For Quick Alerts
  ALLOW NOTIFICATIONS  
  For Daily Alerts

  'ತಿಥಿ'ಯಲ್ಲಿ ಪಾಲ್ಗೊಂಡ ವಿಮರ್ಶಕರು ಹೇಳಿದ್ದೇನು?

  By Suneetha
  |

  ಸೆಂಚುರಿ ಗೌಡನ ಸಾವಿನ ಬಗ್ಗೆ ಆತನ ಮಕ್ಕಳು ಹಾಗೂ ಊರಿನವರು ನೀಡುವ ಪ್ರತಿಕ್ರಿಯೆ ಹಾಗೂ ಆಸ್ತಿ ಮಾರಾಟಕ್ಕೆ ಸೆಂಚುರಿ ಗೌಡನ ಮಗನಿಂದ ಹಿಡಿದು ಮರಿ ಮೊಮ್ಮಗನವರೆಗೆ ಯಾವ ರೀತಿ ಸರ್ಕಸ್‌ ನಡೆಯುತ್ತೆ ಅನ್ನೋದು 'ತಿಥಿ' ಚಿತ್ರದಲ್ಲಿ ರಸವತ್ತಾಗಿ ಮೂಡಿಬಂದಿದೆ.

  ಪಕ್ಕಾ ಕಾಮಿಡಿ ಭರಿತವಾಗಿರುವ 'ತಿಥಿ' ಸಿನಿಮಾದಲ್ಲಿ ಮಂಡ್ಯ ಭಾಗದ ಒಂದು ಚಿಕ್ಕ ಹಳ್ಳಿ ಹೈಲೈಟ್ ಆಗಿದೆ. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಮೂಡಿಬಂದಿರುವ ಹಲವಾರು ಸಮಕಾಲೀನ ಚಿತ್ರಗಳಿಗೆ ತದ್ವಿರುದ್ದವಾದಂತೆ 'ತಿಥಿ' ಸಿನಿಮಾ ಮೂಡಿಬಂದಿದ್ದು, ಪ್ರೇಕ್ಷಕರ ಮನಸ್ಸಿಗೆ ಮುದ ನೀಡುತ್ತದೆ. [ವಿಶ್ವದಾದ್ಯಂತ ಹವಾ ಎಬ್ಬಿಸಿರುವ 'ತಿಥಿ'ಯ ಚಿತ್ರವಿಮರ್ಶೆ]

  ಹಲವಾರು ಚಲನಚಿತ್ರೊತ್ಸವಗಳಲ್ಲಿ ಪ್ರಶಸ್ತಿ ಬಾಚಿಕೊಂಡಿರುವ 'ತಿಥಿ' ಚಿತ್ರಕ್ಕೆ ನಿರ್ದೇಶಕ ರಾಮ್ ರೆಡ್ಡಿ ಅವರು ಆಕ್ಷನ್-ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಸಿಂಗ್ರಿ ಗೌಡ, ತಮ್ಮೇ ಗೌಡ, ಎಚ್.ಎನ್ ಅಭಿಷೇಕ್ ಮತ್ತು ಎಸ್.ಎಂ ಪೂಜಾ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದ 'ತಿಥಿ' ಬಗ್ಗೆ ಖ್ಯಾತ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.[ರಾಷ್ಟ್ರ ಪ್ರಶಸ್ತಿ ಪುರಸ್ಕೃತ 'ತಿಥಿ' ಸಿನಿಮಾ ಈ ವಾರ ತೆರೆಗೆ]

  'ಲೊಕಾರ್ನೊ' ಚಲನಚಿತ್ರೊತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಬಾಚುವಲ್ಲಿ ಯಶಸ್ವಿಯಾದ 'ತಿಥಿ' ಚಿತ್ರಕ್ಕೆ ವಿಮರ್ಶಕರು ವ್ಯಕ್ತಪಡಿಸಿರುವ ವಿಭಿನ್ನ ವಿಮರ್ಶೆಗಳ ಕಲೆಕ್ಷನ್ಸ್ ನೋಡಿ ಕೆಳಗಿನ ಸ್ಲೈಡುಗಳಲ್ಲಿ... ['ನಾನು ಎಷ್ಟು ಬಾರಿ ಬೇಕಾದರೂ 'ತಿಥಿ' ನೋಡಲು ಸಿದ್ಧ' ಎಂದವರಾರು?]

  'ಅಪರೂಪದ ಅ'ತಿಥಿ' - ಪ್ರಜಾವಾಣಿ

  'ಅಪರೂಪದ ಅ'ತಿಥಿ' - ಪ್ರಜಾವಾಣಿ

  ರಾಮ್‌ ರೆಡ್ಡಿ ನಿರ್ದೇಶನದ ‘ತಿಥಿ' ಮುಖ್ಯವೆನಿಸುವುದು ಎರಡು ಕಾರಣಗಳಿಗಾಗಿ. ಚೊಚ್ಚಲ ಸಿನಿಮಾದಲ್ಲೇ ತನ್ನದೇ ಆದ ಶೈಲಿಯೊಂದನ್ನು ಕಂಡುಕೊಂಡಿರುವ ನಿರ್ದೇಶಕರ ಈ ಚಿತ್ರವನ್ನು ಕನ್ನಡದ ಈವರೆಗಿನ ಯಾವ ಸಿನಿಮಾದೊಂದಿಗೂ ಹೋಲಿಸುವುದು ಕಷ್ಟ ಎನ್ನುವುದು ಅದರ ಮೊದಲ ಅಗ್ಗಳಿಕೆ. ಒಂದು ನೆಲದ ಬದುಕನ್ನು ಅಲ್ಲಿಂದ ಲೀಲಾಜಾಲವಾಗಿ ಎತ್ತಿಕೊಂಡು ನೇರ ತೆರೆಗೆ ತಂದಂತೆ ಕಾಣಿಸುವುದು ಸಿನಿಮಾದ ಮತ್ತೊಂದು ವಿಶೇಷ. ವೃತ್ತಿಪರ ನಟರಲ್ಲದವರನ್ನು ಬಳಸಿಕೊಂಡು ‘ರಿಯಲಿಸ್ಟಿಕ್ ಸಿನಿಮಾ' ಮಾಡುವ ನಿರ್ದೇಶಕರ ಪ್ರಯತ್ನ ಗಮನಸೆಳೆಯುತ್ತದೆ. ನಮ್ಮಲ್ಲಿ ಬಹುತೇಕ ಪ್ರಯೋಗಶೀಲ ಅಥವಾ ಕಲಾತ್ಮಕ ಸಿನಿಮಾಗಳು ಸಮಸ್ಯೆಯೊಂದನ್ನು ಸಿಗಿದುನೋಡುವ ಪ್ರಯತ್ನಗಳಾಗಿರುತ್ತವೆ. ಆದರೆ, ‘ತಿಥಿ'ಯಲ್ಲಿ ಹೀಗೆ ಬಗೆದುನೋಡುವ ಕಸರತ್ತು ಇಲ್ಲದಿರುವುದರಿಂದ, ಇದೊಂದು ಉಲ್ಲಾಸಕರ ಅನುಭವವಾಗಿ ಪ್ರೇಕ್ಷಕನಿಗೆ ಆಪ್ತವೆನ್ನಿಸುತ್ತದೆ. -ರಘುನಾಥ ಚ.ಹ.[ಸೆಂಚುರಿ ಗೌಡರ 'ತಿಥಿ'ಯಲ್ಲಿ ಪವರ್ ಸ್ಟಾರ್ ಪುನೀತ್]

  'ಇದೊಂದು ಮಿಸ್ ಮಾಡಲೇಬಾರದ ಚಿತ್ರ' - ವಿಜಯ ಕರ್ನಾಟಕ

  'ಇದೊಂದು ಮಿಸ್ ಮಾಡಲೇಬಾರದ ಚಿತ್ರ' - ವಿಜಯ ಕರ್ನಾಟಕ

  'ಇಲ್ಲಿಯವರೆಗಿನ ಕನ್ನಡದ ಕಲಾತ್ಮಕ, ರಿಯಲಿಸ್ಟಿಕ್ ಸಿನಿಮಾ ಮಾದರಿಯಲ್ಲಿ 'ತಿಥಿ' ಪ್ರತ್ಯೇಕವಾಗಿ ನಿಲ್ಲುತ್ತದೆ. ಇಂಥದ್ದೊಂದು ವಿಶಿಷ್ಟ ಪ್ರಯತ್ನದೊಂದಿಗೆ ಜಾಗತಿಕ ಸಿನಿಮಾ ವಲಯದಲ್ಲಿ ಸದ್ದು ಮಾಡಿರುವ ನಿರ್ದೇಶಕ ರಾಮ್ ರೆಡ್ಡಿ ಮತ್ತು ಚಿತ್ರಕಥಾ ಲೇಖಕ ಈರೇಗೌಡ ಅಭಿನಂದನಾರ್ಹರು. ಸಿನಿಮಾ ಮಾಧ್ಯಮದ ಇತರೆ ಸಾಧ್ಯತೆಗಳನ್ನು ಇವರು ದಿಟ್ಟತನದಿಂದ ತೆರೆದಿಟ್ಟಿದ್ದಾರೆ. ನೀವು ಈ ಚಿತ್ರವನ್ನು ನೋಡದಿದ್ದರೆ ಒಂದೊಳ್ಳೆಯ ಅನುಭವ ಮಿಸ್ ಮಾಡ್ಕೋತೀರಿ. - ಶಶಿಧರ ಚಿತ್ರದುರ್ಗ.

  'The World as it is' - The Hindu

  'The World as it is' - The Hindu

  You expect a film about a funeral to be sombre. But Reddy takes the theme of death, inheritance and family and throws it up in the air to make you see your world for what it is. Thithi is an evergreen film (as morbid as that sounds) and is a film that will keep you hooked, entertained and will also touch your heart. - Archana Nathan

  'ತಿಥಿ' ಸೆಂಚುರಿ ಹೊಡೆಯಲಿ - ಕನ್ನಡಪ್ರಭ

  'ತಿಥಿ' ಸೆಂಚುರಿ ಹೊಡೆಯಲಿ - ಕನ್ನಡಪ್ರಭ

  ಇನ್ನು ಬಹುತೇಕ ಯಾರೂ ವೃತ್ತಿಯಿಂದ ನಟರಲ್ಲದ, ಊರಿನ ಗ್ರಾಮಸ್ಥರನ್ನೇ ತೊಡಗಿಸಿಕೊಂಡು ಅಷ್ಟು ಪರಿಣಾಮಕಾರಿಯಾದ ನಟನೆ ಮತ್ತು ಡಬ್ಬಿಂಗ್ ಮಾಡಿಸಿರುವ ಕೆಲಸ ಶ್ಲಾಘನೀಯ. ನುರಿತ ನಟರಿಗೆ ಸಾಧ್ಯವಾಗದ ಅನಿರೀಕ್ಷಿತತೆ-ಹಾವ ಭಾವ ಇಲ್ಲಿ ಸಾಧ್ಯವಾಗಿರುವುದು ವಿಶೇಷ. ಹೀಗೆ ನದೇಕೊಪ್ಪಲು ಗ್ರಾಮದ ಗ್ರಾಮಸ್ಥರನ್ನು ಬಳಸಿ ಕಥೆ ಹೆಣೆದಿರುವ ಈರೇಗೌಡ ಮತ್ತು ಅದನ್ನು ದೃಶ್ಯಕಾವ್ಯವಾಗಿ ಕಟ್ಟಿಕೊಟ್ಟಿರುವ ರಾಮ್ ರೆಡ್ಡಿ ಚೊಚ್ಚಲ ಪ್ರಯತ್ನದಲ್ಲೇ ಸಂಪೂರ್ಣ ಯಶಸ್ವಿಯಾಗಿದ್ದು ಒಂದು ಸಾಕ್ಷ್ಯಚಿತ್ರವನ್ನು ನೋಡುವ ಅನುಭವವಾಗಿಯೂ, ಅಪರಿಮಿತ ಮನರಂಜನೆಯಾಗಿಯೂ, ಸಹಜ ಅನುಭವವಾಗಿಯೂ ಮತ್ತು ಅಲ್ಲಲ್ಲಿ ತಾತ್ವಿಕ-ಆಧ್ಯಾತ್ಮದ ಚರ್ಚೆಯಾಗಿಯೂ ವಿವಿಧ ಮಜಲುಗಳಲ್ಲಿ ತೆರೆದುಕೊಳ್ಳುವ ಸಿನೆಮಾ ನೀಡಿದ್ದಾರೆ. - ಗುರುಪ್ರಸಾದ್.

  English summary
  Kannada Movie 'Thithi' critics review. Actor Thammegowda S, Actor Channegowda, Actor Abhishek H N, Actress Pooja S. M starrer award winning movie 'Thithi' has received mixed response from the critics. Here is the collection of reviews by Top News Papers of Karnataka. The movie is directed by Raam Reddy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X