Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಮರ್ಶೆ: ನಿರ್ದೇಶಕನ ಒಳಗಿನ ಕಥೆ ಹೇಳುವ 'ನನ್ ಮಗಳೇ ಹೀರೋಯಿನ್'
'ನನ್ ಮಗಳೇ ಹೀರೋಯಿನ್' ಒಂದು ಪಕ್ಕಾ ಕಾಮಿಡಿ ಸಿನಿಮಾ. ನಗಿಸುವುದರ ಜೊತೆಗೆ ಒಬ್ಬ ಸಿನಿಮಾ ನಿರ್ದೇಶಕನ ಕಷ್ಟವನ್ನು ಚಿತ್ರದಲ್ಲಿ ಹೇಳಲಾಗಿದೆ. ಕಥೆ ಹಿಡಿದು ಗಾಂಧಿನಗರಕ್ಕೆ ಬರುವ ಪ್ರತಿ ನಿರ್ದೇಶಕನ ಕಥೆ ಸಿನಿಮಾದಲ್ಲಿದೆ.
ಸಿನಿಮಾ : ನನ್ ಮಗಳೇ ಹೀರೋಯಿನ್
ನಿರ್ಮಾಣ: ಎನ್.ಜಿ.ಮೋಹನ್ ಕುಮಾರ್
ನಿರ್ದೇಶನ: ಬಾಹುಬಲಿ
ಸಂಗೀತ: ಅಶ್ವಮಿತ್ರ
ಸಂಕಲನ: ಕೆ.ಎಂ.ಪ್ರಕಾಶ್
ತಾರಾಗಣ: ಸಂಚಾರಿ ವಿಜಯ್, ದೀಪಿಕಾ, ಅಮೃತ, ತಬಲಾ ನಾಣಿ, ಬುಲೆಟ್ ಪ್ರಕಾಶ್, ಗಡಪ್ಪ ಮತ್ತಿತರರು.
ಬಿಡುಗಡೆ: ನವೆಂಬರ್ 17, 2017

ಕಥಾಹಂದರ
'ನನ್ ಮಗಳೇ ಹೀರೋಯಿನ್' ಸಿನಿಮಾದ ಒಳಗೆ ಒಂದು ಸಿನಿಮಾ ನಡೆಯುತ್ತಿದೆ. ಸಿನಿಮಾದ ಒಳಗೆ ನಡೆಯುವ ಆ ಸಿನಿಮಾದ ನಿರ್ದೇಶನ ಮೂಲಕ ಒಬ್ಬ ನಿರ್ದೇಶಕನ ಕಷ್ಟವನ್ನು ಹಾಸ್ಯಮಯವಾಗಿ ಹೇಳಲಾಗಿದೆ. ಕಥೆ ಹಿಡಿದು ಬರುವ ನಿರ್ದೇಶಕನಿಗೆ ಒಬ್ಬ ನಿರ್ಮಾಪಕ ಸಿಗುತ್ತಾನೆ. ಆದರೆ ಆತ 'ನನ್ ಮಗಳೇ ಹೀರೋಯಿನ್' ಎನ್ನುವ ಷರತ್ತು ಹಾಕುತ್ತಾನೆ. ಸರಿ ಎಂದು ಒಪ್ಪಿ ಸಿನಿಮಾ ಮಾಡಲು ಮುಂದಾಗುವ ನಿರ್ದೇಶಕ ಏನೂ ತಿಳಿಯದ ನಿರ್ಮಾಪಕನ ಮಗಳಿಗೆ ತಯಾರಿ ಕೊಟ್ಟು ನಟಿ ಮಾಡುತ್ತಾನೆ. ಇನ್ನೇನ್ನು ನಿರ್ದೇಶಕನ ಕನಸು ನನಸಾಗಿ ಸಿನಿಮಾ ಶುರುವಾಗಬೇಕು ಎನ್ನುವ ವೇಳೆಗೆ ಚಿತ್ರಕ್ಕೆ ದೊಡ್ಡ ತಿರುವು ಸಿಗುತ್ತದೆ. ಮುಂದೆ ಏನಾಯಿತು ಎನ್ನುವುದೇ ಚಿತ್ರದ ಕಥೆ.

ನಟನೆಯಲ್ಲಿ ವಿಜಯ ಸಾಧಿಸಿದ ಸಂಚಾರಿ ವಿಜಯ್
ತಮ್ಮ ಅದ್ಬುತ ನಟನೆಯ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದಿರುವ ಸಂಚಾರಿ ವಿಜಯ್ ಅವರ ಅಭಿನಯ ಇಲ್ಲಿಯೂ ತುಂಬ ಚೆನ್ನಾಗಿದೆ. ಅನೇಕ ದೃಶ್ಯಗಳಲ್ಲಿ ಅವರು ನಗಿಸುತ್ತಾರೆ. ಗಾಂಧಿನಗರದ ನಿರ್ದೇಶಕರನ್ನು ಪ್ರತಿನಿಧಿಸುವ ಪಾತ್ರ ಅವರದ್ದು. ಸಿನಿಮಾದ ನಾಯಕನಾಗಿರುವ ಅವರು ಸಿನಿಮಾದ ಒಳಗಿನ ಸಿನಿಮಾದಲ್ಲಿ ನಿರ್ದೇಶಕನಾಗಿದ್ದಾರೆ.

ನಟಿಯರ ಅಭಿನಯ
ಇಬ್ಬರು ನಟಿಯರು ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ದೀಪಿಕಾ ಸಿನಿಮಾ ನೋಡುಗರ ಗಮನ ಸೆಳೆಯುತ್ತಾರೆ. ಅಮೃತ ಕಡಿಮೆ ಅವಧಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ.

ಕಾಮಿಡಿ ಹೈಲೈಟ್
ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ಕಾಮಿಡಿ ಆಗಿದೆ. ಡಬ್ಬಲ್ ಮೀನಿಂಗ್ ಪದಬಳಕೆ ಇಲ್ಲಿದೆ ಸಹಜ ಮತ್ತು ಸುಂದರ ಹಾಸ್ಯ ದೃಶ್ಯಗಳು ಚಿತ್ರದ ತುಂಬ ಇದೆ. ಈ ದೃಶ್ಯಗಳು ಚಿತ್ರ ನೋಡುಗರಿಗೆ ಕಿಕ್ ನೀಡುತ್ತದೆ.

ಗಮನ ಹರಿಸಬೇಕಾದ ಕ್ಲೈಮ್ಯಾಕ್ಸ್
ಸಿನಿಮಾದ ಪ್ರಾರಂಭದಲ್ಲಿ ಸಾಕಷ್ಟು ಟ್ವಿಸ್ಟ್ ಗಳು ಬರುತ್ತವೆ. ಆದರೆ, ಕ್ಲೈಮ್ಯಾಕ್ಸ್ ನಲ್ಲಿ ಪ್ರೇಕ್ಷಕರ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಹೇಳಲಾಗಿದೆ. ಇಡೀ ಸಿನಿಮಾದ ಜೀವಾಳ ಕೊನೆಯಲ್ಲಿ ಉಳಿದುಕೊಂಡಿದೆ.

ನೀಟಾದ ಸಿನಿಮಾ
'ನನ್ ಮಗಳೇ ಹೀರೋಯಿನ್' ಒಂದು ನೀಟಾದ ಸಿನಿಮಾ. ಒಬ್ಬ ಪ್ರೇಕ್ಷಕನ ಮನರಂಜನೆಗೆ ಏನು ಬೇಕೋ ಆ ಅಂಶಗಳು ಚಿತ್ರದಲ್ಲಿದೆ. ಸೋ, ಜಾಸ್ತಿ ಬೋರ್ ಆಗದೆ ಆರಾಮಾಗಿ ನೋಡಬಹುದಾದ ಸಿನಿಮಾ 'ನನ್ ಮಗಳೇ ಹೀರೋಯಿನ್'.