For Quick Alerts
  ALLOW NOTIFICATIONS  
  For Daily Alerts

  'ತರ್ಲೆ ವಿಲೇಜ್' ಪುರಾಣಕ್ಕೆ ವಿಮರ್ಶಕರು ಏನಂದ್ರು?

  By Bharath Kumar
  |

  'ತಿಥಿ' ಖ್ಯಾತಿಯ ಗಡ್ಡಪ್ಪ, ಸೆಂಚುರಿ ಗೌಡ, ಅಭಿ, ತಮ್ಮಣ್ಣ ಅಭಿನಯದ 'ತರ್ಲೆ ವಿಲೇಜ್' ಸಿನಿಮಾ ಬಿಡುಗಡೆ ಆಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

  ತರ್ಲೆಗಳ 'ವಿಲೇಜ್' ಪುರಾಣವನ್ನ ನೋಡಿ ಪ್ರೇಕ್ಷಕರು ನಗೆಗಡಲಲ್ಲಿ ತೇಲಾಡಿದ್ದಾರೆ. ಇನ್ನೂ ಪ್ರೇಕ್ಷಕರಂತೆ ವಿಮರ್ಶಕರು ಕೂಡ ಚಿತ್ರವನ್ನ ಮೆಚ್ಚಿಕೊಂಡ್ರಾ?[ವಿಮರ್ಶೆ: 'ತರ್ಲೆ ವಿಲೇಜ್' ಅಲ್ಲ, 'ಪೋಲಿ' ವಿಲೇಜ್!]

  ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ ''ತರ್ಲೆ ವಿಲೇಜ್' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

  'ತಿಥಿ ಛಾಯೆ ತರ್ಲೆ ಮಾಯೆ'-ವಿಜಯವಾಣಿ

  'ತಿಥಿ ಛಾಯೆ ತರ್ಲೆ ಮಾಯೆ'-ವಿಜಯವಾಣಿ

  ''ಒಂದೇ ಮಾತಿನಲ್ಲಿ ಹೇಳಬೇಕಂದರೆ ಸಿನಿಮಾ ಆರಂಭವಾದ ಕೆಲವೇ ಕ್ಷಣಗಳಲ್ಲಿ ಎರಡು ಕೊಲೆಯಾಗುತ್ತವೆ. ಹಾಗೂ ಇನ್ನೇನೂ ಆ ಕೊಲೆಗಾರ ಸಿಕ್ಕೆಬಿಟ್ಟ ಅನ್ನುವಷ್ಟರಲ್ಲಿ ಸಿನಿಮಾ ಮುಗಿದುಹೋಗುತ್ತದೆ. ''ಸಿನಿಮಾದ ಹೆಸರು 'ತರ್ಲೆ ವಿಲೇಜ್' ಎಂದಿರುವುದರಿಂದಲೋ ಏನೋ...ಅಲ್ಲಲ್ಲಿ ದ್ವಂದ್ವಾರ್ಥದ ಸಂಭಾಷಣೆ, ಬೈಗುಳಗಳನ್ನೇ ಹಾಸ್ಯವೆಂಬಂತೆ ಬಳಸಲಾಗಿದೆ. ಆದರೆ ಇಡೀ ಚಿತ್ರವನ್ನ ಕುತೂಹಲದಿಂದ ನೋಡುವಂತೆ ಮಾಡುವುದು ಹಳ್ಳಿಯ ದೇವಸ್ಥಾನವೊಂದರ ಬಳಿ ನೆಡಯುವ ಕೊಲೆಗಳು ಹಾಗೂ ಅದಕ್ಕೆ ಪೂರಕವಾಗಿ ದೇವಸ್ಥಾನದ ಸುತ್ತಮುತ್ತ ಕತ್ತಲಲ್ಲಿ ನಡೆಯುವ ಸನ್ನಿವೇಶಗಳು. 'ತಿಥಿ' ಚಿತ್ರದ ಛಾಯೆಯಲ್ಲೇ ತಯಾರಾಗಿರುವ ಈ ಚಿತ್ರದಲ್ಲಿನ ಮೇಕಿಂಗ್ ದೃಶ್ಯಗಳಿಗೂ 'ತಿಥಿ'ಯಲ್ಲಿ ಬಳಸಿರುವಂತಹ ತಂತ್ರಗಳನ್ನೇ ಅಳವಡಿಸಲಾಗಿದೆ.

  ತಿಥಿಯ 'ತಿಥಿ'-ಪ್ರಜಾವಾಣಿ

  ತಿಥಿಯ 'ತಿಥಿ'-ಪ್ರಜಾವಾಣಿ

  ಕೆ.ಎಂ. ರಘು ನಿರ್ದೇಶನದ 'ತರ್ಲೆ ವಿಲೇಜ್'. ಇದು 'ತಿಥಿ' ಚಿತ್ರದ ಕಥೆಯ ಪ್ರಭಾವಲಯದಿಂದ ಪಾರಾಗಿದ್ದರೂ, ಪಾತ್ರಗಳ ಪ್ರಭಾವಳಿಯಲ್ಲಿ ನಲುಗಿದೆ. ಹಳ್ಳಿಯೊಂದರ ಜನರ ನಂಬಿಕೆಗಳು, ಚುನಾವಣಾ ರಾಜಕೀಯ, ಅನೈತಿಕ ಸಂಬಂಧಗಳಿಗೆ ಒತ್ತು ನೀಡುವ ಚಿತ್ರ, ಹಳ್ಳಿಗೆ ಇರಬೇಕಾದ ಭೌತಿಕ ಚಹರೆಯನ್ನು ಸೂಕ್ಷ್ಮವಾಗಿ ಕಟ್ಟಿಕೊಡುವಲ್ಲಿ ಚಿತ್ರ ವಿಫಲವಾಗಿದೆ. ಸಿನಿಮಾ ಹೆಚ್ಚು ಸುತ್ತುವುದು ಅನೈತಿಕ ಸಂಬಂಧಗಳ ನಡುವೆ. ಅವೂ ಕೂಡ ಇಲ್ಲಿ ಹಾಸ್ಯದ ವಸ್ತುಗಳಾಗಿವೆ. ಗ್ರಾಮೀಣ ಬದುಕನ್ನು ಲಘುವಾಗಿ ಚಿತ್ರಿಸುವಾಗ ಅದರೊಳಗಿನ ತಾಕಲಾಟ, ತಲ್ಲಣಗಳನ್ನು ನಿರ್ದೇಶಕರು ಪರಿಗಣಿಸಿಲ್ಲ. ತಾಂತ್ರಿಕವಾಗಿ ಸಹ ಸಿನಿಮಾ ಗಟ್ಟಿತನ ಹೊಂದಿಲ್ಲ. ಸಂಗೀತ (ವೀರ್ ಸಮರ್ಥ್) ಕೂಡ ಮನಸಿನಲ್ಲಿ ಉಳಿಯುವುದಿಲ್ಲ.

  'ಹಳ್ಳಿಯ ಕಟ್ಟೆ ಪುರಾಣದ ಪ್ರಸಂಗ' -ಕನ್ನಡ ಪ್ರಭ

  'ಹಳ್ಳಿಯ ಕಟ್ಟೆ ಪುರಾಣದ ಪ್ರಸಂಗ' -ಕನ್ನಡ ಪ್ರಭ

  ''ಇದನ್ನ ಸಿನಿಮಾ ಅಂದುಕೊಂಡು ಹೋದರೆ ನಿರಾಸೆ ಕಟ್ಟಿಟ್ಟ ಬುತ್ತಿ. ಅಥವಾ ತಿಥಿ ಅಂದುಕೊಂಡು ಹೋದರೆ ಊಹೆಗಳೇ ತಿಥಿ ಆಗುವ ಅಪಾಯವಿದೆ. ಹಳ್ಳಿ ಚಿತ್ರಣವಾದರೂ ಕೊಂಚ ದೂರ ಸರಿದಂತೆ ಕಾಣುವ ಇಲ್ಲಿ ಹದಿಹರೆಯದ ಹುಡುಗ-ಹುಡುಗಿಯರ ಅಡ್ಡದಾರಿಗಳು, ವಯಸ್ಸಾದವರು ಅನೈತಿಕ ಸಂಬಂಧ, ಉದ್ಧಾರ ಆಗದಿರುವ ದೇಗುಲ, ಚುನಾವಣೆ ಇರದಿದ್ದರೂ ಹಳ್ಳಿ ರಾಜಕೀಯದಲ್ಲಿ ನಡೆಯುವ ಗಿಮಿಕ್ ಗಳು, ಸೇರಿದಂತೆ ಹಲವು ಅಂಶಗಳು ಗಟ್ಟಿ ಕೇಂದ್ರವಿಲ್ಲದೆ ಬಿಡಿ ಬಿಡಿಯಾಗಿ ತೆರೆದುಕೊಳ್ಳುತ್ತ ಸಾಗುತ್ತೆ. ಹೀಗೆ ಕಥನಕ್ಕಿಂತ ಚಿತ್ರಣಕ್ಕೆ ಹೆಚ್ಚು ಉತ್ತು ನೀಡಿರುವ ನಿರ್ದೇಶಕ ರಘು, ಗಡ್ಡಪ್ಪ ಹಾಗೂ ಸೆಂಚುರಿ ಗೌಡ ಅವರ ಮಾತಿನ ಮ್ಯಾನರಿಸಂ ಅನ್ನೇ ಅವಲಂಬಿಸಿದಂತೆ ಕಾಣುತ್ತಾರೆ.

  'ತಿಥಿಯ ನೆರಳಲ್ಲಿ ಹೀಗೊಂದು ಅ-ತಿಥಿ!'-ಉದಯವಾಣಿ

  'ತಿಥಿಯ ನೆರಳಲ್ಲಿ ಹೀಗೊಂದು ಅ-ತಿಥಿ!'-ಉದಯವಾಣಿ

  ''ಹೆಸರಿಗೆ ತಕ್ಕಂತೆ "ತರ್ಲೆ ವಿಲೇಜ್' ಒಂದು ಹಳ್ಳಿಯಲ್ಲಿ ನಡೆಯುವ ಕಥೆ. ಅಲ್ಲಿ ನಡೆಯುವ ಒಂದಷ್ಟು ಬಿಡಿ ಬಿಡಿ ಸನ್ನಿವೇಶಗಳನ್ನು ಸೇರಿಸಿ ಒಂದು ಸಿನಿಮಾ ಮಾಡುವ ಕೆಲಸ ಇಲ್ಲಿ ನಡೆದಿದೆ. ಆ ಕೆಲಸದಲ್ಲಿ ನಿರ್ದೇಶಕರು ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆಯೇ ಎಂದರೆ ಉತ್ತರ ಕಷ್ಟ. ಆದರೆ, "ತರ್ಲೆ ವಿಲೇಜ್' ಒಂದಷ್ಟು ಮನರಂಜನೆ ಕೊಡುವಲ್ಲಿ ಯಶಸ್ವಿಯಾಗಿದೆಯಷ್ಟೇ. ಅದರಲ್ಲೂ ಪಡ್ಡೆಗಳಿಗೆ ಸ್ವಲ್ಪ ಹೆಚ್ಚೇ ಈ ಸಿನಿಮಾ ಇಷ್ಟವಾಗಬಹುದು. ಹಾಗಂತ ಅವರ ಪಾತ್ರ ತೀರಾ ವಿಶೇಷತೆಯಿಂದೇನೂ ಕೂಡಿಲ್ಲ. ಗಡ್ಡಪ್ಪ ಹಾಗೂ ಸೆಂಚುರಿ ಗೌಡ ಇವಬ್ಬರ ಪಾತ್ರಗಳು ಕೂಡಾ "ತಿಥಿ' ಸಿನಿಮಾವನ್ನು ನೆನಪಿಸುತ್ತವೆ. ಅದು ಬಿಟ್ಟರೆ "ತಿಥಿ'ಯ ಅಭಿ ಇಲ್ಲಿ "ಕಿರಣ್' ಆಗಿ ಅದೇ ತುಂಟತನ ಮೆರೆದಿದ್ದಾರೆ. ತಮ್ಮೇಗೌಡರು ದಲ್ಲಾಳಿಯಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ''

  Tarle Village’ is fun, but not in ‘Thithi’ League - Bangalore Mirror

  Tarle Village’ is fun, but not in ‘Thithi’ League - Bangalore Mirror

  There isn't much of a story in Tarle Village. There are a series of skits tied loosely on several tracks. Thammegowda plays a middleman who can make a profit out of anything. He has an extramarital affair to handle. Abhishek and his friend - the village romeos - are busy romancing college girls. KM Raghu's film is more a string of rural anecdotes of the slapstick kind. It has a kind of story that you would find in a ‘social drama' that amateur village actors perform in village fairs or during rural festivals. The amateur and rustic acting capabilities of most of the actors make Tarle Village completely believable. Even the making forgoes finesse which adds to the charm. City-bred audiences may not get all the jokes and may not even understand some of the Kannada words spoken. Tarle Village lives up to its name and is a mischievous fun-filled film.

  English summary
  Kannada Movie 'Tarle Village' has has received Average response from the critics. Here is the collection of 'Tarle Village' reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X