Just In
Don't Miss!
- News
ನಿಪ್ಪಾಣಿಯಲ್ಲಿ ಆಸ್ಪತ್ರೆ ಉದ್ಘಾಟನೆ; ಕನ್ನಡದ ಬಳಕೆಯೇ ಇಲ್ಲ!
- Lifestyle
ಕೋವಿಡ್ 19 ಲಸಿಕೆ: ಕೋವಿಡ್ಶೀಲ್ಡ್, ಕೊವಾಕ್ಸಿನ್ ಅಡ್ಡಪರಿಣಾಮಗಳು
- Automobiles
ಸಂಚಾರ ನಿಯಮಗಳ ಅರಿವಿರದೇ ಕಾರು ಚಾಲನೆ ಮಾಡುತ್ತಿದ್ದಾರೆ 95%ನಷ್ಟು ಕಾರು ಚಾಲಕರು
- Education
IRCTC Recruitment 2021: ಗ್ರೂಪ್ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ
- Sports
ಭಾರತ vs ಆಸ್ಟ್ರೇಲಿಯಾ: ಫೀಲ್ಡಿಂಗ್ನಲ್ಲಿ ವಿಶೇಷ ಸಾಧನೆ ಮಾಡಿದ ರೋಹಿತ್ ಶರ್ಮಾ
- Finance
ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಉಪಾಧ್ಯಕ್ಷ ಜೇ ವೈ. ಲೀಗೆ ಮೂರು ವರ್ಷ ಜೈಲು ಶಿಕ್ಷೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಮರ್ಶೆ: ಹಳೇ ಡವ್ ಗಳನ್ನು ನೆನಪಿಸುವ 'ಶ್ರೀನಿವಾಸ ಕಲ್ಯಾಣ'
ಆಗಾಗ ನೆನಪಾಗುವ ಹಳೇ ಲವರ್ ಗಳ ಕಥೆಗಳು. ಹೊಸ ಲವರ್ ಗಳು ಸಿಗದೇ, ಇತ್ತ ಮದುವೆ ಆಗಲು ಹುಡುಗಿಯೂ ಸಿಗದೇ ಪೇಚಾಡುವ ಬ್ಯಾಚುಲರ್ ಗಳು. ಈ ಸನ್ನಿವೇಶಗಳನ್ನು ಇಟ್ಟುಕೊಂಡು ರಿಯಲ್, ರೀಲು ಮಿಶ್ರಣ ಮಾಡಿ ನಿರ್ಮಾಣ ಮಾಡಿರುವ 'ಶ್ರೀನಿವಾಸ ಕಲ್ಯಾಣ' ಇಂದು ತೆರೆ ಕಂಡಿದೆ. ನಿರ್ದೇಶಕ ಎಂ.ಜಿ ಶ್ರೀನಿವಾಸ್ ಪ್ರೀತಿ ಮತ್ತು ಮದುವೆ ಸುತ್ತ ಸುತ್ತುವ ಒಂದು ಕಥೆಯನ್ನು ಕಾಮಿಡಿ ಮೂಲಕ ತೋರಿಸುವಲ್ಲಿ ಯಶಸ್ವಿ ಆಗಿದ್ದಾರೆ.

'ಶ್ರೀನಿವಾಸ ಕಲ್ಯಾಣ' ಕಥಾ ಹಂದರ
ಎಲ್.ಕೆ ಬಾಲು (ಎಂ.ಜಿ ಶ್ರೀನಿವಾಸ್) ಟಿವಿ ನಿರೂಪಕ. ಈತನ ಮದುವೆಗೆ ಹೊರಡುವ ಗುರುಗಳು(ದತ್ತಣ್ಣ) ನಿರ್ದೇಶಕರೊಬ್ಬರಿಗೆ ಬಾಲು ಜೀವನದ ಶಾಲಾ ದಿನಗಳಿಂದ ಹಿಡಿದು ಕ್ರಶ್, ಮೊದಲ ಪ್ರೀತಿ, ಎರಡನೇ ಪ್ರೀತಿ, ಈ ಪ್ರೀತಿಗಳು ಏಕೆ ಸಕ್ಸಸ್ ಆಗಲಿಲ್ಲ, ಕೊನೆಗೆ ಬಾಲು ಮದುವೆ ಆಗುತ್ತಿರುವುದು ಯಾರನ್ನು ಎಂದು ಹೇಳುವುದೇ ಚಿತ್ರದ ಕಥೆ.

ಲವ್ ಮಾಡೋದು ಸುಲಭ
ಚಿತ್ರದ ನಾಯಕ ಎಲ್.ಕೆ ಬಾಲು (ಎಂ.ಜಿ ಶ್ರೀನಿವಾಸ್)ಗೆ ಕಾಲೇಜಿನಲ್ಲಿ ಅಕ್ಷರ(ಕವಿತಾ) ಮೇಲೆ ಲವ್ ಆಗುತ್ತೆ. ಆದ್ರೆ ಈ ಲವ್ ಸಕ್ಸಸ್ ಆಗೋದಿಲ್ಲ. ಹಾಗಂತ ಈಕೆಯ ಮದುವೆ ರಿಸೆಪ್ಸನ್ ಗೆ ಬಾಲು ಹೋಗುವುದು ತಪ್ಪೋದಿಲ್ಲ. ಇನ್ನೂ ಬಾಲುಗೆ ಎರಡನೇ ಲವ್ ರಾಧಾ(ನಿಖಿಲಾ ರಾವ್) ಮೇಲೆ ಆಗುವ ಮನ್ಸೂಚನೆ ತೆರೆ ಮೇಲೆ ಕಾಣುತ್ತಿರುವ ವೇಳೆಗೆ ಕತ್ತಲು ಶುರುವಾಗಿ ಇಂಟರ್ ವಲ್ ಬರುತ್ತೆ. ಮುಂದೆ ಏನಾಗುತ್ತೆ? ಅದನ್ನ ಚಿತ್ರಮಂದಿರದಲ್ಲೇ ನೋಡಿ.

ಶ್ರೀನಿಯ ಆಕ್ಟಿಂಗ್ ಹೇಗಿದೆ?
ಈ ಹಿಂದೆ 'ಟೋಪಿವಾಲಾ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಎಂ.ಜಿ ಶ್ರೀನಿವಾಸ್, 'ಶ್ರೀನಿವಾಸ ಕಲ್ಯಾಣ' ಚಿತ್ರವನ್ನು ನಿರ್ದೇಶಿಸುವ ಜೊತೆಗೆ ಅವರೇ ನಾಯಕ ನಟನಾಗಿ ತೆರೆ ಮೇಲೆ ಬಂದಿದ್ದಾರೆ. ನಿರ್ದೇಶನದ ಜೊತೆಗೆ ತಾವು ಆಕ್ಟಿಂಗ್ ನಲ್ಲೂ ನಿಪುಣರು ಎಂದು ತೋರಿಸಿದ್ದು, ಅನುಭವಿ ಕಲಾವಿದರಂತೆ ಡೈಲಾಗ್ ಡೆಲಿವರಿ ಮಾಡಿದ್ದಾರೆ. ಅಲ್ಲದೇ ತಮ್ಮ ಇಂಟ್ರೋ ಸಾಂಗ್ ನಲ್ಲೇ ಅತ್ಯುತ್ತಮವಾಗಿ ಸ್ಟೆಪ್ ಹಾಕಿದ್ದಾರೆ.

ಹಳೇ ಡವ್ ಗಳು ಸೂಪರ್
ಚಿತ್ರದಲ್ಲಿ ಕವಿತಾ (ಅಕ್ಷರ) ನಾಯಕನ ಮೊದಲನೇ ಡವ್ ಆಗಿ ಕಾಣಿಸಿಕೊಂಡಿದ್ದು, ತಮ್ಮ ಮುಗ್ಧತೆ ಮತ್ತು ಮೋಹಕ ನೋಟದಿಂದ ಪಡ್ಡೆ ಹುಡುಗರ ಹೃದಯ ಕದಿಯುತ್ತಾರೆ. ಸೆಕೆಂಡ್ ಹಾಫ್ ನಲ್ಲಿ ಎರಡನೇ ಡವ್ ಆಗಿ ಕಾಣಿಸಿಕೊಳ್ಳುವ ನಿಖಿಲಾ ರಾವ್ (ರಾಧಾ) ಸ್ಟ್ರೈಟ್ ಫಾವರ್ಡ್ ಮತ್ತು ಡಬಲ್ ಮೀನಿಂಗ್ ಡೈಲಾಗ್ ಗಳ ಮೂಲಕ ಮನರಂಜಿಸುತ್ತಾರೆ.

ಬೆಂಕಿ ಕಾಮಿಡಿ
ಬೆಳ್ಳಿತೆರೆ ಮೇಲೆ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿರುವ ಸುಜಯ್ ಶಾಸ್ತ್ರಿ ಚಿತ್ರದಲ್ಲಿ ಬೆಂಕಿ ಎಂಬ ಹೆಸರಿನಿಂದ ಕರೆಸಿಕೊಂಡಿದ್ದು, ಪ್ರೇಕ್ಷಕರಿಗೆ ಕಾಮಿಡಿ ಮಾಡುತ್ತಾರೆ. ಎಂ.ಜಿ ಶ್ರೀನಿವಾಸ್ ಗೆಳೆಯನಾಗಿ ಪ್ರೇಕ್ಷಕರನ್ನು ಗಮನ ಸೆಳೆಯಲು ಹೆಚ್ಚಾಗಿ ಸಾಥ್ ಕೊಟ್ಟಿದ್ದಾರೆ ಸುಜಯ್.

ಉಳಿದವರು
ವಿಶೇಷ ಪಾತ್ರದಲ್ಲಿ ದತ್ತಣ್ಣ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕನ ತಂದೆಯಾಗಿ ಅಭಿನಯಿಸಿರುವ ಅಚ್ಯುತ್ ಕುಮಾರ್ ಪ್ರೇಕ್ಷಕನಿಗೆ ಮನರಂಜನೆ ನೀಡುತ್ತಾರೆ.

ಶ್ರೀನಿವಾಸ್ ನಿರ್ದೇಶನ ಹೇಗಿದೆ?
ನಿರ್ದೇಶನ ಮತ್ತು ಆಕ್ಟಿಂಗ್ ಎರಡು ಕಡೆ ಶ್ರೀನಿವಾಸ್ ಗಮನ ಹರಿಸಿರುವುದರಿಂದ, ಶ್ರೀನಿವಾಸ ಕಲ್ಯಾಣ ನಿರ್ದೇಶನದಲ್ಲಿ ಕೊಂಚ ಮಂಕಾಗಿರುವುದು ಎದ್ದು ಕಾಣುತ್ತದೆ. ಡಬಲ್ ಮೀನಿಂಗ್ ಡೈಲಾಗ್ ಗಳಿಂದ ಚಿತ್ರದ ನಾಲ್ಕು ಸನ್ನಿವೇಶಗಳಲ್ಲಿ ಪ್ರೇಕ್ಷಕರಿಗೆ ಮುಜುಗರ ಉಂಟುಮಾಡುತ್ತವೆ. ತಾಂತ್ರಿಕವಾಗಿ ಚಿತ್ರದ ಗುಣಮಟ್ಟವನ್ನು ಇನ್ನಷ್ಟು ಉತ್ತಮವಾಗಿಸಬಹುದಿತ್ತು.

ನೆನಪಲ್ಲಿ ಉಳಿಯುವುದು 'ಫಸ್ಟ್ ಲವ್' ಹಾಡು
ಚಿತ್ರದಲ್ಲಿ 5 ಹಾಡುಗಳು ಇದ್ದರೂ, ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವುದು 'ಗ್ಯಾಪು ಗ್ಯಾಪಲಿ ಸಣ್ಣ ಗ್ಯಾಪಲಿ ನಂಗು ಆಯ್ತು ಫಸ್ಟ್ ಲವ್' ಎಂಬ ಒಂದು ಹಾಡು ಮಾತ್ರ. ಸಂಗೀತದ ಬಗ್ಗೆ ಇನ್ನಷ್ಟು ಎಚ್ಚರ ವಹಿಸಬೇಕಿತ್ತು.

ತಾಂತ್ರಿಕವಾಗಿ 'ಶ್ರೀನಿವಾಸ ಕಲ್ಯಾಣ'
ಚಿತ್ರವನ್ನು ಸ್ಟಾಪ್ ಮೋಷನ್ ತಂತ್ರಜ್ಞಾನ ಬಳಕೆ ಜೊತೆಗೆ 5ಡಿ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದ್ದು, ಛಾಯಾಗ್ರಹಣ ಉತ್ತಮವಾಗಿದೆ. ಆದರೆ ಸಂಕಲನದಲ್ಲಿ ವಿಕ್ರಮ್ ಶ್ರೀಧರ್ ಕಂಟ್ಯೂನಿಟಿಯಲ್ಲಿ ಅಲ್ಲಲ್ಲಿ ಎಡವಿರುವುದು ಕಂಡುಬರುತ್ತದೆ.

ಫೈನಲ್ ಸ್ಟೇಟ್ಮೆಂಟ್
'ಶ್ರೀನಿವಾಸ ಕಲ್ಯಾಣ' ಚಿತ್ರದಲ್ಲಿ ಸಖತ್ ಮನರಂಜನೆ ಸಿಗುವುದು ಗ್ಯಾರೆಂಟಿ. ವೀಕೆಂಡ್ ನಲ್ಲಿ ಮನಸ್ಸು ಫ್ರೀ ಆಗಲು ಒಳ್ಳೆಯ ಎಂಟರ್ ಟೇನ್ಮೆಂಟ್ ಬೇಕು ಅಂದ್ರೆ ಈ ಚಿತ್ರ ಉತ್ತಮ ಆಯ್ಕೆ.