twitter
    For Quick Alerts
    ALLOW NOTIFICATIONS  
    For Daily Alerts

    'ರಿಂಗ್ ರೋಡ್' ಪಯಣ ವಿಮರ್ಶಕರಿಗೆ ಸುಗಮವಾಗಿತ್ತಾ?

    By Harshitha
    |

    ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ಬರೀ ಹುಡ್ಗೀರೇ ಸೇರಿ ಮಾಡಿರುವ 'ರಿಂಗ್ ರೋಡ್' ಸಿನಿಮಾ ತೆರೆಗೆ ಬಂದಿದೆ.

    'ಸುಂದರ ಹಂತಕಿ' ಸುತ್ತ ಹೆಣೆದಿರುವ 'ರಿಂಗ್ ರೋಡ್' ಸಿನಿಮಾ ಹುಡುಗಿಯರ ಮನ ಗೆದ್ದಿದೆ. ಕ್ರೈಂ ಸ್ಟೋರಿಯೇ ಚಿತ್ರದ ಜೀವಾಳವಾಗಿದ್ದರೂ, ಹೆಣ್ಣೊಬ್ಬಳ ಆಂತರಿಕ ಗೊಂದಲ, ಗಲಿಬಿಲಿಯನ್ನ ತೆರೆಮೇಲೆ ತೋರಿಸಿರುವ ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಬಗ್ಗೆ ವ್ಯಾಪಕ ಪ್ರತಿಕ್ರಿಯೆ ಲಭ್ಯವಾಗುತ್ತಿದೆ.

    'ರಿಂಗ್ ರೋಡ್' ಬಗ್ಗೆ ಪ್ರೇಕ್ಷಕರು ಜೈ ಅಂದಿದ್ದು ಆಗಿದೆ. ಆದ್ರೆ, ಕನ್ನಡ ಸಿನಿ ವಿಮರ್ಶಕರು 'ರಿಂಗ್ ರೋಡ್' ಪಯಣದ ಬಗ್ಗೆ ಏನ್ ಹೇಳ್ತಾರೆ ಅಂತ ಈ ಪುಟದಲ್ಲಿ ನೀವು ತಿಳಿದುಕೊಳ್ಳಬಹುದು. [ಚಿತ್ರ ವಿಮರ್ಶೆ : ರಂಗುರಂಗಿನ 'ರಿಂಗ್ ರೋಡ್' ಜರ್ನಿ]

    ಕರ್ನಾಟಕದ ಪ್ರಸಿದ್ಧ ದಿನಪತ್ರಿಕೆಗಳು 'ರಿಂಗ್ ರೋಡ್' ಚಿತ್ರದ ಬಗ್ಗೆ ಪ್ರಕಟಿಸಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ...

    ವರ್ತುಲ ರಸ್ತೆಯಲ್ಲಿ 'ಸ್ತ್ರೀಶಕ್ತಿ' - ಪ್ರಜಾವಾಣಿ

    ವರ್ತುಲ ರಸ್ತೆಯಲ್ಲಿ 'ಸ್ತ್ರೀಶಕ್ತಿ' - ಪ್ರಜಾವಾಣಿ

    ‘ಪ್ರೀತಿ ಎಂಬುದು ಮಿಂಚುಗಳ ಸರಮಾಲೆಯೇನೇ ಗೆಳತಿ' ಎಂದು ಕವಿ ಉದ್ಗರಿಸುತ್ತಾನೆ. ಭಾವುಕ ಪ್ರೀತಿಯ ಹಿಂದೊಂದು ಸಂಚು ಇದ್ದರೆ ಅದನ್ನು ಮುಗ್ಧ ಪ್ರೇಮಿ ಹೇಗೆ ತಾನೇ ಅರಿತಾನು? ಸೌಂದರ್ಯದ ಹಿಂದಿರುವ ಕ್ರೌರ್ಯ ಎಂಥದು ಎಂಬುದು ಆತನಿಗೆ ಅರಿವಾಗುವ ಹೊತ್ತಿಗೆ ನಡೆಯಬಾರದ್ದು ನಡೆದೇ ಹೋಗಿರುತ್ತದೆ. ಪ್ರೇಮಕಥೆಯ ಹಳಸಿದ ಎಳೆಗಳ ಮಧ್ಯೆ ಕ್ರೌರ್ಯ ಬೆರೆತ ಪ್ರೀತಿಯ ಕಥಾನಕವನ್ನು ತೆರೆಗೆ ತಂದಿದ್ದಾರೆ ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ. ಅಂದಹಾಗೆ, ಇದು ‘ಬರೀ ಹುಡ್ಗೀರು' ಮಾಡಿದ ಸಿನಿಮಾ ಎಂಬುದು ಇನ್ನೊಂದು ಅಗ್ಗಳಿಕೆ. ಸಂಪೂರ್ಣ ಮಹಿಳೆಯರೇ ಸೇರಿ ಮಾಡಿದ ಚಿತ್ರ ಎನ್ನುವ ಕಾರಣದಿಂದ ಗಮನಸೆಳೆಯುವ ‘ರಿಂಗ್‌ ರೋಡ್‌' ತಾಂತ್ರಿಕವಾಗಿ ಯಾವ ಕಮರ್ಷಿಯಲ್ ಚಿತ್ರಕ್ಕೂ ಕಡಿಮೆಯಿಲ್ಲ. ಕ್ಯಾಮೆರಾ (ರೇಷ್ಮಿ ಸರ್ಕಾರ್), ಸಂಗೀತ (ವಾಣಿ ಹರಿಕೃಷ್ಣ), ನೃತ್ಯ (ಜೀವಿತಾ, ಚಂದ್ರಿಕಾ) ಭೇಷ್ ಅನ್ನುವಂತಿವೆ. ಆದರೂ ‘ಎಲ್ಲೋ ಏನೋ ಮಿಸ್ ಹೊಡೀತಾ ಇದೆಯಲ್ಲ' ಎನಿಸಲು ಚಿತ್ರಕಥೆಯನ್ನು ಹೇಳುವ ನೀರಸ ಶೈಲಿಯೇ ಕಾರಣ! - ಆನಂದತೀರ್ಥ ಪ್ಯಾಟಿ

    ಸುತ್ತುಬಳಸು ರೋಡ್ ನಲ್ಲಿ ಕೊಲೆ ರೈಡ್ - ಉದಯವಾಣಿ

    ಸುತ್ತುಬಳಸು ರೋಡ್ ನಲ್ಲಿ ಕೊಲೆ ರೈಡ್ - ಉದಯವಾಣಿ

    ಯಾವುದೇ ನಿರ್ದೇಶಕರಾದರೂ ಇದನ್ನೊಂದು 'ಕೇಸ್' ಆಗಿ ನೋಡುತ್ತಿದ್ದರೇನೋ? ಅದರ ರೋಚಕ ಅಂಶಗಳನ್ನೇ ಪುರುಷ ನಿರ್ದೇಶಕರು ಗ್ರಹಿಸುತ್ತಿದ್ದರೇನೋ? ಹೆಣ್ಣು ಕೊಲೆಗಾರ್ತಿ ಅಂತಲೇ ಕತೆಗೆ ಮುಕ್ತಾಯ ಹಾಡುತ್ತಿದ್ದರೇನೋ? ಆದರೆ ಹೆಣ್ಮಕ್ಕಳು ಹೆಣ್ಣನ್ನು ಇಂಥ ಕೇಸ್ ಗಳಲ್ಲಿ ಹೇಗೆ ನೋಡಬಹುದು ಅನ್ನುವುದಕ್ಕೆ 'ರಿಂಗ್ ರೋಡ್' ಅತ್ಯುತ್ತಮ ಉದಾಹರಣೆ. ಆಕೆಯ ಮನದೊಳಗಿನ ಗೊಂದಲ, ಗಲಿಬಿಲಿ, ಸುಪ್ತ ಬಯಕೆಗಳನ್ನು ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಅನ್ವೇಷಿಲು ನೋಡಿದ್ದಾರೆ. - ವಿಕಾಸ್ ನೇಗಿಲೋಣಿ.

    ಆರಂಭದಲ್ಲಿ ಟ್ರಾಫಿಕ್, ನಂತರ ಸರಾಗ - ಕನ್ನಡ ಪ್ರಭ

    ಆರಂಭದಲ್ಲಿ ಟ್ರಾಫಿಕ್, ನಂತರ ಸರಾಗ - ಕನ್ನಡ ಪ್ರಭ

    ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿರುವ ಸಂದೇಶ ಮತ್ತು ಕಥೆಗೆ ಪಿಲ್ಲರ್ ನಂತೆ ಬಳಸಿಕೊಂಡಿರುವ ನಟನ ನಿಜ ಜೀವನದ ಕಥೆಯನ್ನು ಹೇಳಿರುವ ರೀತಿ ಹಾಗೂ ಅದಕ್ಕೆ ಮುಕ್ತಾಯ ತೋರಿಸಿರುವ ಧಾಟಿ ಚೆನ್ನಾಗಿದೆ. ಆದರೆ, ಕಥೆಯ ಕೇಂದ್ರಬಿಂದು ತೆರೆದುಕೊಳ್ಳುವ ಹೊತ್ತಿಗೆ ಪ್ರೇಕ್ಷಕನ ತಾಳ್ಮೆ ತುಂಬಾ ಒದ್ದಾಡುತ್ತದೆ. ಹೀಗಾಗಿ ಮೊದಲು 15 ನಿಮಿಷ ಹಾಗೂ ಕೊನೇ 5 ನಿಮಿಷ ಚಿತ್ರಕ್ಕೆ ಕತ್ತರಿ ಹಾಕಿದರೆ, ನಿಜಕ್ಕೂ 'ರಿಂಗ್ ರೋಡ್'ನ ಪಯಣ ಸುಗಮ ಮಾತ್ರವಲ್ಲ, ಒಂದು ನೈಜ ಘಟನೆಗೆ ಹೊಸ ನೆಲೆ ಒದಗಿಸಿದ ಕೀರ್ತಿ ನಿರ್ದೇಶಕರಿಗೆ ಸಲ್ಲುತ್ತಿತ್ತು. - ಆರ್ ಕೇಶವಮೂರ್ತಿ

    ರಿಂಗ್ ರೋಡ್ ನಲ್ಲಿ ಟ್ರಾಫಿಕ್ ಜಾಮ್ - ವಿಜಯ ಕರ್ನಾಟಕ

    ರಿಂಗ್ ರೋಡ್ ನಲ್ಲಿ ಟ್ರಾಫಿಕ್ ಜಾಮ್ - ವಿಜಯ ಕರ್ನಾಟಕ

    ಹುಡುಗಿಯರೇ ಸೇರಿಕೊಂಡು ಮಾಡಿದ ರಿಂಗ್‌ರೋಡ್ ಸುಮಾ ಚಿತ್ರದಲ್ಲಿ ಯಾರಿಗೂ ಗೊತ್ತಿಲ್ಲದ ಸರ್‌ಪ್ರೈಸ್ ಎಲಿಮೆಂಟ್ ಇದೆ. ಇದುವರೆಗೂ ಆ ಗುಟ್ಟು ಬಿಟ್ಟು ಕೊಡದೇ ಇದ್ದ ಹುಡುಗಿಯರ ತಂಡ ಅದನ್ನು ಪರಿಣಾಮಕಾರಿಯಾಗಿ ತೆರೆಯ ಮೇಲೆ ತಂದಿದೆೆ. ಇದು 2003ರಲ್ಲಿ ರಿಂಗ್‌ರೋಡ್‌ನಲ್ಲಿ ನಡೆದ ಗಿರೀಶ್ ಕೊಲೆಯೇ ಚಿತ್ರಕ್ಕೆ ಪ್ರೇರಣೆಯಾಗಿದೆ. ಶುಭಾ, ಪ್ರಿಯಕರನಿಗಾಗಿ ಬಾವಿ ಪತಿಯನ್ನು ಕೊಲೆ ಮಾಡಿಸುತ್ತಾಳೆ ಎಂಬುದು ಇದುವರೆಗೂ ಗೊತ್ತಿರುವ ಸಂಗತಿ. ಆದರೆ ಚಿತ್ರದಲ್ಲಿ ಅದಕ್ಕೊಂದು ಟ್ವಿಸ್ಟ್ ಇದೆ. ಅದು ಏನು ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು. ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ರಿಂಗ್‌ರೋಡ್‌ನಲ್ಲಿ ನಡೆದ ಕೊಲೆ ಕೇಸ್ ಅನ್ನು ಚೆನ್ನಾಗಿಯೇ ತನಿಖೆ ಮಾಡಿದ್ದಾರೆ. ಆದರೆ ಅದನ್ನು ಹೇಳಲು ಆರಿಸಿಕೊಂಡಿರುವ ಕಥಾ ನಿರೂಪಣೆ ಕನ್ನಡದ ಪ್ರೇಕ್ಷಕನಿಗೆ ಗೊಂದಲ ಸೃಷ್ಟಿಸುತ್ತದೆ. ಒಂದು ಕತೆಗೆ ಹಲವಾರು ಉಪಕತೆಗಳು ಬಂದು ಕ್ಲೈಮ್ಯಾಕ್ಸ್ ನಲ್ಲಿ ಅಷ್ಟೂ ಕತೆಗಳಿಗೆ ಮುಕ್ತಿ ಸಿಗುತ್ತದೆ. ಇಲ್ಲಿ ನಿರ್ದೇಶಕಿ ಪ್ರಿಯಾ ಇಂಗ್ಲಿಷ್ ಸಿನಿಮಾಗಳ ಸ್ಕ್ರೀನ್ ಪ್ಲೇ ವಿಧಾನ (ರಿವರ್ಸ್ ಸ್ಕ್ರೀನ್ ಪ್ಲೇ) ಆರಿಸಿಕೊಂಡಿದ್ದಾರೆ. ಇಲ್ಲಿ ಅನೇಕ ಕತೆಗಳಿಗೆ ಅವರು ಚಿತ್ರದ ಕೊನೆಯಲ್ಲಿ ಉತ್ತರ ಕೊಡುವುದಕ್ಕೆ ಸಾಧ್ಯವಾಗಿಲ್ಲ. ಚಿತ್ರಕತೆ ಹೇಳುವ ವಿಧಾನ ಚೆನ್ನಾಗಿದೆ. - ಎಚ್.ಮಹೇಶ್

    Ring Road Suma Fails to Grip Audiences - The New Indian Express

    Ring Road Suma Fails to Grip Audiences - The New Indian Express

    The potential of the plot, the long wait and the fact that it is made by an all-women team might have given off the impression that it's a film to watch out for, but though the subject has been well-researched by Belliappa, it fails as a psychological thriller. The film shows faults with the plot itself. The director, in trying to bring in too many characters and incidents, diminishes the impact of the actual story of what could have been a great psychological thriller. Too many things thrown into this two-hour mix, made a complete mess of the movie by saying too little and attempting to fit in too much. It fails to sustain viewer-interest. - A Sharadhaa

    Ring Road Review - Bangalore Mirror

    Ring Road Review - Bangalore Mirror

    The film does not give answers but throws up many alternate possibilities to why a seemingly 'normal' girl could end up a murder conspirator. The film does not try to be a murder mystery or even attempt at suspense. So, it ignores some elements, like the fact that the original case was the first in which digital evidence was produced in trial. There are no trial or court scenes in the film as it tackles only the emotional and psychological aspects of the characters involved. Believable performances, great music and a story full of surprises make Ring Road a compulsory watch. Technically, there is no need to see the film under the prism of an 'all-women' crew. The highlights are the songs and the background music. - Shyam Prasad S

    English summary
    Priya Belliappa directorial Kannada Movie 'Ring Road' has received mixed response from the critics. Here is the collection of reviews by Top News Papers of Karnataka.
    Saturday, October 24, 2015, 12:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X