»   » ವರದನಾಯಕ ವಿಮರ್ಶೆ:ಆಕ್ಷನ್, ಹಾಸ್ಯಪ್ರಿಯರಿಗೆ ಬಾಡೂಟ

ವರದನಾಯಕ ವಿಮರ್ಶೆ:ಆಕ್ಷನ್, ಹಾಸ್ಯಪ್ರಿಯರಿಗೆ ಬಾಡೂಟ

By: *ಬಾಲರಾಜ್ ತಂತ್ರಿ
Subscribe to Filmibeat Kannada
Rating:
3.5/5
ರಿಮೇಕಾಗಾಲಿ, ಸ್ವಮೇಕಾಗಲಿ, ಚಿತ್ರಕ್ಕೆ ಕೋಟಿ ಕೋಟಿ ಬಂಡವಾಳ ಸುರಿದರೆ ಏನು ಪ್ರಯೋಜನ? ಚಿತ್ರಕಥೆಯ ಮೇಲೆ ಹಿಡಿತವಿಲ್ಲಂದರೆ ಚಿತ್ರ ಬೋರೋ ಬೋರು. ಆದರೆ ಬಿಗಿಯಾದ ನಿರೂಪಣೆ, ಉತ್ತಮ ಚಿತ್ರಕಥೆ, ಮುಂದೇನು ಆಗುತ್ತೆ ಎಂದು ಪ್ರೇಕ್ಷಕನ ಕುತೂಹಲ ಕಾಯ್ದಿರಿಸಿ ಕೊಳ್ಳುವಲ್ಲಿ ನಿರ್ದೇಶಕ ಅಯ್ಯಪ್ಪ ಶರ್ಮ 80% ಗೆದ್ದಿದ್ದಾರೆ.

ಅಭಿನಯ ಚಕ್ರವರ್ತಿ ಸುದೀಪ್ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನಿಮ್ಮ ಊಹೆಯಾಗಿದ್ದರೆ ಅದು ತಪ್ಪು. ಚಿತ್ರದಲ್ಲಿ ಫಸ್ಟ್ ಹೀರೋ ಸುದೀಪ್, ಸೆಕೆಂಡ್ ಹೀರೋ ಚಿರಂಜೀವಿ ಸರ್ಜಾ. ಚಿತ್ರದ ಒಂದೇ ಒಂದು ದೃಶ್ಯದಲ್ಲಿ ಅಂಬರೀಶ್ ಮತ್ತು ಸುಮಲತಾ ಬಂದು ಹೋಗುತ್ತಾರೆ.

ಸರ್ಕಾರಿ ಆಸ್ಪತ್ರೆಯ ಶವಾಗಾರದ ಕತ್ತಲಿನಲ್ಲಿ ಒಂದು ಸಾಹಸ ಸನ್ನಿವೇಶ ನಡೆಯುತ್ತದೆ. ಮೈನವಿರೇಳಿಸುವ ಆ ಒಂದು ಸ್ಟಂಟ್ ದೃಶ್ಯ ಸಾಕು ನೋಡಿ ಪೈಸಾ ವಸೂಲಿಗೆ. ಸುದೀಪ್ ತೆರೆಗೆ ಪರಿಚಯಿಸುವಾಗ ಬರುವ ಗಮನ ಸೆಳೆಯುವ ಟೈಟಲ್ ಕಾರ್ಡ್. ಚಿತ್ರದ ಮೊದಲಾರ್ಧದಲ್ಲಿ 10-15 ನಿಮಿಷ ಕತ್ತರಿ ಪ್ರಯೋಗಿಸಿದ್ದರೆ ಚಿತ್ರ ಇನ್ನೂ ಹರಿತವಾಗಿ ಮೂಡಿ ಬರುತ್ತಿತ್ತು. ಆದರೆ ದ್ವಿತೀಯಾರ್ಧ ವೇಗವಾಗಿ ಸಾಗುತ್ತದೆ.

2007ರಲ್ಲಿ ಬಿಡುಗಡೆಗೊಂಡಿದ್ದ ಗೋಪಿಚಂದ್, ಜಗಪತಿ ಬಾಬು, ಅನೂಕ್ಷ ಪ್ರಮುಖ ಭೂಮಿಕೆಯಲ್ಲಿದ್ದ ತೆಲುಗು ಲಕ್ಷ್ಯಂ ಚಿತ್ರದ ರಿಮೇಕ್ 'ವರದನಾಯಕ' ಚಿತ್ರ. ಚಿತ್ರದಲ್ಲಿ ಸುದೀಪ್, ಚಿರಂಜೀವಿ ಪಾತ್ರವೇನು, ಚಿತ್ರದ ಕಥೆಯೇನು ಮುಂದಿನ ಸ್ಲೈಡಿನಲ್ಲಿ ನೋಡಿ.

ವರದನಾಯಕ ವಿಮರ್ಶೆ

ಸ್ಪೆಷಲ್ ಪೋಲೀಸ್ ಆಫೀಸರ್ ವರದನಾಯಕ (ಸುದೀಪ್), ಆತನ ಹೆಂಡತಿ (ಸಮೀರಾ ರೆಡ್ಡಿ), ಆತನ ತಮ್ಮ ಹರಿ (ಚಿರಂಜೀವಿ ಸರ್ಜಾ) ಇವರದ್ದು ಒಂದು ತುಂಬು ಸಂಸಾರ. ಹರಿಯ ಪ್ರೇಯಸಿ ಶಿರಿಶಾ (ನಿಕೇಶಾ ಪಟೇಲ್) ತಂದೆ ದೊಡ್ಡ ಬ್ಯೂಸಿನೆಸ್ ಮ್ಯಾನ್.ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿರುತ್ತಾರೆ. ನಂತರ ಅದು ಪ್ರೀತಿಗೆ ತಿರುಗುತ್ತದೆ.

ವರದನಾಯಕ ವಿಮರ್ಶೆ

ಚಿತ್ರದಲ್ಲಿ ದುಷ್ಟ ಶಕ್ತಿಗಳನ್ನು ಅಟ್ಟಾಡಿಸಿ ಹಿಟ್ಟಾಡಿಸುವುದೇ ವರದನಾಯಕನ ಕಾಯಕ. ಸಮಾಜ ವಿರೋಧಿ ಚಟುವಟಿಕೆ, ರೌಡಿಸಂನಲ್ಲಿ ಗುಂಪು ಕಟ್ಟಿಕೊಂಡು 'ಗುಂಪುಗಾರಿಕೆ' ಮಾಡುವ ವಿಲನ್ ಸೆಕ್ಷನ್ ಶಂಕರ್ (ರವಿಶಂಕರ್) ಆತನ ಚೇಲಾ (ಶೋಭರಾಜ್) ಮತ್ತು ಪೋಲೀಸ್ ಇಲಾಖೆಯಲ್ಲಿ ಇದ್ದುಕೊಂಡು ವಿಲನಿಗೆ ಸಹಾಯ ಮಾಡುವ ಪೋಲೀಸ್ ಆಫೀಸರ್ (ಶರತ್ ಲೋಹಿತಾಶ್ವ).

ವರದನಾಯಕ ವಿಮರ್ಶೆ

ಗುಡ್ ವಿಲ್ ಬ್ಯಾಂಕಿನಲ್ಲಿ ಜನ ತೊಡಗಿಸಿದ್ದ ಕೋಟ್ಯಾಂತರ ರೂಪಾಯಿ ದುಡ್ಡನ್ನು ಸೆಕ್ಷನ್ ಶಂಕರ್ ಗುಳುಂ ಮಾಡುತ್ತಾನೆ. ಜನರ ದುಡ್ಡನ್ನು ಶಂಕರ್ ಬಳಿ ಕೇಳಲು ಬಂದ ಬ್ಯಾಂಕಿನ ನಿರ್ದೇಶಕ ಸಾವನ್ನಪ್ಪುತ್ತಾನೆ, ಬ್ಯಾಂಕ್ ದಿವಾಳಿಯಾಗುತ್ತದೆ, ಜನ ರೊಚ್ಚಿ ಗೇಳುತ್ತಾರೆ. ಬ್ಯಾಂಕಿನ ವ್ಯವಸ್ಥಾಪಕನಿಗೆ ಈ ಎಲ್ಲಾ ವಿಷಯ ತಿಳಿದಿರುತ್ತದೆ, ಹಣ ಕಳೆದುಕೊಂಡಿರುವ ಜನರಿಂದ ಇವನನ್ನು ತಪ್ಪಿಸಲು ಮತ್ತು ನಿಜ ಬಾಯಿ ಬಿಡಿಸಲು ವರದನಾಯಕ ಆತನನ್ನು ಶವಾಗಾರಕ್ಕೆ ಕರೆದೊಯ್ಯುತ್ತಾನೆ. ಈ ವಿಷಯ ತಿಳಿದ ಶಂಕರ್ ಶವಾಗಾರದಲ್ಲೇ ಜಾಡು ಬಿಟ್ಟಿರುತ್ತಾನೆ. ಅಲ್ಲಿ ಹೀರೋ ಮತ್ತು ವಿಲನ್ ನಡುವೆ ಮಾರಾಮಾರಿ ನಡೆಯುತ್ತದೆ. ಅಲ್ಲಿ ವರದನಾಯಕನಿಗೆ ಏನಾಗುತ್ತದೆ? ಮುಂದೆ ಬರುವ ಸನ್ನಿವೇಶವನ್ನು ಹರಿ ಹೇಗೆ ನಿಭಾಯಿಸಿಕೊಂಡು ಹೋಗುತ್ತಾನೆ ಎನ್ನುವುದನ್ನು ತೆರೆಯ ಮೇಲೆ ನೋಡಿದರೆ ಚೆಂದ ಅಲ್ಲವೇ?. ಚಿತ್ರದ ಮೈನಸ್ ಪಾಯಿಂಟ್ ಏನು.

ವರದನಾಯಕ ವಿಮರ್ಶೆ

ಚಿತ್ರಕ್ಕೆ ಜೀವಾಳವಾಗಿರುವ ಸಂಕಲನ ಇನ್ನೂ ಹರಿತವಾಗಬೇಕಿತ್ತು. ಚಿತ್ರದ ಸಂಗೀತ ಮತ್ತು ಮುಖ್ಯವಾಗಿ ಬೇಕಾಗಿರುವ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಅಷ್ಟೇನೂ ಇಂಪ್ರೆಸ್ ಆಗುವುದಿಲ್ಲ.ಚಿತ್ರದ ಪ್ಲಸ್ ಪಾಯಿಂಟ್ ಏನು..ಮುಂದೆ

ವರದನಾಯಕ ವಿಮರ್ಶೆ

ಚಿತ್ರದ ಪ್ರಮುಖ ಪ್ಲಸ್ ಪಾಯಿಂಟ್ ರವಿ ವರ್ಮಾ ಅವರ ಸಾಹಸ. ಶರಣ್ - ಬುಲೆಟ್ ಪ್ರಕಾಶ್, ರವಿಶಂಕರ್ - ಶೋಭರಾಜ್ ಕಾಮಿಡಿ ದೃಶ್ಯಗಳಿಗೆ ಮನಪೂರ್ವಕವಾಗಿ ನಗಬಹುದು. ಅದ್ದೂರಿ ನಿರ್ಮಾಣ, ಲೊಕೇಶನ್, ಇಂಟರ್ವಲ್ ನಂತರ ವೇಗವಾಗಿ ಸಾಗುವ ಚಿತ್ರಕಥೆ.

ವರದನಾಯಕ ವಿಮರ್ಶೆ

ಅಭಿಮಾನಿಗಳು ನೀಡಿದ ಬಿರುದಿಗೆ ತಕ್ಕಂತೆ ಕಿಚ್ಚ ಸುದೀಪ್ ನಟನೆ. ಚಿರಂಜೀವಿ ಸರ್ಜಾ ಡ್ಯಾನ್ಸಿನಲ್ಲಿ ಫೈಟಿನಲ್ಲಿ ಓಕೆ, ನಟನೆಯಲ್ಲಿ ಇನ್ನೂ ಸ್ವಲ್ಪ ಪಳಗಬೇಕು ಓಕೆ. ಹೆಂಡತಿಯ ಪಾತ್ರದಲ್ಲಿ ನಟಿಸಿದ ಸಮೀರಾ ರೆಡ್ಡಿ ನಟನೆ ಚಿಕ್ಕದಾದರೂ ಚೊಕ್ಕ. ಹಿರೋಯಿನ್ ಪಾತ್ರದಲ್ಲಿ ನಟಿಸಿದ ನಿಕೇಶಾ ನಟನೆಯ ಬಗ್ಗೆ ಸ್ವಲ್ಪ ಜಾಸ್ತಿಯೇ ಕೆಮ್ಮಬಹುದು. ರವಿಶಂಕರ್, ಶೋಭರಾಜ್, ಶರತ್ ಲೋಹಿತಾಶ್ವ ಮುಂತಾದ ಪೋಷಕ ನಟರ ನಟನೆ ವಂಡರ್ಫುಲ್. ಕೊನೆಯದಾಗಿ.. ಚಿತ್ರ ಮೊದಲಾರ್ಧದಲ್ಲಿ ಸ್ವಲ್ಪ ಹೊತ್ತು ಬಿಟ್ಟರೆ ನಂತರ ಎಲ್ಲೂ ಬೋರು ಹೊಡೆಸುವುದಿಲ್ಲ. ಅದ್ದೂರಿ ನಿರ್ಮಾಣದಲ್ಲಿ ಬಂದ ಈ ಚಿತ್ರವನ್ನು ಕುಟುಂಬ ಸಮೇತ ನೋಡಲು ಏನೂ ಅಡ್ಡಿಯಿಲ್ಲ.

ವರದನಾಯಕ ವಿಮರ್ಶೆ

ಬ್ಯಾನರ್: ಶಂಕರ್ ಕ್ರಿಯೇಶನ್ಸ್
ನಿರ್ದೇಶಕ: ಅಯ್ಯಪ್ಪ ಪಿ ಶರ್ಮಾ
ನಿರ್ಮಾಪಕ: ಶಂಕ್ರೇಗೌಡ
ತಾರಾಗಣ: ಸುದೀಪ್, ಚಿರಂಜೀವಿ ಸರ್ಜಾ, ನಿಕೇಶಾ ಪಟೇಲ್, ಸಮೀರಾ ರೆಡ್ಡಿ, ರವಿಶಂಕರ್, ಶೋಭರಾಜ್, ಬುಲೆಟ್ ಪ್ರಕಾಶ್, ಶರಣ್, ಜೈಜಗದೀಶ್, ಮುಖ್ಯಮಂತ್ರಿ ಚಂದ್ರು, ಧರ್ಮಾ, ಚಿತ್ರಾ ಶೆಣೈ, ಸತ್ಯಜಿತ್
ಸಂಗೀತ: ಅರ್ಜುನ್ ಜನ್ಯಾ
ಸಾಹಸ: ರವಿ ವರ್ಮಾ

English summary
Sudeep and Chiranjeevi starrer Varadanayaka is a mass masala film. Read Varadanayaka Review.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada