For Quick Alerts
  ALLOW NOTIFICATIONS  
  For Daily Alerts

  ಮರಿ ಟೈಗರ್ ಖದರ್ ವಿಮರ್ಶಕರಿಗೆ ಇಷ್ಟ ಆಯ್ತಾ?

  By Suneetha
  |

  ಪೊಲೀಸ್ ವ್ಯವಸ್ಥೆಯಲ್ಲಿನ ಪಾಸಿಟಿವ್-ನೆಗೆಟಿವ್ ಅಂಶಗಳನ್ನು ಇಟ್ಟುಕೊಂಡು ಮಾಡಿರುವ 'ಟೈಸನ್' ಸಿನಿಮಾ ನಿನ್ನೆ (ಮಾರ್ಚ್ 4) ಕರ್ನಾಟಕದಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಂಡಿದೆ.

  ನಿರ್ದೇಶಕ ರಾಮ್ ನಾರಾಯಣ್ ಆಕ್ಷನ್-ಕಟ್ ಹೇಳಿರುವ, ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ನಟಿ ಗಾಯತ್ರಿ ಅಯ್ಯರ್ ನಟಿಸಿರುವ 'ಟೈಸನ್' ಚಿತ್ರದ ಬಗ್ಗೆ ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

  ದೊಡ್ಡ ಪೊಲೀಸ್ ಅಧಿಕಾರಿ ಆಗಬೇಕೆಂಬ ಕನಸನ್ನು ಹೊತ್ತ ನಾಯಕನಿಗೆ ಸಾಥ್ ನೀಡುವ ತಾಯಿ, ಇದರ ಜೊತೆಗೆ ಮಗನಿಗೆ ನಾಯಕಿಯೊಂದಿಗೆ ಹುಟ್ಟುವ ಪ್ರೇಮ. ಒಟ್ಟಾರೆ ಪ್ರೀತಿ-ಪ್ರೇಮ ಹಾಗೂ ಜೀವನದ ಗುರಿ ಇರುವ ಕಥೆಯಾಧರಿತ 'ಟೈಸನ್' ಚಿತ್ರಕ್ಕೆ ಖ್ಯಾತ ವಿಮರ್ಶಕರು ಎಷ್ಟು ಮಾರ್ಕ್ಸ್ ಕೊಟ್ಟರು ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

   'ಪೊಲೀಸ್ ಪ್ರೇಮ'- ಪ್ರಜಾವಾಣಿ

  'ಪೊಲೀಸ್ ಪ್ರೇಮ'- ಪ್ರಜಾವಾಣಿ

  ಪೊಲೀಸರೆಲ್ಲ ಕೆಟ್ಟವರಲ್ಲ. ಪೊಲೀಸ್ ಇಲಾಖೆ ಇರುವುದೇ ಜನರ ರಕ್ಷಣೆಗಾಗಿ. ತಮ್ಮ ಕುಟುಂಬಕ್ಕಿಂತಲೂ ಜನರ ರಕ್ಷಣೆಯನ್ನೇ ಮುಖ್ಯ ಎಂದು ಅವರು ಭಾವಿಸುತ್ತಾರೆ ಎನ್ನುವುದನ್ನು ಪ್ರತಿಪಾದಿಸುವ ಸಿನಿಮಾ ‘ಟೈಸನ್'.

  'Tiger's son finally finds his roar' - Bangloremirrir.com

  'Tiger's son finally finds his roar' - Bangloremirrir.com

  Vinod plays an aspiring police officer who has to fight the corrupt system. His girlfriend's father turns out to be someone who hates policemen to the core. Thus, it is the perfect platform for the lead pair to love and fight for each other. It also becomes easy to pit the heroine's father against the hero's mother. What else are villains for?. - By Shyam Prasad S.

  'ಉದ್ಯೋಗ ವಂಚಿತ ಟೈಗರ್ ಮಗನೇ!' - ವಿಜಯವಾಣಿ

  'ಉದ್ಯೋಗ ವಂಚಿತ ಟೈಗರ್ ಮಗನೇ!' - ವಿಜಯವಾಣಿ

  ಅಪ್ಪ-ಅಮ್ಮನ ಆಸೆಯಂತೆ ಪೊಲೀಸ್ ಇನ್ಸ್ ಪೆಕ್ಟರ್ ಆಗಬೇಕೆಂಬುದು ನಾಯಕನ ಉದ್ದೇಶ ಮತ್ತು ಗುರಿ. ಅಷ್ಟು ಸುಲಭಕ್ಕೆ ಕೆಲಸ ಸಿಗಬೇಕಲ್ಲ, ಭ್ರಷ್ಟ ಹಾಗೂ ದುಷ್ಟ'ಶಕ್ತಿ'ಗಳಿಂದ ಎಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣನಾದರೂ ಉದ್ಯೋಗ ವಂಚನೆ. ಅಪಹರಣಕ್ಕೊಳಗಾದ ನಾಯಕಿಯನ್ನು ಕಾಪಾಡಿ, ಖಳರ ಕೆಂಗಣ್ಣಿಗೆ ಗುರಿಯಾಗುವ ನಾಯಕ, ಆಕೆಯ ಪ್ರೀತಿಗೆ ಪಾತ್ರನಾಗುತ್ತಾನೆ. ನಾಯಕಿ ಅಪ್ಪನಿಗೆ ಪೊಲೀಸ್ ಕಂಡರಾಗಲ್ಲ, ನಾಯಕನಿಗೆ ಎಸ್.ಐ ಆಗದೆ ಬೇರೆ ಗುರಿಯೇ ಇಲ್ಲ. 'ಮುಂದೇನಾಗುತ್ತೆ' ಎನ್ನುವುದೇ ಕಥೆ ಕೌತುಕ.

  'ಆಕ್ಷನ್ ಚಿತ್ರಕ್ಕೆ ಕಾಮಿಡಿ ಸ್ಪರ್ಶ' - ಉದಯವಾಣಿ

  'ಆಕ್ಷನ್ ಚಿತ್ರಕ್ಕೆ ಕಾಮಿಡಿ ಸ್ಪರ್ಶ' - ಉದಯವಾಣಿ

  ಸಿನಿಮಾ ಮುಗಿಯಲು ಹತ್ತು ನಿಮಿಷ ಬಾಕಿ ಇರುತ್ತದೆ. ನಾಯಕ ಮಾತ್ರ ಒಂದಷ್ಟು ಹಾಸ್ಯ ನಟರೊಂದಿಗೆ ಸೇರಿಕೊಂಡು 'ಟಾಸ್ಕ್' ಕೊಡುತ್ತಾ ಪ್ರೇಕ್ಷಕರನ್ನು ನಗಿಸಲು ಪ್ರಯತ್ನಿಸುತ್ತಿರುತ್ತಾನೆ. ಆ ಟಾಸ್ಕ್ ಚಿತ್ರದ ಕ್ಲೈಮ್ಯಾಕ್ಸ್ ಗೆ ಪೂರಕವಾದುದೇನೋ ನಿಜ. ಆದರೆ, ಸಿನಿಮಾ ಸೀರಿಯಸ್ ಆಗುವ ಹೊತ್ತಲ್ಲಿ ಕಾಮಿಡಿ ಮಾಡುವ ಪ್ರಯತ್ನ ಅಲ್ಲಿ ನಡೆಯುತ್ತಿರುತ್ತದೆ. ಹಾಗೆ ನೋಡಿದರೆ 'ಟೈಸನ್' ಚಿತ್ರ ಆರಂಭದಿಂದಲೂ ತುಂಬಾ ಕಾಮಿಡಿಯಾಗಿಯೇ ಸಾಗಿ ಬಂದಿದೆ. ಇಲ್ಲಿ ನಾಯಕ-ನಾಯಕಿ ಅಥವಾ ಇತರ ಸೀರಿಯಸ್ ದೃಶ್ಯಗಳಿಗಿಂತ ಚಿಕ್ಕಣ್ಣ ಹಾಗೂ ವಿನೋದ್ ಪ್ರಭಾಕರ್ ನಡುವಿನ ಕಾಮಿಡಿ ದೃಶ್ಯಗಳೇ ಬಹುತೇಕ ರಾರಾಜಿಸಿವೆ. ಹಾಗಂತ ಇದು ಸಿನಿಮಾದ ಕಥೆಗೆ ಅಷ್ಟೊಂದು ಪೂರಕವಾಗಿದೆಯೇ ಎಂದರೆ ಅದಕ್ಕೆ ಉತ್ತರಿಸೋದು ಕಷ್ಟ. - ರವಿಪ್ರಕಾಶ್ ರೈ.

  English summary
  Kannada Movie 'Tyson' Critics Review. Kannada Actor Vinod Prabhakar, Actress Gayathri Iyer starrer 'Tyson' has received mixed response from the critics. Here is the collection of reviews by Top News Papers of Karnataka. The movie is directed by K Ram Narayan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X