»   » 'ಲೊಡ್ಡೆ' ಸ್ವಲ್ಪ ಕಾಮಿಡಿ, ರೋಮಾನ್ಸ್: ಇದು ಅಜ್ಜಿ ಕಥೆ

'ಲೊಡ್ಡೆ' ಸ್ವಲ್ಪ ಕಾಮಿಡಿ, ರೋಮಾನ್ಸ್: ಇದು ಅಜ್ಜಿ ಕಥೆ

Posted By:
Subscribe to Filmibeat Kannada

ವಿಷ್ಣು ಫ್ಯಾನ್ ಕೋಮಲ್ ಅಭಿನಯದ 'ಲೊಡ್ಡೆ' ಚಿತ್ರ ಇಂದು (ಜುಲೈ 31) ಭರ್ಜರಿಯಾಗಿ ತೆರೆ ಕಂಡಿದ್ದು ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಈಗಾಗಲೇ ಟ್ವಿಟ್ಟರ್ ನಲ್ಲಿ 'ಲೊಡ್ಡೆ' ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ.

ಎಸ್.ವಿ.ಸುರೇಶ್ ಆಕ್ಷನ್-ಕಟ್ ಹೇಳಿರುವ ಸ್ಯಾಂಡಲ್ ವುಡ್ ಕಾಮಿಡಿ ನಟ ಕೋಮಲ್ ಕುಮಾರ್, ಅಕಾಂಕ್ಷ ಪುರಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಲೊಡ್ಡೆ' ಫ್ಯಾಮಿಲಿ ಕುಳಿತು ನೋಡಬಹುದಾದ ಸಂಪೂರ್ಣ ಮನೋರಂಜನಾತ್ಮಕ ಚಿತ್ರ. ಚಿತ್ರಕ್ಕೆ ಮಂಜುನಾಥ್ ಬಂಡವಾಳ ಹಾಕಿದ್ದಾರೆ.

ನಾಯಕ ಕೋಮಲ್ ಕುಮಾರ್ ತನ್ನ ಅಜ್ಜಿಯ ಕಡೆಯ ಆಸೆಯಂತೆ ಬಿರುಕು ಬಿಟ್ಟಿರುವ ಎರಡು ಕುಟುಂಬಗಳನ್ನು ಒಂದು ಮಾಡಲು ಪ್ರಯತ್ನಿಸುವುದು 'ಲೊಡ್ಡೆ' ಚಿತ್ರದ ಕಥಾಹಂದರ. ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ಅವರಿಗೆ ವಿಶೇಷ ಹಾಡೊಂದನ್ನು ಅರ್ಪಿಸಲಾಗಿದೆ. ಚಿತ್ರದ ಸುಂದರ ಹಾಡುಗಳಿಗೆ ಚರಣ್ ಬಾಂಜೋ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಸದ್ಯಕ್ಕೆ 'ಲೊಡ್ಡೆ' ಚಿತ್ರದ ಬಗ್ಗೆ ಸಿನಿಪ್ರಿಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್ ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಚಿತ್ರದ ನಾಯಕಿ ಆಕಾಂಕ್ಷ ಪುರಿ ಕೂಡ ತಮ್ಮ ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Rating:
3.0/5

ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ಅಭಿನಯಿಸಿರುವ ಆಕಾಂಕ್ಷ ಪುರಿ, ಅಭಿಮಾನಿಗಳ ಕಡೆಯಿಂದ ಪಾಸಿಟಿವ್ ರೆಸ್ಪಾನ್ಸ್ ಬಂದಿರುವುದಕ್ಕೆ ಫುಲ್ ಖುಷ್ ಆಗಿಬಿಟ್ಟಿದ್ದಾರೆ.

'ಲೊಡ್ಡೆ' ಚಿತ್ರದ ಬಗ್ಗೆ ಟ್ವಿಟ್ಟರ್ ಟ್ರೆಂಡಿಂಗ್ ಆಗ್ತಾ ಇದ್ದು, ಅಭಿಮಾನಿಗಳ ಪ್ರತಿಕ್ರಿಯೆ ಹೇಗಿದೆ ನೋಡಿ..

ಕನ್ನಡ ಸಿನಿಲೋಕ

ಕೋಮಲ್ ಕುಮಾರ್, ಆಕಾಂಕ್ಷ ಪುರಿ 'ಲೊಡ್ಡೆ' ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ . ಚಿತ್ರದ ರೆಟಿಂಗ್ 3.25/5 , ನೋಡಬಹುದು.

'ಲೊಡ್ಡೆ' ನಾಯಕಿ ಆಕಾಂಕ್ಷ ಪುರಿ

ನನ್ನ ಅಭಿನಯ ಮೆಚ್ಚಿದ ಅಭಿಮಾನಿಗಳಿಗೆ ನಾನು ಚಿರ ಋಣಿಯಾಗಿರುತ್ತೇನೆ. ಪಾಸಿಟಿವ್ ರೆಸ್ಪಾನ್ಸ್ ನೋಡಿ ತುಂಬಾನೇ ಖುಷಿಯಾಗುತ್ತಿದೆ. ನನ್ನನ್ನು ಕನ್ನಡದ ನಾಯಕಿಯಾಗಿ ಸ್ವೀಕಾರ ಮಾಡಿದ ಸ್ಯಾಂಡಲ್ ವುಡ್ ಪ್ರೇಕ್ಷಕರನ್ನು ಅಭಿನಂದಿಸಲು ಇಷ್ಟಪಡುತ್ತೇನೆ, ಎಂದು 'ಲೊಡ್ಡೆ' ನಾಯಕಿ ಆಕಾಂಕ್ಷ ಪುರಿ ಟ್ವೀಟ್ ಮಾಡಿದ್ದಾರೆ.

141 ನಿಮಿಷಗಳ 'ಲೊಡ್ಡೆ' ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ನಿಂದ 9 ಕಟ್

141 ನಿಮಿಷಗಳ 'ಲೊಡ್ಡೆ' ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ನಿಂದ 9 ಸೆನ್ಸಾರ್ ಕಟ್. ಇಂಟರ್ ವಲ್ ನಂತರ ಸ್ವಲ್ಪ ಡ್ರಾಮಾ, ಸ್ವಲ್ಪ ಕಾಮಿಡಿ ಪಂಚ್ ಎಂದ ಚಿತ್ರ ವಿಮರ್ಶಕ.

ಎರಡು ಕುಟುಂಬಗಳು ಒಂದಾಗಬೇಕು

'ಲೊಡ್ಡೆ' ಅಂದರೆ ಎಡಗೈ ಜಾಸ್ತಿ ಬಳಸುವವರಿಗೆ ಕರೆಯುವ ಪದವಾಗಿದೆ. ಎಡಗೈ ಬಳಕೆ ಮಾಡುವ ಡಾ.ವಿಷ್ಣು ಅವರಿಗೆ ಈ ಚಿತ್ರದ ಒಂದು ಹಾಡನ್ನು ಅರ್ಪಿಸಲಾಗಿದ್ದು, ಇಂಟ್ರೋ ಸಾಂಗ್ ಮೂಲಕ ನಾಯಕ ಎಂಟ್ರಿ ಪಡೆದುಕೊಳ್ಳುತ್ತಾನೆ. ಎರಡು ಕುಟುಂಬಗಳು ಒಂದಾಗಬೇಕು ಎಂದು ಹೋರಾಡುವ ಚಿತ್ರದ ನಾಯಕ ಕೋಮಲ್, ಎಂದು ಚಿತ್ರ ನೋಡಿದ ಚಿತ್ರ ವಿಮರ್ಶಕ ಟ್ವೀಟ್ ಮಾಡಿದ್ದಾರೆ.

ವಾವ್!! ಟ್ವಿಟ್ಟರ್ ಟ್ರೆಂಡಿಂಗ್ ಹೇಗಿದೆ ನೋಡಿ.

ಅಂತೂ ಇಂತೂ ಹಾಸ್ಯ ನಟ ಕೋಮಲ್ 'ಲೊಡ್ಡೆ' ಚಿತ್ರ ಟ್ರೆಂಡಿಂಗ್ ಆಗುತ್ತಿದೆ ಅಂದ ಸಿನಿಲೋಕ.

ಒಟ್ಟಾರೆ ಕೋಮಲ್ 'ಲೊಡ್ಡೆ'

ಒಟ್ಟಾರೆಯಾಗಿ ಕೋಮಲ್ 'ಲೊಡ್ಡೆ' ಚಿತ್ರದ ಬಗ್ಗೆ ಹೇಳಬೇಕೆಂದರೆ ನೀವು ವಿಷ್ಣು ಫ್ಯಾನ್ ಆಗಿದ್ದರೆ ಈ ವಾರ ಚಿತ್ರ ನೋಡಲು ತಯಾರಾಗಿ. ಮತ್ತೊಂದು ವಿಚಾರ ಹೇಳಬೇಕೆಂದರೆ 'ಗೋವಾ' ಚಿತ್ರದಲ್ಲಿ ನಿರೀಕ್ಷಿಸಿದಷ್ಟು ಯಶಸ್ಸು ಗಳಿಸಿದ ಕೋಮಲ್ 'ಲೊಡ್ಡೆ' ಮೂಲಕ ನೀಟಾಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ.

'ಲೊಡ್ಡೆ' ಚಿತ್ರದ ತಾರಾಬಳಗ

ಕೋಮಲ್ ಕುಮಾರ್, ಆಕಾಂಕ್ಷ ಪುರಿ, ಅವಿನಾಶ್, ನವೀನ್ ಕೃಷ್ಣ, ಸಯಾಜಿ ಶಿಂಧೆ, ಮುಖ್ಯಮಂತ್ರಿ ಚಂದ್ರು, ಮುಂತಾದ ತಾರಾ ಬಳಗವಿದೆ.

English summary
Comedy star Komal Kumar starrer 'Lodde' has released all over Karnataka today (July 31st). 'Lodde' is definitely a treat for Komal Kumar fans. Here is the complete review of the movie
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada