Don't Miss!
- Sports
ಭಾರತ vs ಪಾಕಿಸ್ತಾನ: ಟಿ20 ಸೆಣೆಸಾಟದಲ್ಲಿ ಹೆಚ್ಚು ಗೆದ್ದಿದ್ಯಾರು? ಹೆಚ್ಚು ಸಿಕ್ಸ್, ಹೆಚ್ಚು ವಿಕೆಟ್ ಸೇರಿದಂತೆ ಕುತೂಹಲಕರ ಮಾಹಿತ
- Finance
ಕೇರಳ ಲಾಟರಿ: 'ಅಕ್ಷಯ AK 561' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- News
ಮುಖ್ಯಮಂತ್ರಿ ಬದಲಾವಣೆ ಗೊಂದಲ ಸೃಷ್ಟಿಸಿದ್ದು ಬಿಜೆಪಿ; ಡಿಕೆಶಿ
- Technology
ಭಾರತದಲ್ಲಿ ಟೆಕ್ನೋ ಕ್ಯಾಮನ್ 19 ಪ್ರೊ 5G ಲಾಂಚ್! ವಾವ್ಹ್ ಎನಿಸುವ ಫೀಚರ್ಸ್!
- Automobiles
ದುಬಾರಿ ಬೆಲೆಯ ಸ್ಪೋರ್ಟ್ಸ್ ಕಾರ್ ಓಡಿಸುತ್ತಾ ಮುಂಬೈ ರಸ್ತೆಗಳಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದೇವರು
- Lifestyle
ಮಂಕಿಪಾಕ್ಸ್: ಗುಣಮುಖರಾಗಿ ವಾರ ಕಳೆದರೂ ವೀರ್ಯದಲ್ಲಿರುತ್ತೆ ಮಂಕಿವೈರಸ್!
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
Vikrant Rona First Half Review: ಕೊಲೆಗಳಿಗೆ ಕಾರಣ ಮನುಷ್ಯನಾ, ದೆವ್ವವಾ? ಸ್ವತಃ ವಿಕ್ರಾಂತ್ ರೋಣನಾ?
ಇಷ್ಟು ದಿನ ಎದುರು ನೋಡುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ. ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗೇಬಿಟ್ಟಿದೆ. ಕಿಚ್ಚ ಸುದೀಪ್ ವೃತ್ತಿ ಬದುಕಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ವಿಕ್ರಾಂತ್ ರೋಣ' ವಿಶ್ವದಾದ್ಯಂತ ರಿಲೀಸ್ ಆಗಿದೆ. ಸಿನಿಪ್ರಿಯರ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಸಿನಿಮಾ ಫಸ್ಟ್ ಹಾಫ್ ಮುಗಿಸಿ ಪ್ರೇಕ್ಷಕರು ಚಿತ್ರಮಂದಿರದಿಂದ ಹೊರಬಂದಿದ್ದಾರೆ.
ಸ್ಯಾಂಡಲ್‌ವುಡ್‌ನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಹೇಗಿರಬಹುದು? 'ವಿಕ್ರಾಂತ್ ರೋಣ'ದಲ್ಲಿ ಕಿಚ್ಚನ ಪಾತ್ರವೇನು? 'ವಿಕ್ರಾಂತ್' ರೋಣ 3ಡಿಯಲ್ಲಿ ಹೇಗಿರಬಹುದು? ಸಿನಿಮಾ ಕಥೆಯೇನು? ಹೀಗೆ ಬಿಡುಗಡೆಗೂ ಮುನ್ನ ಹುಟ್ಟಿಕೊಂಡಿದ್ದ ನೂರಾರು ಪ್ರಶ್ನೆಗಳಿಗೆ 'ವಿಕ್ರಾಂತ್ ರೋಣ' ಕೊನೆಗೂ ಕೊಟ್ಟಿದೆ.
'ವಿಕ್ರಾಂತ್ ರೋಣ' ಸಿನಿಮಾದ ಫಸ್ಟ್ ಹಾಫ್ ಮುಗಿಸಿಬಂದ ಸಿನಿಮಾ ಪ್ರೇಮಿಗಳು ತಲೆ ಹುಳಬಿಟ್ಟುಕೊಂಡು ಬಂದಿದ್ದಾರೆ. ನಿಗೂಢ ಕೊಲೆಗಳ ಹಿಂದೆ ಬಿದ್ದ 'ವಿಕ್ರಾಂತ್ ರೋಣ' ಪ್ರೇಕ್ಷಕರನ್ನು ಥಿಯೇಟರ್‌ನಲ್ಲಿ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರಾ? ಫಸ್ಟ್ ಹಾಫ್‌ನಲ್ಲಿ ಏನೇನು? ಅನುಪ್ ಭಂಡಾರಿ ನಿರ್ದೇಶನ ಹೇಗಿದೆ? ಗಡಾಂಗ್ ರಕ್ಕಮ್ಮ ಸಾಂಗ್ ಇದೆಯಾ? ಉಳಿದ ಪಾತ್ರಗಳು ಹೇಗಿರಲಿವೆ? ಅನ್ನೋ ವಿಶೇಷತೆ ಇದೆ. ಅನ್ನೋದನ್ನು ತಿಳಿಯಲು ಮುಂದೆ ಓದಿ.

ಕೊಲೆಗಳ ರಹಸ್ಯ ಭೇದಿಸುತ್ತಿರುವ ರೋಣ
'ವಿಕ್ರಾಂತ್ ರೋಣ' ಸಿನಿಮಾ ನೋಡಿದವರಿಗೆ ಇದೊಂದು ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾ ಅನ್ನೋದು ಗೊತ್ತಾಗಿತ್ತು. ಆ ನಿರೀಕ್ಷೆಯನ್ನಿಟ್ಟುಕೊಂಡು ಥಿಯೇಟರ್‌ಗೆ ಎಂಟ್ರಿ ಕೊಟ್ಟವರಿಗೆ 'ವಿಕ್ರಾಂತ್ ರೋಣ' ಥ್ರಿಲ್ ಕೊಡುತ್ತಿದೆ. ಒಂದು ಸುಂದರ ಊರು. ಅಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳ ರಾಶಿಯನ್ನು ಭೇದಿಸಲು ವಿಕ್ರಾಂತ್ ರೋಣ ತನಿಖೆ ಆರಂಭಿಸುತ್ತಾನೆ. ಈ ವೇಳೆ ಸರಣಿ ಕೊಲೆಗಳು ಹಲವರ ಮೇಲೆ ಅನುಮಾನ ಮೂಡಿಸುವಂತೆ ಮಾಡಿವೆ. ಇದೂವರೆಗೂ ಬರುವ ಹಲವು ಪಾತ್ರಗಳ ಮೇಲೆ ಅನುಮಾನ ಮೂಡುವಂತೆ ಮಾಡುತ್ತೆ.

ನಿಗೂಢ ಲೋಕದಲ್ಲಿ ಅದ್ಭುತ ಸೆಟ್
'ವಿಕ್ರಾಂತ್ ರೋಣ' ಮೊದಲಾರ್ಧ ಕಿಕ್ ಕೊಡುವುದೇ ಈ ಕಾರಣಕ್ಕೆ. ಸಿನಿಮಾದಲ್ಲಿ ಅದ್ಭುತ ಸೆಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇದು ಕಣ್ಣಿಗೆ ನೋಡುವುದಕ್ಕೆ ಹಬ್ಬ. ಅದರಲ್ಲೂ 3ಡಿಯಲ್ಲಿ ಸಿನಿಮಾ ನೋಡುವುದಕ್ಕೆ ಇನ್ನಷ್ಟು ಮುದ ನೀಡುತ್ತೆ. ಸೆಟ್‌ಗಳ ಅದ್ಭುತ ಲೋಕದಲ್ಲಿ ಕೊಲೆಗಳ ಸರಣಿಗೆ ಅದ್ಭುತ ಟ್ವಿಸ್ಟ್ ಅಂಡ್ ಟನ್ ಕೊಟ್ಟಿರುವ ನಿರ್ದೇಶಕರ ಚಾಕಚಕ್ಯತೆಗೆ ಪ್ರೇಕ್ಷಕರು ತೆಲೆ ದೂಗುವುದು ಗ್ಯಾರಂಟಿ.

ಫಸ್ಟ್ ಹಾಫ್‌ನಲ್ಲಿ ತಲೆ ತಿರುಗೋ ಟ್ವಿಸ್ಟ್
ನಿರ್ದೇಶಕ ಅನುಪ್ ಭಂಡಾರಿ ಹೆಣೆದಿರೋ ಸಸ್ಪೆನ್ಸ್ ಸ್ಟೋರಿ ಕಿಕ್ ಕೊಡೋದು ಗ್ಯಾರಂಟಿ. ಮೊದಲಾರ್ಧ ಕಿಚ್ಚ ಸುದೀಪ್ ಬಿಲ್ಡಪ್‌ನಿಂದ ಶುರುವಾಗಿ ಕಥೆಗೆಯೊಳಗೆ ಇಳಿದು ಪ್ರೇಕ್ಷಕರನ್ನು ಹಿಡಿದಿಡುತ್ತೆ. ಈ ವೇಳೆಗಾಗಲೇ ಹಲವು ಪಾತ್ರಗಳ ಪರಿಚಯನೂ ಆಗುತ್ತೆ. ಇನ್ನೇನು ಇಂಟರ್‌ವಲ್ ಬರುತ್ತಿದೆ ಎನ್ನುವಾಗಲೇ ತಲೆ ತಿರುಗಿ ಹೋಗುವಂತಹ ಟ್ವಿಸ್ಟ್ ಅನ್ನು ಇಟ್ಟಿದ್ದಾರೆ ನಿರ್ದೇಶಕರು. ಹೀಗಾಗಿ ಪ್ರೇಕ್ಷಕರು ದ್ವೀಯಾರ್ಧವನ್ನು ತಲೆಕೆಡಿಸಿಕೊಂಡು ವೀಕ್ಷಿಸಲೇಬೇಕಾದ ಅನುವಾರ್ಯತೆ ಇದೆ.

ಕೊಲೆಗಳಿಗೆ ಕಾರಣ ಯಾರು?
'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಹೆದರಿ ಕಣ್ಮುಚ್ಚುವಂತೆ ಮಾಡುವ ಕೆಲವು ದೃಶ್ಯಗಳು ಇವೆ. ಸಿನಿಮಾದ ಬಹುತೇಕ ದೃಶ್ಯಗಳು ಕತ್ತಲಲ್ಲೇ ನಡೆಯುತ್ತಿವೆ. ಹೀಗಾಗಿ ಥ್ರಿಲ್ಲರ್ ಸಿನಿಮಾವನ್ನುಇಷ್ಟಪಡುವವರಿಗೆ 'ವಿಕ್ರಾಂತ್ ರೋಣ' ಫಸ್ಟ್ ಹಾಫ್ ರೋಚಕ ಅನಿಸುವುದರಲ್ಲಿ ಅನುಮಾನವಿಲ್ಲ. ಅಸಲಿಗೆ ಇಂಟರ್‌ವಲ್ ವೇಳೆಗೆ ಇಷ್ಟೆಲ್ಲಾ ಕೊಲೆಗಳಿಗೆ ಕಾರಣ ಯಾರು? ಯಾರೋ ನಿಗೂಢ ವ್ಯಕ್ತಿನಾ, ದೆವ್ವವಾ? ಅಥವಾ ಸ್ವತಃ ವಿಕ್ರಾಂತ್ ರೋಣನಾ? ಅನ್ನೋದು ಮಧ್ಯಂತರದ ಬಳಿಕ ತಿಳಿಯಲಿದೆ. ಅಸಲಿಗೆ ಇನ್ನೂ ಗಡಾಂಗ್ ರಕ್ಕಮ್ಮ ಬರೋದು ಬಾಕಿ ಇದೆ.