»   » ಗಣೇಶ್ 'ಮುಗುಳುನಗೆ'ಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

ಗಣೇಶ್ 'ಮುಗುಳುನಗೆ'ಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

Posted By:
Subscribe to Filmibeat Kannada

'ಮುಗುಳುನಗೆ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ದಶಕದ ನಂತರ ಒಂದಾದ ಗಣೇಶ್ ಮತ್ತು ಯೋಗರಾಜ್ ಭಟ್ ಜೋಡಿಯ ಮೋಡಿ ಇಲ್ಲಿಯೂ ಮುಂದುವರೆದಿದೆ.

'ಮುಗುಳುನಗೆ' ಸಿನಿಮಾದಲ್ಲಿ ಹೊಸತನ ಇದೆ. ಚಿತ್ರದ ಕಥೆಯಲ್ಲಿ ಇನ್ನಷ್ಟು ಗಟ್ಟಿತನ ಇರಬೇಕಿತ್ತು. ಹೆಚ್ಚು ನಿರೀಕ್ಷೆ ಮಾಡದೆ, ಮುಕ್ತ ಮನಸ್ಸಿನಿಂದ ನೋಡಿದರೆ 'ಮುಗುಳುನಗೆ' ಮನರಂಜನೆ ನೀಡುತ್ತೆ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ.

ವಿಮರ್ಶೆ: ಕಣ್ಣಾಲಿಯ ಜಲಪಾತ ಬಂಧಿಸುವ 'ಮುಗುಳುನಗೆ'

ಹಾಗಿದ್ರೆ, 'ಮುಗುಳುನಗೆ' ನೋಡಿದ ವಿಮರ್ಶಕರು ಚಿತ್ರದ ಬಗ್ಗೆ ಏನಂದ್ರು? ಕನ್ನಡದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ 'ಮುಗುಳುನಗೆ' ಚಿತ್ರದ ವಿಮರ್ಶೆ ಮುಂದಿದೆ ಓದಿ.

'ನಗುವಿನ ಥಿಯೆರಿ ಬದಲಿಸುವ ಪ್ರೇಮ ಪ್ರಸಂಗ' - ವಿಜಯ ಕರ್ನಾಟಕ

''ಗಣೇಶ್ ಮತ್ತು ಯೋಗರಾಜ್ ಭಟ್‌ ಒಟ್ಟಾದರೆ, ಅಲ್ಲಷ್ಟು ವಿಶೇಷತೆಗಳು ಇರುತ್ತವೆ. ಈ ಸಿನಿಮಾದಲ್ಲೂ ಇವೆ. ಸಾಮಾನ್ಯವಾಗಿ ಭಟ್ಟರು ಮಾತಿನಲ್ಲಿಯೇ ಸಿನಿಮಾ ಕಟ್ಟುತ್ತಾರೆ ಎಂಬ ಅಪವಾದವಿದೆ. ಅದಿಲ್ಲಿ ದೂರವಾಗಿದೆ. ಮೌನದಲ್ಲಿಯೇ ಮಾತು ಬೆಳೆಸುವ ಪ್ರಯತ್ನ ವಿಶೇಷ ಅನಿಸುತ್ತದೆ. ಚಿತ್ರದ ಮೊದಲರ್ಧವನ್ನು ವೇಗವಾಗಿ ತೆಗೆದುಕೊಂಡು ಹೋಗುವ ನಿರ್ದೇಶಕರು, ದ್ವಿತಿಯಾರ್ಧದಲ್ಲಿ ವೇಗಕ್ಕೆ ಕೊಂಚ ಬ್ರೇಕ್ ಹಾಕುತ್ತಾರೆ. ಈ ನಿಧಾನಗತಿಯನ್ನು ಮರೆಸುವಂತೆ ನಟಿಸಿದ್ದಾರೆ ಗಣೇಶ್‌. ಒಟ್ಟಿನಲ್ಲಿ ಯೋಗರಾಜ್ ಭಟ್‌ ಮತ್ತು ಗಣೇಶ್‌ ಒಂದೊಳ್ಳೆ ಸಿನಿಮಾದ ಮೂಲಕ ಮತ್ತೆ ವಾಪಸ್ ಬಂದು, ಆಹ್ಲಾದಕರ ಸಿನಿಮಾ ಕೊಟ್ಟಿದ್ದಾರೆ'' - ವಿಜಯ ಕರ್ನಾಟಕ

ಅತ್ತು ಬಿಡಿ ಒಮ್ಮೆ ಜೊತೆಗೆ, ನಗಬೇಡಿ ಹೀಗೆ - ಉದಯವಾಣಿ

''ಭಟ್ಟರು ಹಾಗೂ ಗಣೇಶ್‌ ಜೊತೆಯಾದಾಗ ನೀವು ನಿರೀಕ್ಷಿಸಬಹುದಾದ ಅದೇ ಡೈಲಾಗ್‌ ಡೆಲಿವರಿ, ವಿಚಿತ್ರ ಮ್ಯಾನರೀಸಂ, ಅತಿಯಾದ ಮಾತು... ಅವ್ಯಾವು ಈ ಸಿನಿಮಾದಲ್ಲಿಲ್ಲ. ಬರುವ ಪಾತ್ರಗಳನ್ನು ಕಥೆಗೆ ಎಷ್ಟು ಬೇಕೋ ಅಷ್ಟೇ ದುಡಿಸಿಕೊಂಡಿದ್ದಾರೆ ಭಟ್ಟರು. ಚಿತ್ರದಲ್ಲಿ ಪ್ರೀತಿಯನ್ನು ಮೂರು ಆಯಾಮಗಳಲ್ಲಿ ನೋಡಲು ಪ್ರಯತ್ನಿಸಿದ್ದಾರೆ. ಇಡೀ ಚಿತ್ರದ ಹೈಲೈಟ್‌ ಎಂದರೆ ನಾಯಕ ಗಣೇಶ್‌. ಲವರ್‌ ಬಾಯ್‌ ಆಗಿ, ತುಂಟ ಪ್ರೇಮಿಯ ಪಾತ್ರಗಳು ಗಣೇಶ್‌ಗೆ ಹೊಸದಲ್ಲ. ಆದರೆ, ಈ ಬಾರಿ ಅವರಿಗೆ ಹೊಸ ಸವಾಲೆಂದರೆ ನಗುತ್ತಲೇ ಅಳುವುದು'' - ಉದಯವಾಣಿ

'ಮುಗುಳುನಗೆ' ಮೊದಲ ಶೋ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿತ್ತು.!

ಹೊಸ ಬಗೆ ಪ್ರೇಮದ ನಗೆ ಹೂರಣ - ವಿಜಯವಾಣಿ

''ಅಪ್ಪ (ಅಚ್ಯುತ್ ಕುಮಾರ್) ಇತಿಹಾಸದ ಶಿಕ್ಷಕ ಎಂಬ ಕಾರಣಕ್ಕೋ ಏನೋ ಕಥಾನಾಯಕನ (ಗಣೇಶ್) ಹೆಸರು ಪುಲಕೇಶಿ. ಮನಸಿನೊಳಗೆ ಎಷ್ಟೇ ನೋವಿದ್ದರೂ ಕಣ್ಣೀರು ಬಾರದ ಆಕರ್ಷಕ ಕಾಯಿಲೆ ಆತನದ್ದು. ಆರಂಭ ಮತ್ತು ಅಂತ್ಯದಲ್ಲಿ ತುಸು ಹೆಚ್ಚೇ ಭಾವುಕತೆಯ ಸ್ಪರ್ಶ ನೀಡಿರುವುದು ಮೆಲೋಡ್ರಾಮ ಬಯಸುವ ಮನಸುಗಳಿಗೆ ಇಷ್ಟವಾಗುತ್ತದೆ. ಹಂತ ಹಂತವಾಗಿ ಎದುರಾಗುವ ನಾಲ್ವರು ನಾಯಕಿಯರ ಚುಟುಕು ಎಪಿಸೋಡ್​ಗಳಿಂದಾಗಿ ಚಿತ್ರ ಸಾಗಿದ್ದೇ ಅನುಭವಕ್ಕೆ ಬರುವುದಿಲ್ಲ. ಬರೀ ಸಂಭಾಷಣೆಗೆ ಗಂಟು ಬೀಳದ ಯೋಗರಾಜ್, ಈ ಬಾರಿ ದೃಶ್ಯಗಳ ಮೂಲಕವೂ ಒಂದಷ್ಟು ಸೂಕ್ಷ್ಮ ವಿಚಾರಗಳನ್ನು ವಿವರಿಸಿದ್ದಾರೆ. ತಮ್ಮತನವನ್ನು ಉಳಿಸಿಕೊಂಡೇ ಹೊಸತನ ಮೆರೆದಿದ್ದಾರೆ ಗಣೇಶ್'' - ವಿಜಯವಾಣಿ.

'ಮಗುಳುನಗೆ' ವಿಮರ್ಶೆ - ಟೈಮ್ಸ್ ಆಫ್ ಇಂಡಿಯಾ

''The film's best moments are in the fact that that each of the women, too, have their own well-rounded characteristics. They could be prototypes in ways, but their perspectives on life are refreshing in a way, given the sense that they aren't limited to the 'heroine' tag but have their own personalities.Yogaraj and Ganesh first got together to make a film about heartbreak. With Mugulu Nage, the combination has grown and learnt to move on, which in many ways is quite akin to the film itself'' - ಟೈಮ್ಸ್ ಆಫ್ ಇಂಡಿಯಾ

'ಮುಗುಳುನಗೆ' ನೋಡಿ ಮುಗುಳುನಕ್ಕ ಹೆಂಗಳೆಯ ವಿಮರ್ಶೆ ಇದು.!

English summary
Golden star Ganesh's 'Mugulu Nage' movie has received positive response from the critics. Here is the collection of 'Mugulu Nage' reviews by Top News Papers of Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada