Don't Miss!
- Sports
ಈ ಭಾರತೀಯ ತಾನು ಎದುರಿಸಿದ 'ಅತ್ಯಂತ ಅಪಾಯಕಾರಿ ಬೌಲರ್' ಎಂದ ಜೋಸ್ ಬಟ್ಲರ್
- Lifestyle
'ಸಿಂಗಾರ ಸಿರಿಯೇ' ಎಂದು 60ನೇ ವಯಸ್ಸಿನಲ್ಲಿ ವೆಡ್ಡಿಂಗ್ ಫೋಟೋಶೂಟ್: ರೊಮ್ಯಾಂಟಿಕ್ ವೀಡಿಯೋ ಸಕತ್ ವೈರಲ್
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರು
'ಹುಷಾರು' ಎನ್ನುವ ಮಾತು ನಿತ್ಯ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ವಹಿಸುತ್ತದೆ ಎನ್ನುವ ಸಣ್ಣ ಎಳೆಯನ್ನು ಇಟ್ಟುಕೊಂಡು 'ಟಗರು' ತೆರೆಗೆ ಬಂದಿದೆ. ಶಿವಣ್ಣನ ಅಭಿಮಾನಿಗಳಿಗೆ ಮನರಂಜನೆ ನೀಡುವ 'ಟಗರು' ಚಿತ್ರವನ್ನ ಎಷ್ಟು ಬಾರಿ ಬೇಕಾದರೂ ನೋಡಬಹುದು.

'ಟಗರು' ಸಾಮಾನ್ಯ ಸಿನಿಮಾ ಅಲ್ಲ
ಕರ್ತವ್ಯದಲ್ಲಿ ಪೊಲೀಸ್. ಆದರೆ ಮನಸ್ಸಿನ ತೃಪ್ತಿಗಾಗಿ ಖಾಕಿ ಧರಿಸಿ ಕೆಲಸ ಮಾಡುವ ನಾಯಕ (ಶಿವರಾಜ್ ಕುಮಾರ್), ಪುಡಿ ರೌಡಿ ಆಗಿದ್ದುಕೊಂಡು ಡಾನ್ ಆಗಬೇಕೆಂಬ ಕನಸು ಹೊತ್ತು ಟಗರಿನ ಮುಂದೆ ಕಾಳಗಕ್ಕೆ ಇಳಿಯುವ ಖಳನಾಯಕ ಡಾಲಿ ಅಲಿಯಾಸ್ ನಿಂಬೆ (ಧನಂಜಯ) ಯುವ ಕವಿಯಾಗಿ ಯಾರದ್ದೋ ಪ್ರೀತಿಗೆ ಸಹಾಯ ಮಾಡಲು ಹೋಗಿ ರೌಡಿ ಆಗುವ ಮತ್ತೊಬ್ಬ ಖಳನಾಯಕ ಚಿಟ್ಟೆ ಅಲಿಯಾಸ್ ಚಿತ್ತರಂಜನ್ (ವಸಿಷ್ಠ ಸಿಂಹ). ಡಾಲಿ ತಮ್ಮ ಕಾಕ್ರೋಚ್ ಇವರುಗಳ ಜೊತೆ ನಾಯಕಿಯರಾಗಿ ಮಾನ್ವಿತಾ ಹರೀಶ್ ಹಾಗೂ ಭಾವನಾ. ಪೊಲೀಸ್ ಹಾಗೂ ರೌಡಿಗಳ ಮಧ್ಯೆ ನಡೆಯೋ ಸಮರವೇ 'ಟಗರು' ಸಿನಿಮಾದ ಜೀವಾಳ.
Recommended Video


ಯಾರು ಈ 'ಟಗರು' ?
'ಟಗರು' ಸಿನಿಮಾದಲ್ಲಿ ಚಿತ್ರದ ನಾಯಕ ಶಿವರಾಜ್ ಕುಮಾರ್ ಪಾತ್ರ ಟಗರಿಗೆ ಹೋಲಿಕೆ ಮಾಡಲಾಗಿದೆ. ಕೋಪ ಬಂದಾಗ ಅನ್ಯಾಯ ಕಂಡಾಗ ಟಗರಂತೆ ಗುದ್ದುವುದು ಹೀರೋ ಪಾತ್ರ. ಅದೇ ರೀತಿ ಟಗರಿನಂತೆ ಇಲ್ಲಿ ಶಿವಣ್ಣ ಫೈಟ್ ಕೂಡ ಮಾಡಿದ್ದಾರೆ.

ಅಬ್ಬರಿಸಿದ ಧನಂಜಯ
ಇದೇ ಮೊದಲ ಬಾರಿಗೆ ಖಳನಾಯಕನಾಗಿ ಅಭಿನಯಿಸಿರುವ ಸ್ಪೆಷಲ್ ಸ್ಟಾರ್ ಧನಂಜಯ ತೆರೆ ಮೇಲೆ ಅಭಿನಯದ ಮೂಲಕ ಅಬ್ಬರಿಸಿದ್ದಾರೆ. ಶಿವಣ್ಣನ ಎದುರು ಖಡಕ್ ಡೈಲಾಗ್ ಗಳ ಮೂಲಕ ಮಿಂಚು ಹರಿಸಿದ್ದಾರೆ. ಸಿನಿಮಾ ನೋಡಿ ಥಿಯೇಟರ್ ನಿಂದ ಹೊರ ಬರುವಾಗ ಪ್ರತಿಯೊಬ್ಬರ ಬಾಯಲ್ಲಿ ಡಾಲಿ ಹೆಸರು ಕೇಳಿ ಬರುತ್ತಿದೆ.

ಅಭಿನಯದಲ್ಲೇ ಮೋಡಿ ಮಾಡುವ ವಸಿಷ್ಠ ಸಿಂಹ
ಧನಂಜಯ ಜೊತೆಯಲ್ಲಿ ಚಿಟ್ಟೆ ಪಾತ್ರದಲ್ಲಿ ವಸಿಷ್ಠ ಸಿಂಹ ಅಭಿನಯಿಸಿದ್ದಾರೆ. ಕೆಲವೇ ದೃಶ್ಯಗಳಿದ್ದರೂ ವಸಿಷ್ಠ ಸಿಂಹ ತಮ್ಮ ಧ್ವನಿಯಿಂದಲೇ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಮತ್ತೋರ್ವ ಖಳನಾಯಕನಾಗಿ ಸುಧೀ ಅಭಿನಯಕ್ಕೂ ಫುಲ್ ಮಾರ್ಕ್ ಸಿಕ್ಕಿದೆ.

ಅಕ್ಕ ತಂಗಿಯರಾಗಿ ಮಾನ್ವಿತಾ -ಭಾವನಾ
ಟಗರು ಶಿವನಿಗೆ ನಾಯಕಿಯಾಗಿ ಜಾಕಿ ಭಾವನಾ ತೆರೆ ಮೇಲೆ ಸುಂದವಾಗಿ ಕಾಣಿಸುತ್ತಾರೆ. ಮಾನ್ವಿತಾ ಎಂದಿನಂತೆ ತಮ್ಮ ಕೆಲಸವನ್ನ ಅಚ್ಚು ಕಟ್ಟಾಗಿ ಮಾಡಿದ್ದಾರೆ.

ಸೂರಿಯ ಹೊಸ ಪ್ರಯತ್ನ
ಈಗಾಗಲೇ 8 ಸಿನಿಮಾಗಳನ್ನ ನಿರ್ದೇಶನ ಮಾಡಿರುವ ಸೂರಿ 'ಟಗರು' ಚಿತ್ರದ ಸ್ಕ್ರೀನ್ ಪ್ಲೇ ನಲ್ಲಿ ಹೊಸ ಪ್ರಯತ್ನವನ್ನ ಮಾಡಿದ್ದಾರೆ. ಮೊದಲಾರ್ಧದಲ್ಲಿ ಪ್ರೇಕ್ಷಕರ ತಲೆಗೆ ಹುಳ ಬಿಡುವ ನಿರ್ದೇಶಕರು ಸೆಕೆಂಡ್ ಹಾಫ್ ನಲ್ಲಿ ಎಲ್ಲಾ ಟ್ವಿಸ್ಟ್ ಗಳಿಗೂ ಸ್ಪಷ್ಟನೆ ಕೊಡುತ್ತಾರೆ.

ಹಿನ್ನಲೆ ಸಂಗೀತಕ್ಕೆ ಫುಲ್ ಮಾರ್ಕ್
'ಟಗರು' ಸಿನಿಮಾ ಹಾಡುಗಳು ಸೂಪರ್ ಹಿಟ್ ಆಗಿತ್ತು. ಸಿನಿಮಾದ ಹಿನ್ನಲೆ ಸಂಗೀತ ಪ್ರೇಕ್ಷಕರಿಗೆ ಬೇರೆಯದ್ದೇ ಫೀಲ್ ನೀಡುತ್ತೆ. ಮಾಸ್ ಕಥೆ ಇರುವ ಚಿತ್ರಕ್ಕೆ ವಿಭಿನ್ನ ರೀತಿಯ ಸಂಗೀತ ನೀಡಿದ್ದಾರೆ ಚರಣ್ ರಾಜ್

ಮನಸ್ಸಿನಲ್ಲಿ ಉಳಿಯುವ ಸಂಭಾಷಣೆ
ದುನಿಯಾ ಸೂರಿ ಜೊತೆಯಲ್ಲಿ ಕಡ್ಡಿಪುಡಿ ಸಿನಿಮಾ ಕೆಲಸ ಮಾಡಿದ್ದ ಮಾಸ್ತಿ ಟಗರು ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ಶಿವಣ್ಣ ಹಾಗೂ ಧನಂಜಯನಿಗೆ ಸಾಕಷ್ಟು ಮಾಸ್ ಡೈಲಾಗ್ ಗಳಿದ್ದು ಕಮರ್ಷಿಯಲ್ ಫೀಲ್ ಇಲ್ಲದೆ ಪ್ರೇಕ್ಷರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತವೆ.

ಕೊನೆಯ ಮಾತು
'ಟಗರು' ಕೇವಲ ಶಿವಣ್ಣನ ಸಿನಿಮಾ ಅಲ್ಲ. ಮಲ್ಟಿ ಸ್ಟಾರ್ ಸಿನಿಮಾ ಅಂದರೆ ಇದು ಎನ್ನುವ ಫೀಲ್ ಕೊಡೋ ಚಿತ್ರ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ವೈಶಿಷ್ಟತೆಯನ್ನು ಕೊಡಲಾಗಿದ್ದು ಥಿಯೇಟರ್ ನಿಂದ ಹೊರ ಬರುವಾಗ ಪ್ರೇಕ್ಷಕ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ ಮಾತನಾಡುತ್ತಾರೆ. ಇಷ್ಟು ದಿನ ಕಾದಿದಕ್ಕೂ ಸಾರ್ಥಕ ಎನ್ನುವ ಚಿತ್ರವನ್ನ ಕೊಟ್ಟಿದ್ದಾರೆ ನಿರ್ದೇಶಕ ಸೂರಿ.