For Quick Alerts
ALLOW NOTIFICATIONS  
For Daily Alerts

  ಉಗ್ರಂ ಚಿತ್ರ ವಿಮರ್ಶೆ: ಚೊಚ್ಚಲ ನಿರ್ದೇಶಕನಿಗೊಂದು ಸಲಾಂ

  By ಸೋಮನಾಥ್ ಟಿ ಆರ್
  |

  ಹೊಸಬರ ಮತ್ತು ಹೊಸತನದ ಚಿತ್ರಗಳು ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನಮನ್ನಣೆ ಪಡೆಯುತ್ತಿರುವುದು ಉತ್ತಮ ಬೆಳವಣಿಗೆ. ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಚಿತ್ರ ಟ್ರೈಲರ್ ನಲ್ಲೇ ಜನರನ್ನು ಸಿಕ್ಕಾಪಟ್ಟೆ ಆಕರ್ಷಿಸಿತ್ತು.
  ಟ್ರೈಲರ್ ನಲ್ಲಿ ಪ್ರತಿಭಾನ್ವಿತ ಕಲಾವಿದ ಶ್ರೀಮುರಳಿಯ ಆಂಗ್ರಿ ಯಂಗ್ ಮ್ಯಾನ್ ಲುಕ್ ಕೂಡಾ ಜನರನ್ನು ಮೋಡಿ ಮಾಡಿತ್ತು.

  ಪ್ರಶಾಂತ್ ನೀಲ್ ಚೊಚ್ಚಲ ನಿರ್ದೇಶನದ ಶ್ರೀಮುರಳಿ, ಹರಿಪ್ರಿಯಾ ಪ್ರಮುಖ ಭೂಮಿಕೆಯಲ್ಲಿರುವ ಬಹು ನಿರೀಕ್ಷಿತ 'ಉಗ್ರಂ' ಚಿತ್ರ ಶುಕ್ರವಾರ (ಫೆ 21) ರಾಜ್ಯದ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಉತ್ತಮ ಓಪನಿಂಗ್ ಕೂಡಾ ಸಿಕ್ಕಿದೆ. (ಉಗ್ರಂ ಬಿಸಿ ಬಿರಿಯಾನಿ ತರ ಇದೆ ಅಂದ ದರ್ಶನ್)

  ನಮ್ಮ ಸಿನಿ ವರದಿಗಾರ ಸಿನಿಮಾ, ಸಿನಿಮಾದ ಮೇಕಿಂಗ್ ಬಗ್ಗೆ ಏನಂತಾರೆ? ಸ್ಲೈಡಿನಲ್ಲಿ ನೋಡಿ..

  ಬ್ಯಾನರ್ : ಇಂಕ್ ಫೈನೈಟ್ ಪಿಚ್ಚರ್ಸ್
  ನಿರ್ದೇಶನ: ಪ್ರಶಾಂತ್ ನೀಲ್
  ಸಂಗೀತ : ರವಿ ಬಸ್ರೂರು
  ಸಿನಿಮಾಟೋಗ್ರಫಿ : ರವಿ ವರ್ಮನ್
  ತಾರಾಗಣದಲ್ಲಿ: ಶ್ರೀಮುರುಳಿ, ಹರಿಪ್ರಿಯಾ, ತಿಲಕ್ ಶೇಖರ್, ಅತುಲ್ ಕುಲ್ಕರ್ಣಿ, ಅವಿನಾಶ್, ಜೈಜಗದೀಶ್, ಪದ್ಮಜಾ ರಾವ್, ಸುರೇಶ್ಚಂದ್ರ

  Rating:
  4.0/5

  ಉಗ್ರಂ ಗ್ಯಾಲರಿ

  ತಾಯಿಯ ಸಮಾಧಿ ನೋಡಲು ಬರುವ ನಾಯಕಿ

  ತಾಯಿಯನ್ನಂತೂ ನೋಡಿಲ್ಲ, ತಾಯಿಯ ಸಮಾಧಿಯನ್ನಾದರೂ ನೋಡೋಣವೆಂದು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ನಾಯಕಿ ಹರಿಪ್ರಿಯಾ ಸ್ವಂತ ಊರಿಗೆ ವಾಪಸ್ ಬರುವ ಸನ್ನಿವೇಶದ ಮೂಲಕ ಚಿತ್ರ ಆರಂಭವಾಗುತ್ತದೆ. ಊರಿಗೆ ಬರುತ್ತಿದ್ದಂತೇ, ನಾಯಕಿಯನ್ನು ಸಾಯಿಸಲು ಶಿರಾದ ರಾಜಕೀಯ ಮುಖಂಡ (ಅವಿನಾಶ್) ಸ್ಕೆಚ್ ಹಾಕಿ ರೌಡಿಗಳನ್ನು ಛೂ ಬಿಟ್ಟಿರುತ್ತಾನೆ.

  ನಾಯಕಿಯನ್ನು ಕಾಪಾಡುವ ಮೂಲಕ ಹೀರೋ ಎಂಟ್ರಿ

  ರೌಡಿಗಳನ್ನು ಅಟ್ಟಾಡಿಸಿ ಓಡಿಸುವ ಮೂಲಕ ನಾಯಕಿಯನ್ನು ಕಾಪಾಡುವ ದೃಶ್ಯದಿಂದ ನಾಯಕ ಅಗಸ್ತ್ಯನ (ಶ್ರೀಮುರಳಿ) ಎಂಟ್ರಿಯಾಗುತ್ತದೆ. ಹರಿಪ್ರಿಯಾ ತಂದೆ (ಜೈಜಗದೀಶ್) ಮತ್ತು ಅವಿನಾಶ್ ಕುಟುಂಬಕ್ಕೂ ಭಾಂದವ್ಯ ಹಳಸಿ ಹೋಗಿರುತ್ತದೆ. ವಿದೇಶದಲ್ಲೇ ಹೆಚ್ಚಾಗಿ ತನ್ನ ವ್ಯವಹಾರಗಳನ್ನು ನೋಡಿಕೊಂಡಿರುವ ನಾಯಕಿಯ ತಂದೆಗೆ ನಾಯಕಿ ಸ್ಪೈನ್ ದೇಶಕ್ಕೆ ಹೋಗುತ್ತೇನೆಂದು ತನ್ನ ಊರಿಗೆ ಬಂದಿರುತ್ತಾಳೆ.

  ಅವಿನಾಶ್ ಗೆ ಸಂಚಕಾರ ತರುವ ಮಗ

  ತಾನು ರಾಜಕೀಯದಲ್ಲಿ ಭದ್ರ ನೆಲೆ ಕಾಣಲು ತುಮಕೂರು ಶಿರಾದ ರಾಜಕೀಯ ಮುಖಂಡ ಅವಿನಾಶ್ ನನ್ನು ಅವನ ಮಗನೇ (ಅತುಲ್ ಕುಲ್ಕರ್ಣಿ) ಸಾಯಿಸುತ್ತಾನೆ, ಜೊತೆಗೆ ತನ್ನ ತಂದೆಗೇ ಸವಾಲಾಗಿದ್ದ ಅಗಸ್ತ್ಯನನ್ನು ಹೇಗಾದರೂ ಮಾಡಿ ಮಟ್ಟ ಹಾಕಬೇಕೆಂದು ಅತುಲ್ ಸರಿಯಾದ ಸಮಯಕ್ಕೆ ಕಾಯುತ್ತಿರುತ್ತಾನೆ.

  ನಾಯಕನ ಜೊತೆ ನಾಯಕಿ

  ತಾಯಿ ಸಮಾಧಿ ನೋಡಲು ಬರುವ ನಾಯಕಿ ಊರಲ್ಲಿ ನಾಯಕನ ಮನೆಯಲ್ಲಿ ನೆಲೆಸಿರುತ್ತಾಳೆ. ಕೋಲಾರದಲ್ಲಿ ಚಿಕ್ಕ ಮೆಕ್ಯಾನಿಕ್ ಅಂಗಡಿ ಇಟ್ಟು ಕೊಂಡು ತಾಯಿಯ ಜೊತೆ ನೆಲೆಸಿರುವ ನಾಯಕ ಅಗಸ್ತ್ಯನ flash back ಕಥೆ ಅಲ್ಲಿಂದ ಸುಮಾರು ಐನೂರು ಕಿಲೋಮೀಟರ್ ದೂರದ ಮುಗೋರ್ (ಉತ್ತರ ಕರ್ನಾಟಕ) ಪಟ್ಟಣಕ್ಕೆ ಸಾಗುತ್ತದೆ. ಅಲ್ಲಿ ಭೂಗತ ಲೋಕದಲ್ಲಿ ಆಗ ತಾನೇ ಅಂಬೆಗಾಲು ಇಡುತ್ತಿರುವ ಮತ್ತು ತನ್ನ ಬಾಲ್ಯ ಸ್ನೇಹಿತ ಬಾಲ (ತಿಲಕ್) ನಾಯಕನ ಸಹಾಯಹಸ್ತ ಚಾಚುತ್ತಾನೆ.

  ಕ್ಲೈಮ್ಯಾಕ್ಸ್ ಏನಿರಬಹುದು?

  ಜೈಜಗದೀಶ್ - ಅವಿನಾಶ್ ಕುಟುಂಬಕ್ಕೆ ಭಾಂದವ್ಯ ಹಳಸಲು ಕಾರಣವೇನು? ನಾಯಕನ್ನು ಕೊಲ್ಲಲು ಸಂಚು ನಡೆಸುತ್ತಿದ್ದ ಅತುಲ್ ಕುಲ್ಕರ್ಣಿ ಕಥೆ ಏನಾಗುತ್ತದೆ? ಅಗಸ್ತ್ಯನ flash back ಕಥೆ ಏನು? ನಾಯಕ ಮತ್ತು ನಾಯಕಿ ಒಂದಾಗುತ್ತಾರಾ ಎನ್ನುವು ಕುತೂಹಲಕಾರಿ ಸಂಗತಿಗಳನ್ನು ಚಿತ್ರಮಂದಿರದಲ್ಲೇ ನೋಡಿದರೆ ಚಂದ.

  ನಾಗಾಲೋಟದಲ್ಲಿ ಸಾಗುವ ಚಿತ್ರಕಥೆ

  ಚಿತ್ರದ ಒಂದೊಂದು ದೃಶ್ಯಗಳು ನಾಗಾಲೋಟದಲ್ಲಿ ಸಾಗುತ್ತಿರುತ್ತದೆ. ಸನ್ನಿವೇಶಕ್ಕೆ ತಕ್ಕಂತೆ ಚಿತ್ರಕಥೆಯನ್ನು ನೀಟಾಗಿ ತೆರೆ ಮೇಲೆ ತರಲು ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಚಿತ್ರದ ಸಂಭಾಷಣೆ (ಪ್ರಶಾಂತ್ ನೀಲ್, ರಾಮ್ ಶ್ರೀಲಕ್ಷ್ಮಣ್ ) ಚಿತ್ರದ ಪ್ಲಸ್ ಪಾಯಿಂಟ್ ಗಳಲ್ಲೊಂದು.

  ಬ್ಯಾಕ್ ಗ್ರೌಂಡ್ ಮ್ಯೂಸಿಕ್, ಸಾಹಸ ಸನ್ನಿವೇಶ, ಫೋಟೋಗ್ರಫಿ

  ಚಿತ್ರದಲ್ಲಿ ಗಮನಾರ್ಹವಾಗಿ ಎದ್ದು ಕಾಣುವ ಅಂಶವೇನಂದರೆ ಸಿನಿಮಾಟೋಗ್ರಾಫಿ. ರಾಮ್ ಲೀಲಾ, ಬರ್ಫಿ ಮುಂತಾದ ಚಿತ್ರಗಳಿಗೆ ಕ್ಯಾಮರಾ ಹಿಡಿದಿರುವ ರವಿ ವರ್ಮನ್ ಕೈಚಳಕ ಚೆನ್ನಾಗಿದೆ. ಇನ್ನು ರವಿ ವರ್ಮ ಅವರ ಸಾಹಸ ದೃಶ್ಯಗಳು ಮೈನವಿರೇಳಿಸುತ್ತವೆ. ಚಿತ್ರಕ್ಕೆ ಸಂಗೀತ ನೀಡಿದ ರವಿ ಬಸ್ರೂರು ಅವರ ಕೆಲಸ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ನಲ್ಲಿ ಇನ್ನೂ ಚೆನ್ನಾಗಿದೆ.

  ಕಲಾವಿದರ ನಟನೆ

  ಶ್ರೀಮುರುಳಿ ಮತ್ತು ಹರಿಪ್ರಿಯಾ ಇಬ್ಬರಿಗೂ ಇದೊಂದು come back ಸಿನಿಮಾ. ಪೈಪೋಟಿಗೆ ಬಿದ್ದಂತೆ ಇಬ್ಬರೂ ನಟಿಸಿದ್ದಾರೆ. ಅವಿನಾಶ್, ಜೈಜಗದೀಶ್, ಅತುಲ್ ಕುಲ್ಕರ್ಣಿ, ತಿಲಕ್ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರದಲ್ಲಿನ ಶ್ರೀಮುರಳಿ ನಟನೆ ಕನ್ನಡದಲ್ಲಿ ಅವರಿಗೆ ಸೆಕೆಂಡ್ ಇನ್ನಿಂಗ್ಸ್ ಅಂದರೆ ತಪ್ಪಾಗಲಾರದು.

  ಮತ್ತು ಕೊನೆಗೆ ವರ್ಡಿಕ್ಟ್

  ಲವ್, ಸೆಂಟಿಮೆಂಟ್, ಸಾಹಸ ಎಲ್ಲಾ ದೃಶ್ಯಗಳನ್ನು ಬೆರೆಸಿ ಸುಂದರವಾಗಿ ತೆರೆ ಮೇಲೆ ತಂದಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಆದರೂ ಮಧ್ಯಂತರದ ನಂತರ ಹಿಂಸಾತ್ಮಕ ದೃಶ್ಯಗಳು ತುಸು ಹೆಚ್ಚು ಎಂದು ಅನಿಸಿದರೂ ಅನಿಸ ಬಹುದು. ಚಿತ್ರ ಕಥೆಯನ್ನು ಹಾಲಿವುಡ್ ಶೈಲಿಯಲ್ಲಿ ಹೇಳುವ ನಿರ್ದೇಶಕರ ಪ್ರಯತ್ನಕ್ಕೆ ಶಹಬ್ಬಾಸ್ ಹೇಳಲೇ ಬೇಕು. ಚೊಚ್ಚಲ ನಿದೇಶನದಲ್ಲೇ ಈ ಮಟ್ಟದ ಚಿತ್ರ ನೀಡಿದ ನಿರ್ದೇಶಕರನ್ನು ಮತ್ತು ಹೊಸಬರ ಪ್ರಯತ್ನಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಎನ್ನುವುದು ಕನ್ನಡ ಕಲಾಭಿಮಾನಿಗಳಿಗೆ ನಮ್ಮ ಸಲಹೆ.

  English summary
  Kannada movie Sri Murali, Hari Priya starer Ugramm review. Movie has reached the expectation level of the audience and no doubt Srimurali will gets Stardom with this film. A must watch movie if you love Ram Gopal Varma's movies.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more