For Quick Alerts
ALLOW NOTIFICATIONS  
For Daily Alerts

  'ಸೀಜರ್' ಆಕ್ಷನ್ ಮನರಂಜನೆಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು.?

  By Bharath Kumar
  |

  ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿದ್ದ ಸೀಜರ್ ಸಿನಿಮಾ ತೆರೆಕಂಡಿದೆ. ಪಕ್ಕಾ ಆಕ್ಷನ್ ಕಥೆ ಹೊಂದಿರುವ ಈ ಸಿನಿಮಾ ಪ್ರೇಕ್ಷಕರು ನೋಡಿ ಖುಷಿ ಪಟ್ಟುಕೊಂಡಿದ್ದಾರೆ. ಸೀಜರ್ ಸೇಡಿನ ಕಥೆಯನ್ನ ರೋಚಕವಾಗಿ ಪ್ರೆಸೆಂಟ್ ಮಾಡಿದ್ದು, ಜನರು ಚಪ್ಪಾಳೆ ಹೊಡೆದಿದ್ದಾರೆ.

  ಕನ್ನಡ ಕಲಾಭಿಮಾನಿಗಳು ಮೆಚ್ಚಿಕೊಂಡ ಸೀಜರ್ ಗೆ ವಿಮರ್ಶಕರು ಮನಸೋತ್ರಾ.? ಚಿರು ಸರ್ಜಾ ಮತ್ತು ರವಿಚಂದ್ರನ್ ಜುಗಲ್ ಬಂದಿ ಮೋಡಿ ಮಾಡಿದ್ಯಾ.? ಸಿನಿಮಾದಲ್ಲಿ ಏನಿಷ್ಟ ಆಯ್ತು, ಏನಿಷ್ಟ ಆಗಿಲ್ಲ ಎಂಬುದನ್ನ ತಮ್ಮ ಬರಹದಲ್ಲಿ ಬಿತ್ತರಿಸಿದ್ದಾರೆ.

  ಸೀಜರ್ ವಿಮರ್ಶೆ: ಆಕ್ಷನ್ ಅಬ್ಬರದಲ್ಲೊಂದು ರಿವೇಂಜ್ ಕಥೆ

  ವಿನಯ್ ಕೃಷ್ಣ ಚೊಚ್ಚಲ ಭಾರಿಗೆ ನಿರ್ದೇಶನ ಮಾಡಿದ್ದು, ಚಂದನ್ ಶೆಟ್ಟಿ ಚಿತ್ರಕ್ಕಿದೆ. ಚಿರಂಜೀವಿ ಸರ್ಜಾ, ರವಿಚಂದ್ರನ್ ಜೊತೆ ಪಾರೂಲ್ ಯಾದವ್, ಪ್ರಕಾಶ್ ರಾಜ್, ಶೋಭರಾಜ್, ರಮೇಶ್ ಭಟ್, ರವಿ ಪ್ರಕಾಶ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಹಾಗಿದ್ರೆ, ಸೀಜರ್ ಚಿತ್ರದ ಬಗ್ಗೆ ಕರ್ನಾಟಕದ ಖ್ಯಾತ ದಿನ ಪತ್ರಿಕೆಗಳು ಪ್ರಕಟ ಮಾಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಮುಂದೆ ಓದಿ.....

  ಸೀಜರ್ ಅಂದರೆ ಸೇಡಿನ ಕಥೆ

  ಇದು ಪಕ್ಕಾ ಮಾಸ್‌ ಸಿನಿಮಾ. ಸಿನಿಮಾದ ಮೊದಲಾರ್ಧವು ಚಿರು, ರವಿಚಂದ್ರನ್ ಮತ್ತು ರೈ ಪಾತ್ರಗಳನ್ನು ವೀಕ್ಷಕರಿಗೆ ಪರಿಚಯಿಸುವಲ್ಲಿ, ಅವರ ತಾಕತ್ತು ಏನು ಎಂಬುದನ್ನು ತೋರಿಸುವಲ್ಲಿಯೇ ಕಳೆದುಹೋಗುತ್ತದೆ. ಆಗೀಗ ಒಮ್ಮೆ ಎಂಬಂತೆ ಪಾರುಲ್ ಯಾದವ್‌ ಇದರಲ್ಲಿ ಬಂದು ಹೋಗುತ್ತಾರೆ - ಸೀಜರ್ ನನ್ನು ಪ್ರೀತಿಸುವ ಹೆಣ್ಣಾಗಿ. ಆದರೆ ಮನಸ್ಸಿಗೆ ಕಚಗುಳಿ ಇಡುವಲ್ಲಿ ಯಶಸ್ಸು ಕಾಣುವುದಿಲ್ಲ ಪಾರುಲ್. ಇಡೀ ಸಿನಿಮಾದಲ್ಲಿ ಹೇಳಿಕೊಳ್ಳುವಂತಹ ಟ್ವಿಸ್ಟ್ ಗಳು, ವೀಕ್ಷಕರನ್ನು ಕುರ್ಚಿಯ ಅಂಚಿಗೆ ತಂದು ಕೂರಿಸುವಂತಹ ದೃಶ್ಯಾವಳಿಗಳು ಇಲ್ಲ. ಸೀಜರ್ ತನ್ನ ಹುಡುಗರ ಜೊತೆ ಸೇರಿಕೊಂಡು ವಾಹನಗಳನ್ನು ಸೀಜ್ ಮಾಡುವ ಸನ್ನಿವೇಶಗಳು ಕೂಡ ಥ್ರಿಲ್ ನೀಡುವಲ್ಲಿ ಗೆಲ್ಲುವುದಿಲ್ಲ. ಆದರೆ ರೈ ತಮ್ಮ ಗತ್ತಿನಿಂದಾಗಿ, ಚಿರು ತನ್ನಲ್ಲಿನ ಜೋಶ್ ನಿಂದಾಗಿ ಮತ್ತು ರವಿಚಂದ್ರನ್‌ ಅವರು ‘ಅಣ್ಣ'ನಂತಹ ಪಾತ್ರದಿಂದಾಗಿ ನೆನಪಿನಲ್ಲಿ ಉಳಿದುಕೊಳ್ಳುತ್ತಾರೆ.

  ಕಮರ್ಷಿಯಲ್ ಚೌಕಟ್ಟಿನಲ್ಲೊಂದು ನಿಗೂಢ ರಹಸ್ಯ

  ಒಂದು ಕಮರ್ಷಿಯಲ್ ಚಿತ್ರಕ್ಕೆ ಇರಬೇಕಾದ ಭರ್ಜರಿ ಸಾಹಸಮಯ ದೃಶ್ಯಗಳು, ಹಾಡು, ಪ್ರೀತಿ, ಹಾಸ್ಯ, ಚಿಕ್ಕದ್ದೊಂದು ಸೆಂಟಿಮೆಂಟ್ ಎಲ್ಲವೂ ಇಲ್ಲಿ ಸಮ್ಮಿಶ್ರಗೊಂಡಿರುವುದರಿಂದ ಮೊದಲರ್ಧ ಅಷ್ಟೇ ವೇಗವಾಗಿ ಮುಗಿದು ಹೋಗುತ್ತದೆ. ದ್ವಿತಿಯಾರ್ಧದಲ್ಲಿ ಸಿಗುವ ಕಾಲ್‌ಕೇಜಿಯಷ್ಟು ತಿರುವು, ಆ ಸೀಜರ್ ಮಾಡುವ ಎರಡು ಕೊಲೆಗಳ ಸುಳಿವನ್ನು ಬಿಚ್ಚಿಡುತ್ತದೆ. ಅಷ್ಟೆಲ್ಲಾ ಹೊಡೆದಾಡುವ, ಕೊಲೆ ಮಾಡುವ ಸೀಜರ್ ನ ನಡೆ ನಿಗೂಢವಾಗಲು ಕಾರಣ ಏನೆಂಬುದನ್ನು ಕೊನೆಯಲ್ಲಿ ವಿವರಿಸಲಾಗಿದೆ. ಲವ್‌ಟ್ರ್ಯಾಕ್‌ ಇದ್ದೂ ಇಲ್ಲದಂತಿದೆ. ಸಾಧು ಕೋಕಿಲ ಅವರ ಹಾಸ್ಯದ ಪ್ರಯತ್ನ ವರ್ಕೌಟ್ ಆಗಿಲ್ಲ. ಉಳಿದಂತೆ ಬರುವ ಪಾತ್ರಗಳ್ಯಾವೂ ಅಷ್ಟೊಂದು ಗಮನಸೆಳೆಯಲ್ಲ. ಚಂದನ್ ಶೆಟ್ಟಿ ಸಂಗೀತದಲ್ಲಿ "ಹೋದಲೆಲ್ಲಾ ನೀ ಹಿಂದೆ ಬಂದಂತೆ ...' ಹಾಡೊಂದು ಗುನುಗುವಂತಿದೆ. ಅದು ಬಿಟ್ಟರೆ, ರ್ಯಾಪ್ ಶೈಲಿಯಿಂದ ಅವರು ಹೊರಬಂದಿಲ್ಲ.

  Seizer Movie Review by Times of India

  Seizer works as an agent who seizes cars for a financer when the parties fail to repay their loans. He is also killing people for a certain reason. What is Seizer trying to avenge athrough his moonlighting escapades? The film has its share of thrills and fights, but the prolonged screenplay and the excessive mass elements introduced in the plot play hindrance to what could have been a gripping tale. All said, Seizer isn't a bad option for people who are looking for a dose of routine commercial drama. If you're a fan of Chiranjeevi Sarja, Ravichandran or Prakash Raj, this might be of interest to you. Go ahead and give it a try.

  ಫಿಲ್ಮಿ ಬೀಟ್ ಕನ್ನಡ ವಿಮರ್ಶೆ

  ಲೋನ್ ಗೆ ವಾಹನಗಳನ್ನ ಖರೀದಿ ಮಾಡಿ, ಫೈನಾನ್ಸ್ ಕಟ್ಟದೇ ಇರುವಂತಹ ಗಾಡಿಗಳನ್ನ 'ಸೀಜ್' ಮಾಡುವ ವ್ಯಕ್ತಿಯೇ ಸೀಜರ್. ಈ ಚಿತ್ರದಲ್ಲಿ ನಾಯಕ ಸೀಜರ್. ಈತ ಕೇವಲ ವಾಹನಗಳನ್ನ ಮಾತ್ರ ಸೀಜ್ ಮಾಡಲ್ಲ, ಸಮಾಜ ಘಾತುಕರನ್ನ ಕೂಡ ಸೀಜ್ ಮಾಡ್ತಾನೆ. ಚಿರಂಜೀವಿ ಸರ್ಜಾ ಸೀಜರ್ ಪಾತ್ರದಲ್ಲಿ ಮಿಂಚಿದ್ರೆ, ಫೈನಾನ್ಸ್ ಕಂಪನಿ ಮಾಲೀಕನಾಗಿ ರವಿಚಂದ್ರನ್ ಇಷ್ಟವಾಗ್ತಾರೆ. ವಿಲನ್ ಪಾತ್ರದಲ್ಲಿ ಪ್ರಕಾಶ್ ರೈ ಮೋಡಿ ಮಾಡ್ತಾರೆ. ಪಾರೂಲ್ ಯಾದವ್ ಕೂಡ ಸಿಕ್ಕಿರುವ ಪಾತ್ರ ಚೆನ್ನಾಗಿ ನಿಭಾಯಿಸಿದ್ದಾರೆ. ಒಟ್ನಲ್ಲಿ, ಆಕ್ಷನ್ ಅಬ್ಬರದ ಜೊತೆ ರಿವೇಂಜ್ ಕಥೆ ಹೊಂದಿರುವ ಸೀಜರ್ ಮನರಂಜನೆ ನೀಡುವಲ್ಲಿ ಪಾಸ್ ಆಗಿದ್ದಾನೆ.

  English summary
  Kannada actor chiranjeevi sarja and ravichandran starrer seizer movie has released yesterday (april 13th). the movie get mixed respons in critics. directed by vinay krishna.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more