»   » 'ರನ್ನ'ನಿಗೆ ಜೈಕಾರ ಹಾಕಿದ್ದಾರಾ ವಿಮರ್ಶಕರು?

'ರನ್ನ'ನಿಗೆ ಜೈಕಾರ ಹಾಕಿದ್ದಾರಾ ವಿಮರ್ಶಕರು?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ರನ್ನ' ರಿಲೀಸ್ ಆಗಿದೆ. ಬಹುನಿರೀಕ್ಷೆಯೊಂದಿಗೆ ಬಿಡುಗಡೆಯಾದ 'ರನ್ನ' ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಮೂರು ದಿನಗಳಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿ ಕಮಾಯಿ ಮಾಡಿರುವ 'ರನ್ನ' ಪ್ರೇಕ್ಷಕರಿಗೆ ಇಷ್ಟವಾಗಿದ್ದಾನೆ.

ಎಲ್ಲೆಲ್ಲೂ 'ರನ್ನ'ನ ರಂಗಿದ್ದರೂ, ವಿಮರ್ಶಕರಿಗೆ 'ರನ್ನ' ಅಷ್ಟೇನು ಹಿಡಿಸಿಲ್ಲ. ರೀಮೇಕ್ ಚಿತ್ರವಾಗಿರುವುದರಿಂದ 'ರನ್ನ'ನಿಗೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. [ಚಿತ್ರ ವಿಮರ್ಶೆ; ಕಳೆಗುಂದಿಲ್ಲ ಸುದೀಪ್ 'ರನ್ನ'ನ ರಂಗು]


ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು 'ರನ್ನ' ಚಿತ್ರದ ಬಗ್ಗೆ ನೀಡಿರುವ ವಿಮರ್ಶೆಗಳೆಲ್ಲಾ ಇಲ್ಲಿವೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....


ಮೂಲ ನಿಷ್ಠೆಯ 'ರನ್ನ' - ಪ್ರಜಾವಾಣಿ

ನಟ ಪವನ್ ಕಲ್ಯಾಣ್ ಅವರ ಡೈಲಾಗುಗಳು, ದೇಹಭಾಷೆ, ತಾರಾ ವರ್ಚಸ್ಸಿನಿಂದಾಗಿ ಸಾಮಾನ್ಯ ಕೌಟುಂಬಿಕ ಕಥೆಯಾದ ‘ಅತ್ತಾರಿಂಟಿಕಿ ದಾರೇದಿ' ಅಲ್ಲಿನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಆ ಚಿತ್ರವನ್ನು ಕನ್ನಡದ ನಿರ್ದೇಶಕ ನಂದಕಿಶೋರ್ ಮೂಲ ಸಿನಿಮಾಕ್ಕೆ ಬದ್ಧರಾಗಿ ‘ರನ್ನ'ನಲ್ಲಿ ಪ್ರತಿ ದೃಶ್ಯ-ದೃಶ್ಯಗಳನ್ನೂ ಯಥಾವತ್ ಕನ್ನಡಕ್ಕೆ ನಕಲಿಸಿದ್ದಾರೆ. ಈ ಮಾತು ಹಾಡುಗಳಿಗೂ ಅನ್ವಯ. ಮೇಕಿಂಗ್ ಮತ್ತು ಸುದೀಪ್ ಅವರ ‘ಸ್ಟಾರ್ ಮ್ಯಾನರಿಸಂ' ನಿರ್ದೇಶಕರಿಗೆ ಬಲ! - ಡಿ.ಎಂ.ಕುರ್ಕೆ ಪ್ರಶಾಂತ (ಇನ್ನಷ್ಟು ಇಲ್ಲಿ ಓದಿ)


ಪ್ರೀತಿಸುವವರಿಗೆ ಇವ ರನ್ನ, ಅಭಿಮಾನಿಗಳಿಗೆ ಅವ ರನ್ನ - ಉದಯವಾಣಿ

ಕಥೆ ಸಾಮಾನ್ಯ ಎನಿಸಬಹುದು. ಆದರೆ, ಅದನ್ನು ತೆರೆ ಮೇಲೆ ಸಖತ್ತಾಗಿ ತಂದಿದ್ದಕ್ಕೇ "ಅತ್ತಾರಿಂಟಿಕಿ ದಾರೇದಿ' ಎಂಬ ತೆಲುಗು ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಆ ಚಿತ್ರವನ್ನು ಮೀರಿಸುವಂತಲ್ಲದಿದ್ದರೂ, ಒಂದು ಲೆವೆಲ್‌ಗಾದರೂ "ರನ್ನ'ನನ್ನು ರೂಪಿಸುವ ಜವಾಬ್ದಾರಿ ನಿರ್ದೇಶಕ ನಂದಕಿಶೋರ್ ಮೇಲಿತ್ತು. ಅವರು ತಮ್ಮ ಕೆಲಸದಲ್ಲಿ ಸೈ ಎನಿಸಿಕೊಂಡಿದ್ದಾರೆ. ಇದೊಂದು ಅಪ್ಪಟ ಮೇಕಿಂಗ್ ಚಿತ್ರ. "ರನ್ನ' ಸ್ಟೈಲಿಶ್ ಆಗಿದ್ದಾನೆ. ಅದ್ಧೂರಿಯಾಗಿದ್ದಾನೆ. ಅಭಿಮಾನಿಗಳು ಎಂಟತ್ತು ಬಾರಿಯಾದರೂ ಶಿಳ್ಳೆ ಹೊಡೆಯುವಂತೆ ಇದ್ದಾನೆ. - ಚೇತನ್ ನಾಡಿಗೇರ್ (ಇನ್ನಷ್ಟು ಇಲ್ಲಿ ಓದಿ)


ತೆಲುಗಿನಿಂದ ಬಂದ 'ರನ್ನ', ಕದಿಯುವನೇ ಜನರನ್ನ? - ಕನ್ನಡ ಪ್ರಭ

'ರನ್ನ' ಸಿನೆಮಾದಲ್ಲಿ ವಿಶೇಷತೆಯನ್ನು ಹುಡುಕ ಹೊರಟರೆ ನಿರಾಸೆ ಕಟ್ಟಿಟ್ಟಬುತ್ತಿ. ಆದರೆ 'ರನ್ನ' ಸಿನೆಮಾದಲ್ಲಿ ತುಂಬಿ ತುಳುಕುವುದು ಸುದೀಪ್ ಮತ್ತು ಅವರ ಹೀರೋಯಿಸಂ. ರನ್ನ ಕೈ ಎತ್ತಿದರೆ ಎದುರಾಳಿಯ ಮೂಳೆಗಳು ಲಟಲಟ ಮುರಿದುಹೋಗುತ್ತವೆ. ಐದಾರು ಜನ ಮೆಷಿನ್ ಗನ್ ಹಿಡಿದು ಸುತ್ತುವರೆದರೂ 'ರನ್ನ'ನ ಕಬ್ಬಿಣದ ದೇಹದ ಮುಂದೆ ಅವರೆಲ್ಲ ಇಂಗು ತಿಂದ ಮಂಗಗಳೇ! ಇಂತಹ ಸಮಯದಲ್ಲಿ ಮಕ್ಕಳು ನೋಡುವ 'ಆನಿಮೇಟೆಡ್ ಸಿನೆಮಾ' ನೆನಪಿಗೆ ಬಂದರೆ ಅದು 'ರನ್ನ'ನ ಹೆಚ್ಚುಗಾರಿಕೆ. ಇನ್ನು ಸಂಭಾಷಣೆಯಂತು ವರ್ಣಿಸಲಸಾಧ್ಯ. ಸದಾ ಆಳುಗಳನ್ನು ಸುತ್ತುವರೆದಿರುವ, ವಿಮಾನಗಳಲ್ಲೇ ಚಲಿಸುವ 'ರನ್ನ' ತನ್ನ ಎದುರಾಳಿಗೆ 'ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ' ಎಂಬ ತಾತ್ವಿಕ ಸಾಲುಗಳನ್ನು ಲೀಲಾಜಾಲವಾಗಿ ಉದುರಿಸುತ್ತಾನೆ. ತನ್ನ ಆಳುಗಳಿಗಂತೂ ಕೈತುರಿಕೆಯಾದಾಗೆಲ್ಲಾ ಸುಮ್ಮನೆ ಕಪಾಳಕ್ಕೆ ಹೊಡೆಯುತ್ತಿರುತ್ತಾನೆ. ಹೀಗೆ 'ರನ್ನ'ನ ಹೆಚ್ಚುಗಾರಿಕೆಯೇ ತುಂಬಿದ ಸಿನೆಮಾದಲ್ಲಿ. - ಗುರುಪ್ರಸಾದ್ ನಾರಾಯಣ (ಇನ್ನಷ್ಟು ಇಲ್ಲಿ ಓದಿ)


'Ranna’: An unconvincing victory - Deccan Chronicle

Nanda has yet again proved that he is a great technician behind the camera but this time ‘that' magical spark is missing. The first half is a builder which best suits the image of Sudeep, a definite treat for his super fan followers. Insofar others, it is a ‘monotonous' feel which goes on and on, and in between there are at least half-a-dozen heroic fights with no dearth of punching dialogues, all for the commercial touch with a mass appeal. - Shashiprasad S M (ಇನ್ನಷ್ಟು ಇಲ್ಲಿ ಓದಿ)


Movie Review: Ranna - Bangalore Mirror

Post interval, the film treads a meandering path. The comedy scenes involving Sadhu Kokila do not make the necessary impact and the film almost loses its way. Fights for the sake of a commercial film prop up. While you expect a buildup to the climax, it seems it is going nowhere. But when the climax does arrive, Sudeep eats up the screen. A stunning and almost single handed performance lifts the film to an expected end. - Shyam Prasad S (ಇನ್ನಷ್ಟು ಇಲ್ಲಿ ಓದಿ)


English summary
Kiccha Sudeep starrer 'Ranna' has received mixed response from the critics. Here is the collection of reviews by Top News Papers of Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada