದು ಪ್ರೇಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಬಿಡುಗಡೆ ಮುನ್ನವೇ ಸಖತ್ ಡಿಮ್ಯಾಂಡ್ ಗಿಟ್ಟಿಸಿದ 'ರಾಜರಥ'

ಗ್ರೇಟ್ ಫರ್ಫಾಮೆನ್ಸ್ ನಿರೂಪ್

ರಾಜರಥ ಸಿನಿಮಾ ನಿನ್ನೆಯೇ ಪ್ರಿಮಿಯರ್ ಶೋ ಕಂಡಿದೆ. ಹೀಗಾಗಿ, ಕಳೆದ ರಾತ್ರಿಯೇ ಹೆಚ್ಚು ಜನ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ''ರಾಜರಥ ಚಿತ್ರದಲ್ಲಿ ನಿರೂಪ್ ಭಂಡಾರಿ ಗ್ರೇಟ್ ಫರ್ಫಾಮೆನ್ಸ್ ನೀಡಿದ್ದಾರೆ. ಸಿನಿಮಾ ತುಂಬ ಇಷ್ಟವಾಯಿತು.

ಮ್ಯಾಜಿಕ್ ಮಾಡಲಿಲ್ಲ

'ರಾಜರಥ' ಚಿತ್ರವನ್ನ ನೋಡಿ ಮೆಚ್ಚಿಕೊಳ್ಳದವರು ಇದ್ದಾರೆ. ''ಸಿನಿಮಾ ನೋಡಿ ತುಂಬಾ ಬೇಸರವಾಗಿದೆ. ರಂಗಿತರಂಗ ಮಾಡಿದಂತೆ ಮ್ಯಾಜಿಕ್ ಮಾಡಲು ಈ ಸಿನಿಮಾ ವಿಫಲವಾಗಿದೆ. ಮೊದಲಾರ್ಧ ಚಿತ್ರದ ಪಾತ್ರಗಳನ್ನ ಪರಿಚಯ ಮಾಡುವಲ್ಲಿಯೇ ಕಳೆದುಹೋಗುತ್ತೆ. ಅಷ್ಟರಲ್ಲೇ ವಿರಾಮ. ತಾಳ್ಮೆ ಕಳೆದು ಹೋಗುತ್ತೆ. ಕಾಮಿಡಿ ಹೆಸರಿನಲ್ಲಿ ಬೋರ್ ಆಗಿತ್ತೆ'' ಎಂದು ಪ್ರೇಕ್ಷಕರು ಬೇಸರ ಹೊರಹಾಕಿದ್ದಾರೆ.

ತಮಿಳು ನಟ ಆರ್ಯ ಗೆಟಪ್ ಗೆ ಕಿಚ್ಚ ಸುದೀಪ್ ಸ್ಫೂರ್ತಿ.!

ತುಂಬಾ ಬೇಸರ ಆಗಿದೆ

'ರಾಜರಥ' ಸಿನಿಮಾವನ್ನ ನೋಡಿ ತುಂಬಾ ಬೇಸರವಾಗಿದೆ. ಚಿತ್ರದಲ್ಲಿ ಯಾವುದೇ ಒಂದೇ ಒಂದು ಅಂಶವೂ ಗಮನ ಸೆಳೆಯುವುದಿಲ್ಲ. ಚಿತ್ರದ ಕಥೆ ತುಂಬ ವೀಕ್ ಆಗಿದೆ'' ಎಂದು ಮತ್ತೊಬ್ಬ ಪ್ರೇಕ್ಷಕ ಬೇಸರ ವ್ಯಕ್ತಪಡಿಸಿದ್ದಾರೆ.

English summary
Kannada actor nirup bhandari and actress avanthika shetty starrer Rajaratha movie has released today (march 23rd) all over karnataka. the movie directed by anup bhandari and movie get mixed response from twitter audience.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X