twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'.!

    |

    ದುಷ್ಟರ ಹಾದಿಯಲ್ಲೇ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ 'ಧೀರ'ನ ಕಥಾಹಂದರ ಹೊಂದಿದ್ದ ಸಿನಿಮಾ 2001 ರಲ್ಲಿ ತೆರೆಕಂಡಿದ್ದ 'ಕೋಟಿಗೊಬ್ಬ'. ಇನ್ನೂ, ಶಿಷ್ಟನಾಗಿದ್ದುಕೊಂಡು ದುಷ್ಟರ ಕಪ್ಪು ಹಣ ಕೊಳ್ಳೆ ಹೊಡೆಯುವ 'ಚಾಣಾಕ್ಷ'ನ ಕತೆ ಹೊಂದಿದೆ ಇಂದು ತೆರೆಕಂಡಿರುವ 'ಕೋಟಿಗೊಬ್ಬ-2' ಚಿತ್ರ.

    ಅಲ್ಲಿ ಅಪ್ಪನ ಮಾತಿಗೆ ತಲೆ ಬಾಗಿ, ಅಂಡರ್ ವರ್ಲ್ಡ್ ಸಹವಾಸ ಬಿಟ್ಟು, ಮಾನವೀಯತೆ ಮರೆಯುವ 'ಕೋಟಿಗೊಬ್ಬ'ನ ದರ್ಶನ ನಿಮಗೆ ಆದ್ರೆ, ಇಲ್ಲಿ ಅದೇ ಅಪ್ಪನ ಆಸೆಯಂತೆ ಬದುಕು ಕಟ್ಟಿಕೊಳ್ಳಲು 'ಕೋಟಿ'ಗಟ್ಟಲೆ ಲೂಟಿ ಮಾಡುವ 'ಚಾಲಾಕಿ' ಯುವಕನ ಪರಿಚಯವಾಗುತ್ತೆ.

    ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-2' ಚಿತ್ರದ ಸಂಪೂರ್ಣ ವಿಮರ್ಶೆ ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿದೆ. ಓದಿರಿ....

    Rating:
    4.0/5
    Star Cast: ಸುದೀಪ್, ನಿತ್ಯ ಮೆನನ್, ಪ್ರಕಾಶ್ ರಾಜ್
    Director: ಕೆ.ಎಸ್.ರವಿಕುಮಾರ್

    ಕೋಟಿಗೆ ಒಬ್ಬರಾ.? ಇಬ್ಬರಾ.?

    ಕೋಟಿಗೆ ಒಬ್ಬರಾ.? ಇಬ್ಬರಾ.?

    'ಕೋಟಿಗೊಬ್ಬ-2' ಚಿತ್ರದಲ್ಲಿ ಎರಡು ಪ್ರಮುಖ ಪಾತ್ರಗಳಿವೆ - ಒಬ್ಬರು ಶಿವ (ಸುದೀಪ್) ಇನ್ನೊಬ್ಬರು ಸತ್ಯ (ಸುದೀಪ್). ರಿಯಲ್ ಎಸ್ಟೇಟ್ ಬಿಜಿನೆಸ್ ಮಾಡಿಕೊಂಡು ಪ್ರಾಮಾಣಿಕ ಬದುಕನ್ನು ಸಾಗಿಸುವ ಸಾಧು ಯುವಕ ಸತ್ಯ.

    ಶಿವ ಹೇಗೆ.?

    ಶಿವ ಹೇಗೆ.?

    ಸತ್ಯನಿಗೆ ತದ್ವಿರುದ್ಧ ಕ್ಯಾರೆಕ್ಟರ್ ಈ ಶಿವ. ಕೋಟಿ ಲೂಟಿ ಮಾಡುವುದರಲ್ಲಿ ಎಕ್ಸ್ ಪರ್ಟ್. ಎರಡು ಬಾರಿ ಬ್ಲಾಕ್ ಮನಿ ದರೋಡೆ ಮಾಡುವ ಶಿವ ಪೊಲೀಸರ ಕೈಲಿ ಸಿಕ್ಕಿ ಬೀಳ್ತಾನಾ.? ಶಿವನಿಂದ ಸತ್ಯನಿಗೆ ಆಗುವ ಸಮಸ್ಯೆ ಏನು.? ಅಸಲಿಗೆ, ಶಿವ-ಸತ್ಯ ಅವಳಿ-ಜವಳಿಯೋ..ಇಲ್ಲ ಒಬ್ಬರೇನಾ.? ಎಂಬ ಪ್ರಶ್ನೆಗಳೇ 'ಕೋಟಿಗೊಬ್ಬ-2' ಚಿತ್ರದ ಸಸ್ಪೆನ್ಸ್. ಅದನ್ನ ನೀವು ಚಿತ್ರಮಂದಿರದಲ್ಲೇ ನೋಡಿ, ಎಂಜಾಯ್ ಮಾಡಿ....

    ಸುದೀಪ್ ಆಕ್ಟಿಂಗ್ ಎಕ್ಸಲೆಂಟ್.!

    ಸುದೀಪ್ ಆಕ್ಟಿಂಗ್ ಎಕ್ಸಲೆಂಟ್.!

    ಶಿವ ಹಾಗೂ ಸತ್ಯ ಎಂಬ ಎರಡು ವಿಭಿನ್ನ ಶೇಡ್ ಇರುವ ಪಾತ್ರಗಳನ್ನು ಪೋಷಿಸಿರುವ ಸುದೀಪ್ ಅಕ್ಷರಶಃ 'ಅಭಿನಯ' ಚಕ್ರವರ್ತಿ. ಆಕ್ಷನ್ ಸನ್ನಿವೇಶಗಳಲ್ಲಿ ಸುದೀಪ್ ಸ್ಕ್ರೀನ್ ಪ್ರೆಸೆನ್ಸ್ ಸೂಪರ್.

    ಸುದೀಪ್ ಸ್ಟೈಲ್ ಗೆ ಚಪ್ಪಾಳೆ ಬರಲೇಬೇಕು.!

    ಸುದೀಪ್ ಸ್ಟೈಲ್ ಗೆ ಚಪ್ಪಾಳೆ ಬರಲೇಬೇಕು.!

    'ಚೋರ' ಶಿವನಾಗಿ ಸುದೀಪ್ ಚೂಯಿಂಗ್ ಗಮ್ ಬಾಯಿಗೆ ಹಾಕಿಕೊಳ್ಳುವ ಸ್ಟೈಲ್ ಹಾಗೂ ನಡೆದುಕೊಂಡು ಬರುವ ಗತ್ತು ಬೊಂಬಾಟ್ ಆಗಿದೆ.

    ನಿತ್ಯಾ ಮೆನನ್

    ನಿತ್ಯಾ ಮೆನನ್

    ಎಲ್ಲದಕ್ಕೂ ಸಾಕ್ಷಿ ಇಟ್ಟುಕೊಳ್ಳುವ ಮಧ್ಯಮ ವರ್ಗದ ಕುಟುಂಬದ ಹುಡುಗಿಯಾಗಿ ನಿತ್ಯಾ ಮೆನನ್ ನಟನೆ ಇಷ್ಟವಾಗುತ್ತೆ.

    ರವಿಶಂಕರ್

    ರವಿಶಂಕರ್

    ಪೊಲೀಸ್ ಆಫೀಸರ್ ಆಗಿ ರವಿಶಂಕರ್ ನಟನೆ ಚೆನ್ನಾಗಿದೆ.

    ಕಾಮಿಡಿ ಅಷ್ಟಕಷ್ಟೆ

    ಕಾಮಿಡಿ ಅಷ್ಟಕಷ್ಟೆ

    ಚಿಕ್ಕಣ್ಣ ಮತ್ತು ಸಾಧು ಕೋಕಿಲ ತೆರೆ ಮೇಲೆ ಬಂದಾಗ ಮಾತ್ರ ಪ್ರೇಕ್ಷಕರು ನಗಬಹುದು. 'ಕೋಟಿಗೊಬ್ಬ-2' ಚಿತ್ರದಲ್ಲಿ ಸಸ್ಪೆನ್ಸ್ ಅಂಶ ಹೆಚ್ಚಾಗಿರುವುದರಿಂದ ಕಾಮಿಡಿ ಅಷ್ಟಕಷ್ಟೆ.

    ಹಾಡುಗಳು ಹೇಳಿಕೊಳ್ಳುವಂತಿಲ್ಲ.!

    ಹಾಡುಗಳು ಹೇಳಿಕೊಳ್ಳುವಂತಿಲ್ಲ.!

    ಡಿ.ಇಮಾಮ್ ನೀಡಿರುವ ಹಾಡುಗಳ ಪೈಕಿ 'ಹೂನಾ ಹೂನಾ' ಹಾಡು ಗುನುಗುವಂತಿದ್ರೆ, 'ಹಲೋ ಮಿಸ್ಟರ್' ಹಾಡು ಪೆಪ್ಪಿ ಆಗಿದೆ. ಉಳಿದವು ಹೇಳಿಕೊಳ್ಳುವಂತಿಲ್ಲ.

    ಸುದೀಪ್ ಇಮೇಜ್ ಗೆ ಕರೆಕ್ಟ್ ಆಗಿದೆ.!

    ಸುದೀಪ್ ಇಮೇಜ್ ಗೆ ಕರೆಕ್ಟ್ ಆಗಿದೆ.!

    'ಈಗ' ಮತ್ತು 'ಪುಲಿ' ಚಿತ್ರದಲ್ಲಿ ಸುದೀಪ್ ಆಕ್ಟಿಂಗ್ ನೋಡಿ ನಿಬ್ಬೆರಗಾದವರಿಗೆ 'ಕೋಟಿಗೊಬ್ಬ-2' ಸಿನಿಮಾ ಗ್ಯಾರೆಂಟಿ ಇಷ್ಟವಾಗುತ್ತೆ. ಯಾಕಂದ್ರೆ, ಸುದೀಪ್ ಇಲ್ಲಿ 'ಸ್ವೀಟ್' ಇಲ್ಲ, ಬದಲಾಗಿ ಸ್ವಲ್ಪ ಸಾಲ್ಟ್, ಸ್ವಲ್ಪ ರಫ್.

    ಪಕ್ಕಾ ಕಮರ್ಶಿಯಲ್ ಸಿನಿಮಾ

    ಪಕ್ಕಾ ಕಮರ್ಶಿಯಲ್ ಸಿನಿಮಾ

    ಪ್ರವೀಣ್ ಆಂಟನಿ ಸಂಕಲನ ಚುರುಕಾಗಿರುವುದರಿಂದ ಚಿತ್ರದ ಮೊದಲಾರ್ಧ ಮುಗಿಯುವುದೇ ಗೊತ್ತಾಗುವುದಿಲ್ಲ. ಸೆಕೆಂಡ್ ಹಾಫ್ ನಲ್ಲಿ ಫ್ಲ್ಯಾಶ್ ಬ್ಯಾಕ್ ಇರೋದ್ರಿಂದ ಕೊಂಚ ರಬ್ಬರ್ ಎಳೆದ ಅನುಭವ ಆಗ್ಬಹುದು. ಅಷ್ಟು ಬಿಟ್ಟರೆ 'ಕೋಟಿಗೊಬ್ಬ-2' ಶುದ್ಧ ಕಮರ್ಶಿಯಲ್ ಎಂಟರ್ ಟೇನರ್.

    ಕೆ.ಎಸ್.ರವಿಕುಮಾರ್ ನಿರ್ದೇಶನ

    ಕೆ.ಎಸ್.ರವಿಕುಮಾರ್ ನಿರ್ದೇಶನ

    ಯಾವುದೇ ಗೊಂದಲ, ಕಿರಿಕಿರಿ ಇಲ್ಲದ ನೇರವಾದ ಸ್ಕ್ರಿಪ್ಟ್ ಮಾಡಿದ್ದಾರೆ ಕೆ.ಎಸ್.ರವಿಕುಮಾರ್. ಕೊನೆಯವರೆಗೂ ಪ್ರೇಕ್ಷಕರ ಕುತೂಹಲ ಉಳಿಯುವಂತೆ ಮಾಡುವಲ್ಲಿ ಅವರ ಪ್ರಯತ್ನ ಯಶಸ್ವಿ.

    ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'

    ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'

    ಹೆಸರಿನಲ್ಲಿ ಮಾತ್ರ ಸಾಮ್ಯತೆ ಇದೆ ಎನ್ನುವುದು ಬಿಟ್ಟರೆ, ಆ 'ಕೋಟಿಗೊಬ್ಬ'ನಿಗೂ ಈ 'ಕೋಟಿಗೊಬ್ಬ'ನಿಗೂ ಸಂಬಂಧ ಅಲ್ಲ. ಇಬ್ಬರ ಆಶಯ ಕೂಡ ಬೇರೆ ಬೇರೆ. ಹೀಗಾಗಿ ಸಾಹಸಸಿಂಹ 'ಕೋಟಿಗೊಬ್ಬ' ಚಿತ್ರವನ್ನ ತಲೆಯಲ್ಲಿ ಇಟ್ಟುಕೊಂಡು ಈ ಚಿತ್ರ ನೋಡ್ಬೇಡಿ.

    ವಿಷ್ಣುವರ್ಧನ್ ನೆನಪಾಗ್ತಿರ್ತಾರೆ.!

    ವಿಷ್ಣುವರ್ಧನ್ ನೆನಪಾಗ್ತಿರ್ತಾರೆ.!

    ವಿಷ್ಣುವರ್ಧನ್ ರವರ ಒಂದು ಡೈಲಾಗ್ ನ ಸುದೀಪ್ ಡಬ್ ಸ್ಮ್ಯಾಶ್ ಮಾಡಿದ್ದಾರೆ. ಹಾಡೊಂದರಲ್ಲಿ ವಿಷ್ಣುವರ್ಧನ್ ಕಾಣಿಸಿಕೊಳ್ಳುವುದರಿಂದ 'ಕೋಟಿಗೊಬ್ಬ-2' ಚಿತ್ರದ ಆರಂಭದಲ್ಲಿ ಅವರು ತುಂಬಾ ಕಾಡುತ್ತಾರೆ.

    ಫೈನಲ್ ಸ್ಟೇಟ್ ಮೆಂಟ್

    ಫೈನಲ್ ಸ್ಟೇಟ್ ಮೆಂಟ್

    ಕೊಡುವ ಕಾಸಿಗೆ 'ಕೋಟಿಗೊಬ್ಬ-2' ಚಿತ್ರ ಖಂಡಿತ ಮೋಸ ಮಾಡಲ್ಲ. ಅನವಶ್ಯಕ ಬಿಲ್ಡಪ್ ಇಲ್ಲದೆ, ಬೇಕು ಅಂತ ಹಾಡುಗಳನ್ನ ತುರುಕದೆ, ಪ್ರೇಕ್ಷಕರ ಮನರಂಜನೆಗೆ ಕಮ್ಮಿ ಮಾಡದ 'ಕೋಟಿಗೊಬ್ಬ-2' ಚಿತ್ರವನ್ನ ರವಿಕುಮಾರ್ ಉತ್ತಮವಾಗಿ ನಿರ್ದೇಶನ ಮಾಡಿದ್ದಾರೆ.

    ವಿಡಿಯೋ ನೋಡಿ

    ವಿಡಿಯೋ ನೋಡಿ

    'ಕೋಟಿಗೊಬ್ಬ-2' ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ನೀಡಿದ ಪ್ರತಿಕ್ರಿಯೆ ಏನು ಅಂತ ತಿಳಿಯಲು ಈ ವಿಡಿಯೋ ಲಿಂಕ್ ಕ್ಲಿಕ್ ಮಾಡಿ...

    English summary
    Kiccha Sudeep and Nithya Menon starrer Kannada Movie 'Kotigobba 2' has hit the screens today (August 12th). The movie is a treat of Sudeep fans. Nithya Menon looks pleasant on screen. Its a pure commercial entertainer by Director K.S.Ravikumar.
    Saturday, September 29, 2018, 16:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X