For Quick Alerts
  ALLOW NOTIFICATIONS  
  For Daily Alerts

  ಪವನ್ ರ 'ಯು-ಟರ್ನ್' ಚಿತ್ರವನ್ನು ವಿಮರ್ಶಕರು ಮೆಚ್ಚಿಕೊಂಡ್ರಾ?

  By Suneetha
  |

  ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಸಂದೇಶ ಸಾರುವಂತಹ 'ಯು-ಟರ್ನ್' ಎಂಬ ಸಿನಿಮಾವನ್ನು ತೆರೆಯ ಮೇಲೆ ತಂದಿರುವ 'ಲೂಸಿಯಾ' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಅವರು ಪ್ರೇಕ್ಷಕರಿಗೆ ಸಖತ್ ಸಸ್ಪೆನ್ಸ್-ಥ್ರಿಲ್ಲರ್ ಮನರಂಜನೆಯನ್ನು ನೀಡಿದ್ದಾರೆ.

  ಒಟ್ನಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಬೇಡಿ, ಒಂದು ವೇಳೆ ಮಾಡಿದಲ್ಲಿ ಅದು ಮತ್ತೊಬ್ಬರ ಜೀವಕ್ಕೆ ಅಪಾಯವಾಗಬಹುದು ಅನ್ನೋ ಸಂದೇಶ ಇಟ್ಟುಕೊಂಡು ಮಾಡಿರುವ ಸಿನಿಮಾ ಸಂಪೂರ್ಣ ಕ್ಲಿಕ್ ಆಗಿದೆ.[ಯು ಟರ್ನ್: ಸಂದೇಶ ಸಾರುವ ತಿರುವಿನಲ್ಲಿ ಥ್ರಿಲ್ಲಿಂಗ್ ಪ್ರಯಾಣ]

  ನಾಯಕಿ ಆಧಾರಿತ ಸಿನಿಮಾ ಮಾಡಿರುವ ನಿರ್ದೇಶಕ ಪವನ್ ಕುಮಾರ್ ಅವರು 'ಯು-ಟರ್ನ್' ಎಂಬ ಪೈಸಾ ವಸೂಲ್ ಸಿನಿಮಾ ನೀಡಿದ್ದು, ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಸಿನಿಮಾ ಯಶಸ್ವಿಯಾಗಿದೆ.

  ನವ ಪ್ರತಿಭೆ ಶ್ರದ್ಧಾ ಶ್ರೀನಾಥ್, ನಟಿ ರಾಧಿಕಾ ಚೇತನ್, ನಟ ದಿಲೀಪ್ ರಾಜ್ ಮತ್ತು ರೋಜರ್ ನಾರಾಯಣ್ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದ 'ಯು-ಟರ್ನ್' ಸಿನಿಮಾದ ಬಗ್ಗೆ ಖ್ಯಾತ ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.['ಯು-ಟರ್ನ್' ನೋಡಿ ಥ್ರಿಲ್ಲಾದ ಪ್ರೇಕ್ಷಕರ ಟ್ವಿಟ್ಟರ್ ವಿಮರ್ಶೆ]

  ಚಿತ್ರದ ಬಗ್ಗೆ ಖ್ಯಾತ ವಿಮರ್ಶಕರು ನೀಡಿರುವ ವಿಭಿನ್ನ ಅಭಿಪ್ರಾಯಗಳ ಕಲೆಕ್ಷನ್ಸ್ ನಾವು ನಿಮಗೆ ನೀಡುತ್ತೇವೆ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

  'ಒಂದರೊಳಗೊಂದು...ಬಿಗಿ ಗೋಂದು'- ಪ್ರಜಾವಾಣಿ

  'ಒಂದರೊಳಗೊಂದು...ಬಿಗಿ ಗೋಂದು'- ಪ್ರಜಾವಾಣಿ

  ಸಿನಿಮಾದ ಆರಂಭದ ದೃಶ್ಯವೇ ತಲೆಕೆಳಗಾಗಿ ಕಾಣಿಸತೊಡಗಿದಾಗ ಪ್ರೇಕ್ಷಕರಲ್ಲಿ ಗೊಂದಲ, ಕುತೂಹಲ ಶುರುವಾಗುತ್ತದೆ. ತಿರುವಿನ ಬಳಿಕ ಸಹಜ ಸ್ಥಿತಿಗೆ ಬರುವ ಕ್ಯಾಮೆರಾದಲ್ಲಿ ಚಿತ್ರಿತವಾಗುವ ದೃಶ್ಯಗಳೂ, ಕೇಳಿಸುವ ಸಂಭಾಷಣೆಗಳೂ ಚಿತ್ರದ ಮುಖ್ಯ ಕಥೆಗೆ ಏನೇನೂ ಸಂಬಂಧವಿಲ್ಲ ಎನಿಸುವಂತೆ ಮಾಡುತ್ತವೆ. ಆದರೆ ನಿರ್ದೇಶಕರ ಕುಶಲತೆ ಗೊತ್ತಾಗುವುದು ಚಿತ್ರದ ಅಂತ್ಯ ಸಮೀಪಿಸಿದಾಗಲಷ್ಟೇ. ಸಂಚಾರ ನಿಯಮಗಳನ್ನು ಬೆಳ್ಳಿತೆರೆಯತ್ತ ಎಳೆದುತರುವ ಪ್ರಯತ್ನ ಮಾಡಿರುವ ಪವನ್ ಕುಮಾರ್, ತೆಳುವಾದ ಕಥೆಯನ್ನು ಸಿನಿಮಾಕ್ಕೆ ಒಗ್ಗಿಸಿರುವ ಪರಿ ಕುತೂಹಲಕರ. ಬೆಂಗಳೂರಿನಲ್ಲಿ ನಡೆಯುವ ಕಥೆಯಾದರೂ, ಇನ್ನಾವುದೇ ಮಹಾನಗರದಲ್ಲಿಯೂ ಕಾಣಬಹುದಾದ ಚಿತ್ರಣ ‘ಯು ಟರ್ನ್'ನಲ್ಲಿದೆ. - ಆನಂದ ತೀರ್ಥ ಪ್ಯಾಟಿ.

  ಒಂದೇ ತಿರುವು ಹಲವು ಸಾವು- ವಿಜಯವಾಣಿ

  ಒಂದೇ ತಿರುವು ಹಲವು ಸಾವು- ವಿಜಯವಾಣಿ

  ಯಾರೋ ಸಂಚಾರ ನಿಯಮ ಮುರಿದರೆ, ಅದಕ್ಕೆ ಮತ್ತಿನ್ನಾರೋ ಬಲಿಪಶುವಾಗುತ್ತಾರೆ ಎಂಬ ಒನ್​ಲೈನ್ ಸಂದೇಶ ಹೇಳಲು ಎರಡು ಗಂಟೆ ಕಾಯಿಸುತ್ತಾರೆ ನಿರ್ದೇಶಕರು. ತಾಳ್ಮೆ ಇದ್ದವರಿಗೆ ರುಚಿಸುತ್ತದೆ. ಇಲ್ಲದಿದ್ದರೆ ಗಂಟೆಗಟ್ಟಲೆ ಸಿಗ್ನಲ್​ನಲ್ಲಿ ಕಾದ ಅನುಭವ ಗ್ಯಾರಂಟಿ. ಕೊಲೆ ಕೌತುಕದ ಟ್ರಾಫಿಕ್​ನಲ್ಲಿ ‘ಯು ಟರ್ನ್' ತೆಗೆದುಕೊಂಡು ಹಾರರ್ ರಸ್ತೆಗೆ ಇಳಿಯುತ್ತದೆ ಕಥೆ. ಹಾಗಂತ ಇಲ್ಲಿ ಯಾವ ಆತ್ಮವೂ ಹೆದರಿಸುವುದಿಲ್ಲ. ಚಿತ್ರಕ್ಕೊಂದು ಟ್ವಿಸ್ಟ್ ಕೊಡಲಷ್ಟೇ ಅವು ಸೀಮಿತ. ತಾಂತ್ರಿಕ ಅಂಶಗಳಿಂದ ಗಮನ ಸೆಳೆದರೂ ಮನರಂಜನೆ ದೃಷ್ಟಿಯಲ್ಲಿ ಇನ್ನೂ ಏನೋ ಬೇಕಿತ್ತು ಎಂಬ ಭಾವ ಮೂಡಿಸುವ ‘ಯು ಟರ್ನ್'.

  ತಿರುವುಗಳಿವೆ ಎಚ್ಚರಿಕೆ - ಉದಯವಾಣಿ

  ತಿರುವುಗಳಿವೆ ಎಚ್ಚರಿಕೆ - ಉದಯವಾಣಿ

  ಒಂದು ಕ್ಷಣವೂ ಪುರುಸೊತ್ತಿಲ್ಲದಂತೆ ಕತೆ ಹೇಳುತ್ತಲೇ ಹೋಗುತ್ತಾರೆ ಪವನ್. ಆರಂಭದಲ್ಲೇ ಬರುವ ತಾಯಿ-ಮಗಳ ಸುದೀರ್ಘ ದೃಶ್ಯ ಮುಗಿಯುತ್ತಿದ್ದಂತೆ ಪಾತ್ರಗಳು ಕಥಾಸಾಗರದೊಳಗೆ ಜಿಗಿಯುತ್ತವೆ. ಅಲ್ಲಿಂದಾಚೆಗೆ ಎಲ್ಲವನ್ನೂ ಘಟನೆಗಳೇ ನಿಯಂತ್ರಿಸುತ್ತಾ ಹೋಗುತ್ತದೆ. ಹೇಳಬೇಕಾದ್ದನ್ನು ಅಚ್ಚುಕಟ್ಟಾಗಿ ಹೇಳುವ ಕಲೆ ಪವನ್ ಗೆ ಸಿದ್ದಿಸಿದೆ. ಯಾವ ಸನ್ನಿವೇಶಕ್ಕೂ ಅವರು ತಾಂತ್ರಿಕವಾಗಿ ಮತ್ತು ಗುಣಮಟ್ಟದಲ್ಲಿ ಮೋಸ ಮಾಡಿಲ್ಲ. ಪೊಲೀಸ್ ಸ್ಟೇಷನ್ನು, ಟ್ರಾಫಿಕ್ ಕಂಟ್ರೋಲ್ ರೂಮು, ನಾಯಕಿಯ ಮನೆ, ಅವಳ ಕಛೇರಿ, ಫ್ಲೈಓವರ್, ರಸ್ತೆ ಹೀಗೆ ಕತೆ ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಓಡುತ್ತಲೇ ಇರುತ್ತದೆ. -ಜೋಗಿ.

  'ಕೊಲೆಯ ಕಣ್ಣೀರನ್ನು ಕಲೆಗೆ ಚೆಲ್ಲಿ'- ಕನ್ನಡಪ್ರಭ

  'ಕೊಲೆಯ ಕಣ್ಣೀರನ್ನು ಕಲೆಗೆ ಚೆಲ್ಲಿ'- ಕನ್ನಡಪ್ರಭ

  ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಂಡು ಮೇಲ್ಸೇತುವೆಯಲ್ಲಿ ಪ್ರಯಾಣ ಮಾಡುವುದು ಅಷ್ಟು ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಆದರೆ, ಅಂಥ ರಸ್ತೆ ಮೇಲಿನ ಪ್ರಯಾಣವಂತೂ ಅತ್ಯಂತ ರೋಚಕವಾಗಿರುತ್ತದೆ ಎಂಬುದಕ್ಕೆ ಒಮ್ಮೆಯಾದರೂ 'ಯು-ಟರ್ನ್' ಚಿತ್ರವನ್ನು ನೋಡಬೇಕಿದೆ. 'ಲೈಫು ಇಷ್ಟೇನೆ' ಚಿತ್ರದ ನಂತರ ಪವನ್ ಕುಮಾರ್ ಸಿನಿಮಾ ಎಂದರೆ ಪ್ರಯೋಗದ ಬಿಂದುಗಳು ಎನ್ನುವಂತಾಗಿದೆ. ಆದರೆ, ಪ್ರಯೋಗದಲ್ಲೂ ಒಂದು ಪ್ರಾಮಾಣಿಕತೆ ಇರಬೇಕು. ಪ್ರಾಮಾಣಿಕತೆಯಲ್ಲೂ ಒಂದು ಅದ್ಭುತವಾದ ಪ್ರಯತ್ನವೊಂದು ಅಷ್ಟೇ ಸರಳವಾಗಿ ನೋಡಿಸಿಕೊಳ್ಳುವ ಗುಣವೂ ಹೊಂದಿರಬೇಕು ಎನ್ನುವ ಮಾತಿಗೆ 'ಯು-ಟರ್ನ್' ಸೂಕ್ತ ಉದಾಹರಣೆ.- ಆರ್ ಕೇಶವಮೂರ್ತಿ.

  'Almost there but a wrong turn' - The Hindu

  'Almost there but a wrong turn' - The Hindu

  The heart sinks when the climax is revealed in Pawan Kumar's U Turn. ‘Is that it?' echoes in the cinema hall because until then Kumar had constructed a pretty thrilling plot, one that was devoid of loopholes and pretence. However, during the last 30 minutes, it is almost as if Kumar did not know what to do with the puzzle that he had so interestingly devised. And so, he ends up taking refuge in the much abused and clichéd trope of the horror/thriller genre. - Archana Nathan

  English summary
  Kannada movie 'U Turn' Critics Review. Actress Shraddha Srinath, Kannada Actress Radhika Chetan, Actor Dilip Raj, Actor Roger Narayan starrer 'U Turn' has received mixed response from the critics. Here is the collection of reviews by Top News Papers of Karnataka. The movie is directed by 'Lucia' fame director Pawan Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X