For Quick Alerts
  ALLOW NOTIFICATIONS  
  For Daily Alerts

  ಚಿತ್ರ ವಿಮರ್ಶೆ: ಸಲ್ಮಾನ್ ಖಾನ್ 'ಕಿಕ್' ಪೈಸಾ ವಸೂಲ್

  By * ಜೇಮ್ಸ್ ಮಾರ್ಟಿನ್
  |

  ಸಲ್ಮಾನ್ ಖಾನ್ ಅವರು ನಾಯಕರಾಗಿರುವ ಕಿಕ್ ಚಿತ್ರದ ಟ್ರೇಲರ್ ಕಿಕ್ ನೀಡಿದಷ್ಟು ಸಿನಿಮಾ ನೋಡುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಇಲ್ಲಿ ಲಾಜಿಕ್ ಇಲ್ಲ ಬರೀ ಮ್ಯಾಜಿಕ್. ನೈಜತೆ ಹುಡುಕದಿದ್ದರೆ ಚಿತ್ರ ಪಕ್ಕಾ ಪೈಸಾ ವಸೂಲ್ ಎಂಬ ಮಾತುಗಳು ವಿಮರ್ಶಕರಿಂದ ಕೇಳಿ ಬಂದಿದೆ.

  ವರ್ಷಾನುವರ್ಷದಿಂದ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸುತ್ತಲೇ ಬಂದಿರುವ ಕಿಕ್ ಚಿತ್ರ ಎಲ್ಲರಿಗೂ ಗೊತ್ತಿರುವ ಹಾಗೆ ಈ ಚಿತ್ರ ಕೂಡಾ ತೆಲುಗಿನ ಸೂಪರ್ ಹಿಟ್ ಚಿತ್ರ ಕಿಕ್ ನ ರಿಮೇಕ್. ತೆಲುಗಿನಲ್ಲಿ ರವಿತೇಜ ಅಭಿನಯಿಸಿದ ಕಿಕ್ ಚಿತ್ರವನ್ನು ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲ ಪ್ರಪ್ರಥಮ ಬಾರಿಗೆ ಹಿಂದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.[ಕಿಕ್ ಟ್ರೇಲರ್ ಸೂಪರ್ ಗುರೂ]

  ಸಲ್ಮಾನ್ ಖಾನ್ ಹೊಸ ಸ್ಟೈಲ್,ಸಾಹಸ ದೃಶ್ಯ, ಹಾಡುಗಳು, ಡ್ಯಾನ್ಸ್ ಜಾಕ್ವಲಿನ್ ನಟನೆ ರಹಿತ ಮಾದಕತೆ, ರಣದೀಪ್ ಹೂಡಾ ಬಿಗಿ ಹಿಡಿತದ ನಟನೆ, ನವಾಜುದ್ದೀನ್ ಸಿದ್ದಿಕಿ ಪಂಚ್ ಡೈಲಾಗ್ ಎಲ್ಲವೂ ಉತ್ತಮ ಮಸಾಲೆ ಭರಿತ ಚಿತ್ರವನ್ನಾಗಿಸಿದೆ. ಆದರೆ, ಚಿತ್ರಕಥೆ ಕಿಕ್ ನೀಡಿ, ನಿರೂಪಿಸುವಲ್ಲಿ ಸಾಜಿದ್ ವಿಫಲರಾಗಿದ್ದಾರೆ. ವಿಮರ್ಶಕರ ವಿಮರ್ಶೆಯ ಸಂಗ್ರಹ ಇಲ್ಲಿದೆ ಓದಿ[ಸಲ್ಲೂ ಕಿಕ್ ಗಳಿಕೆ ಬೊಂಬಾಟ್ ]

  ಒನ್ ಇಂಡಿಯಾ ವಿಮರ್ಶೆ 4/5

  ಒನ್ ಇಂಡಿಯಾ ವಿಮರ್ಶೆ 4/5

  ಫುಲ್ ಮಸಾಲೆ ಮನರಂಜನೆಯುಕ್ತ ಕಿಕ್ ನೀಡುವ ಚಿತ್ರ ಇದಾಗಿದೆ. ಸಲ್ಮಾನ್ ಖಾನ್ ಅವರು ದೇವಿಲಾಲ್ ಹಾಗೂ ಡೇವಿಲ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಾಜಿದ್ ಒಳ್ಳೆ ಹಾಲಿವುಡ್ ಸಾಹಸ ಚಿತ್ರದ ಫೀಲ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಜಾಕ್ವಲಿನ್ ಡಬ್ಬಿಂಗ್ ಸಹಿಸಿಕೊಂಡರೆ ಚಿತ್ರ ಪೈಸಾ ವಸೂಲ್ ಎನ್ನುವುದರಲ್ಲಿ ತಪ್ಪೇನಿಲ್ಲ. ಒಟ್ಟಾರೆ ಇದು ಸಲ್ಲೂ ಫ್ಯಾನ್ಸಿಗೆ ಹೇಳಿ ಮಾಡಿಸಿದ ಚಿತ್ರ

  ಎನ್ ಡಿಟಿವಿ ಮೂವೀಸ್ 2.5 /5

  ಎನ್ ಡಿಟಿವಿ ಮೂವೀಸ್ 2.5 /5

  ಸಲ್ಮಾನ್ ಬಿಟ್ಟರೆ ನವಾಜುದ್ದೀನ್ ಸಿದ್ದಿಕಿ ಕಿಕ್ ನೀಡುತ್ತಾರೆ ಆದರೆ ಹೆಚ್ಚಿನ ರೋಲ್ ಸಿಕ್ಕಿಲ್ಲ. ಸಲ್ಲೂ ಫ್ಯಾನ್ಸಿಗಾಗಿ ಮಾಡಿರುವ ಚಿತ್ರ. ರಾಬಿನ್ ವುಡ್ ಮಾದರಿ ಚಿತ್ರಗಳು ಸಿನಿರಸಿಕರಿಗೆ ಹೊಸತೇನಲ್ಲ. ಮಿಥುನ್ ಚಕ್ರವರ್ತಿ, ಅರ್ಚನಾ ಪೂರನ್ ಸಿಂಗ್ ಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಒಟ್ಟಾರೆ ಟೈಂ ಪಾಸ್ ಗೆ ನೋಡಿ ಇಲ್ಲ ಸುಮ್ಮನಿದ್ದು ಬಿಡಿ

  ಇಂಡಿಯಾ ಟುಡೇ ವಿಮರ್ಶೆ 1.5/5

  ಇಂಡಿಯಾ ಟುಡೇ ವಿಮರ್ಶೆ 1.5/5

  ನಿರೀಕ್ಷಿತ ಸನ್ನಿವೇಶಗಳು, ಧೂಮ್ 3 ಮಾದರಿ ಫೈಟ್ ದೃಶ್ಯ, ನೈಜತೆ ಇಲ್ಲದ ಫ್ಯಾನ್ಸ್ ಮೆಚ್ಚಿಸಲು ಸೃಷ್ಟಿಸಿದ ಮಾತುಗಾರಿಕೆ, ಕಿಕ್ ನೀಡದ ಚಿತ್ರಕಥೆ ಹಾಗೂ ನಿರೂಪಣೆ ಸಿದ್ದಿಕಿ ಪಾತ್ರಕ್ಕೆ ಹೆಚ್ಚಿನ ಮಹತ್ವ ನೀಡದಿರುವುದು ಸಾಕು ಬಿಡಿ ಸುಮ್ಮನೇ ಚಿತ್ರ ನೋಡದೆ ಮನೆಯಲ್ಲೆ ಪಾಪ್ ಕಾರ್ನ್ ತಿಂದು ಯೂಟ್ಯೂಬ್ ನಲ್ಲಿ ಡೆವಿಲ್ ಸಾಂಗ್ ನೋಡಿ ಆನಂದಿಸಿ- ಸುಹಾನಿ ಸಿಂಗ್

  ಡೆಕ್ಕನ್ ಕ್ರಾನಿಕಲ್ ವಿಮರ್ಶೆ 3/5

  ಡೆಕ್ಕನ್ ಕ್ರಾನಿಕಲ್ ವಿಮರ್ಶೆ 3/5

  ಅಲ್ಲಲ್ಲಿ ಅಲ್ಪ ಸ್ವಲ್ಪ ಬೋರ್ ಹೊಡೆಸಿದರೂ ಸಲ್ಮಾನ್ ಅವರ ವಾಂಟೆಡ್, ದಬ್ಬಾಂಗ್ ಸರಣಿ ನೋಡಿಕೊಂಡು ಮೆಚ್ಚಿದವರಿಗೆ ಈ ಚಿತ್ರ ರಸದೌತಣ. ಜೈ ಹೋ ಚಿತ್ರದ ಸೋಲಿನ ನಂತರ ಕಿಕ್ ಸಲ್ಮಾನ್ ಗೆ ಹೊಸ ಕಿಕ್ ನೀಡುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಚಿತ್ರ ಎಲ್ಲರನ್ನು ಮೆಚ್ಚಿಸುವಲ್ಲಿ ವಿಫಲವಾದರೂ ಪೈಸಾ ವಸೂಲ್ ಎನ್ನಬಹುದು.

  ಇಂಡಿಯನ್ ಎಕ್ಸ್ ಪ್ರೆಸ್ 2/5

  ಇಂಡಿಯನ್ ಎಕ್ಸ್ ಪ್ರೆಸ್ 2/5

  ದೇವಿಲಾಲ್ ಸಿಂಗ್, ಡೆವಿಲ್ ಪಾತ್ರಗಳ ಪೋಷಣೆಗೆ ಸಿಕ್ಕ ಮಾನ್ಯತೆ ಸಿದ್ದಿಕಿ ಪಾತ್ರಕ್ಕೆ ಸಿಕ್ಕಿಲ್ಲ, ಜಾಕ್ವಲಿನ್ ಬರೀ ಬೊಂಬೆಯಾಗಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಜೀವಾಳವಾಗ ಬೇಕಿದ್ದ ಪಾತ್ರ ನಿರ್ವಹಿಸುವಲ್ಲಿ ಸೋತಿದ್ದಾರೆ. ಸಲ್ಮಾನ್ ಒನ್ ಲೈನರ್, ಮ್ಯಾನರೀಸಂ ಬೇಸರ ಎನಿಸುವಷ್ಟಿದೆ. ಫೈಟಿಂಗ್, ಚೇಸಿಂಗ್ ಹೊಸತನದಿಂದ ಕೂಡಿದ್ದರೂ ಎಲ್ಲೋ ನೋಡಿದ ಹಾಗೆ ಅನ್ನಿಸುತ್ತದೆ. ಒಟ್ಟಾರೆ ಚಿತ್ರ ಸತ್ವ ಕಳೆದುಕೊಂಡಿದೆ.

  ರೀಡಿಫ್ ವಿಮರ್ಶೆ 3/5

  ರೀಡಿಫ್ ವಿಮರ್ಶೆ 3/5

  ಸಾಜಿದ್ ನಾಡಿಯಾದ್ ವಾಲಾ ಅವರ 'ಕಿಕ್' ಚಿತ್ರಕ್ಕಾಗಿ ಸಲ್ಮಾನ್ ಖಾನ್ ಒರಿಜಿನಲ್ ಮೀಸೆ, ಗಡ್ಡ ಬಿಡಲು ನಿರ್ಧರಿಸಿರುವುದು ಎಲ್ಲರಿಗೂ ಅಚ್ಚರಿ ಹುಟ್ಟಿಸಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಫ್ರೆಂಚ್ ಗಡ್ಡವಷ್ಟೇ ಅಲ್ಲ ಕಿವಿಗೆ ಓಲೆಯನ್ನೂ ಸಿಕ್ಕಿಸಿಕೊಳ್ಳಲಿದ್ದಾರೆ. ಸಲ್ಲೂ ಹೊಸ ಲುಕ್ ಈಗಾಗಲೇ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

  ‌ಚಿತ್ರದಲ್ಲಿ ಎಲ್ಲವೂ ಎಲ್ಲರಿಗೂ ನಿರೀಕ್ಷಿತ ಎನಿಸಿದರೂ ಹೊಸ ಲುಕ್ ಸಲ್ಮಾನ್ ಆಡುವ ಆಟಗಳು ಮನರಂಜನೆ ನೀಡದೆ ಇರದು. ಸಾಜಿದ್ ನಿರ್ದೇಶಕರಾಗಿ ಇನ್ನೂ ಪಳಗಬೇಕಾದರೂ ಮಸಾಲೆ ಭರಿತ ಚಿತ್ರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

  ಬಾಲಿವುಡ್ ಲೈಫ್ 4.5/5

  ಬಾಲಿವುಡ್ ಲೈಫ್ 4.5/5

  ವೀಕೆಂಡ್ ನಲ್ಲಿ ಕಿಕ್ ಬೇಕಾದರೆ ತಪ್ಪದೇ ನೋಡಿ. ಮೊದಲರ್ಧದಲ್ಲಿ ಸ್ವಲ್ಪ ನಿಧಾನಗತಿ ಕಥಾ ನಿರೂಪಣೆ, ಸೆಂಟಿಮೆಂಟ್ ಬಿಟ್ಟರೆ ದ್ವಿತೀಯಾರ್ಧದಲ್ಲಿ ಸಕತ್ ಕಿಕ್ ನೀಡುತ್ತದೆ. ಸಲ್ಮಾನ್ ಇಡೀ ಚಿತ್ರವನ್ನು ತೂಗಿಸಿಕೊಂಡು ಹೋಗುತ್ತಾರೆ. ಸಿದ್ದಿಕಿ ಹಾಗೂ ಹೂಡಾ ಕೂಡಾ ಪಾತ್ರಕ್ಕೆ ತಕ್ಕ ಪೋಷಣೆ ನೀಡಿದ್ದಾರೆ.

  English summary
  Kick Critics Movie Review: A full masala entertainer, that Salman Khan has solely carried on his shoulders. The rest of the star cast only adds to the opulence of the movie, like a cherry on the icing of a very delicious cake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X