»   » 'ರಂಗಿತರಂಗ' ಚಿತ್ರಕ್ಕೆ ವಿಮರ್ಶಕರು ಜೈ ಅಂದ್ರಾ?

'ರಂಗಿತರಂಗ' ಚಿತ್ರಕ್ಕೆ ವಿಮರ್ಶಕರು ಜೈ ಅಂದ್ರಾ?

Posted By:
Subscribe to Filmibeat Kannada

ಹೊಸಬರ ಚಿತ್ರವೇ ಆದರೂ, ಗಾಂಧಿನಗರದಲ್ಲಿ ತುಸು ಹೆಚ್ಚು ಸೌಂಡ್ ಮಾಡಿದ ಸಿನಿಮಾ 'ರಂಗಿತರಂಗ'. ಟ್ರೈಲರ್ ಮತ್ತು ಹಾಡುಗಳು ಮಾತ್ರದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರನ್ನ ಸೆಳೆದಿದ್ದ 'ರಂಗಿತರಂಗ' ಈ ವಾರ ಬಿಡುಗಡೆ ಆಗಿದೆ.

'ರಂಗಿತರಂಗ' ಟ್ರೈಲರ್ ನೋಡಿ ನಟ ಶ್ರೀಮುರುಳಿ ವಿಷಿಲ್ ಹೊಡೆದಿದ್ದರು. ಇನ್ನೂ ಸಿನಿಮಾ ನೋಡಿ ರಾಕಿಂಗ್ ಸ್ಟಾರ್ ಯಶ್ ಚಿತ್ರ ಬಿಡುಗಡೆಗೆ ಸಹಕಾರ ಮಾಡಿದರು. ಹಾಗಿದ್ರೆ, 'ರಂಗಿತರಂಗ' ಚಿತ್ರದಲ್ಲಿ ಏನಿರಬಹುದು ಅಂತ ಕಾತರದಿಂದ ಕಾಯ್ತಿದ್ದ ಪ್ರೇಕ್ಷಕರಿಗೆ ನಿನ್ನೆ ಉತ್ತರ ಸಿಕ್ಕಿದೆ.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]

ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಾಗಿರುವ 'ರಂಗಿತರಂಗ' ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿಯಾಗಿದೆ. ಆದ್ರೆ, ಚಿತ್ರ ವಿಮರ್ಶಕರಿಂದ ಸೈ ಅನಿಸಿಕೊಂಡಿದ್ಯಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ ವಿಮರ್ಶೆಗಳ ಗುಚ್ಛ ಇಲ್ಲಿದೆ ನೋಡಿ...

ಇದು ಸಾವಿನ ನೆಳಲು ಬೆಳಕಿನಾಟ! - ಪ್ರಜಾವಾಣಿ

ಇಬ್ಬರು ನಾಯಕಿಯರು; ಒಬ್ಬ ನಾಯಕ- ಇವರ ಮಧ್ಯೆ ನಡೆಯುವ ಪ್ರೇಮಕಥೆ ಮಾಮೂಲಿನಂತಿಲ್ಲ. ಅದಕ್ಕೆ ಭೂತದ ಕೋಲ, ಗರ್ಭಿಣಿಯರ ಕಣ್ಮರೆ, ಅಕ್ರಮ ಮರಳು ಸಾಗಣೆ ಇತ್ಯಾದಿ ಅಂಶ ಬೆರೆಸಲಾಗಿದೆ. ಪಿಶಾಚಿ-ದೆವ್ವಗಳೂ ಚಿತ್ರಕಥೆಯಲ್ಲಿ ಇರುವುದರಿಂದ, ದಿಢೀರನೇ ಬೆಚ್ಚಿ ಬೀಳಿಸುವ ದೃಶ್ಯಗಳು ಮೊದಲಾರ್ಧದಲ್ಲಿ ಹೇರಳವಾಗಿವೆ. ರಂಗುರಂಗಿನ ತರಂಗ ಸೃಷ್ಟಿಸುವಲ್ಲಿ ಅನೂಪ್ ತಕ್ಕಮಟ್ಟಿನ ಯಶಸ್ಸು ಕಂಡಿದ್ದಾರೆ. ಅವಧಿಯನ್ನು ಇನ್ನೊಂದಷ್ಟು ಇಳಿಸಿದ್ದರೆ, ಹೊಸತನ ಅನುಭವದ ‘ತರಂಗ' ಮತ್ತಷ್ಟು ಹಿತವೆನಿಸುತ್ತಿತ್ತು - ಆನಂದತೀರ್ಥ ಪ್ಯಾಟಿ

'ಭೂತದ ಚೇಷ್ಟೆ; ರೋಚಕತೆಯ ಪರಾಕಾಷ್ಠೆ' - ಕನ್ನಡಪ್ರಭ

ನಿರುಪ್ ಭಂಢಾರಿ ಮತ್ತು ರಾಧಿಕಾ ಚೇತನ್ ಉತ್ತಮ ಅಭಿನಯ ನೀಡಿದ್ದಾರೆ. ಈ ಹಾರರ್ ಸಿನೆಮಾದಲ್ಲೂ ಇವರಿಬ್ಬರ ನಡುವಿನ ಪ್ರೇಮಕಥೆ ಹಿತವಾಗಿದೆ. ಸಾಯಿಕುಮಾರ್ ಒಳಗೊಂಡಂತೆ ಉಳಿದ ಪಾತ್ರವರ್ಗ ಕೂಡ ಒಳ್ಳೆಯ ಅಭಿನಯ ನೀಡಿದ್ದಾರೆ. 'ಗುಡ್ಡದ ಭೂತ' ಧಾರಾವಾಹಿಯ ಶೀರ್ಷಿಕೆ ಹಾಡು ಮರುಕಳಿಸಿದ್ದು ಸಿನೆಮಾದಲ್ಲಿ ಉತ್ತಮವಾಗಿ ಮಿಳಿತಗೊಂಡಿದೆ. ಉಳಿದಂತೆ ಅನೂಪ್ ಭಂಢಾರಿ ಅವರ ಸಂಗೀತ ನಿರ್ದೇಶನದಲ್ಲಿ ಒಂದೆರಡು ಹಾಡುಗಳು ಕೇಳುವಂತಿವೆ. ಎರಡು ಹಾಡುಗಳು ಮತ್ತು ಜಲಾಂತರ ಫೈಟ್ ಕೈಬಿಟ್ಟು ೩ ಘಂಟೆಗಳ ಚಿತ್ರದ ಅವಧಿಯನ್ನು ಕಡಿತಗೊಳಿಸಬಹುದಿತ್ತು. ಸಿನೆಮ್ಯಾಟೋಗ್ರಾಫರ್ ಲ್ಯಾನ್ಸ್ ಕಪ್ಲಾನ್ ಅವರ ಕ್ಯಾಮರಾ ಕೈಚಳಕ ಸಿನೆಮಾ ಹುಟ್ಟಿಸುವ ಭೀತಿಯನ್ನು ಹೆಚ್ಚಿಸಲು ಸಹಕರಿಸಿದೆ. ಒಟ್ಟಿನಲ್ಲಿ ನಾಯಕ ನಟ ನಿರುಪ್ ಭಂಢಾರಿ ಅವರ ಬಿಗಿ-ಕುತೂಹಲದಾಯಕ ಸ್ಕ್ರಿಪ್ಟ್ ಗೆ ನಿರ್ದೇಶಕ ಅನೂಪ್ ಭಂಢಾರಿ ದಿಗ್ದರ್ಶನ ಮಾಡಿ ನೋಡುವಂತಹ ಸಿನೆಮಾ ನೀಡಿದ್ದಾರೆ. - ಗುರುಪ್ರಸಾದ್

ರಂಗಿತರಂಗ: ಭೂತದ ರಂಗು, ಪ್ರೇಕ್ಷಕ ದಂಗು - ವಿಜಯ್ ಕರ್ನಾಟಕ

ಹೊಸಬರ ಹೊಸತನದ ಸಿನಿಮಾಕ್ಕೆ ಹೊಸ ಸೇರ್ಪಡೆ 'ರಂಗಿತರಂಗ'. ಪ್ರೇಕ್ಷಕರನ್ನು ಒಂದಿಷ್ಟು ರಂಗಾಗಿಸುತ್ತ ದಂಗುಬಡಿಸುವಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಯಶಸ್ವಿಯಾಗಿದ್ದಾರೆ. ತುಳುನಾಡಿನ ಭೂತದ ವೇಷದ ರಂಗು, ಗಗ್ಗರದ ಸದ್ದಿಗೆ ಹಾರರ್ ಲುಕ್ ನೀಡಲಾಗಿದೆ. ಗುಡ್ಡದ ಭೂತ ಸಿನಿಮಾದ 2ನೇ ಭಾಗವೋ ಎಂಬ ಕುತೂಹಲ ಅಲ್ಲಲ್ಲಿ ಮೂಡುತ್ತದೆ. ಮರಳು ಮಾಫಿಯಾದ ಬಗ್ಗೆಯೂ ಚಿತ್ರ ಮಾತನಾಡುತ್ತದೆ. ಚಿತ್ರದ ಕತೆ ಒಂದೇ ಗುಟುಕಿಗೆ ಅರ್ಥವಾಗದು. ಯಾವುದು ಕತೆ, ಯಾವುದು ಉಪಕತೆ, ಯಾವುದು ನಿಜ, ಯಾವುದು ಭ್ರಮೆ ಇತ್ಯಾದಿ ಗೊಂದಲ ಜೊತೆಯಾಗುತ್ತದೆ. - ಪ್ರವೀಣ್ ಚಂದ್ರ

Movie review : RangiTaranga - Bangalore Mirror

A promising director has made his debut in Sandalwood with Rangi Taranga. Anup Bhandari has also written this unusual script. Rangi Taranga is a suspense thriller and the only drawback is the pace of the narration. Trying to justify the title, there are some unnecessary frills including the songs. Though good in themselves, the songs and these few scenes drag the film and keep it to a very steady pace with the needle on the wrong side of the speedometer. - Shyam Prasad S

Perfectly Crafted to thrill - Indian Express

Laced with three stories, his simple romantic narrative with ounces of suspenseful material has a no nonsense edge. And the tumultuous journey ultimately culminates into a free-wheeling entertainer. - A Sharadhaa

English summary
New Comer Anup Bhandari directorial, Nirup Bhandari, Radhika Chetan, Sai Kumar and others starrer 'RangiTaranga' has received good response from the critics. Here is the collection of reviews by Top News Papers of Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada