»   » ವಿಮರ್ಶಕರ ಮನಸ್ಸನ್ನು ಉಸಿರುಗಟ್ಟಿಸಿದ ಉರ್ವಿಯ 'ಕ್ರಾಂತಿ'

ವಿಮರ್ಶಕರ ಮನಸ್ಸನ್ನು ಉಸಿರುಗಟ್ಟಿಸಿದ ಉರ್ವಿಯ 'ಕ್ರಾಂತಿ'

Posted By:
Subscribe to Filmibeat Kannada

ಶಕ್ತಿ, ಯುಕ್ತಿ, ಭಕ್ತಿ ಎಂಬ ದೈವ ಅಂಶಗಳ ಪ್ರತಿರೂಪವಾಗಿ ಮೂರು ಹೆಣ್ಣು ಮಕ್ಕಳ ಅಭಿನಯಿಸಿರುವ ಚಿತ್ರವೇ 'ಉರ್ವಿ'. ವೇಶ್ಯಾವಾಟಿಕೆಯ ವಿರುದ್ಧ ಕ್ರಾಂತಿ ಎಬ್ಬಿಸುವ ಮಹಿಳಾಮಣಿಗಳ ಕೆಚ್ಚೆದೆಯ ಕಥೆ.

ಚೊಚ್ಚಲ ಚಿತ್ರದಲ್ಲಿಯೇ ನಿರ್ದೇಶಕರು ಕಮಾಲ್ ಮಾಡಿದ್ರೆ, ಅತ್ಯುತ್ತಮ ನಟನೆ ಮೂಲಕ ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್ ಮತ್ತು ಶ್ವೇತಾ ಪಂಡಿತ್ ಗಮನ ಸೆಳೆದಿದ್ದಾರೆ.[ವಿಮರ್ಶೆ: ಮನಸ್ಸು, ಮಂಚ, ಮೋಸ ಮತ್ತು ಮಂಥನ ಮಿಶ್ರಿತ ಕಲಾಕೃತಿಯೇ 'ಉರ್ವಿ']

ನಿನ್ನೆ (ಮಾರ್ಚ್ 17) ರಾಜ್ಯಾದ್ಯಂತ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಉರ್ವಿ' ಚಿತ್ರಕ್ಕೆ ಪ್ರೇಕ್ಷಕರು ಶಬ್ಬಾಸ್ ಎಂದಿದ್ದಾರೆ. ಹಾಗಾದ್ರೆ, ವಿಮರ್ಶಕರು ಏನಂದ್ರು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಉರ್ವಿ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿ...

ಮನಸ್ಸನ್ನು ಉಸಿರುಗಟ್ಟಿಸುವ 'ಉರ್ವಿ'-ವಿಜಯ ಕರ್ನಾಟಕ

''ಈ ಸಿನಿಮಾದಲ್ಲಿ ಮಹಿಳಾ ಶೋಷಣೆಯ ನಾನಾ ಮುಖಗಳನ್ನ ಬಿಚ್ಚಿಟ್ಟರೂ, ಪ್ರಧಾನ ಕಥಾವಸ್ತು ವೇಶ್ಯಾವಾಟಿಕೆಯ ಜಾಲ. ಕೆಲ ಕಾರಣಗಳಿಂದಾಗಿ ಸಿನಿಮಾ ನೋಡಗನ ಮನಸಿನಾಳಕ್ಕೆ ಇಳಿಯುತ್ತದೆ. ಚಿತ್ರಕಥೆ, ಸಿನಿಮಾಟೋಗ್ರಫಿ, ಹಿನ್ನಲೆ ಸಂಗೀತ ಉರ್ವಿಯ ಜೀವಾಳ. ಮೊದಲರ್ಧ ನೋವಿನ ಕಾವ್ಯದಂತೆ ಹಿಂಡಿದರೆ, ಕ್ಲೈಮ್ಯಾಕ್ಸ್ ಬರುತ್ತಿದ್ದಂತೆಯೇ ಕ್ರಾಂತಿಗೀತೆ ಆಗಿಬಿಡುತ್ತೆ. ಇಡೀ ಸಿನಿಮಾವನ್ನ ಶ್ರುತಿ ಹರಿಹರನ್ ಆವರಿಸಿಕೊಂಡಿದ್ದಾರೆ. ಶ್ವೇತಾ ಪಂಡಿತ್ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ ಗಟ್ಟಿಯಾದ ಜುಗಲ್ ಬಂದಿ ಇಲ್ಲಿದೆ. ಉರ್ವಿ ಒಂದು ಪರಿಪೂರ್ಣ ಚಿತ್ರ. ಲವ್, ಆಕ್ಷನ್, ಸೆಂಟಿಮೆಂಟ್, ಸಸ್ಪೆನ್ಸ್, ಎಲ್ಲ ಅಂಶಗಳು ಚಿತ್ರದಲ್ಲಿದೆ''.

''ಓ ಗಂಡಸರೇ ನೀವೆಷ್ಟು ಒಳ್ಳೆಯವರು?''-ಉದಯವಾಣಿ

'ಉರ್ವಿ' ಚಿತ್ರದ ಶಕ್ತಿ ಇರುವುದು ಆ ಕಲ್ಪನೆಯಲ್ಲಿ ಮತ್ತು ಅದು ಬರುವುದು ಚಿತ್ರದ ಕೊನೆಯಲ್ಲಿ. ಆದರೆ, ಅದಕ್ಕೂ ಮುನ್ನ ಮೂವರು ಅಸಹಾಯಕ ಹೆಣ್ಮಕ್ಕಳು ವೇಶ್ಯಾವಾಟಿಕೆಗೆ ಬರುವ ಕಥೆ ಹೇಳುತ್ತದೆ. ಮೊದಲಾರ್ಧ, ಅಲ್ಲೊಂಚೂರು, ಇಲ್ಲೊಂಚೂರು ಎಂದು ಕಥೆ ಹರಿದು ಹೋಗುತ್ತದೆ. ಇಂಟರ್ ವೆಲ್ ನಂತರ ಚಿತ್ರದ ಕಥೆಗೆ ಒಂದು ರೂಪ ಬರುತ್ತದೆ. ಉರ್ವಿ'ಯ ಪ್ಲಸ್‌ ಪಾಯಿಂಟು ಎಂದರೆ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ. ಶ್ವೇತಾ, ಶ್ರುತಿ ಹರಿಹರನ್‌, ಭವಾನಿ ಪ್ರಕಾಶ್‌ ಮತ್ತು ಅಚ್ಯುತ್ ಕುಮಾರ್‌ ಮೂವರ ಅಭಿನಯವೂ ಮೆಚ್ಚುಗೆ ಪಡೆಯುತ್ತದೆ. "ಉರ್ವಿ' ಒಂದು ಬೇರೆ ರೀತಿಯ ಪ್ರಯತ್ನ. ಸ್ವಲ್ಪ ಓರೆಕೋರೆಗಳನ್ನು ಮನ್ನಿಸಿ ಬಿಟ್ಟರೆ, ಒಳ್ಳೆಯ ಪ್ರಯತ್ನವೂ ಹೌದು.

'ಅಗಣಿತ ಸಂಕಟಗಳ ಚಿತ್ರಪಟ'-ಪ್ರಜಾವಾಣಿ

''ವೇಶ್ಯಾವಾಟಿಕೆ ಸಿನಿಮಾದ ಕೇಂದ್ರಬಿಂದು. ಶ್ರುತಿ ಹರಿಹರನ್‌ ಜೊತೆಗೆ - ಶ್ರದ್ಧಾ ಶ್ರೀನಾಥ್‌ ಹಾಗೂ ಶ್ವೇತಾ ಪಂಡಿತ್‌ ಅವರಿಂದಲೂ ನಟನೆಯ ಅನಾವರಣಕ್ಕೆ ಅವರು ಗಮನಹರಿಸಿದ್ದಾರೆ. ಚೊಚ್ಚಲ ಸಿನಿಮಾದಲ್ಲಿಯೇ ಯುವ ನಿರ್ದೇಶಕರೊಬ್ಬರು ಇಂತಹ ಮಹತ್ವಾಕಾಂಕ್ಷಿ ಪ್ರಯತ್ನದಲ್ಲಿ ತೊಡಗಿಕೊಂಡಿರುವುದು ಸ್ವಾಗತಾರ್ಹ. ಆನಂದ್ ಸುಂದರೇಶ್ ಛಾಯಾಗ್ರಹಣ ಮತ್ತು ಮನೋಜ್ ಜಾರ್ಜ್‌ ಸಂಗೀತ ಸಿನಿಮಾದ ಚೆಲುವನ್ನು ಹೆಚ್ಚಿಸಿದೆ''

'ಮೈಮನಗಳ ಸುಳಿಯಲ್ಲಿ ಅವತರಿಸಿದ ಉರ್ವಿ'-ವಿಜಯವಾಣಿ

''ಹೀರೋಯಿಸಂ ಇಲ್ಲದೆಯೂ ಎಲ್ಲಿಯೂ ಬೋರ್ ಹೊಡೆಸದಂತೆ ನೋಡಿಸಿಕೊಂಡು ಹೋಗುವ ಸಿನಿಮಾ ಉರ್ವಿ. ವೇಶ್ಯಾವಾಟಿಕೆ ಜಾಲಕ್ಕೆ ಸಿಕ್ಕ ಯುವತಿಯರೆಲ್ಲ ಕೆಟ್ಟವರಲ್ಲ, ಅಲ್ಲಿರುವವರು ಸಿಡಿದೆದ್ದರೆ ವೇಶ್ಯಾವಾಟಿಕೆಯಂಥ ಮಾಫಿಯಾ ಇಲ್ಲವಾಗುತ್ತದೆ ಎಂಬ ಸಂದೇಶವನ್ನು ಈ ಚಿತ್ರ ನೀಡುತ್ತದೆ ಎಂದರೂ ತಪ್ಪೇನಲ್ಲ. ಪ್ರಣಯಭರಿತ ದೃಶ್ಯಗಳಲ್ಲಿ ಶ್ರದ್ಧಾ ಹಾಗೂ ಶ್ರುತಿ, ಶ್ವೇತಾ ಪ್ರೇಕ್ಷಕರ ಮನಗೆಲ್ಲುತ್ತಾರೆ. ಕ್ರೌರ್ಯ ತೋರುವ ಅಚ್ಯುತಕುಮಾರ್, ಮಾಂಸದಡ್ಡೆಯ ನಿರ್ಭಾವುಕ ಬಾಬಿಯಾಗಿ ಭವಾನಿ ಪ್ರಕಾಶ್ ಇಬ್ಬರ ನಟನೆಯೂ ಬಿಂದಾಸ್''. ಸಂಗೀತ ನಿರ್ದೇಶಕ ಮನೋಜ್ ಜಾರ್ಜ್ ಮತ್ತು ಆನಂದ್ ಸುಂದರೇಶ್ ಗಮನಾರ್ಹ.

ಉರ್ವಿ ವಿಮರ್ಶೆ- ಟೈಮ್ಸ್ ಆಫ್ ಇಂಡಿಯಾ

''BS Pradeep Varma's Urvi has been spoken about right from its launch. Given the fact that it is frontlined by women and touches upon an important social issue - trafficking and flesh trade. The film's biggest strength is its casting. Right from the three leads, Sruthi Hariharan, Shraddha Srinath and Shwetha Pandit, to its two antagonists Bhavani Prasad and Achyuth Kumar, every single one of them delivers what is expected of them. The sets, cinematography, background score and costumes ensure that the film remains an audio visual treat.

English summary
Kannada Actress Sruthi Hariharan, Shradda srinath starrer 'Urvi' Movie has received positive response from the critics. Here is the collection of 'Urvi' reviews by Top News Papers of Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada