twitter
    For Quick Alerts
    ALLOW NOTIFICATIONS  
    For Daily Alerts

    'ರುದ್ರತಾಂಡವ' ವಿಮರ್ಶೆ: ಘಂ ಎನ್ನುವ ಮಸಾಲೆ ಚಿತ್ರ

    |

    ಇದು ತಮಿಳಿನ ಬ್ಲ್ಯಾಕ್ ಬಸ್ಟರ್ 'ಪಾಂಡಿಯನಾಡು' ಚಿತ್ರದ ರೀಮೇಕ್ ಆದರೂ ಗುರುದೇಶಪಾಂಡೆ ಅವರು ಆದಷ್ಟು ಚಿತ್ರವನ್ನು ಕನ್ನಡೀಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚಿತ್ರ ಕಥೆಯ ಕೇಂದ್ರಬಿಂದು ಕೋಲಾರ ಎಂಬುದು ವಿಶೇಷ.

    ಇಷ್ಟು ದಿನ ಮಂಡ್ಯ ಕಥೆಯಾಧಾರಿತ ಚಿತ್ರಗಳು ಸಾಕಷ್ಟು ಬಂದಿವೆ. ಆದರೆ ಈಗ ಕೋಲಾರ ಸಹ ಹಾಟ್ ಫೇವರಿಟ್ ಎಂಬುದನ್ನು ತೋರಿಸಿದ್ದಾರೆ ನಿರ್ದೇಶಕರು. ಕಥೆ ಕಾಲ್ಪನಿಕವಾದರೂ ಕೋಲಾರದಲ್ಲಿ ನಡೆದಂತೆ ಬಿಂಬಿಸಲಾಗಿದೆ.

    Rating:
    3.0/5
    Star Cast: ಚಿರಂಜೀವಿ ಸರ್ಜಾ, ರಾಧಿಕಾ ಕುಮಾರಸ್ವಾಮಿ, ಗಿರೀಶ್ ಕಾರ್ನಾಡ್, ರವಿಶಂಕರ್ ಪಿ, ಸುನಿಲ್ ನಾಗಪ್ಪ
    Director: ಗುರು ದೇಶಪಾಂಡೆ

    ತಮಿಳಿನಲ್ಲಿ ವಿಶಾಲ್ ಮಾಡಿದ್ದ ಪಾತ್ರವನ್ನು ನಟ ಚಿರಂಜೀವಿ ಸರ್ಜಾ ಸಮರ್ಥವಾಗಿ ನಿಭಾಯಿಸಿದ್ದಾರೆ. ಫ್ಯಾಕ್ಷನ್ ಕಥೆಯಾಧಾರಿತ ಚಿತ್ರಗಳ ಸಾಲಿಗೆ ಸೇರುವ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಸಾಮಾನ್ಯ ವ್ಯಕ್ತಿಯಾಗಿ, ತೊದಲುವ ಯುವಕನಾಗಿ ಗಮನಸೆಳೆಯುತ್ತಾರೆ.

    ಇಷ್ಟಕ್ಕೂ ಚಿತ್ರದ ಕಥೆ ಏನೆಂದರೆ...

    ಇಷ್ಟಕ್ಕೂ ಚಿತ್ರದ ಕಥೆ ಏನೆಂದರೆ...

    ಸಾಮಾನ್ಯ ವ್ಯಕ್ತಿಯೊಬ್ಬ ತಿಳಿದುಕೊಂಡರೆ ಸಮಾಜ ಘಾತುಕ ವ್ಯಕ್ತಿಯೊಬ್ಬನನ್ನು ಹೇಗೆ ಮಟ್ಟಹಾಕಬಹುದು ಎಂಬುದೇ ಚಿತ್ರದ ಕಥಾಹಂದರ. ತನ್ನ ಅಣ್ಣನ (ಕುಮಾರ್ ಗೋವಿಂದ್) ಸಾವಿಗೆ ಕಾರಣನಾದ ನರಸಿಂಹ (ರವಿಶಂಕರ್) ಎಂಬ ನರರೂಪದ ರಾಕ್ಷಸನನ್ನು ಶಿವರಾಜ್ (ಚಿರಂಜೀವಿ ಸರ್ಜಾ) ಕೊಲ್ಲಲು ಮುಂದಾಗುತ್ತಾನೆ.

    ನರಸಿಂಹನನ್ನು ಮುಗಿಸಲು ಸುಪಾರಿ

    ನರಸಿಂಹನನ್ನು ಮುಗಿಸಲು ಸುಪಾರಿ

    ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಾನೆ. ಆದರೆ ನರಸಿಂಹನನ್ನು ಮುಗಿಸಲು ಇನ್ನೊಬ್ಬರು ಸುಪಾರಿ ಕೊಟ್ಟಿರುವುದು ಗೊತ್ತಾಗುತ್ತದೆ. ಆ ವ್ಯಕ್ತಿ ಬೇರಾರು ಅಲ್ಲ ತನ್ನ ತಂದೆಯೇ (ಗಿರೀಶ್ ಕಾರ್ನಾಡ್) ಎಂಬುದು ಗೊತ್ತಾಗುತ್ತದೆ.

    ಹಂತಹಂತಕ್ಕೂ ರೋಚಕವಾಗಿ ಸಾಗುವ ಕಥೆ

    ಹಂತಹಂತಕ್ಕೂ ರೋಚಕವಾಗಿ ಸಾಗುವ ಕಥೆ

    ಅಲ್ಲಿಂದ ಕಥೆ ನಾನಾ ಮಗ್ಗುಲುಗಳನ್ನು ಬದಲಾಯಿಸುತ್ತಾ ಹಂತಹಂತಕ್ಕೂ ರೋಚಕವಾಗಿ ಸಾಗುತ್ತದೆ. ಪ್ರೇಕ್ಷಕರು ಮುಂದೇನಾಗುತ್ತದೆ ಎಂಬ ಕುತೂಹಲದಲ್ಲಿ ನಿರೀಕ್ಷಿಸುವಂತಾಗುತ್ತದೆ. ನರಸಿಂಹನ ಆಟಕ್ಕೆ ಶಿವರಾಜ್ ಹೇಗೆ 'ರುದ್ರತಾಂಡವ'ನಾಗುತ್ತಾನೆ ಎಂಬುದನ್ನು ತೆರೆಯ ಮೇಲೆ ನೋಡಿಯೇ ಆನಂದಿಸಬೇಕು.

    ರಾಧಿಕಾ ಕುಮಾರಸ್ವಾಮಿ ಗ್ಲಾಮರ್ ಟಚ್

    ರಾಧಿಕಾ ಕುಮಾರಸ್ವಾಮಿ ಗ್ಲಾಮರ್ ಟಚ್

    ಇನ್ನು ರಾಧಿಕಾ ಕುಮಾರಸ್ವಾಮಿ ಅವರು ಮಿಡ್ಲ್ ಸ್ಕೂಲ್ ಟೀಚರ್ ಜಾನ್ವಿಯಾಗಿ ತಮ್ಮ ಆಕರ್ಷಕ ಮೈಮಾಟದಿಂದ ಪ್ರಮುಖ ಆಕರ್ಷಣೆಯಾಗಿ ನಿಲ್ಲುತ್ತದೆ. ಚಿತ್ರದ ಕಥೆ ಆಕ್ಷನ್ ಅಂಶಗಳಿಂದ ಕೂಡಿದ್ದರೂ ರಾಧಿಕಾ ಅವರ ಕಥೆಗೆ ಹೊದ ಗ್ಲಾಮರ್ ಟಚ್ ತಂದುಕೊಟ್ಟಿದೆ. ಬಹುಶಃ ಅವರ ಜಾಗದಲ್ಲಿ ಬೇರೆಯವರು ಇದ್ದಿದ್ದರೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗುತ್ತಿತ್ತು.

    ಹತಾಶ ತಂದೆಯಾಗಿ ಗಿರೀಶ್ ಕಾರ್ನಾಡ್

    ಹತಾಶ ತಂದೆಯಾಗಿ ಗಿರೀಶ್ ಕಾರ್ನಾಡ್

    ಮಗನನ್ನು ಕಳೆದುಕೊಂಡು ಅತ್ತ ಡಾನ್ ನನ್ನು ಎದುರಿಸಲಾಗದೆ, ಇತ್ತ ನೋವನ್ನು ಅನುಭವಿಸಲಾಗದ ಹತಾಶ ತಂದೆಯಾಗಿ ಗಿರೀಶ್ ಕಾರ್ನಾಡ್ ಅವರು ಪಾತ್ರದಲ್ಲಿ ಲೀನವಾಗಿರುವುದನ್ನು ಕಾಣಬಹುದು. ಕುಮಾರ್ ಗೋವಿಂದ್ ಅವರು ಚಿರುಗೆ ಅಣ್ಣನಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

    ಡಾನ್ ಆಗಿ ಮಿಂಚಿದ ರವಿಶಂಕರ್

    ಡಾನ್ ಆಗಿ ಮಿಂಚಿದ ರವಿಶಂಕರ್

    ತೆಲುಗು ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಾ ತಮ್ಮ ಎಂದಿನ ಅಬ್ಬರ, ದರ್ಪದ ನರಸಿಂಹನ ಪಾತ್ರದಲ್ಲಿ ರವಿಶಂಕರ್ ಡಾನ್ ಆಗಿ ಮಿಂಚಿದ್ದಾರೆ. ನರಸಿಂಹನ ತಮ್ಮನಾಗಿ ವಸಿಷ್ಠ ಸಿಂಹ ಅವರದು ಸಹ ಅಷ್ಟೇ ದರ್ಪದ, ದೌಲತ್ತಿನ ಪಾತ್ರ. ಚಿತ್ರದಲ್ಲಿ ಸಾಕಷ್ಟು ಹಾಸ್ಯ ಕಲಾವಿದರಿದ್ದರೂ ನಕ್ಕು ನಲಿಸುವುದು ಮಾತ್ರ ಚಿಕ್ಕಣ್ಣ.

    ಚಿತ್ರದ ತಾಂತ್ರಿಕ ಅಂಶಗಳು ಹೇಗಿವೆ?

    ಚಿತ್ರದ ತಾಂತ್ರಿಕ ಅಂಶಗಳು ಹೇಗಿವೆ?

    ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಅಂತಹ ವಿಶೇಷವೇನು ಇಲ್ಲ. ಮೂಲ ಚಿತ್ರದ ಟ್ಯೂನ್ ಗಳನ್ನೇ ಬಳಸಿಕೊಳ್ಳಲಾಗಿದೆ. ಹಿನ್ನೆಲೆ ಸಂಗೀತ ಮಾತ್ರ ಭರ್ಜರಿಯಾಗಿ ಮೂಡಿಬಂದಿದೆ. ಜಗದೀಶ್ ವಾಲಿ ಅವರ ಛಾಯಾಗ್ರಹಣ, ಕೆಎಂ ಪ್ರಕಾಶ್ ಅವರ ಸಂಕಲನ ಚುರುಕಾಗಿದೆ.

    ಹೋಗಿ ನೋಡಿ 'ರುದ್ರತಾಂಡವ'

    ಹೋಗಿ ನೋಡಿ 'ರುದ್ರತಾಂಡವ'

    ಚಿರಂಜೀವಿ ಸರ್ಜಾ ಅವರ ಗಮನಾರ್ಹ ಅಭಿನಯ, ರಾಧಿಕಾ ಕುಮಾರಸ್ವಾಮಿ ಅವರ ಸೊಗಸಾದ ಅಭಿನಯ, ತಾಳತಪ್ಪದ ಅವರ ಗ್ಲಾಮರ್, ತಾಂತ್ರಿಕವಾಗಿ ಚಿತ್ರ ನೀಟಾಗಿದ್ದು, ಕಾಮಿಡಿ, ಆಕ್ಷನ್, ರೊಮ್ಯಾಂಟಿಕ್ ಅಂಶಗಳ ಫುಲ್ ಮೀಲ್ಸ್ 'ರುದ್ರತಾಂಡವ'.

    English summary
    Chiranjeevi Sarja and Radhika Kumaraswamy starrer Kannada Movie 'Rudra Tandava' review. It is an edge of the seat entertainer, go and watch it. The movie is based on the 2014 Tamil film 'Pandiya Naadu'.
    Thursday, September 27, 2018, 12:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X