Don't Miss!
- News
Kamal Haasan: ಕಾಂಗ್ರೆಸ್ನಿಂದ ಕಣಕ್ಕಿಳಿಯಲಿದ್ದಾರಾ ಕಮಲ್ ಹಾಸನ್? ಅವರ ಮಾತು ಇಲ್ಲಿದೆ
- Sports
U-19 Women's World Cup 2023: ಸೆಮಿಫೈನಲ್ ಪ್ರವೇಶಿಸಿದ ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿ
- Lifestyle
Horoscope Today 26 Jan 2023: ಗುರುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
KGF 2 First Review: 'ಕೆಜಿಎಫ್ 2' ಕನ್ನಡ ಚಿತ್ರರಂಗದ ಕಿರೀಟ, ಮೊದಲ ವಿಮರ್ಶೆ ಇಲ್ಲಿದೆ!
ಕೆಜಿಎಫ್.. ಕೆಜಿಎಫ್.. ಕೆಜಿಎಫ್ ಸದ್ಯ ಎಲ್ಲೆಲ್ಲೂ ಕೆಜಿಎಫ್‌ನದ್ದೇ ಸುದ್ದಿ, ಕೆಜಿಎಫ್‌ನದ್ದೇ ಸದ್ದು. ವಿಶ್ವದಾದ್ಯಂತ ಕೆಜಿಎಫ್ 2 ಅಲೆಯ ಅಬ್ಬರ ಜೋರಾಗಿದೆ. ವಿಶ್ವದ ಮೂಲೆ, ಮೂಲೆಯಲ್ಲೂ ಕೂಡ ಈ ಚಿತ್ರವನ್ನು ನೋಡಲು ಸಿನಿಮಾ ಪ್ರಿಯರು ಕಾಯುತ್ತಿದ್ದಾರೆ.
'ಕೆಜಿಎಫ್ 2' ಚಿತ್ರ ಹೇಗಿದೆ ಎನ್ನುವುದನ್ನು ಅರಿಯಲು ಏಪ್ರಿಲ್ 14ರ ವರೆಗೆ ಕಾಯಬೇಕಾಗಿಲ್ಲ. ಯಾಕೆಂದರೆ ಚಿತ್ರದ ಬಗ್ಗೆ ಮೊದಲ ವಿಮರ್ಶೆ ಈಗಾಗಲೆ ಹೊರ ಬಂದಿದೆ. ವಿದೇಶಿ ಸೆನ್ಸಾರ್ ಬೋರ್ಡ್ ಸದಸ್ಯ ಉಮರ್ ಸಂಧು ಚಿತ್ರದ ಬಗ್ಗೆ ವಿಮರ್ಶೆ ಬರೆದಿದ್ದಾರೆ.
Recommended Video

Writing With Fire Review: ಆಸ್ಕರ್ ರೇಸಿನಲ್ಲಿದ್ದ 'ರೈಟಿಂಗ್ ವಿಥ್ ಫೈರ್' ಚಿತ್ರದ ವಿಮರ್ಶೆ!
ಉಮರ್ ಸಂಧು ಬರೆದ ಎರಡು ಸಾಲಿನ ವಿಮರ್ಶೆ ಒಂದೇ ಸಾಕು ಕೆಜಿಎಫ್ 2 ಚಿತ್ರ ಯಾವ ರೇಂಜಿಗೆ ಇರಲಿದೆ ಎನ್ನುವುದನ್ನು ತಿಳಿಯಲು. ಅಚ್ಚರಿ ಎಂದರೆ ಈತ ಕೆಜಿಎಫ್ 2 ಚಿತ್ರಕ್ಕೆ 5ಕ್ಕೆ 5 ಅಂಕಗಳನ್ನು ಕೊಟ್ಟಿದ್ದಾರೆ. ಹಾಗಿದ್ದರೆ ಅವರು ಬರೆದ ಆ ವಿಮರ್ಶೆಯಲ್ಲಿ ಏನಿದೆ ಎನ್ನುವುದನ್ನು ಮುಂದೆ ಓದಿ.

ಕನ್ನಡ ಚಿತ್ರರಂಗದ ಕಿರಿಟ 'ಕೆಜಿಎಫ್ 2'!
'ಕೆಜಿಎಫ್ 2' ಚಿತ್ರವನ್ನು ನೋಡಿದ ಉಮರ್ ಸಂಧು ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಇದು ಕನ್ನಡ ಚಿತ್ರದ ರಂಗದ ಕಿರೀಟ ಎಂದು ಬರೆದುಕೊಂಡಿದ್ದರೆ. "ಕೆಜಿಎಫ್ 2, ಆರಂಭದಿಂದ ಅಂತ್ಯದ ವರೆಗೂ ಆ್ಯಕ್ಷನ್, ಅಚ್ಚರಿಯ ಸಂಗತಿಗಳು, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳೇ ಇದೆ. ಚಿತ್ರದ ಡೈಲಾಗ್ಸ್ ತುಂಬಾ ನೀಟ್ ಮತ್ತು ಶಾರ್ಪ್ ಆಗಿವೆ. ಸಂಗೀತ ಡೀಸೆಂಟ್ ಆಗಿದೆ, ಆದರೆ ಬಿಜಿಎಂ ಅತಿರೇಕವಾಗಿದೆ." ಎಂದು ಉಮರ್ ಬರೆದುಕೊಂಡಿದ್ದಾರೆ.
RRR Kannada dubbed Movie Review : (ಕನ್ನಡ ಆವೃತ್ತಿ) ಚಿತ್ರ ವಿಮರ್ಶೆ: ಸ್ಲೋ ಎಂಡ್ ಸ್ಟಡಿ ವಿನ್ಸ್ ದಿ ರೇಸ್

ನಿರ್ದೇಶಕನ ಅತ್ಯುಮ ಕೆಲಸ ಇದೆ!
"ಅತ್ಯುತ್ತಮವಾದ ಚಿತ್ರ, ನಿರ್ದೇಶಕ ಉತ್ತಮವಾದ ಕೆಲಸ ಮಾಡಿದ್ದಾರೆ. ಕಥೆಯ ತೀವ್ರತೆಯನ್ನು ಚಿತ್ರದುದ್ದಕ್ಕೂ ಕಟ್ಟಿಕೊಡುವಲ್ಲಿ ಯಶಸ್ವಿ ಆಗಿದ್ದಾರೆ. ಪ್ರತಿಯೊಬ್ಬ ಕಲಾವಿದನಿಂದಲೂ ಸೊಗಸಾದ ಅಭಿನಯ ಮೂಡಿ ಬಂದಿದೆ. ಯಶ್ ಮತ್ತು ಸಂಜಯ್ ದತ್ ಇಬ್ಬರು ಅತ್ಯದ್ಭುತವಾಗಿ ತೆರೆಯ ಮೇಲೆ ಕಂಗೊಳಿಸಿದ್ದರೆ." ಎಂದು ಚಿತ್ರದ ಕಥೆ ಮತ್ತು ಪಾತ್ರಧಾರಿಗಳ ಬಗ್ಗೆ ಹೇಳಿದ್ದಾರೆ.

ಕೆಜಿಎಫ್ 2 ವರ್ಲ್ಡ್ ಕ್ಲಾಸ್ ಸಿನಿಮಾ!
ಕೆಜಿಎಫ್ 2 ಚಿತ್ರದ ಕೇವಲ ಕನ್ನಡದ ಅಥವಾ ಪ್ಯಾನ್ ಇಂಡಿಯಾ ಚಿತ್ರ ಮಾತ್ರ ಅಲ್ಲ. ಇದು ಒಂದು ವರ್ಲ್ಡ್ ಕ್ಲಾಸ್ ಸಿನಿಮಾ ಎಂದಿದ್ದಾರೆ. "ಕೆಜಿಎಫ್ 2 ಕೇವಲ ಸ್ಯಾಂಡಲ್‌ವುಡ್‌ನ ಬ್ಲಾಕ್ ಬಸ್ಟರ್ ಚಿತ್ರ ಅಲ್ಲ. ಇದು ಪ್ರಶಾಂತ್ ನೀಲ್ ಅವರ ವರ್ಲ್ಡ್ ಕ್ಲಾಸ್ ಚಿತ್ರ." ಎಂದು ಉಮರ್ ಸಿಂಧು ತಮ್ಮ ವಿಮರ್ಶೆಯಲ್ಲಿ ಉಲ್ಲೇಖಿಸಿದ್ದಾರೆ.
RRR Movie Review: ಪ್ರತಿ ನಿಮಿಷವೂ ರೋಚಕ, ಮೈನವಿರೇಳಿಸುವ ದೃಶ್ಯ ವೈಭವ

ಕೆಜಿಎಫ್ 2ಗೆ ಉಮರ್ ಸಂಧು 5ಕ್ಕೆ 5 ಸ್ಟಾರ್!
ಇನ್ನು ವಿಶೇಷ ಅಂದರೆ, ವಿಮರ್ಶೆ ಮಾಡಿದ ಸೆನ್ಸಾರ್ ಮಂಡಳಿ ಸದಸ್ಯ ಕೆಜಿಎಫ್ 2 ಚಿತ್ರಕ್ಕೆ ಕೊಟ್ಟಿರುವ ಅಂಕಗಳು. ಕೆಜಿಎಫ್ 2 ಚಿತ್ರಕ್ಕೆ 5ಕ್ಕೆ 5 ಸ್ಟಾರ್‌ಗಳನ್ನು ಕೊಟ್ಟಿದ್ದಾರೆ. ಇಲ್ಲೇ ಗೊತ್ತಾಗುತ್ತದೆ ಕೆಜಿಎಫ್ 2 ಚಿತ್ರದಲ್ಲಿ ಟೀಕೆ ಮಾಡುವ, ತೆಗಳುವ, ತೆಗೆದು ಹಾಕುವ ಯಾವುದೇ ಋಣಾತ್ಮಕ ಅಂಶ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಈ ವಿಮರ್ಶೆ ಸಿನಿಮ ನೋಡಬೇಕು ಎನ್ನುವ ಕುತೂಹಲ, ನಿರೀಕ್ಷೆ ಹೆಚ್ಚಾಗಿದೆ.