»   » ಗಣೇಶ್ ರ ವಿಭಿನ್ನ ಅವತಾರದ 'ಸ್ಟೈಲ್ ಕಿಂಗ್'ಗೆ ವಿಮರ್ಶಕರು ಏನಂದ್ರು?

ಗಣೇಶ್ ರ ವಿಭಿನ್ನ ಅವತಾರದ 'ಸ್ಟೈಲ್ ಕಿಂಗ್'ಗೆ ವಿಮರ್ಶಕರು ಏನಂದ್ರು?

Posted By:
Subscribe to Filmibeat Kannada

ಯಾವಾಗಲೂ ಹೃದಯ ಕೆರ್ಕೋತಾ, ಬ್ರೇಕ್ ಕೊಡದೇ ನಾನ್ ಸ್ಟಾಪ್ ಡೈಲಾಗ್ ಹೊಡಿಯುತ್ತಾ, ಸ್ಟೈಲಿಷ್ ಆಗಿ ಸದಾ ಹುಡುಗಿಯರ ಹಿಂದೆ-ಮುಂದೆ ಓಡಾಡುತ್ತಾ ಹುಡುಗಾಟದ ಹುಡುಗನಾಗಿ ತೆರೆಯ ಮೇಲೆ ಬರ್ತಾ ಇದ್ದ ನಟ ಗಣೇಶ್ ಈ ಬಾರಿ 'ಸ್ಟೈಲ್ ಕಿಂಗ್' ಚಿತ್ರದಲ್ಲಿ ಮಾತ್ರ ಡಿಫರೆಂಟಾಗಿ ಮಿಂಚಿದ್ದಾರೆ.

ಮೊಟ್ಟ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಮಿಂಚಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅವರು 'ಸ್ಟೈಲ್ ಕಿಂಗ್' ಚಿತ್ರದಲ್ಲಿ ಸಖತ್ ಫೈಟ್ ಮಾಡಿ ಅಕ್ಷರಶಃ ಫೈಟಿಂಗ್ ಸ್ಟಾರ್ ಆಗಿದ್ದಾರೆ. ಹಲವು ದಿನಗಳಿಂದ ಒಂದು ಬ್ರೇಕ್ ಗಾಗಿ ಕಾದಿದ್ದ ಗಣೇಶ್ ಅವರಿಗೆ ಪಿ.ಸಿ ಶೇಖರ್ ನಿರ್ದೇಶನದ 'ಸ್ಟೈಲ್ ಕಿಂಗ್' ಸಿನಿಮಾ ಬ್ರೇಕ್ ಕೊಟ್ಟಿದೆ ಎನ್ನಬಹುದು.[ಚಿತ್ರ ವಿಮರ್ಶೆ; ಹೊಸ 'ಸ್ಟೈಲ್'ನಲ್ಲಿ 'ಕಿಂಗ್' ಆದ ಗಣೇಶ್.!]


ಇದೇ ಮೊದಲ ಬಾರಿಗೆ ಮಲಯಾಳಂ ಬೆಡಗಿ ರೆಮ್ಯಾ ನಂಬೀಸನ್ ಮತ್ತು ಗಣೇಶ್ ಅವರು ಡ್ಯುಯೆಟ್ ಹಾಡಿದ್ದು, ಗಣೇಶ್ ಅವರು ಪಾಸಿಟಿವ್ ಮತ್ತು ನೆಗೆಟಿವ್ ಶೇಡ್ ನಲ್ಲಿ ದ್ವಿಪಾತ್ರವನ್ನು ಸರಿಯಾಗಿ ಬ್ಯಾಲೆನ್ಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


ಗಣೇಶ್ ಅವರು ವಿಭಿನ್ನವಾಗಿ ಮಿಂಚಿರುವ 'ಸ್ಟೈಲ್ ಕಿಂಗ್' ಚಿತ್ರಕ್ಕೆ ಖ್ಯಾತ ವಿಮರ್ಶಕರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಖ್ಯಾತ ವಿಮರ್ಶಕರ ರೆಸ್ಪಾನ್ಸ್ ಗಳ ಕಲೆಕ್ಷನ್ಸ್ ಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಗಳನ್ನು ಕ್ಲಿಕ್ ಮಾಡಿ...


'ಆಕ್ಷನ್ ಕಿಕ್ಕು ಕಾಮಿಡಿ ಝಲಕ್ಕು'-ವಿಜಯವಾಣಿ

'ಗಣೇಶ್ ಮೊದಲ ಬಾರಿಗೆ ದ್ವಿಪಾತ್ರಧಾರಿ ಎಂಬ ಕಾರಣಕ್ಕೆ 'ಸ್ಟೈಲ್ ಕಿಂಗ್' ನಿರೀಕ್ಷೆ ಮೂಡಿಸಿತ್ತು. ಆ ನಿರೀಕ್ಷೆ ಫಲಿಸಿದೆಯಾ? ಹೌದು ಎನ್ನಲಿಕ್ಕೆ ತುಸು ಕಷ್ಟ! ಡ್ರಗ್ಸ್ ಮಾಫಿಯಾದ ಕಥೆಯನ್ನು ತೆರೆಮೇಲೆ ತೋರಿಸುವಾಗ ನಿರ್ದೇಶಕರು ಸಿಕ್ಕಾಪಟ್ಟೆ ಹೋಮ್ ವರ್ಕ್ ಮಾಡಬೇಕಿತ್ತು. ಪೊಲೀಸ್ ಅಧಿಕಾರಿಯಾಗಬೇಕೆಂಬ ಗುರಿ ಇಟ್ಟುಕೊಂಡವನು ಕಾಶಿ. 5 ಕೋಟಿ ರೂ.ಮೌಲ್ಯದ ಕೊಕೇನ್ ಕದ್ದು ಪರಾರಿಯಾಗುವ ಕಾಶಿ ತನಗೇ ತಿಳಿಯದಂತೆ ತನ್ನಂತೆ ಇರುವ ಕಾರ್ತಿಕ್ ಕೈಗೆ ಅದನ್ನು ಸಿಗವಂತೆ ಮಾಡುತ್ತಾನೆ. ಇತ್ತ ಮಾಫಿಯಾದವರು ಬ್ಯಾಗ್ ಗಾಗಿ ಹಾವು-ಏಣಿ ಆಟ ಶುರು ಮಾಡುತ್ತಾರೆ. ಅಂತಿಮವಾಗಿ ಆ ಬ್ಯಾಗ್ ಯಾರಿಗೆ ಸೇರುತ್ತದೆ? ಕಾರ್ತಿಕ್ ಪೊಲೀಸ್ ಆಗುತ್ತಾನಾ? ಕಾಶಿ ಕಥೆ ಏನು? ಕುತೂಹಲವಿದ್ದವರು ಚಿತ್ರಮಂದಿರದತ್ತ ಧಾವಿಸಬಹುದು.


'ಚಚ್ಚುವ ಕಿಂಗ್, ಚುಚ್ಚುವ ಚೀಲ' -ಪ್ರಜಾವಾಣಿ

ಗಣೇಶ್ ಅಭಿನಯದಲ್ಲಿ ಸಿಗುವ ಪಟಪಟ ಮಾತುಗಳು, ಮುಗ್ಧ ನಗೆ ಇಲ್ಲಿ ಕಾಣುವುದಿಲ್ಲ. ಕೌಟುಂಬಿಕ ಡ್ರಾಮಾ, ಪ್ರೀತಿ ಪ್ರೇಮವೂ ಇಲ್ಲ. ಹೊಡಿ ಬಡಿಯ ಸಾಹಸ ದೃಶ್ಯಗಳೂ ಅಪೂರ್ಣ. ಬಾಯಲ್ಲಿ ಸಿಗಾರ್, ಗಡ್ಡದಾರಿ ಸ್ಟೈಲ್ ಕಿಂಗ್ ಗಣೇಶ್ ಪಾತ್ರದಲ್ಲಿ ಗಟ್ಟಿತನ, ಸಂಭಾಷೆಯಲ್ಲಿನ ಏರಿಳಿತ ಅಷ್ಟಕ್ಕಷ್ಟೆ. ಎಲ್ಲವೂ ಚೌಚೌ. ಪ್ರೇಕ್ಷಕನಿಗೆ ಅರೆಬರೆ ಮನರಂಜನೆ. -ಪ್ರಕಾಶ ಕುಗ್ವೆ.


'ಸ್ಟೈಲ್ ಕಾಣದ ಕಾಸಿಗೆ ಸಂಭಾಷಣೆಯೇ ಕಿಕ್'- ಕನ್ನಡಪ್ರಭ

ಒಂದು ಮಾಫಿಯಾ, ಅದರೊಳಗೆ ಕಳ್ಳರು, ಅದನ್ನು ಭೇದಿಸಲು ಪೊಲೀಸರು. ಹೀಗೆ ಕಳ್ಳ-ಪೊಲೀಸ್ ಆಟದ ಕತೆಗಳು ಕನ್ನಡಕ್ಕೆ ಹೊಸದಲ್ಲ. ಆದರೂ ಡ್ರಗ್ ಮಾಫಿಯಾದೊಳಗಿನ ಕಳ್ಳ-ಪೊಲೀಸ್ ಆಟವನ್ನು ತೋರಿಸುವ 'ಸ್ಟೈಲ್ ಕಿಂಗ್' ಪಕ್ಕಾ ಮಾಸ್ ಗೆ ಭರಪೂರ ಮನರಂಜನೆ ನೀಡುವ ಚಿತ್ರವಂತೂ ಹೌದು. ಯಾಕೆಂದ್ರೆ ಇಲ್ಲಿ ಕೇವಲ ಕಳ್ಳ-ಪೊಲೀಸ್ ಆಟವಿಲ್ಲ. ಲವ್ ಸೆಂಟಿಮೆಂಟ್, ಮೆಸೇಜ್ ಜೊತೆಗೆ ಕಚಗುಳಿ ಇಡುವ ಸಂಭಾಷಣೆ ಇದೆ. ನಿರ್ದೇಶಕ ಶೇಖರ್ ಎಲ್ಲವನ್ನು ಅಚ್ಚು-ಕಟ್ಟಾಗಿ ತಂದಿದ್ದಾರೆ. ಅದರೆ, ಕತೆಯನ್ನು ಅರೆಬರೆಯಾಗಿ ಎಳೆ ತಂದಿದ್ದು ಈ ಚಿತ್ರದ ವೈಫಲ್ಯ. ಉಳಿದಂತೆ ನಟ ಗಣೇಶ್ ಅಂದ್ರೆ ಲವರ್ ಬಾಯ್ ಎನಿಸಿಕೊಳ್ಳುವ ಸಿನಿ ರಸಿಕರ ಪಾಲಿಗೆ ಹೊಸ ರೀತಿಯ ಗಣೇಶ್ ರನ್ನು ತೋರಿಸುವ ಪ್ರಯತ್ನಕ್ಕೆ ಈ ಚಿತ್ರ ನೋಡಲೇಬೇಕು.-ದೇಶಾದ್ರಿ ಹೊಸ್ಮನೆ.


'ಕಿಂಗ್ ನ ಡಿಫರೆಂಟ್ ಸ್ಟೈಲ್' -ವಿಜಯ ಕರ್ನಾಟಕ

ಗಣೇಶ್ ಗೆ ರೌಡಿ ಪಾತ್ರಗಳು ಹೊಂದುವುದಿಲ್ಲ ಎಂಬ ಮಾತಿತ್ತು. ಅದನ್ನು ಹುಸಿ ಮಾಡಿದೆ ಈ ಚಿತ್ರ. 'ರೋಮಿಯೋ' ಚಿತ್ರ ನೋಡಿ ಅದೇ ನಿರೀಕ್ಷೆ ಇಟ್ಟುಕೊಂಡು ಹೋಗುವ ಪ್ರೇಕ್ಷಕರನ್ನು ಈ ಚಿತ್ರ ನಿರಾಶೆ ಮಾಡುವುದಿಲ್ಲ. ಸಿಂಪಲ್ ಸ್ಟೋರಿಯಾದರೂ ಸ್ಕ್ರೀನ್ ಪ್ಲೇ ಟೈಟಾಗಿರುವುದೇ ಚಿತ್ರದ ಶಕ್ತಿ. ಕತೆಯಲ್ಲೇ ಕಾಮಿಡಿ ತಂದು ಆಕ್ಷನ್, ಹಾಸ್ಯ ಎರಡನ್ನೂ ಹದವಾಗಿ ಮಿಕ್ಸ್ ಮಾಡಿರೋದ್ರಿಂದ ಮಾಮೂಲಿ ಮಸಾಲೆ ಸಿನಿಮಾಗಿಂತ ಭಿನ್ನವಾಗಿ ಕಾಣುತ್ತೆ. - ಪದ್ಮಾ ಶಿವಮೊಗ್ಗ.


English summary
Kannada movie 'Style King' Critics Review. Kannada Actor Ganesh, Actress Remya Nambeesen Starrer 'Style King' has received mixed response from the critics. here is the collection of reviews by Top News Papers of Karnataka. The movie is directed by PC Shekar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada