For Quick Alerts
  ALLOW NOTIFICATIONS  
  For Daily Alerts

  ಮೈನಾ ಟ್ವೀಟ್ ವಿಮರ್ಶೆ, ನಾಗಶೇಖರ್ ಗೆದ್ದೆ ಬಿಡಪ್ಪ

  By Mahesh
  |

  ಮೈನಾ ಚಿತ್ರ ಗುರುವಾರವೇ ಕೆಲವು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸಿ. ಅಶ್ವಥ್ ಅವರ ದನಿಯಲ್ಲಿರುವ 'ಕಾಣದ ಕಡಲಿಗೆ..' ಹಾಡು ಬಳಸಿದ ತಪ್ಪಿಗೆ ಚಿತ್ರ ತಂಡ ಕೋರ್ಟ್ ಮೆಟ್ಟಿಲೇರಬೇಕಾಗಿತ್ತು. ಆದರೆ, ಪ್ರಕರಣ ಈಗ ಸುಖಾಂತ್ಯವಾಗಿದೆ. ಹಾಡಿನ ಹಕ್ಕು ಹೊಂದಿರುವ ಲಹರಿ ಸಂಸ್ಥೆಗೆ 5 ಲಕ್ಷ ರು ಪಾವತಿಸುವಂತೆ ಕೋರ್ಟ್ ಅದೇಶ ಹೊರಡಿಸಿದೆ.

  ಎರಡು ಕಡೆ ಕಾಂಪ್ರಮೈಸ್ ಆಗಿದ್ದಾರೆ. ಆದರೆ, ಚಿತ್ರದಲ್ಲಿ ಯಾವುದೇ ರೀತಿಯ ಕಾಂಪ್ರಮೈಸ್ ಮಾಡಿಕೊಂಡಿಲ್ಲ. ಚಿತ್ರದ ಮೊದಲಾರ್ಧ ನೋಡಿ ಹೊರ ಬಂದರೂ ಸಾಕು, ಅದ್ಭುತ ದೃಶ್ಯ ವೈಭವ ನಿಮ್ಮನ್ನು ಬೇರೆ ಜಗತ್ತಿಗೆ ಎಳೆದೊಯ್ಯಲಿದೆ. ಥೇಟರ್ ನಲ್ಲೇ ಕುಳಿತೇ ಕೆಲ ಉತ್ಸಾಹಿ ಕ್ರೇಜಿ ಸಿನಿ ಪ್ರೇಮಿಗಳು ಟ್ವೀಟ್ ಮೂಲಕ ತಮ್ಮ ಅನಿಸಿಕೆಯನ್ನು 140 characters ನಲ್ಲಿ ತುಂಬಿಸಿ ಪ್ರಕಟಿಸಿದ್ದಾರೆ.

  ಮೈನಾ ನಾಗ ಬರೆದ ಪ್ರೇಮಧಾರೆ

  ಮೈನಾ ನಾಗ ಬರೆದ ಪ್ರೇಮಧಾರೆ

  ಸಂಜು ಮತ್ತು ಗೀತಾ ಯಶಸ್ಸಿನ ನಂತರ ನಿರ್ದೇಶಕ ನಾಗಶೇಖರ್ ಮತ್ತೊಮ್ಮೆ ಗೆದ್ದಿದ್ದಾರೆ. ಮೈನಾ ಚಿತ್ರ ಹಲವರಿಗೆ ಹಲವು ಕಾರಣಕ್ಕೆ ಇಷ್ಟವಾಗುವ ಸಾಧ್ಯತೆಯಿದೆ. ಚಿತ್ರದ ಹಾಡುಗಳು ಹಾಗೂ ಅದರ ಚಿತ್ರೀಕರಣ ನೋಡಲು ಥೇಟರ್ ಗೆ ಬಂದರೂ ಟಿಕೆಟ್ ದುಡ್ಡಿಗೆ ನಷ್ಟವಿಲ್ಲ.

  ಮೈನಾ ನಾಗ ಬರೆದ ಪ್ರೇಮಧಾರೆ

  ಮೈನಾ ನಾಗ ಬರೆದ ಪ್ರೇಮಧಾರೆ

  ಚಿತ್ರದ ಟೈಟಲ್ ಕಾರ್ಡ್ ನಲ್ಲಿ ಸುಮಾರು 110ಕ್ಕೂ ಅಧಿಕ ಮಂದಿಗಳ ಹೆಸರು ಕಾಣಿಸುತ್ತದೆ. ಟೈಟಲ್ ಕಾರ್ಡ್ ನಲ್ಲಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲು ಸಾಕಷ್ಟು ಸಮಯ ವ್ಯರ್ಥಮಾಡಲಾಗಿದೆ.

  ಮೈನಾ ನಾಗ ಬರೆದ ಪ್ರೇಮಧಾರೆ

  ಮೈನಾ ನಾಗ ಬರೆದ ಪ್ರೇಮಧಾರೆ

  ಕರ್ನಾಟಕದಲ್ಲಿ ಸುಮಾರು 110 ಥೇಟರ್ ಗಳಲ್ಲಿ ರಿಲೀಸ್ ಆಗಿರೋ ಮೈನಾ, ಬೇರೆ ರಾಜ್ಯಗಳಲ್ಲಿ ರಿಲೀಸ್ ಆದ ಸುದ್ದಿ ಹೊರಬಿದ್ದಿಲ್ಲ.

  ಮೈನಾ ನಾಗ ಬರೆದ ಪ್ರೇಮಧಾರೆ

  ಮೈನಾ ನಾಗ ಬರೆದ ಪ್ರೇಮಧಾರೆ

  ಮೊದಲ ದಿನ ಮುಖ್ಯ ಥೇಟರ್ ಸಾಗರ್ ನಲ್ಲಿ ತುಂಬಿದ ಗೃಹ ಪ್ರದರ್ಶನ ನಡೆದಿದೆ. ಮಾಲ್ ಗಳಲ್ಲಿ ಕೂಡಾ ಫುಲ್ ಹೌಸ್ ಫುಲ್

  ಮೈನಾ ನಾಗ ಬರೆದ ಪ್ರೇಮಧಾರೆ

  ಮೈನಾ ನಾಗ ಬರೆದ ಪ್ರೇಮಧಾರೆ

  ಟ್ರಾಜಿಡಿ ವಿಷಯಗಳನ್ನು ಸೂಕ್ತವಾಗಿ ನಿಭಾಯಿಸಬಲ್ಲ ಕಲೆ ನಾಗಶೇಖರ್ ಗೆ ಒಲಿದಿದೆ. ಅವರ ಹಿಂದಿನ ಚಿತ್ರದಂತೆ ಇಲ್ಲೂ ಕೂಡಾ ನಗೆಯ ಜೊತೆ ನೋವು ಎದ್ದು ಕಾಣುತ್ತದೆ.

  ಮೈನಾ ನಾಗ ಬರೆದ ಪ್ರೇಮಧಾರೆ

  ಮೈನಾ ನಾಗ ಬರೆದ ಪ್ರೇಮಧಾರೆ

  ಮುಂಗಾರು ಮಳೆಯಿಂದ ಜೋಗ್ ಟಾಪ್ ವ್ಯೂ ಫೇಮಸ್ ಆದಂತೆ, ಮೈನಾದಿಂದ ಧೂದ್ ಸಾಗರ್ ಗೆ ಜನಕ್ಕೆ ನುಗ್ಗುವ ಸಾಧ್ಯತೆಯಿದೆ. ಧೂದ್ ಸಾಗರ್ ಸೌಂದರ್ಯವನ್ನು ಹೆಚ್ಚಿಸಿದ್ದಾರೆ ಛಾಯಾಗ್ರಾಹಕ ಸತ್ಯ ಹೆಗ್ಡೆ

  ಮೈನಾ ನಾಗ ಬರೆದ ಪ್ರೇಮಧಾರೆ

  ಮೈನಾ ನಾಗ ಬರೆದ ಪ್ರೇಮಧಾರೆ

  ಮಾಲ್ ಗಳಲ್ಲೂ ಚಿತ್ರ ಹೌಸ್ ಫುಲ್. ಪಿವಿಅರ್(ಫೋರಂ, ಓರಿಯಾನ್), ರಾಕ್ ಲೈನ್, ಐನೋಕ್ಸ್(ಮಂತ್ರಿ, ಸ್ವಾಗತ್,ಸೆಂಟ್ರಲ್), ಲಿಡೋ, ವ್ಯಾಲ್ಯೂ ಮಾಲ್, ಗೋಪಾಲನ್ ಮಾಲ್(ಆರ್ಕ್, ಗ್ರ್ಯಾಂದ್, ಲೆಗಸಿ, ಇನ್ನೋವೆಷನ್) ಮೀನಾಕ್ಷಿ ಸಿನಿಪೊಲೀಸ್, ಸಿನಿ ಮ್ಯಾಕ್ಸ್(ಸ್ಪಿರಿಟ್, ಅರೀನಾ)

  English summary
  Mynaa Movie Twitter Review by enthusiastic fans from Gandhadagudi forum and tweeples. Movie first half is like visual wonder and second half audience will have to bare with the tragedy. Performance from Chethan and Nithya steals the show. Director Nagashekar scores again

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X