»   » 'ರಿಕ್ತ' ವಿಮರ್ಶೆ: ಹೆದರಿಸದ 'ದೆವ್ವ', ಪ್ರೀತಿಸುವ ಆತ್ಮ!

'ರಿಕ್ತ' ವಿಮರ್ಶೆ: ಹೆದರಿಸದ 'ದೆವ್ವ', ಪ್ರೀತಿಸುವ ಆತ್ಮ!

Posted By:
Subscribe to Filmibeat Kannada

''ಮನುಷ್ಯನಿಗೆ ಸಾವು ಇದೆ. ಆದ್ರೆ ಪ್ರೀತಿಗೆ ಸಾವಿಲ್ಲ'' ಎಂಬ ಮಾತನ್ನ ಪ್ರೂವ್ ಮಾಡಲು ಹೊರಟಿದೆ 'ರಿಕ್ತ'

''ಸಾಮಾನ್ಯವಾಗಿ ಪ್ರೇಮಿಗಳು ಒಂದು ಮಾತನ್ನ ಹೇಳ್ತಾ ಇರ್ತಾರೆ. ನಾನು ಸತ್ತರೂ ನನ್ನ ಪ್ರೀತಿ ಸಾಯಲ್ಲ ಅಂತ. ಸತ್ತ ಮೇಲೆ ಅವರು ಹೇಗೆ ಪ್ರೀತಿ ಮಾಡ್ತಾರೆ ಎಂಬುದನ್ನ ಯಾರೊಬ್ಬರು ನೋಡಿರಲ್ಲ. ಆದ್ರೆ, ಸತ್ತ ಪ್ರೇಮಿಯೊಬ್ಬ, ತನ್ನ ಪ್ರೀತಿಯನ್ನ ಉಳಿಸಿಕೊಳ್ಳಲು ಹೇಗೆ ಪರಿತಪಿಸುತ್ತೇನೆ ಎಂಬ ಕಥೆಯೇ 'ರಿಕ್ತ'.

Rating:
3.0/5

ಚಿತ್ರ : ರಿಕ್ತ
ಕಥೆ, ಚಿತ್ರಕಥೆ, ನಿರ್ದೇಶನ : ಅಮೃತ್ ಕುಮಾರ್
ನಿರ್ಮಾಣ : ಅರುಣ್ ಕುಮಾರ್ ಜಿ
ಸಂಗೀತ : ರಾಕಿ ಸೋನು
ಛಾಯಾಗ್ರಹಣ : ಮುರಳಿಧರ
ತಾರಾಬಳಗ : ಸಂಚಾರಿ ವಿಜಯ್, ಅಧ್ವಿಕ, ರಮ್ಯಾ, ಮಾದೇಶ ನೀನಾಸಂ, ಅಭಿಷೇಕ್, ಆಲೂಕೊಡೇ ಜಗದೀಶ್, ಪ್ರಸಾದ್ ಮತ್ತು ಇತರರು
ಬಿಡುಗಡೆ : ಜನವರಿ 20, 2017

'ರಿಕ್ತ' ಕಥಾಹಂದರ

ಪೃಕೃತಿಯನ್ನ (ಅಧ್ವಿಕಾ) ಮೊದಲ ನೋಟದಲ್ಲೇ ಪ್ರೀತಿ ಮಾಡುವ ಯುವಕ (ಸಂಚಾರಿ ವಿಜಯ್). ಧೈರ್ಯ ಮಾಡಿ ಪ್ರೀತಿಯನ್ನ ವ್ಯಕ್ತಪಡಿಸುತ್ತಾನೆ. ಇನ್ನೇನೂ ಆ ಹುಡುಗಿ ತನ್ನ ಪ್ರೀತಿಯನ್ನ ಒಪ್ಪಿಕೊಂಡಳು ಎನ್ನುವಷ್ಟರಲ್ಲಿ ಊರು ಬಿಟ್ಟು ಹೋಗುವ ಪೃಕೃತಿ. ಅವಳ ನೆನಪಿನಲ್ಲಿ ಕುಡಿದು ಆಕಸ್ಮಿಕವಾಗಿ ನಾಯಕ ಸಾವುಗೀಡಾಗುತ್ತಾನೆ. ಸತ್ತ ನಂತರ ದೆವ್ವವಾಗುತ್ತಾನೆ.

ದೆವ್ವ ಮತ್ತು ಪ್ರೀತಿ

ತನ್ನ ಪ್ರೀತಿಯನ್ನ ಪಡೆಯುವುದಕ್ಕೆ ದೆವ್ವವಾಗುವ ನಾಯಕ, ಪೃಕೃತಿಯನ್ನ ಹೋಲುವಂತಹ 'ಕೃತಿ' ಹಿಂದೆ ಬೀಳುತ್ತಾನೆ. ಹೇಗಾದರೂ ಮಾಡಿ ತನ್ನ ಪ್ರೀತಿಯನ್ನ ಹೇಳಲೇಬೇಕು ಎಂದು ದೆವ್ವ ಮಾಡುವ ಪ್ರಯತ್ನಗಳು ಹಾಸ್ಯಾಸ್ಪದವಾಗಿ ನಿರೂಪಿಸಲಾಗಿದೆ. ಆದ್ರೆ, ಆ ದೆವ್ವಕ್ಕೆ ಪ್ರೀತಿ ಸಿಗುತ್ತಾ? ಎಂಬುದು ಕುತೂಹಲ.

ಇದು ರೊಮ್ಯಾಂಟಿಕ್ ದೆವ್ವ!

ಹಾರರ್ ಸಿನಿಮಾ ಅಂದ್ರೆ ಎಲ್ಲರಿಗೂ ಭಯ ಆಗುತ್ತೆ. ಅದೇ ರೀತಿ ದೆವ್ವಗಳು ಕೂಡ ಭಯ ಪಡಿಸುತ್ತೆ. ಆದ್ರೆ, 'ರಿಕ್ತ' ಚಿತ್ರದಲ್ಲಿರುವ ದೆವ್ವವನ್ನ ನೋಡಿದ್ರೆ ಭಯಕ್ಕಿಂತ ಹೆಚ್ಚು ಅಯ್ಯೋ ಪಾಪ ಅನ್ಸುತ್ತೆ. ಈ ದೆವ್ವ ಮನುಷ್ಯನ ಕೈಯಲ್ಲಿ ಒದೆ ತಿನ್ನುತ್ತೆ, ಮನುಷ್ಯನನ್ನ ನೋಡಿ ಭಯ ಪಡುತ್ತೆ. ಆದ್ರೂ, ಪ್ರೀತಿ ವಿಚವಾರಕ್ಕೆ ಬಂದ್ರೆ, ಡ್ಯುಯೆಟ್ ಕೂಡ ಮಾಡುತ್ತೆ. ಒಟ್ನಲ್ಲಿ ಈ ದೆವ್ವವನ್ನ ಮುಗ್ದ ದೆವ್ವ ಎನ್ನಬಹುದು.

ಸಂಚಾರಿ ವಿಜಯ್ ಅಭಿನಯ?

ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಈ ಚಿತ್ರದ ಆಧಾರಸ್ತಂಭ. ಲವರ್ ಬಾಯ್ ಆಗಿ ಎಂಟ್ರಿ ನೋಡಲು ಚೆಂದ. ನಂತರ ರೊಮ್ಯಾಂಟಿಕ್ ದೆವ್ವದ ಪಾತ್ರದಲ್ಲಿ ವಿಜಯ್ ಅಭಿನಯ ಮೋಡಿ ಮಾಡುತ್ತೆ. ಪಾತ್ರಕ್ಕೆ ತಕ್ಕಂತೆ ವಿಜಯ್ ಅಭಿನಯಿಸಿದ್ದಾರೆ.

ಅಧ್ವಿಕಾ ನಟನೆ ಹೇಗಿದೆ?

ಹಳ್ಳಿ ಹುಡುಗಿ ಹಾಗೂ ಮಾಡ್ರನ್ ಹುಡುಗಿಯಾಗಿ ಅಧ್ವಿಕಾ ಮಿಂಚಿದ್ದಾರೆ. ಎರಡು ಪಾತ್ರಗಳಿಗೆ ಹೊಂದಿಕೊಂಡು ನೈಜವಾಗಿ ಅಭಿನಯಿಸಿದ್ದಾರೆ.

ಜೀವವಿಲ್ಲದ ದೇವದಾಸ್!

'ಮುಂಗಾರು ಮಳೆ'ಯಲ್ಲಿ ಸತ್ತು ಹೋದ ದೇವದಾಸ್, 'ರಿಕ್ತ' ಚಿತ್ರದಲ್ಲಿ ಮತ್ತೆ ಬರುತ್ತೆ ಅಂತ ಹೇಳಲಾಗಿತ್ತು. ಹೌದು, ದೇವದಾಸ್ 'ರಿಕ್ತ' ಚಿತ್ರದಲ್ಲಿ ವಾಪಸ್ ಬರುತ್ತೆ. ಆದ್ರೆ, ಜೀವವಿಲ್ಲದ ಬೊಂಬೆ. ಬಟ್, ದೇವದಾಸ್ ನನ್ನ ಕಥೆಗೆ ಉತ್ತಮವಾಗಿ ಬಳಸಿಕೊಂಡಿದ್ದಾರೆ.

ನಿರ್ದೇಶಕನ ಕೆಲಸ ಹೇಗಿದೆ?

ನಿರ್ದೇಶಕ ಅಮೃತ್ ಕುಮಾರ್ ಅವರ ಕಾನ್ಸೆಪ್ಟ್ ಉತ್ತಮವೆನಿಸಿದರೂ, ಅದನ್ನ ನಿರೂಪಣೆ ಮಾಡುವಲ್ಲಿ ಮತ್ತಷ್ಟು ಜಾಗೃತಿ ವಹಿಸಬೇಕಿತ್ತು. 'ರಿಕ್ತ' ಹೊಸ ನಿರ್ದೇಶಕನ ಸಿನಿಮಾ ಎಂಬುವುದನ್ನ ಮೊದಲ ದೃಶ್ಯದಲ್ಲಿ ಬಿಟ್ಟುಕೊಟ್ಟಿದ್ದಾರೆ. ಕಥೆಯಲ್ಲಿದ್ದ ಕೆಲವು ಗೊಂದಲಗಳಿಗೆ ಉತ್ತರ ನೀಡಿಲ್ಲ. ಮೇಕಿಂಗ್ ನಲ್ಲಿ ಮತ್ತಷ್ಟು ತಂತ್ರಜ್ಞಾನವನ್ನ ಬಳಸಬೇಕಿತ್ತು. ಕಾಮಿಡಿ ಕೊರತೆಯಿತ್ತು.

ಫೈನಲ್ ಸ್ಟೇಟ್ ಮೆಂಟ್!

ಮನುಷ್ಯ ಸತ್ತ ಮೇಲೂ ಪ್ರೀತಿ ಮಾಡುವುದು ಹೇಗೆ ಎಂಬುದನ್ನ ರಿಕ್ತ ಚಿತ್ರದಲ್ಲಿ ನೋಡಬಹುದು. ದೆವ್ವದ ಮುಗ್ದ ಪ್ರೀತಿ ಪ್ರೇಕ್ಷಕರಿಗೆ ಹೊಸದಾಗಿದೆ. ಹಾಗಾಂತ ಹಾರರ್ ಪ್ರಿಯರಿಗೆ ಸ್ವಲ್ಪ ನಿರಾಸೆ ಉಂಟಾಗಬಹುದು. ಇನ್ನೂಳಿದಂತೆ ಮಸಾಲೆ ಸಿನಿಮಾಗಳಲ್ಲಿ ಇರುವಂತೆ ಇಲ್ಲಿ 'ಉಪ್ಪು, ಹುಳಿ, ಖಾರ' ಇಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೇ ಒಂದು ರೊಮ್ಯಾಂಟಿಕ್ 'ದೆವ್ವ'ದ ಮುಗ್ದ ಪ್ರೇಮಕಥೆ.

English summary
Kannada Actor Sanchari Vijay's 'Riktha' Movie Has has hit the screens today (january 19th). The Movie is Directed by Amruth Kumar. Here is the complete Review of 'Riktha'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada