»   » 'ಗಂಗಾ' ಪರಾಕ್ರಮ ನೋಡಿ ಮೆಚ್ಚಿದ್ರಾ ವಿಮರ್ಶಕರು?

'ಗಂಗಾ' ಪರಾಕ್ರಮ ನೋಡಿ ಮೆಚ್ಚಿದ್ರಾ ವಿಮರ್ಶಕರು?

Posted By:
Subscribe to Filmibeat Kannada

ಗಾಂಧಿನಗರದ ಆಕ್ಷನ್ ಕ್ವೀನ್ ಮಾಲಾಶ್ರೀ ಅಭಿನಯದ 'ಗಂಗಾ' ಸಿನಿಮಾ ತೆರೆಗೆ ಅಪ್ಪಳಿಸಿದೆ. ಮಾಲಾಶ್ರೀ ಅವರ ಇಮೇಜ್ ಗೆ ತಕ್ಕಂತೆ ರೆಡಿಯಾಗಿರುವ ಈ ಸಿನಿಮಾದಲ್ಲಿ ಸಾಹಸ ಮತ್ತು ಕಣ್ಣೀರಿಗೆ ಬರವಿಲ್ಲ.

ಹೇಳಿ ಕೇಳಿ 'ಗಂಗಾ' ಚಿತ್ರದ ನಿರ್ದೇಶಕ ಓಂ ಸಾಯಿ ಪ್ರಕಾಶ್. ಅಂದ್ಮೇಲೆ ಸಿನಿಮಾದಲ್ಲಿ ಕಾಮಿಡಿ, ಆಕ್ಷನ್, ಸೆಂಟಿಮೆಂಟ್ ಹದವಾಗಿ ಬೆರೆತಿರಬೇಕು. ಅದ್ರಲ್ಲೂ, ಕನಸಿನ ರಾಣಿ ಮಾಲಾಶ್ರೀ ಜೊತೆ ಹಿಟ್ ಸಿನಿಮಾಗಳನ್ನ ನೀಡಿದ್ದ ಸಾಯಿ ಪ್ರಕಾಶ್, 'ಗಂಗಾ' ಚಿತ್ರದಲ್ಲೂ ಮನರಂಜನೆಗೆ ಮೋಸ ಮಾಡಿಲ್ಲ.

ಮಾಲಾಶ್ರೀ ಕಟ್ಟಾ ಅಭಿಮಾನಿಗಳಿಗೆ 'ಗಂಗಾ' ಸಿನಿಮಾ ಇಷ್ಟವಾಗಿದೆ. ಆದ್ರೆ, ವಿಮರ್ಶಕರು 'ಗಂಗಾ' ಚಿತ್ರವನ್ನ ವೀಕ್ಷಿಸಿ ಏನ್ ಹೇಳಿದ್ದಾರೆ ಅಂತ ಒಮ್ಮೆ ನೋಡಿಬಿಡೋಣ. [ನೀವು ನೋಡಲೇಬೇಕಾದ, 'ಗಂಗಾ'ಳ 5 ವಿಶೇಷತೆಗಳು!!]

ಕರ್ನಾಟಕದ ಖ್ಯಾತ ದಿನಪತ್ರಿಕೆಗಳು 'ಗಂಗಾ' ಚಿತ್ರದ ಬಗ್ಗೆ ಪ್ರಕಟಿಸಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ...

ಸಹನೆಯ ಪರೀಕ್ಷೆ - ಪ್ರಜಾವಾಣಿ

ಮಾಲಾಶ್ರೀ ಕೈ-ಕೈ ಮಿಲಾಯಿಸುವ ಜತೆಗೆ ಕಣ್ಣೀರನ್ನೂ ಹಾಕುವುದು ಚಿತ್ರದ ವಿಶೇಷ. ಅದಕ್ಕೆ ಕಾರಣ ನಿರ್ದೇಶಕ ಸಾಯಿಪ್ರಕಾಶ್. ‘ಕಣ್ಣೀರ ಧಾರೆ' ಖ್ಯಾತಿಯ ನಿರ್ದೇಶಕರು, ಆಕ್ಷನ್ ಇಮೇಜಿನ ಮಾಲಾಶ್ರೀ ಅವರಿಗೆ ಕಥೆ ಸಿದ್ಧಪಡಿಸಿದ ಮೇಲೆ ಸಾಹಸ ಮತ್ತು ಕಣ್ಣೀರು ಎರಡೂ ಇರಲೇಬೇಕು ಅಲ್ಲವೇ? ಕುಟುಂಬದ ಹಿತಕ್ಕಾಗಿ ವೈಯಕ್ತಿಕ ಸುಖವನ್ನು ತ್ಯಾಗ ಮಾಡುವ ನಾಯಕ ಹಾಗೂ ಆತನ ತ್ಯಾಗವನ್ನು ಅಪಾರ್ಥ ಮಾಡಿಕೊಳ್ಳುವ ಕುಟುಂಬದವರು- ಇಂಥ ಕಥನಗಳು ಕನ್ನಡ ಚಿತ್ರರಂಗಕ್ಕೆ ಹೊಸತಲ್ಲ. ‘ಗಂಗಾ'ದಲ್ಲಿ ನಾಯಕನ ಸ್ಥಾನದಲ್ಲಿ ನಾಯಕಿ ಇದ್ದಾಳೆ ಅಷ್ಟೇ. ಹಳೆಯ ಕಥೆಯನ್ನೇ ತೆರೆಗೆ ತಂದಿರುವ ನಿರ್ದೇಶಕರು, ರುಚಿಯಲ್ಲೇನಾದರೂ ಹೊಸತನ ಸಾಧಿಸಿದ್ದಾರೆಯೇ ಎಂದರೆ ನಿರಾಶೆ ಕಟ್ಟಿಟ್ಟ ಬುತ್ತಿ. - ಡಿ.ಎಂ.ಕುರ್ಕೆ ಪ್ರಶಾಂತ

ಪ್ರೇಕ್ಷಕನ ಮನಸ್ಸು ತುಂಬುವ ಗಂಗಾ - ಕನ್ನಡ ಪ್ರಭ

ನಿರ್ದೇಶಕ ಓಂ ಸಾಯಿ ಪ್ರಕಾಶ್, 'ಗಂಗಾ' ಚಿತ್ರದ ಮೂಲಕ ಮತ್ತೆ ತಮ್ಮ ಹಳೇ ಛಾಪು ತೋರಿದ್ದಾರೆ. ಸೆಂಟಿಮೆಂಟ್ ಚಿತ್ರಕಥೆಯ ಕಸರತ್ತು ವರ್ಕೌಟ್ ಆಗಿದೆ. 18 ವರ್ಷಗಳ ನಂತರ ಆಕ್ಷನ್ ಕ್ವೀನ್ ಮಾಲಾಶ್ರೀಗೆ ಆಕ್ಷನ್ ಕಟ್ ಹೇಳಿರುವ ಅವರು, ತೆರೆಯಲ್ಲಿ ಗಂಗೆಯ ಭಾವತರಂಗಗಳನ್ನು ಎಬ್ಬಿಸಿದ್ದಾರೆ. ನವಿರಾದ ಪ್ರೀತಿ, ದೆವ್ವ-ಭೂತಗಳ ಹಾರರ್ ಜತೆಗೆ ರೌಡಿಸಂ ಚಿತ್ರಗಳ ರಕ್ತಪಾತದ ಅಬ್ಬರ ನಡುವೆ ಗಂಗಾ ಪರಿಶುದ್ಧವಾದ ಭಾವುಕ ಚಿತ್ರವಾಗಿ ಗಮನ ಸೆಳೆಯುತ್ತದೆ. - ದೇಶಾದ್ರಿ

ಗಂಗಾವತಾರದಲ್ಲಿ ಅರ್ಧನಾರೇಶ್ವರಿ - ವಿಜಯ ಕರ್ನಾಟಕ

ಸಾಂಸಾರಿಕ ಚಿತ್ರಗಳು ಅಂದಾಕ್ಷಣ ಸಾಮಾನ್ಯವಾಗಿ ತ್ಯಾಗಮಯ ಕತೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಗಂಗಾ ಸಿನಿಮಾದಲ್ಲೂ ಅಂಥದ್ದೇ ಕತೆ ಇದೆ. ಕಣ್ಣೀರಿನ ಕತೆಯ ಜತೆಗೆ ಆಕ್ಷನ್ ದೃಶ್ಯಗಳನ್ನು ಅರೆದು, ಖಾರಾಬಾತ್ ಮಾಡಿದ್ದಾರೆ ನಿರ್ದೇಶಕ ಓಂ ಸಾಯಿಪ್ರಕಾಶ್. ಗಂಗಾ ಚಿತ್ರದಲ್ಲಿ ಮಾಲಾಶ್ರೀ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಆಟೋ ಡ್ರೈವರ್ ಪಾತ್ರವಾದರೆ, ಮತ್ತೊಂದು ಗೃಹಿಣಿ. ಅಳುಮುಂಜಿ ಪಾತ್ರವು ಗುಲಗಂಜಿಯಷ್ಟಿದ್ದು, ಡ್ರೈವರ್ ಪಾತ್ರದಲ್ಲಿ ಖಡಕ್ಕಾಗಿಯೇ ಪಂಚ್ ಕೊಟ್ಟಿದ್ದಾರೆ. ಮಾಲಾಶ್ರೀ ಚಿತ್ರದಲ್ಲಿದ್ದರೆ, ಅಲ್ಲಿ ನಾಯಕರಿಗೆ ಪ್ರವೇಶವಿಲ್ಲ. ಈ ಚಿತ್ರದಲ್ಲೂ ಇವರೇ ನಾಯಕ ಕಂ ನಾಯಕಿ. ಹೀಗಾಗಿ ಮಾಲಾಶ್ರೀಯನ್ನೇ ಮನಸ್ಸಲ್ಲಿಟ್ಟುಕೊಂಡು ಕತೆ ಬರೆದಂತಿದೆ. - ಶರಣು ಹುಲ್ಲೂರು

Ganga Movie Review - Times of India

Ganga, an autorickshaw driver, is the quintessential family heroine who sacrifices her needs before her family's. Does this prove too much for her? Om Saiprakash is synonymous with highly emotional dramas, which tend to lean towards sorrow. Malashree is the lady action superstar. What happens when the two meet? You guessed it right, a highly melancholic action drama. Do they mix well? Not quite. Malashree's style of action is a tad too old. Agreed that 80s and 90s action dramas are making a comeback, but it's hard to imagine every punch that the actress delivers sends a huge stuntsman flying across several feet. Though her entry scene, which sees her coming in an auto wheelie and then jumping across several jeeps, is quite the treat for the front benchers. - Sunayana Suresh

English summary
Kannada Actress Malashri starrer Kannada Movie 'Ganga' has received mixed response from the critics. Here is the collection of reviews by Top News Papers of Karnataka.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X