For Quick Alerts
  ALLOW NOTIFICATIONS  
  For Daily Alerts

  ಪತ್ರಕರ್ತನ 'ಸಿಪಾಯಿ' ದಂಗೆಗೆ ವಿಮರ್ಶಕರು ಭೇಷ್ ಅಂದ್ರಾ?

  By Suneetha
  |

  ಕನ್ನಡ ಚಿತ್ರರಂಗ ಸದಾ ಹೊಸಬರಿಗೆ ಮಣೆ ಹಾಕುತ್ತೆ. ಹೀರೋ ಯಾರಾದರೇನು, ಸಿನಿಮಾ ಚೆನ್ನಾಗಿದ್ದರೆ ಸಾಕು ಅಂತ ಜನ ಕೂಡ ಸಿನಿಮಾ ನೋಡಿ, ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾರೆ.

  ಜೊತೆಗೆ ಚಿತ್ರಕಥೆ-ನಿರೂಪಣೆ ಮತ್ತು ನಟ-ನಟಿಯರ ನಟನೆ ಚೆನ್ನಾಗಿದ್ದರೆ, ಅವರು ಗಾಂಧಿನಗರದಲ್ಲಿ ಬೇಗ ಕ್ಲಿಕ್ ಆಗುತ್ತಾರೆ. ಇದಕ್ಕೆ ಉತ್ತಮ ನಿದರ್ಶನ, 'ರಂಗಿತರಂಗ' ತಂಡ, ಮಾನ್ವಿತಾ ಹರೀಶ್ ಮತ್ತಿತ್ತರು.

  ಇದೀಗ ನಿನ್ನೆ (ಸೆಪ್ಟೆಂಬರ್ 23) ತೆರೆಕಂಡ 'ಸಿಪಾಯಿ' ಚಿತ್ರದ ನಾಯಕ ಸಿದ್ದಾರ್ಥ್ ಮಹೇಶ್ ಕೂಡ ಹೊಸಬರು. ಲವ್ ಕಮ್ ಆಕ್ಷನ್ ಸೀಕ್ವೆನ್ಸ್ ಇರುವ 'ಸಿಪಾಯಿ' ಚಿತ್ರಕ್ಕೆ ಎಲ್ಲಾ ಕಡೆಯಿಂದ ಬೇರೆ-ಬೇರೆ ಅಭಿಪ್ರಾಯಗಳು ವ್ಯಕ್ತವಾಗಿದೆ. ನಟಿ ಶ್ರುತಿ ಹರಿಹರನ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

  ಅನ್ಯಾಯದ ವಿರುದ್ಧ ಯಾರು ಹೋರಾಡುತ್ತಾನೋ ಅವನೇ 'ಸಿಪಾಯಿ' ಅನ್ನೋದನ್ನ ಈ ಚಿತ್ರದಲ್ಲಿ, ನಿರ್ದೇಶಕ ರಜತ ಮಯೀ ಅವರು ಸಾರಿ ಹೇಳಿದ್ದಾರೆ. ಹೋರಾಟ ಮಾಡಬೇಕೆಂದರೆ, ಸಮವಸ್ತ್ರ ಮತ್ತು ಇನ್ನಿತರೇ ಪರಿಕರಗಳ ಅಗತ್ಯ ಇಲ್ಲ ಎಂಬ ಸಂದೇಶವನ್ನು ಈ ಚಿತ್ರದಲ್ಲಿ ನೀಡಲಾಗಿದೆ.

  ನವ ನಟ ಸಿದ್ದಾರ್ಥ್ ಮಹೇಶ್ ಮತ್ತು 'ಲೂಸಿಯಾ' ಬೆಡಗಿ ಶ್ರುತಿ ಹರಿಹರನ್ ಒಂದಾಗಿ ಕಾಣಿಸಿಕೊಂಡಿದ್ದ 'ಸಿಪಾಯಿ' ಚಿತ್ರಕ್ಕೆ, ಖ್ಯಾತ ವಿಮರ್ಶಕರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಮರ್ಶಕರ ವಿಮರ್ಶೆಯ ಕಲೆಕ್ಷನ್ಸ್ ನೋಡಲು ಮುಂದೆ ಓದಿ.....

  'ಸಿಪಾಯಿ ಪೋಷಾಕಿನ ಪತ್ರಕರ್ತ'-ವಿಜಯ ಕರ್ನಾಟಕ

  'ಸಿಪಾಯಿ ಪೋಷಾಕಿನ ಪತ್ರಕರ್ತ'-ವಿಜಯ ಕರ್ನಾಟಕ

  ಸಿಪಾಯಿ ಅಂದಾಕ್ಷಣ ಇದು ಸೈನಿಕನ ಕತೆ ಇರಬಹುದಾ? ಎಂಬ ಕುತೂಹಲ ಮೂಡುವುದು ಸಹಜ. ನಿರ್ದೇಶಕ ರಜತ್ ಮಯೀ 'ಸಿಪಾಯಿ' ಸಿನಿಮಾದಲ್ಲಿ ಈ ಪದಕ್ಕೆ ಬೇರೆಯದೇ ಅರ್ಥ ಕಲ್ಪಿಸಿದ್ದಾರೆ. 'ಜನರ ಹಿತ ಕಾಪಾಡುವ ಪ್ರತಿಯೊಬ್ಬರೂ ಸಿಪಾಯಿ' ಎಂಬ ಸಂದೇಶ ಸಾರುವ ಮೂಲಕ ಪತ್ರಕರ್ತನಿಗೂ ಆ ಪಟ್ಟ ಕಟ್ಟಿದ್ದಾರೆ. ಆತನ ಬದುಕಿನ ಸುತ್ತ ರೋಚಕ ಕತೆ ಹೆಣೆದು ಸಿನಿಮಾ ಮಾಡಿದ್ದಾರೆ. ಹಾಗಾಗಿಯೇ ಚಿತ್ರವು ಒಂದಷ್ಟು ರೋಚಕ ಘಟನೆಗಳಿಗೆ ಸಾಕ್ಷಿ ಆಗುತ್ತದೆ. ಹಾಗಂತ ಹೇಳೋಕೆ ಹೊರಟಿರುವ ಕತೆ ವಿಭಿನ್ನವಾಗಿದೆ ಅಂತ ಹೇಳುವುದು ಕಷ್ಟ. ಬಹುತೇಕ ಸಿನಿಮಾಗಳಲ್ಲಿ ನಾಯಕನಿಗೆ ಹಿನ್ನಲೆಯನ್ನೇ ಕೊಡದೆ ಸಿನಿಮಾ ಮಾಡಿದ್ದನ್ನು ನೋಡಿದ್ದೇವೆ. ಜಗತ್ತು ಮುಳುಗಿದರೂ ಹೀರೋ ಮಾತ್ರ ಸೂಪರ್‌ಮ್ಯಾನ್‌ ಆಗುವುದನ್ನು ಕಾಣುತ್ತೇವೆ. ಈ ಚಿತ್ರದಲ್ಲೂ ಅದೆಲ್ಲವೂ ಇದೆ. ನಾಯಕ ಮಾತ್ರ ಪತ್ರಕರ್ತ ಆಗಿರುತ್ತಾನಷ್ಟೆ. ರೇಟಿಂಗ್:2.5/5.-ಶರಣು ಹುಲ್ಲೂರು.

  'ಏನೋ ಮಾಡಲು ಹೋಗಿ..'-ಪ್ರಜಾವಾಣಿ

  'ಏನೋ ಮಾಡಲು ಹೋಗಿ..'-ಪ್ರಜಾವಾಣಿ

  ಡ್ರಗ್ಸ್ ಹಾಗೂ ಯುವತಿಯರ ಮಾರಾಟದ ಮಾಫಿಯಾವನ್ನು ಎದುರು ಹಾಕಿಕೊಂಡ ಪತ್ರಕರ್ತ, ಸ್ವತಃ ಹೋರಾಟ ಮಾಡಿ ಗೆಲ್ಲುವ ಕಥೆ ‘ಸಿಪಾಯಿ' ಚಿತ್ರದ್ದು. ವಾಸ್ತವಕ್ಕೆ ಸಾಕಷ್ಟು ದೂರವಾಗಿರುವ ಕಥೆಯನ್ನು ಬರೆದಿರುವ ರಜತ್ ಮಯೀ, ಅದನ್ನು ತೆರೆ ಮೇಲೆ ತರಲು ಹೆಚ್ಚೇನೂ ಶ್ರಮವಹಿಸಿಲ್ಲ. ಹೀಗಾಗಿ ‘ಸಿಪಾಯಿ' ಪ್ರೇಕ್ಷಕನಿಂದ ಸಾಕಷ್ಟು ದೂರದಲ್ಲೇ ನಿಲ್ಲುತ್ತಾನೆ. ರಣರಂಗದಲ್ಲಿ ವೈರಿಗಳ ವಿರುದ್ಧ ಹೋರಾಡುವವನು ಸಿಪಾಯಿ. ಆದರೆ ಇಲ್ಲಿ ವ್ಯವಸ್ಥೆಯೊಳಗಿದ್ದುಕೊಂಡೇ ಒಳಗಿನ ವೈರಿಗಳ ವಿರುದ್ಧ ಹೋರಾಡುತ್ತಾನೆ ಈ ‘ಸಿಪಾಯಿ'. ಒಂದಷ್ಟು ಆಕರ್ಷಕ ಎನಿಸಬಹುದಾದ ಚಿತ್ರಕಥೆಯಿದ್ದರೂ ನಿರೂಪಣೆ ನೀರಸವಾಗಿದೆ. ಫ್ಲ್ಯಾಶ್‌ ಬ್ಯಾಕ್ ಹಾಗೂ ಕುತೂಹಲದ ದೃಶ್ಯಗಳನ್ನು ಸರಿಯಾಗಿ ಜೋಡಿಸುವಲ್ಲಿ ಸಂಕಲನಕಾರ ಅಕ್ಷಯ್ ಪಿ. ರಾವ್ ಪರಿಣಾಮಕಾರಿ ಆಗಿಲ್ಲ. ಅದೇ ಸಿನಿಮಾದ ಮೊದಲ ಮೈನಸ್ ಪಾಯಿಂಟ್.-ಆನಂದತೀರ್ಥ ಪ್ಯಾಟಿ.

  'ಪತ್ರಕರ್ತನೇ ಸಿಪಾಯಿ, ದುಷ್ಟಾಚಾರವೆಲ್ಲ ಸಫಾಯಿ' -ಉದಯವಾಣಿ

  'ಪತ್ರಕರ್ತನೇ ಸಿಪಾಯಿ, ದುಷ್ಟಾಚಾರವೆಲ್ಲ ಸಫಾಯಿ' -ಉದಯವಾಣಿ

  ಯಾರು ಹೋರಾಡುತ್ತಾರೋ ಅವರೇ 'ಸಿಪಾಯಿ'ಗಳು ಎನ್ನಬಹುದು. ಹಾಗೆ ಹೋರಾಡೋಕೆ ಯೂನಿಫಾರ್ಮು, ಗನ್ನು, ಗಡಿ..ಯಾವುದೂ ಬೇಕಾಗಿಲ್ಲ. ಎಲ್ಲಿ ಅನ್ಯಾಯ ನಡೆಯುತ್ತದೋ, ಎಲ್ಲಿ ಕ್ರೈಮ್ ಹೆಚ್ಚಿದೆಯೋ ಅದರ ವಿರುದ್ಧ ಹೋರಾಡುವವನೇ ನಿಜವಾದ ಸಿಪಾಯಿ ಎನ್ನುತ್ತದೆ 'ಸಿಪಾಯಿ' ಚಿತ್ರದ ಕಥೆ. ಇಲ್ಲಿ ನಾಯಕ ಸೇನೆಯ ಯಾವುದೇ ವಿಭಾಗದಲ್ಲೂ ಕೆಲಸ ಮಾಡುವುದಿಲ್ಲ. ಗಡಿಯಲ್ಲಿ ನಿಂತು ನುಸುಳುವವರನ್ನು ಹೊಡೆಯುವುದಿಲ್ಲ, ಭಯೋತ್ಪಾದಕರನ್ನು ಕೊಚ್ಚಿ ಕೊಲ್ಲುವುದಿಲ್ಲ. ಅದರ ಬದಲು ನಾಡಿನಲ್ಲೇ ಇದ್ದು, ಹೆಚ್ಚುತ್ತಿರುವ ಕ್ರೈಮ್ ವಿರುದ್ದ ಸಮರವನ್ನು ಸಾರುತ್ತಾನೆ. ಅಂಡರ್ ಕವರ್ ಕಾಪ್ ಗಳ ತರ, ಅಂಡರ್ ಕವರ್ ಪತ್ರಕರ್ತ ಡಾನ್ ಗಳ ಗುಂಪಿನಲ್ಲಿ ಸೇರಿಕೊಂಡು ಕ್ರೈಮ್ ವಿರುದ್ಧ ಸಮರ ಸಾರುತ್ತಾನೆ. ಆ ಸಮರದಲ್ಲಿ ಏನೇನಾಗುತ್ತೆ ಅನ್ನೋ ಕುತೂಹಲವಿದ್ದರೆ ಸಿನಿಮಾ ನೋಡಿ. -ಚೇತನ್ ನಾಡಿಗೇರ್.

  'ಆವೇಷ ಕಾಣದ ಸಿಪಾಯಿ ದಂಗೆ'-ಕನ್ನಡ ಪ್ರಭ

  'ಆವೇಷ ಕಾಣದ ಸಿಪಾಯಿ ದಂಗೆ'-ಕನ್ನಡ ಪ್ರಭ

  ದುಡ್ಡಿದ್ರೆ ಹೀರೋ ಆಗೋದೇನು, ನೀರು ಕುಡಿದಷ್ಟೇ ಸುಲಭ. ಆದ್ರೆ ನಟನೆಯೇ ಇಲ್ಲದ ಹೀರೋ ತೆರೆಯಲ್ಲಿ ಸಾಹಸದ ಎಷ್ಟೇ ಕಸರತ್ತು ತೋರಿಸಿದ್ರೂ ಪ್ರೇಕ್ಷಕ ಒಪ್ಪಿಕೊಳ್ಳುವುದು ತುಂಬಾ ಕಷ್ಟ. 'ಸಿಪಾಯಿ' ಚಿತ್ರ ನೋಡಿ ಬರುವ ಪ್ರೇಕ್ಷಕನಿಗೆ, ಅಲ್ಲಿ ಕಾಣುವ ನಾಯಕ ನಟ ಸಿದ್ದಾರ್ಥ್ ಮಹೇಶ್ ಅಭಿನಯಕ್ಕೆ ನೀಡುವ ಮೊದಲ ಪ್ರತಿಕ್ರಿಯೆ ಹೀಗೆ ಇರುತ್ತೆ. ಆದರೂ, ಈ ಚಿತ್ರ ಇಷ್ಟವಾಗೋದಿಕ್ಕೆ ಇಲ್ಲಿ ಹಲವು ಕಾರಣಗಳಿವೆ. ಮೊದಲ ಚಿತ್ರವಾದರೂ ಸಿದ್ದಾರ್ಥ್ ಮಹೇಶ್ ಪ್ರದರ್ಶಿಸಿದ ಮೈ ನವೀರೇಳಿಸುವ ಸಾಹಸ, ಆಕರ್ಷಣೆ ಹುಟ್ಟು ಹಾಕುವ ಶ್ರುತಿ ಹರಿಹರನ್ ಅಭಿನಯ, ಸಂಚಾರಿ ವಿಜಯ್ ಅವರ ಕಾಮಿಡಿ ಕಿಕ್, ಮನಸ್ಸಿಗೆ ಹಿತ ಎನಿಸುವ ಸಂಗೀತ, ಕಣ್ಣಿಗೆ ಮುದ ನೀಡುವ ಛಾಯಾಗ್ರಹಣ ಹೀಗೆ ಎಲ್ಲವೂ ನೋಡುವ ನೋಟಕ್ಕೆ ಆಪ್ತವಾಗುವುದು ಈ ಚಿತ್ರದ ಪ್ಲಸ್ ಪಾಯಿಂಟ್. ರೇಟಿಂಗ್: 3/5.-ದೇಶಾದ್ರಿ ಹೊಸ್ಮನೆ.

  English summary
  Kannada Movie 'Sipayi' Critics review. Kannada Actress Sruthi Hariharan, Actor Siddharth Mahesh starrer 'Sipayi' has received mixed response from the critics. Here is the collection of reviews by Top News Papers of Karnataka. The movie is directed by Rajath Mayee.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X