»   » ವಿಮರ್ಶೆ: ಮನಸ್ಸು, ಮಂಚ, ಮೋಸ ಮತ್ತು ಮಂಥನ ಮಿಶ್ರಿತ ಕಲಾಕೃತಿಯೇ 'ಉರ್ವಿ'

ವಿಮರ್ಶೆ: ಮನಸ್ಸು, ಮಂಚ, ಮೋಸ ಮತ್ತು ಮಂಥನ ಮಿಶ್ರಿತ ಕಲಾಕೃತಿಯೇ 'ಉರ್ವಿ'

Posted By:
Subscribe to Filmibeat Kannada

''ಹೆಣ್ಣು ಕೇವಲ ಭೋಗದ ವಸ್ತುವಲ್ಲ. ಹೆಣ್ಣು ಎಂದರೇ 'ಶಕ್ತಿ', ಹೆಣ್ಣು ಎಂದರೇ 'ಯುಕ್ತಿ', ಹೆಣ್ಣು ಎಂದರೇ 'ಭಕ್ತಿ'. ಹೆಣ್ಣು ಮನಸ್ಸು ಮಾಡಿದರೇ ಸಾಧನೆಯೂ ಆಗುತ್ತೆ, ಸರ್ವನಾಶವೂ ಆಗುತ್ತೆ. ಹೌದು, 'ಉರ್ವಿ' ಚಿತ್ರಕ್ಕೆ ಇಂತಹ ಹೆಣ್ಣೇ ಶಕ್ತಿ''

Rating:
4.0/5

ಚಿತ್ರ : ಉರ್ವಿ
ಕಥೆ-ನಿರ್ದೇಶನ : ಬಿ.ಎಸ್.ಪ್ರದೀಪ್ ವರ್ಮ
ಸಂಭಾಷಣೆ: ಡಿ.ಸತ್ಯ ಪ್ರಕಾಶ್
ನಿರ್ಮಾಣ : ಬಿ.ಆರ್.ಪಿ ಭಟ್, ಎರಿಯರ್ ಡ್ರೀಮ್ಸ್
ಛಾಯಾಗ್ರಹಣ: ಆನಂದ್ ಸುಂದರೇಶ
ಸಂಗೀತ : ಮನೋಜ್ ಜಾರ್ಜ್
ತಾರಾಗಣ : ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್, ಅಚ್ಯುತ್ ಕುಮಾರ್, ಪ್ರಭು, ಮದುಕರ್ ಮತ್ತು ಇತರರು.
ಬಿಡುಗಡೆ : ಮಾರ್ಚ್ 17, 2017

ವೇಶ್ಯವಾಟಿಕೆಯ ಸುತ್ತ 'ಉರ್ವಿ' ಪಯಣ

'ಉರ್ವಿ' ಚಿತ್ರದ ಪ್ರಧಾನ ಕಥಾವಸ್ತುವೇ ವೇಶ್ಯವಾಟಿಕೆಯ ಜಾಲ. ಈ ವೇಶ್ಯವಾಟಿಕೆ ಜಾಲಕ್ಕೆ ಹೆಣ್ಣು ಮಕ್ಕಳು ಹೇಗೆ ಬಲಿಯಾಗುತ್ತಾರೆ. ಅವರ ಜೀವನ ಈ ವೃತ್ತಿಯಲ್ಲಿ ಹೇಗೆ ಸಿಲುಕಿಕೊಳ್ಳುತ್ತೆ. ಅದರಿಂದ ಅವರು ಎದುರಿಸಬೇಕಾಗುವ ಕಷ್ಟ-ಸಂಕಷ್ಟಗಳೇನು ಎಂಬುದನ್ನ ಮೂರು ಹುಡುಗಿಯರ ಕಥೆಯನ್ನಿಟ್ಟು ನಿರ್ದೇಶಕರು ಕೂತುಹಲವಾಗಿ ಹೇಳಿದ್ದಾರೆ.

ಒಡೆದ ಮನಸ್ಸುಗಳ ವ್ಯಥೆ!

ಡೈಸಿ (ಶ್ವೇತಾ ಪಂಡಿತ್), ಸುಜಿ (ಶ್ರದ್ಧಾ ಶ್ರೀನಾಥ್), ಆಶಾ (ಶ್ರುತಿ ಹರಿಹರನ್) ಎಂಬ ಮೂರು ಯುವತಿಯರು ಚಿತ್ರದ ಪ್ರಮುಖ ನಾಯಕಿಯರು. ಈ ಮೂವರ ಜೀವನದಲ್ಲೂ ದುರಂತ ಕಥೆ. ಈ ಮೂವರು ಭೇಟಿ ಕೂಡ ಒಂದು ದುರಂತವೇ. ಆ ಕಥೆ ಏನೂ ಎಂಬುದನ್ನ ಚಿತ್ರಮಂದಿರದಲ್ಲಿಯೇ ನೋಡಿ.

ಕಥಾ ಹಂದರ....

ಡೈಸಿ ಮತ್ತು ಸುಜಿಯ ಪರಿಚಯವಾಗುವುದೇ ವೇಶ್ಯೆವಾಟಿಕೆ ಮನೆಯಲ್ಲಿ. ಅಂದ್ರೆ ಇವರಿಬ್ಬರು ವೇಶ್ಯೆಯರು. ಆಶಾ ಮೆಡಿಕಲ್ ಓದುತ್ತಿರುವ ಅನಾಥ ಹುಡುಗಿ. ಈಕೆಗೊಂದು ಲವ್ ಸ್ಟೋರಿ. ಇವರಿಬ್ಬರದ್ದು ಶುದ್ದ ಪ್ರೇಮ. ಒಬ್ಬರನ್ನ ಬಿಟ್ಟು ಮತ್ತೊಬ್ಬರ ಇರಲಾಗದಷ್ಟು ಪ್ರೀತಿ. ಹೀಗಿರುವಾಗ ಆಶಾ ಬದುಕಲ್ಲಿ ಒಂದು ಬಿರುಗಾಳಿ. ಏನಾಗುತ್ತಿದೆ ಎಂದು ಯೋಚನೆ ಮಾಡುವಷ್ಟರಲ್ಲಿ ಆಶಾ ಕೂಡ ವೇಶ್ಯವಾಟಿಕೆಯ ಜಾಲಕ್ಕೆ ಸಿಲುಕಿಕೊಳ್ತಾಳೆ. ಒಂದು ಕಡೆ ವೇಶ್ಯೆ ವೃತ್ತಿಯಲ್ಲಿ ತೊಡಗಿಕೊಂಡಿರುವ ಇಬ್ಬರು. ಮತ್ತೊಂದು ಕಡೆ ಯಾರದೋ ಮೋಸಕ್ಕೆ ಬಲಿಯಾಗಿ ವೇಶ್ಯೆ ಜಾಲಕ್ಕೆ ಬಲಿಯಾದ ಮತ್ತೊಬ್ಬರು. ಈ ಮೂವರು ಭೇಟಿ ನಂತರ ಏನಾಗುತ್ತೆ ಎಂಬುದು ಚಿತ್ರಮಂದಿರದಲ್ಲಿ ಕೂತವರನ್ನ ರೋಚಕತೆಯಿಂದ ಕರೆದುಕೊಂಡು ಹೋಗುತ್ತೆ.

ದ್ವೀತಿಯಾರ್ಧದಲ್ಲಿ ಸಖತ್ ಟ್ವಿಸ್ಟ್

ಮೊದಲಾರ್ಧದಲ್ಲಿ ಕುತೂಹಲವಾಗಿ ಸಾಗುತ್ತಿದ್ದ ಸಿನಿಮಾ ದ್ವೀತಿಯಾರ್ಧದಲ್ಲಿ ಮತ್ತಷ್ಟು ರೋಚಕತೆ ಕಡೆ ತಿರುಗುತ್ತೆ. ಪ್ರತಿ ದೃಶ್ಯವೂ ಇಂಟ್ರೆಸ್ಟಿಂಗ್ ಎನಿಸುತ್ತೆ. ಕ್ಲೈಮ್ಯಾಕ್ಸ್ ವರೆಗೂ ಪ್ರೇಕ್ಷಕರನ್ನ ಹಿಡಿದಿಡುವ ಸಿನಿಮಾ ಚಿತ್ರದ ಕೊನೆಯಲ್ಲಿ ನಿರೀಕ್ಷೆ ಮಾಡಲಾಗದ ಟ್ವಿಸ್ಟ್ ಕೊಡುತ್ತೆ.

'ಊರ್ವಿ'ಯಲ್ಲಿದೆ ಕಮರ್ಷಿಯಲ್ ಎಲಿಮೆಂಟ್ಸ್

'ಉರ್ವಿ' ಮಹಿಳಾ ಪ್ರಧಾನ ಸಿನಿಮಾ ನಿಜ. ಆದ್ರೆ, ಪ್ರೇಕ್ಷಕರು ನಿರೀಕ್ಷೆ ಮಾಡುವಂತಹ ಕಮರ್ಷಿಯಲ್ ಎಲಿಮೆಂಟ್ಸ್ ಗಳು ಚಿತ್ರದಲ್ಲಿದೆ. ಲವ್, ರೊಮ್ಯಾನ್ಸ್, ಆಕ್ಷನ್, ಸೆಂಟಿಮೆಂಟ್, ಫೈಟ್, ಎಲ್ಲವೂ ಚಿತ್ರದಲ್ಲಿದೆ. ಆದ್ರೆ, ಅದನ್ನ ಮೀರಿದ ಸಸ್ಪೆನ್ಸ್ ಮತ್ತು ಥ್ರಿಲ್ ಚಿತ್ರದ ಪ್ಲಸ್ ಪಾಯಿಂಟ್.

ತ್ರಿಬಲ್ ನಾಯಕಿಯರ ಫರ್ಫಾಮೆನ್ಸ್!

ಸಂದರ್ಭಕ್ಕೆ ತಕ್ಕಂತೆ ವಿಭಿನ್ನ ಶೇಡ್ ನಲ್ಲಿ ಅಭಿನಯಿಸಿರುವ ಶ್ರುತಿ ಹರಿಹರನ್ ಇಷ್ಟವಾಗುತ್ತಾರೆ. ಶ್ರದ್ಧಾ ಶ್ರೀನಾಥ್ ಅವರ ಮುಗ್ದ ಅಭಿನಯ ಮೆಚ್ಚಲೇಬೇಕು. ಇವರಿಬ್ಬರ ಮಧ್ಯೆ ಮಾಸ್ ಆಗಿರುವ ಕಾಣಿಸಿಕೊಂಡಿರುವ ಶ್ವೇತಾ ಪಂಡಿತ್ ಗಮನ ಸೆಳೆಯುತ್ತಾರೆ. ಒಟ್ನಲ್ಲಿ, ಈ ಮೂವರು ಕೂಡ ತಮ್ಮ ಪಾತ್ರಗಳಿಗೆ ತಕ್ಕಂತೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಕೊನೆಯಲ್ಲಿ ಮೂವರು ಎಲ್ಲರ ಮನಸ್ಸಿನಲ್ಲಿ ಉಳಿದುಕೊಳ್ತಾರೆ.

ಉಳಿದವರು ಅಭಿನಯ ಹೇಗಿದೆ!

ಅಚ್ಯುತ್ ಕುಮಾರ್ ಅವರ ನೈಜ ಅಭಿನಯದ ಇಡೀ ಸಿನಿಮಾದಲ್ಲಿ ಗಮನ ಸೆಳೆಯುತ್ತೆ. ಇನ್ನೂ ಶ್ರುತಿ ಹರಿಹರನ್ ಜೋಡಿಯಾಗಿ ಪ್ರಭು ಮುಂಡ್ಕೂರು ಉತ್ತಮವಾಗಿ ಅಭಿನಯಿಸಿದ್ದಾರೆ. ಶ್ರದ್ಧಾ ಶ್ರೀನಾಥ್ ಜೋಡಿಯಾಗಿ ಮಧುಕರ್ ಉತ್ತಮ ಸಾಥ್ ಕೊಟ್ಟಿದ್ದಾರೆ. ಹಾಗೆಯೇ ಭವಾನಿ ಪ್ರಕಾಶ್ ತಮ್ಮ ಬೋಲ್ಡ್ ಆಕ್ಟಿಂಗ್ ನಿಂದ ಇಷ್ಟವಾಗುತ್ತಾರೆ. ಉಳಿದಂತೆ ಜಾನ್ವಿ ಜ್ಯೋತಿ, ವಾಸುಕಿ ವೈಭವ್ ಸೇರಿದಂತೆ ಹಲವು ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಗಮನ ಸೆಳೆದ ನಿರ್ದೇಶನ

ಪ್ರದೀಪ್ ವರ್ಮ ಅವರ ಚೊಚ್ಚಲ ನಿರ್ದೇಶನದಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಎಲ್ಲೂ ಬೋರ್ ಆಗದ ಹಾಗೆ ಚಿತ್ರಕಥೆ ಮಾಡಿದ್ದಾರೆ. ಪ್ರತಿಯೊಂದು ದೃಶ್ಯದಲ್ಲೂ ನೋಡುಗರನ್ನ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಗೆದ್ದಿದ್ದಾರೆ. ಸಿನಿಮಾಗೆ ಪೂರಕವಾದ ಸಂಗೀತ, ಛಾಯಾಗ್ರಹಣ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ನಿರ್ದೇಶಕ ಪ್ರದೀಪ್ ವರ್ಮ ಅವರ ಮೇಲೆ ಭರವಸೆ ಮೂಡಿರುವುದಂತೂ ನಿಜ.

ಟೆಕ್ನಿಕಲಿ ಸಿನಿಮಾ

'ಉರ್ವಿ' ಸಿನಿಮಾದ ಯಶಸ್ಸಿಗೆ ಎರಡು ದೊಡ್ಡ ಶಕ್ತಿಗಳು ಅಂದ್ರೆ, ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ. ಆನಂದ್ ಸುಂದರೇಶ್ ಅವರು ಕಡಲಾತೀರದ ಜೊತೆ ಕತ್ತಲಮನೆಯಲ್ಲಿ ಅಚ್ಚುಕಟ್ಟಾದ ದೃಶ್ಯಗಳನ್ನ ಸೆರೆಹಿಡಿದಿದ್ದಾರೆ. ಇನ್ನೂ ಸಂದರ್ಭಕ್ಕೆ ತಕ್ಕಂತೆ ಹಾಡುಗಳಿದ್ದು, ಮನೋಜ್ ಜಾರ್ಜ್ ಅವರ ಸಂಗೀತ ಮೋಡಿ ಮಾಡಿದೆ.

ಮಿಸ್ ಮಾಡದೆ ನೋಡಿ!

ಕ್ಲಾಸ್ ಮತ್ತು ಮಾಸ್ ಸಿನಿಮಾಗಳ ಅಬ್ಬರದಲ್ಲಿ ಡಿಸೆಂಟ್ ಆಗಿ ಮೂಡಿಬಂದಿರುವ ಸಿನಿಮಾ 'ಉರ್ವಿ'. ಮನರಂಜನೆಗೆ ಬೇಕಾದ ಅಂಶಗಳ ಜೊತೆ, ಒಂದೊಳ್ಳೆ ಸಾಮಾಜಿಕ ಸಂದೇಶವನ್ನ ನೀಡಿರುವ ಸಿನಿಮಾ. ಅದರಲ್ಲೂ ಹೆಣ್ಣು ಮತ್ತು ಹೆಣ್ಣಿನ ಶಕ್ತಿ ಏನೆಂಬುದನ್ನ ಅದ್ಬುತವಾಗಿ ಕಟ್ಟಿಕೊಟ್ಟಿರುವ ಈ ಚಿತ್ರವನ್ನ ಹೆಣ್ಣು ಮಕ್ಕಳು ಮಿಸ್ ಮಾಡದೆ ನೋಡಿ.

English summary
Kannada Actress Sruthi Hariharan, Shradda srinath starrer 'Urvi' film Released Today (March 17). The Movie Directed By Pradeep Verma. here is the complete review of 'Urvi'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada