»   » ವಿಮರ್ಶೆ: 'ಕಡಲ' ತಟದಲ್ಲಿ ಮಣಿರತ್ನಂ ಪ್ರೇಮ ಕಾವ್ಯ

ವಿಮರ್ಶೆ: 'ಕಡಲ' ತಟದಲ್ಲಿ ಮಣಿರತ್ನಂ ಪ್ರೇಮ ಕಾವ್ಯ

By: * ಅನ್ಬು
Subscribe to Filmibeat Kannada

ತಪ್ಪು-ಸರಿಗಳ ಒಪ್ಪು ನೆಪ್ಪುಗಳ ನಡುವೆ ಸುಂದರ ಕಡಲ ಕಿನಾರೆಯ ಜೊತೆಗೆ ಸುಶ್ರಾವ್ಯ ಹಿನ್ನೆಲೆ ಸಂಗೀತ ಜೊತೆಗೆ ಯುವ ಪ್ರೇಮಿಗಳ ಕಥೆ ಹೇಳ ಹೊರಟ ಮಣಿರತ್ನಂ ಎಡವಿದ್ದಾರೆಯೇ? ಯಾಕೋ ಹಾಗೆನ್ನಿಸುತ್ತದೆ.

ರಾವಣನ್ ಚಿತ್ರ ನೀರಿನಲ್ಲಿ ಮುಳುಗಿದ ಮೇಲೆ, ಕಡಲ್ ಚಿತ್ರ ಮುಗಿಯುವಷ್ಟರಲ್ಲಿ ಪ್ರೇಕ್ಷಕನಿಗೆ ಕಥೆ ಅಲೆಗಳಲ್ಲಿ ತೇಲಿ ತೇಲಿ ಮಾಯವಾಗುವುದು ಸ್ಪಷ್ಟವಾಗುತ್ತದೆ. ಈ ಚಿತ್ರದಲ್ಲಿ ಎಲ್ಲವೂ ಇದೇ. ಆದರೆ, ಯಾರೂ ತುಳಿಯದ ಹಾದಿಯಲ್ಲಿ ಕಾಲಿಡುವ ಧೈರ್ಯ ಮಾಡಿದ ಮಣಿ, ಚಿತ್ರದ ಆಧಾರವನ್ನೇ ಮರೆತಿರುವ ಹಾಗೆ ಕಾಣುತ್ತದೆ.

ಆದರೆ, ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸುವ ಮಣಿರತ್ನಂ ಅವರ ಶ್ರಮ ಸಾರ್ಥಕತೆ ಕಾಣುವುದು ಚಿತ್ರದ ತಾಂತ್ರಿಕ ಶ್ರೀಮಂತಿಕೆಯಿಂದ ಮಾತ್ರ. ಕಮರ್ಷಿಯಲ್ ಟಚ್ ಇಲ್ಲದೆ ಸುಂದರ ಪ್ರೇಮ ಕಾವ್ಯದ ಹೊಳೆಯನ್ನು ಮಣಿ ಹರಿಸಿದ್ದಾರೆ.

ಗೌತಮ್ ಕಾರ್ತಿಕ್, ತುಳಸಿ ನಾಯರ್ ಮುಖ್ಯ ಪಾತ್ರಕ್ಕೆ ತಕ್ಕ ಪೋಷಣೆ ನೀಡುವಲ್ಲಿ ಎ.ಆರ್ ರೆಹಮಾನ್ ಸಂಗೀತ, ರಾಜೀವ್ ಮೆನನ್ ಅದ್ಭುತ ಕ್ಯಾಮೆರಾ ವರ್ಕ್, ಪಾತ್ರ, ಸನ್ನಿವೇಶ, ಕಥೆಗೆ ಒಪ್ಪುವ ಉಡುಗೆ ತೊಡುಗೆಗಳು ಚಿತ್ರವನ್ನು ಆಪ್ತವೆನಿಸುತ್ತದೆ.

ಜಯ ಮೋಹನ್ ಹಾಗೂ ಮಣಿರತ್ನಂ ಸಂಭಾಷಣೆ, ಕಥೆ ಇನ್ನಷ್ಟು ಪಕ್ವತೆಯಿಂದ ಕೂಡಿರಬಹುದಿತ್ತು ಎನಿಸಿದರೂ ಇದು ಮಣಿ ಅವರ ಹೊಸ ಶೈಲಿ ನಿರೂಪಣೆಗೆ ತಕ್ಕಂತೆ ಇದೆ ಎಂದು ತಿಳಿದರೆ ಚಿತ್ರ ನೋಡಲು ಯಾವುದೇ ಅಡ್ಡಿ ಇರುವುದಿಲ್ಲ.

ಕಾರ್ತೀಕ್ ಮೊದಲ ಚಿತ್ರದಲ್ಲೇ ಗೆದ್ದಿದ್ದಾರೆ, ಅಪ್ಪ ಕಾರ್ತೀಕ್ ತುಂಟತನ, ನಟನೆ ಗೌತಮ್ ಗೂ ಒಲಿದಿದೆ. ತುಳಸಿಗೆ ಫುಲ್ ಮಾರ್ಕ್ಸ್ ಕೊಡಲು ಯಾಕೋ ಮನಸ್ಸು ಒಪ್ಪುವುದಿಲ್ಲ. ಅಮ್ಮ ರಾಧಾಳ ನಟನಾ ಕೌಶಲ್ಯ ಇನ್ನೂ ತುಳಸಿಗೆ ಮೈಗೂಡಿಲ್ಲ ಎನ್ನಬಹುದು.

ಕಥೆ ಈಗಾಗಲೇ ವೆಬ್ ನಲ್ಲಿ ಹರಿದಾಡಿದೆ. ಹಾಗಾಗಿ ಕ್ಲುಪ್ತವಾಗಿ ಕಥೆ ಹೇಳಿ ಮುಗಿಸಿಬಿಡ್ತೀನಿ.. ಕ್ರೈಸ್ತ ಬೆಸ್ತರ ಕುಟುಂಬ, ಜನ ಜೀವನದ ಕಥೆ. ನಂಬಿಕೆಯೇ ಜೀವನದ ಅಮೂಲ್ಯ ಭಾಗ. ನಂಬಿಕೆ ಇದ್ದರೆ ಮಾನವೀಯತೆಗೆ ಜಯ ಎಂಬ ಧ್ಯೇಯ ವಾಕ್ಯದ ಮೇಲೆ ಕಥೆ ಬೆಳೆದಿದೆ.

ಯುವ ಕಡಲ 'ಮುತ್ತು' ನಾಯಕ ಥಾಮಸ್ ಗೆ ಬೀಟ್ರೀಸ್ ಜೊತೆ ಲವ್ ಆಗುತ್ತೆ. ಪಾಪ ಪುಣ್ಯ, ನಂಬಿಕೆ ಅಪನಂಬಿಕೆ, ಪಶ್ಚಾತ್ತಾಪ ಎಂಬ ಹೆವಿ ವಿಷಯಗಳನ್ನು ಈ ಇಬ್ಬರು ಯುವ ಪ್ರೇಮಿಗಳ ಕಥೆಯಲ್ಲಿ ಮಣಿ, ಜಯರಾಮನ್ ನಾಜೂಕಾಗಿ ಅಡಕಗೊಳಿಸಿದ್ದಾರೆ.

ಹಲವೆಡೆ ಬೈಬಲ್ ನ ಬೋಧನೆಯ ಪ್ರಮುಖ ಅಂಶಗಳು ಪಾತ್ರಗಳು, ಸನ್ನಿವೇಶದ ಮೂಲಕ ಹಾದ್ ಹೋಗುತ್ತದೆ. ಮತ್ತೆ ಬೆಳ್ಳಿ ತೆರೆಗೆ ಕಾಲಿಟ್ಟ 'ಬಾಂಬೆ' ಚಿತ್ರ ಖ್ಯಾತಿಯ ಅರವಿಂದ್ ಸ್ವಾಮಿ ಇಲ್ಲಿ ಸ್ಯಾಮ್ ಫರ್ನಾಂಡೀಸ್ ಪಾತ್ರದಲ್ಲಿ ನಿರಾಯಾಸವಾಗಿ ನಟಿಸಿದ್ದಾರೆ. ನೆಗಟಿವ್ ಶೇಡ್ ಇರುವ ಪಾತ್ರದಲ್ಲಿ ಬರ್ಗ್ ಮನ್ಸ್ ಆಗಿ ಅರ್ಜುನ್ ಸರ್ಜಾ ಕಾಣಿಸಿಕೊಂಡಿದ್ದಾರೆ.

ಈ ಇಬ್ಬರು ಬೇರೆ ಬೇರೆ ಜೀವನ ಶೈಲಿ ರೂಢಿಸಿಕೊಳ್ಳುತ್ತಾರೆ. ಸ್ಯಾಮ್ ಚರ್ಚ್ ನಲ್ಲಿ ಫಾದರ್ ಆಗುತ್ತಾನೆ. ಫಾದರ್ ಸ್ಯಾಮ್ ಕಣ್ಣಿಗೆ ತಾಯಿ ಕಳೆದುಕೊಂಡ ಅನಾಥ ಹುಡುಗ ಥಾಮಸ್ ಬೀಳುತ್ತಾನೆ. ಮಾಮೂಲಿಯಂತೆ ಬರ್ಗ್ ಮನ್ ಗೆ ಮಗಳಿರುತ್ತಾಳೆ ಬ್ರೀಟ್ರೀಸ್(ತುಳಸಿ) ಅವಳ ಮೇಲೆ ಥಾಮಸ್ ಗೆ ಲವ್ ಆಗುತ್ತೆ. ಮುಂದೆ ಏನಾಗುತ್ತೆ ..ಸ್ಲೈಡ್ ಗಳಲ್ಲಿ ನೋಡುತ್ತಾ ಹೋಗಿ...

ಕಡಲ್ ವಿಮರ್ಶೆ

ಚಿತ್ರದ ಆರಂಭದ ದೃಶ್ಯಗಳು ಭರವಸೆ ಮೂಡಿಸುತ್ತಾ, ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಎ.ಆರ್ ರೆಹಮಾನ್ ಸಂಗೀತ ಮಧ್ಯಂತರದ ತನಕ ಸಾಗಿಸುತ್ತದೆ. ಆದರೆ, ನಂತರ ಕಥೆ ನಿರೀಕ್ಷಿತ ಎನಿಸುತ್ತದೆ. ನಿಧಾನಗತಿಯ ಚಿತ್ರ ಇಷ್ಟಪಡುವವರಿಗೆ ಚಿತ್ರ ಆಪ್ತವೆನಿಸಿದರೆ, ಉಳಿದವರಿಗೆ ಬೋರ್ ಬೋರ್

ಕಡಲ್ ವಿಮರ್ಶೆ

ಫಾದರ್ ಸ್ಯಾಮ್ ಹಾಗೂ ಬರ್ಗಮನ್ಸ್ ಆಗಿ ಅರವಿಂದ ಸ್ವಾಮಿ ಹಾಗೂ ಅರ್ಜುನ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರಕ್ಕೆ ಮೂಲಾಧಾರವಾದ ಈ ಎರಡು ಪಾತ್ರಗಳತ್ತ ಪ್ರೇಕ್ಷಕರು ಹೆಚ್ಚು ಗಮನ ಹರಿಸಿದರೆ, ಉಳಿದ ಪಾತ್ರಗಳ ನ್ಯೂನ್ಯತೆ ಮರೆಯಬಹುದು. ಮಣಿರತ್ನಂ ಮಾನ ಅರ್ಜುನ್ ಹಾಗೂ ಸ್ವಾಮಿ ಕಾಪಾಡಿದ್ದಾರೆ.

ಕಡಲ್ ವಿಮರ್ಶೆ

ಗೌತಮ್ ಕಾರ್ತೀಕ್ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸುತ್ತಾರೆ. ಸಾಹಸ ದೃಶ್ಯಗಳು, ಡ್ಯಾನ್ಸ್ ಅಲ್ಲದೆ ರೋಮಾನ್ಸ್ ನಲ್ಲೂ ಸ್ಕೋರ್ ಮಾಡಿದ್ದಾರೆ. ಅಪ್ಪ ಕಾರ್ತೀಕ್ ಹಾಗೆ ಬೆಳೆಯುವ ಲಕ್ಷಣಗಳಿದೆ. ಈತನಿಂದ ಹುಡುಗತನ ಪಾತ್ರಕ್ಕಿಂತ ಇನ್ನಷ್ಟು ಪ್ರಬುದ್ಧ ಪಾತ್ರಗಳನ್ನು ನಿರೀಕ್ಷಿಸಬಹುದು.

ಕಡಲ್ ವಿಮರ್ಶೆ

ನಟಿ ಅಂಬಿಕಾ ತಂಗಿ ನಟಿ ರಾಧಾ ಮಗಳು ತುಳಸಿಗೆ ಇದು ಮೊದಲ ಚಿತ್ರ. ಅಕ್ಕ ಕಾರ್ತಿಕಾಳಿಗಿಂತ ನೋಡೋದಕ್ಕೆ ಪರ್ವಾಗಿಲ್ಲ, ನಟನೆಯಲ್ಲಿ ಆಕೆಗಿಂತ ಓಕೆ ಎನಿಸಿದರೂ ಇನ್ನೂ ಪಳಗಬೇಕಿದೆ. ಸಿಕ್ಕಿರುವ ಪಾತ್ರದ ಗಾತ್ರವೂ ಕಿರಿದಾಗಿದೆ ಎನ್ನಬಹುದು. ಹಾಡುಗಳಲ್ಲಿ ತುಳಸಿ ಚೆಂದ ಕಾಣುತ್ತಾಳೆ.

ಕಡಲ್ ವಿಮರ್ಶೆ

ಎಂದಿನಂತೆ ಚಿತ್ರದಲ್ಲಿ ತಾಂತ್ರಿಕ ದೋಷಗಳು ಇಲ್ಲ ಎನ್ನಬಹುದು. ಸಾಗರದ ಕಿನಾರೆ ಜನ ಜೀವನವನ್ನು ಅಲೆ ಅಲೆಯನ್ನು ರಾಜೀವ್ ಮೆನನ್ ತೋರಿಸಿದ ರೀತಿ ಎಂದಿನಂತೆ ಚಿತ್ರದಲ್ಲಿ ತಾಂತ್ರಿಕ ದೋಷಗಳು ಇಲ್ಲ ಎನ್ನಬಹುದು. ಸಾಗರದ ಕಿನಾರೆ ಜನ ಜೀವನವನ್ನು ಅಲೆ ಅಲೆಯನ್ನು ರಾಜೀವ್ ಮೆನನ್ ತೋರಿಸಿದ ರೀತಿ ಪ್ರೇಕ್ಷಕರನ್ನು ಕಡಲ ತೀರಕ್ಕೆ ಒಯ್ಯುತ್ತದೆ. ಕಮರ್ಷಿಯಲ್ ಚಿತ್ರಗಳಲ್ಲಿ ಕತ್ತರಿಯಾಡಿಸಿರುವ ಸಂಕಲನಕಾರ ಶ್ರೀಕರ್ ಪ್ರಸಾದ್ ಕಥೆಯನ್ನು ಆದಷ್ಟು ಚೊಕ್ಕಗೊಳಿಸಿ ಪ್ರೇಕ್ಷಕರ ಸಹನೆಗೆ ಸಹಕಾರ ನೀಡಿದ್ದಾರೆ.

ಕಡಲ್ ವಿಮರ್ಶೆ

ಮಣಿರತ್ನಂ ಅವರಿಗಾಗಿಯೇ ರೆಹಮಾನ್ ಅವರು ಅದ್ಭುತ ಟ್ಯೂನ್ ಗಳನ್ನು ಬಚ್ಚಿಟ್ಟುಕೊಂಡಿರುತ್ತಾರೋ ಏನೋ.. ಚಿತ್ರದ ಓಟಕ್ಕೆ ತಕ್ಕಂತೆ ಹಾಡುಗಳು ಮೂಡಿ ಬಂದಿದೆ.

ಕನ್ನಡಿಗ ಶಶಿಧರ ಅಡಪ ಅವರ ಕಲಾ ನೈಪುಣ್ಯತೆ ನಡುವೆ ಮೆನನ್ ಕ್ಯಾಮೆರಾ ವರ್ಕ್ ಜೊತೆ ರೆಹಮಾನ್ ಸಂಗೀತ ಮುದಗೊಳಿಸುತ್ತದೆ. ಥೇಟರ್ ನಿಂದ ಹೊರ ಬಂದರೂ ಕಾಡುವ ಟ್ಯೂನ್ ಗಳನ್ನು ಮತ್ತೊಮ್ಮೆ ರೆಹ್ಮಾನ್ ನೀಡಿದ್ದಾರೆ.

ಕಡಲ್ ವಿಮರ್ಶೆ

ಕಡಲ್ ಎಂದರೆ ಸಾಗರ, ಸಮುದ್ರ ಎಂದರ್ಥ. ಸಾಗರ ಹೊರಗಡೆ ಶಾಂತವಾಗಿ ಸುಂದರವಾಗಿ ಕಂಡರೂ ತನ್ನ ಗರ್ಭದಲ್ಲಿ ತೀರದ ನೋವು ಇಟ್ಟುಕೊಂಡಿರುತ್ತದೆ. ಕೆಲವೊಮ್ಮೆ ಸುನಾಮಿಯಂತೆ ಅಬ್ಬರಿಸಿ ನಾಶ ಪಡಿಸುತ್ತದೆ ಎಂಬ ಸಾರವನ್ನು ಮನಗಂಡು ಚಿತ್ರಕ್ಕೆ ಈ ಹೆಸರು ಇಡಲಾಗಿದೆ.

ಕಡಲ್ ವಿಮರ್ಶೆ

ಒಟ್ಟಾರೆ ಚಿತ್ರವನ್ನು ನೋಡದೇ ಇರುವುದಕ್ಕಿಂತ ನೋಡಲು ಅನೇಕ ಕಾರಣಗಳಿದೆ. ಕಥೆ ಇಲ್ಲದೆ ರೀಲು ಸುತ್ತುವ ಅನೇಕ ಚಿತ್ರಗಳ ನಡುವೆ ಮಣಿರತ್ನಂ ಅವರ ವಿಭಿನ್ನ ನಿಧಾನಗತಿ ನಿರೂಪಣೆಗೆ ಒಗ್ಗಿಕೊಂಡರೆ, ಚಿತ್ರ ಆಪ್ತವೆನಿಸುತ್ತದೆ. ತುಂಬಾ ನಿರೀಕ್ಷೆ ಇಟ್ಟುಕೊಂಡು ಚಿತ್ರಮಂದಿರಕ್ಕೆ ಹೋಗುವುದಕ್ಕಿಂತ ಹೊಸಬರ ಚಿತ್ರ ಎಂದು ನೋಡಿದರೆ ಚಿತ್ರ ಎಲ್ಲೂ ಬೋರ್ ಆಗುವುದಿಲ್ಲ.

ಕಡಲ್ ವಿಮರ್ಶೆ

ನಿರ್ಮಾಪಕರು: ಮಣಿರತ್ನಂ ಮತ್ತು ಮನೋಹರ್ ಪ್ರಸಾದ್
ನಿರ್ದೇಶನ: ಮಣಿರತ್ನಂ
ಸಂಗೀತ: ಎ.ಆರ್ ರೆಹಮಾನ್
ಕಲೆ: ಶಶಿಧರ ಅಡಪ
ಹೂಡಿಕೆ: 50 ಕೋಟಿ ರು
ಪಾತ್ರಧಾರಿಗಳು: ಗೌತಮ್ ಕಾರ್ತೀಕ್, ತುಳಸಿ ನಾಯರ್, ಅರ್ಜುನ್ ಸರ್ಜಾ, ಅರವಿಂದ್ ಸ್ವಾಮಿ,

English summary
After the failure of Raavanan, filmmaker Mani Ratnam has taken more than two years to mould his next master-piece, which features newcomers like Gautham Karthik and Thulasi Nair in the lead roles. Kadal is technically brillant and story wise average movie
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada