»   » ಯಮನಿಗೆ ಕಠಾರಿವೀರನ ಕಥೆ ಹೇಳಿದ ಚಿತ್ರಗುಪ್ತ

ಯಮನಿಗೆ ಕಠಾರಿವೀರನ ಕಥೆ ಹೇಳಿದ ಚಿತ್ರಗುಪ್ತ

By: * ವಿನಾಯಕರಾಮ್ ಕಲಗಾರು
Subscribe to Filmibeat Kannada
<ul id="pagination-digg"><li class="next"><a href="/reviews/katari-veera-surasundarangi-bombat-ambarish-065077.html">Next »</a></li></ul>
ಚಿತ್ರಗುಪ್ತ : ಯಮಧೊಂಗಾ...ಯಮಧೊಂಗಾ! ಅಬ್ಬಬ್ಬಾ.. ಏನಿದು ಒತ್ತಡದ ಜನರಾಶಿ? ಚಿತ್ರಮಂದಿರದ ಮುಂದೆ ಇಷ್ಟೊಂದು ನರಮಾನವರು ಜಮಾಯಿಸಿದ್ದನ್ನು ನೋಡಿಯೇ ಇರಲಿಲ್ಲ. ಯಮಲೋಕಕ್ಕೆ ಬಂದು ಸೇರಿಕೊಳ್ಳುವ ಹೊತ್ತಿಗೆ ಕೈ ಕಾಲುಗಳೇ ಬತ್ತಿ ಹೋದವು!

ಯಮಧರ್ಮ: ಏನು ಚಿತ್ರಗುಪ್ತರೇ? ಮಟ ಮಟ ಮಧ್ಯಾಹ್ನವೇ ಸುಸ್ತಾಗಿ ಸೊರಗಿ ಹೋದಂತಿದೆ? ಏನು ಸಮಾಚಾರಾ?

ಚಿತ್ರಗುಪ್ತ:
ಅದೇನು ಅಂತ ಕೇಳುತ್ತೀರಿ ಯಮಧರ್ಮ. ಭೂಲೋಕದ ಬೆಂಗಳೂರಿನ ನರ್ತಕಿ ಚಿತ್ರಮಂದಿರಕ್ಕೆ ಹೊಗಿದ್ದೆ. ನಿಮ್ಮ ಮತ್ತು ನಮ್ಮ ಕುರಿತಾದ ಚಲನಚಿತ್ರವೊಂದು ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಭೋರ್ಗರೆಯುತ್ತಿದೆ!

ಯಮಧರ್ಮ: ಅಹುದೇ? (ಹೌದೇ) ಹೇಗಿದೆ ಆ ಕಠಾರಿವೀರ ಸುರಸುಂದರಾಂಗಿ ಎಂಬ ಸಿನಿಮಾ?

ಚಿತ್ರಗುಪ್ತ: ಅಬ್ಬಬ್ಬಾ.. ಎರಡೂಕಾಲು ತಾಸು ಆ ಮಾತಿನ ಮಾನವ ಉಪೇಂದ್ರ ನನ್ನ ಕಿವಿಗೆ ತುಪ್ಪ ಸುರಿದುಬಿಟ್ಟ. ಸಂಭಾಷಣೆಯದ್ದೇ ಮಳೆಗರೆದುಬಿಟ್ಟ. ಅದು ಬೇರೆ ಮೂರನೇ ಆಯಾಮದ(ತ್ರೀಡಿ) ಚಿತ್ರವಲ್ಲವೇ? ಸಾಕಪ್ಪಾ ಸಾಕು... ನನ್ನ ನಯನಗಳಿಗೆ ಹಬ್ಬವೋ ಹಬ್ಬ!

ಯಮಧರ್ಮ:
ಅದೇನೆಂದು ಕೊಂಚ ಬಿಡಿಸಿಹೇಳಬಾರದೇ ಚಿತ್ರಗುಪ್ತರೇ?

ಚಿತ್ರಗುಪ್ತ: ಯಮಹಾ ಸ್ವಾಮಿ... ಹೇಳುತ್ತೇನೆ ಕೇಳಿ... ಅದೊಂದು ಅದ್ಭುತ. ಕಣ್ಣುಗಳಿಗೆ ಬಣ್ಣಬಣ್ಣದ ಓಕುಳಿ. ಯಾರೋ ಬಂದು ಗುದ್ದಿದಂತಾಗುತ್ತದೆ. ಹಾವು ಬಂದು ಕೆನ್ನೆ ಕಚ್ಚಿದಂತಾಗುತ್ತದೆ. ಮೈಮೇಲೆ ಹೂಗಳ ಮಳೆಯಾಗುತ್ತದೆ. ತಮ್ಮ ಪ್ರತಿರೂಪಿಯಂತಿರುವ ಯಮಧರ್ಮ ಹಾಗೆಯೇ ನಡೆದುಕೊಂಡು ಗಧೆ ಅಲ್ಲಾಡಿಸುತ್ತಾ ಬರುತ್ತಿದ್ದರೆ ಇಡೀ ಚಿತ್ರಮಂದಿರವೇ ಅಲ್ಲಾಡಿದಷ್ಟು ಅಲ್ಲೋಲ ಕಲ್ಲೋಲ.. ಅಲಾಲಾಲಾಲಾ!

ಯಮಧರ್ಮ: ಅಹುದೇ? ನನ್ನ ಪಾತ್ರ ಮಾಡಿರುವ ನನ್ನ ಭಕ್ತ ಅಂಬರೀಷ ಹೇಗೆ ನಟಿಸಿದ್ದಾರೆ?

<ul id="pagination-digg"><li class="next"><a href="/reviews/katari-veera-surasundarangi-bombat-ambarish-065077.html">Next »</a></li></ul>
English summary
Katari Veera Surasundarangi 3D movie review by Vinayakaram Kalagaru. Upendra, Ramya, Ambarish are in lead. Dialogues are the highlight of the film. Full entertainment without much logic. Just enjoy it.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada