For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ಗುರಿ ತಪ್ಪದ ದೂದ್ ಪೇಡಾ ದಿಗಂತ್ 'ಶಾರ್ಪ್ ಶೂಟರ್'

  By Suneetha
  |

  ದೂದ್ ಪೇಡಾ ದಿಗಂತ್ ಸಿನಿಮಾ ಅಂತೆ, ಅದೂ ಈ ಬಾರಿ 'ಶಾರ್ಪ್ ಶೂಟರ್' ಅಂತ ಹೆಸರು ಬೇರೆ ಇಟ್ಕೊಂಡು ಗಾಂಧಿನಗರಕ್ಕೆ ಬಂದಿದ್ದಾರೆ ಅಂತ ನೀವು ಸಿನಿಮಾ ಥಿಯೇಟರ್ ಗೆ ಕಾಲಿಟ್ರೆ ನಿಮ್ಮ ಮುಂದೆ ಕಾಮಿಡಿ ಸಿನಿಮಾ ತೆರೆದುಕೊಳ್ಳುತ್ತದೆ. ಲವ್, ದ್ವೇಷ ಜೊತೆಗೆ ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ ಕಥೆಯಲ್ಲಿ ಸ್ವಲ್ಚ ಟ್ವಿಸ್ಟ್. ಬಿಟ್ಟರೆ ಕೊನೆಗೆ ಹ್ಯಾಪಿ ಎಂಡಿಂಗ್. [ಆಕ್ಷನ್ ಹೀರೋ ಆದ 'ಶಾರ್ಪ್ ಶೂಟರ್' ದಿಗಂತ್]

  ಸಾಹಿತಿಯಾಗಿದ್ದ ಗೌಸ್ ಪೀರ್ ಮೊಟ್ಟ ಮೊದಲ ಬಾರಿಗೆ ನಿರ್ದೇಶಕನ ಪಟ್ಟ ಹೊತ್ತುಕೊಂಡು ದಿಗಿ 'ಶಾರ್ಪ್ ಶೂಟರ್' ಗೆ ಆಕ್ಷನ್-ಕಟ್ ಹೇಳಿದ್ದಾರೆ. ನಾಯಕಿ ಸಂಗೀತ ಚೌವ್ಹಾನ್, ಐಂದ್ರಿತಾ ರೇ, ದಿಗಂತ್ ಕಾಣಿಸಿಕೊಂಡಿರುವ 'ಶಾರ್ಪ್ ಶೂಟರ್' ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..[ನಾಯಕಿ ಸಂಗೀತಾ ಚೌಹಾಣ್ ಗಳಗಳನೆ ಅತ್ತಿದ್ದು ಯಾಕೆ?]

  Rating:
  2.5/5

  ಚಿತ್ರ : 'ಶಾರ್ಪ್ ಶೂಟರ್'
  ನಿರ್ಮಾಣ : ಬಾಲಸುಬ್ರಹ್ಮಣ್ಯಂ ಮತ್ತು ಬಿ.ವಿ.ಎಸ್ ಶ್ರೀನಿವಾಸ್
  ಕಥೆ-ಚಿತ್ರಕಥೆ-ನಿರ್ದೇಶನ : ಗೌಸ್ ಪೀರ್
  ಛಾಯಾಗ್ರಹಣ : ಕರುಣಾಕರ್
  ಸಂಗೀತ : ಎಮ್.ಎಸ್.ಶಿವ ಸಂತೋಷ್
  ತಾರಾಗಣ : ದಿಗಂತ್, ಸಂಗೀತಾ ಚೌವ್ಹಾಣ್, 'ಭಜರಂಗಿ' ಲೋಕಿ, ಚಿಕ್ಕಣ್ಣ, ಮಿತ್ರ, ಅಚ್ಯುತ್ ಕುಮಾರ್, ಸತ್ಯಜಿತ್, ಲಕ್ಷ್ಮಿ, ಸುಧಾರಾಣಿ, ವಿಶೇಷ ಪಾತ್ರದಲ್ಲಿ ಐಂದ್ರಿತಾ ರೇ ಮತ್ತು ಇತರರು.
  ಬಿಡುಗಡೆ : 11 ಡಿಸೆಂಬರ್

  ಎರಡು ಸಿಂಪಲ್ ಕ್ಯಾರೆಕ್ಟರ್ ಗಳ ನಡುವೆ ಸುತ್ತುವ ಕಥೆ

  ಎರಡು ಸಿಂಪಲ್ ಕ್ಯಾರೆಕ್ಟರ್ ಗಳ ನಡುವೆ ಸುತ್ತುವ ಕಥೆ

  ಜೇಡರ ಕಣ್ಣಪ್ಪ (ದಿಗಂತ್) ಮತ್ತು ನಂದಿನಿ (ಸಂಗೀತಾ ಚೌವ್ಹಾಣ್) ಎಂಬ ಎರಡು ಸಿಂಪಲ್ ಕ್ಯಾರೆಕ್ಟರ್ ಗಳ ನಡುವೆ ಸುತ್ತುವ ಕಥೆ. ಚಿತ್ರದಲ್ಲಿ ಜೇಡರ ಕಣ್ಣಪ್ಪ (ದಿಗಂತ್)ಗೆ ಮೊದಲ ನೋಟದಲ್ಲಿಯೇ ನಂದಿನಿ ಮೇಲೆ ಪ್ರೀತಿ ಹುಟ್ಟುತ್ತದೆ.[ದೂದ್ ಪೇಡಾ ದಿಗಂತ್ ಮದುವೆ ಆಗ್ತಾರಂತೆ..!]

  ದ್ವೇಷಿಸುವ ನಂದಿನಿ

  ದ್ವೇಷಿಸುವ ನಂದಿನಿ

  ಜೆ.ಕೆಗೆ ಪ್ರೀತಿ ಆದರೂ ನಮ್ಮ ನಾಯಕಿ ನಂದಿನಿಗೆ ಜೇಡರ ಕಣ್ಣಪ್ಪನನ್ನು ಕಂಡರೆ ಮೈ ಪರಚಿಕೊಳ್ಳುವಷ್ಟು ದ್ವೇಷ. ಆದರೂ ನಾಯಕಿಗೆ, ನಾಯಕನ ಮೇಲೆ ಲವ್ ಆಗುತ್ತೆ. ಅದು ಹೇಗಪ್ಪಾ ಅಂದ್ರೆ, ಒಂದು ಬಾರಿ ಗ್ಯಾಂಗ್ ಒಂದು ನಂದಿನಿ ಮೇಲೆ ಅಟ್ಯಾಕ್ ಮಾಡಿದಾಗ ನಮ್ಮ ಜೇಡರ ಕಣ್ಣಪ್ಪ ಆಕೆಯನ್ನು ಬಚಾವ್ ಮಾಡಿರುತ್ತಾನೆ. ಇದರಿಂದ ಲೈಟಾಗಿ ನಂದಿನಿಗೂ, ಕಣ್ಣಪ್ಪನಿಗೂ ಲವ್ ಆಗುತ್ತೆ.

  ಲವ್ ಸ್ಟೋರಿಯಲ್ಲಿ ಟ್ವಿಸ್ಟ್

  ಲವ್ ಸ್ಟೋರಿಯಲ್ಲಿ ಟ್ವಿಸ್ಟ್

  ಲವ್ ಏನೋ ಆಗುತ್ತೆ ಆದರೆ ನಾಯಕಿ ನಂದಿನಿ ನೈಟೋಫೋಬಿಯಾ (ಕತ್ತಲು ಕಂಡರೆ ಭಯ) ಎಂಬ ಕಾಯಿಲೆಯಿಂದ ಬಳಲುತ್ತಿದ್ದರೆ, ನಾಯಕ ಜೆ.ಕೆ ಇರುಳು ಕುರುಡು ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುತ್ತಾನೆ. ಇಷ್ಟೆಲ್ಲಾ ಸಮಸ್ಯೆ ಇರುವ ಜೇಡರ ಕಣ್ಣಪ್ಪ 'ಶಾರ್ಪ್ ಶೂಟರ್' ಆಗಿರೋಕೆ ಹೇಗೆ ಸಾಧ್ಯ. ಈ ಮಧ್ಯೆ ಕೆಲವಾರು ವಿಲನ್ ಗಳು ಜೆಕೆ ಯ ಬಾಳಲ್ಲಿ ಎಂಟ್ರಿ ಆಗುತ್ತಾರೆ. ಆವಾಗ ಜೇಡರ ಕಣ್ಣಪ್ಪನ ಬಾಳಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್. ಒಟ್ನಲ್ಲಿ ಲವ್ ಗೂ ಟ್ವಿಸ್ಟ್.

  ಎಲ್ಲದಕ್ಕೂ ದಿಗಂತ್ ಟಾರ್ಗೆಟ್

  ಎಲ್ಲದಕ್ಕೂ ದಿಗಂತ್ ಟಾರ್ಗೆಟ್

  ಒಬ್ಬ ಕುಖ್ಯಾತ ಡಾನ್ ಒಬ್ಬನನ್ನು 'ಶಾರ್ಪ್ ಶೂಟರ್' ಢಂ ಅನಿಸಿಬಿಡುತ್ತಾರ?, ಇಲ್ವಾ?, ಆದರೂ ದಿಗಂತ್ ನನ್ನು ವಿಲನ್ ಗಳು ಯಾಕೆ ಟಾರ್ಗೆಟ್ ಮಾಡ್ತಾರೆ? ಅಷ್ಟಕ್ಕೂ ನಾಯಕ ನಿಜವಾದ ಶಾರ್ಪ್ ಶೂಟರ್ ಹೌದೋ ಅಲ್ವೋ. ಕಥೆಯಲ್ಲಿ ಏನಿದೇ ಅಂತಹ ಟ್ವಿಸ್ಟ್ ಅನ್ನೋ ನಿಮ್ಮ ಎಲ್ಲಾ ಕನ್ ಫ್ಯೂಶನ್ ಗಳಿಗೆ ನಿಮಗೆ ಚಿತ್ರಮಂದಿರದಲ್ಲಿ ಖಂಡಿತ ಉತ್ತರ ಸಿಗುತ್ತದೆ ಚಿತ್ರಮಂದಿರಕ್ಕೆ ಒಮ್ಮೆ ಭೇಟಿ ಕೊಡಿ.

   ದಿಗಂತ್ ನಟನೆ ಹೇಗಿದೆ?

  ದಿಗಂತ್ ನಟನೆ ಹೇಗಿದೆ?

  ದೂದ್ ಪೇಡಾ ದಿಗಂತ್ ಅವರು ಹಿಂದಿನ ಚಿತ್ರಗಳಿಗಿಂತಲೂ ಚೆನ್ನಾಗಿ ಪರ್ಫಾಮ್ ಮಾಡಿದ್ದಾರೆ. ತಮ್ಮ ಪ್ರಯತ್ನಕ್ಕೂ ಮೀರಿ ಪ್ರಯತ್ನಿಸಿದ್ದು ಗಮನಾರ್ಹವಾಗಿದೆ. ಹ್ಯಾಂಡ್ಸಮ್ ನಟ ದಿಗಂತ್ ಈ ಚಿತ್ರದಲ್ಲಿ ಕೊಂಚ ಶೈನ್ ಆಗಿದ್ದು, ಆಕ್ಷನ್ ಮತ್ತು ಕಾಮಿಡಿ ಎರಡು ಸೀನ್ ಎರಡನ್ನೂ ಸರಿಯಾಗಿ ಬ್ಯಾಲೆನ್ಸ್ ಮಾಡಿದ್ದಾರೆ.

  ನಟಿ ಸಂಗೀತಾ ಚೌವ್ಹಾಣ್ ನಟನೆ ಪ್ರೇಕ್ಷಕರಿಗೆ ಒಪ್ಪಿಗೆಯೇ?

  ನಟಿ ಸಂಗೀತಾ ಚೌವ್ಹಾಣ್ ನಟನೆ ಪ್ರೇಕ್ಷಕರಿಗೆ ಒಪ್ಪಿಗೆಯೇ?

  ಸ್ಯಾಂಡಲ್ ವುಡ್ ಗೆ ಹೊಸ ಮುಖ, ನಟಿ ಸಂಗೀತಾ ಚೌವ್ಹಾಣ್ ಅವರು ಒಳ್ಳೆಯ ನಟನೆ ಮಾಡಿದ್ದಾರೆ. ಇವರ ನಟನೆಗೆ ಪ್ರೇಕ್ಷಕರು ಫಿದಾ ಆಗದಿದ್ದರೂ ಕೂಡ ಇಷ್ಟಪಡುತ್ತಾರೆ ಅಂತಾನೇ ಹೇಳಬಹುದು. ನಟ ದಿಗಂತ್ ಮತ್ತು ಸಂಗೀತಾ ಅವರ ಕೆಮಿಸ್ಟ್ರಿ ತೆರೆಯ ಮೇಲೆ ಸಖತ್ ಆಗಿ ವರ್ಕೌಟ್ ಆಗಿದೆ.

  ಇನ್ನುಳಿದವರು?

  ಇನ್ನುಳಿದವರು?

  ಇನ್ನುಳಿದಂತೆ ಕಾಮಿಡಿಯಲ್ಲಿ ನಟ ಚಿಕ್ಕಣ್ಣ ಮತ್ತು ಮಿತ್ರ ಸಖತ್ ಅಭಿನಯ ನೀಡಿದ್ದಾರೆ. ಹಿರಿಯ ನಟಿ ಲಕ್ಷ್ಮಿ ಅವರು ದಿಗಂತ್ ತಾಯಿಯಾಗಿ ನಟಿಸಿದ್ದು, ಅದ್ಭುತ ಅಭಿನಯ ನೀಡಿದ್ದಾರೆ. ಇನ್ನು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ನಟ ಅಚ್ಯುತ್ ಕುಮಾರ್, ಸುಧಾರಾಣಿ, ಸತ್ಯಜಿತ್ ಮತ್ತು ಮುಂತಾದವರು ತಮ್ಮ ತಮ್ಮ ಪಾತ್ರಗಳಿಗೆ ತಕ್ಕ ನ್ಯಾಯ ಒದಗಿಸಿದ್ದಾರೆ. 'ಭಜರಂಗಿ' ಲೋಕಿ ಮತ್ತೆ ವಿಲನ್ ರೋಲ್ ಮಾಡಿ ಶೈನ್ ಆಗಿದ್ದಾರೆ. ಐಟಂ ಸಾಂಗ್ ನಲ್ಲಿ ಐಂದ್ರಿತಾ ಫುಲ್ ಮಿಂಚಿಂಗೋ ಮಿಂಚಿಗು.

  ತಾಂತ್ರಿಕತೆ

  ತಾಂತ್ರಿಕತೆ

  ಇಡೀ 'ಶಾರ್ಪ್ ಶೂಟರ್' ಚಿತ್ರದ ಹೈಲೈಟ್ ಏನಪ್ಪಾ ಅಂದ್ರೆ, ಕಾಮಿಡಿ ಟೈಮ್. ನಿರ್ದೇಶಕ ಗೌಸ್ ಪೀರ್ ಅವರು ಮಿತ್ರಾ ಅವರಿಗೆ ತೆರೆ ಮೇಲೆ ಹೆಚ್ಚಿನ ಸಮಯಾವಕಾಶ ಒದಗಿಸಿದ್ದಾರೆ.

  ಸಂಗೀತ

  ಸಂಗೀತ

  ಚಿತ್ರದ ಹಾಡುಗಳು ಎಲ್ಲವೂ ಸೂಪರ್ ಹಿಟ್ ಆಗಿದ್ದು, ಈ ಕ್ರೆಡಿಟ್ ಎಲ್ಲಾ ಸಂಗೀತ ನಿರ್ದೇಶಕ ಎಮ್.ಎಸ್ ಶಿವ ಸಂತೋಷ್ ಅವರಿಗೆ ಸಲ್ಲಬೇಕು. ಉತ್ತಮ ಹಿನ್ನಲೆ ಸಂಗೀತ ನೀಡಿದ್ದು, ಒಟ್ನಲ್ಲಿ ಸಿನಿಮಾ ಮ್ಯೂಸಿಕಲ್ ಹಿಟ್ ಅಂತ ಹೇಳಬಹುದು.

  ಒಟ್ಟಾರೆ 'ಶಾರ್ಪ್ ಶೂಟರ್'

  ಒಟ್ಟಾರೆ 'ಶಾರ್ಪ್ ಶೂಟರ್'

  ದಿಗಂತ್ ನಟನೆಯ 25ನೇ ಸಿನಿಮಾ 'ಶಾರ್ಪ್ ಶೂಟರ್' ನಟ ದಿಗಿ ಪ್ರಯತ್ನಕ್ಕೂ ಮೀರಿದ್ದು, ತಮ್ಮ ಉತ್ತಮ ನಟನೆಯ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. ನಿರ್ದೇಶಕ ಗೌಸ್ ಪೀರ್ ಅವರು ಮೇಕಿಂಗ್ ನಲ್ಲಿ ಫುಲ್ ಶೈನ್ ಆಗಿದ್ದಾರೆ. ಲವ್, ರೊಮ್ಯಾನ್ಸ್, ಒಂಥರಾ ರೊಮ್ಯಾಂಟಿಕ್-ಕಾಮಿಡಿ ಸಿನಿಮಾವಾಗಿರುವ ದೂದ್ ಪೇಡಾ 'ಶಾರ್ಪ್ ಶೂಟರ್' ಖಂಡಿತ ಒಂದು ಬಾರಿ ನೋಡಬಹುದಾದ ಸಿನಿಮಾ.

  English summary
  Kannada Movie 'Sharp Shooter' has been released today, Dec 11. Directorial debut of Ghouse Peer stars Diganth and Sangeetha Chauhan in the lead roles. Will the 25th club film of Diganth meet the expectations of the audiences? Read the review below....

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X