»   » ಸಂಬಂಧಗಳ ಸರಪಳಿ ಹಿಡಿದು "ಜೋಡಿಕುದುರೆಯ" ಸವಾರಿ

ಸಂಬಂಧಗಳ ಸರಪಳಿ ಹಿಡಿದು "ಜೋಡಿಕುದುರೆಯ" ಸವಾರಿ

Posted By: ರಾಘವೇಂದ್ರ ಸಿವಿ
Subscribe to Filmibeat Kannada

"ಜೋಡಿಕುದುರೆ " ಈ ಸಂಕ್ರಾಂತಿ ಹಬ್ಬದ ವಿಶೇಷ ಕೆ. ಎಚ್ ಕಲಾಸೌಧದಲ್ಲಿ ಪ್ರದರ್ಶನಗೊಂಡ ಕಿರುಚಿತ್ರ. ತುಂಬು ಸಭಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಕಣ್ಣು ತಂತಾನೆ ತೇವಗೊಂಡಿತ್ತು ಅದಕ್ಕೆ ಕಾರಣ ನಿರ್ದೇಶಕ 'ನವನ್' ಚಿತ್ರದುದ್ದಕ್ಕೂ ಪೋಣಿಸಿದ್ದ ನವಿರಾದ ಭಾವನೆಗಳು ..

ಈಗಾಗಲೇ ಪುಟ್ ಗೋ ಸಿ ಮತ್ತು ಗೋಣಿಚೀಲ ಕಿರುಚಿತ್ರಗಳಲ್ಲಿ ತನ್ನ ಕಲಾಸಾಮರ್ಥ್ಯವನ್ನು ಹೊರಹಾಕಿದ್ದ ನವನ್ ಮತ್ತು ತಂಡ ಇದೀಗ " ಜೋಡಿಕುದುರೆಯ " ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತು ಪಡೆಸಿದೆ .

ತಮ್ಮ ಸುತ್ತಲಿನ ಸಂಬಂಧಗಳನ್ನೇ ಪಾತ್ರಗಳನ್ನಾಗಿ ಪರಿವರ್ತಿಸಿ ನೋಡುಗನ ಹೃದಯಕ್ಕೆ ಹತ್ತಿರವಾಗುವಲ್ಲಿ ಯಶಸ್ವಿಯಾಗಿದ್ದಾರೆ ನಿರ್ದೇಶಕ ನವನ್ .[ವಿಡಿಯೋ - ವಿನಾಯಕ ಕೋಡ್ಸರ ರವರ ಕಿರುಚಿತ್ರ 'ಪ್ರೆಷರ್ ಕುಕ್ಕರ್']

ನೋವು , ನಲಿವು , ಪ್ರೀತಿ , ಸ್ನೇಹ , ಹಣ ಮತ್ತು ಕೊನೆಗುಳಿದ ಬದುಕಿನ ನಾನಾ ವೇಷಗಳ ಸುತ್ತ ಸಾಗುವ ಈ ಕಥೆಯಲ್ಲಿ ಪ್ರೀತಿಯ ನವಿರು ಭಾವಗಳ ಹೊರಸೂಸುವ ಸಂಭಾಷಣೆಗಳು, ಅದಕ್ಕೆ ತಕ್ಕ ಪ್ರಸ್ತುತಿ, ಅಭಿನಯ ಎಲ್ಲವೂ ಮನಸೆಳೆಯುತ್ತವೆ.[ಟೀಸರ್ ನಲ್ಲಿ ಕೌತುಕ ಕೆರಳಿಸಿದ "ದಿ ಲಾಸ್ಟ್ ಕನ್ನಡಿಗ"]

ಚಂದನವನದ ಭವಿಷ್ಯದ ಸ್ಟಾರ್

ನಾಯಕ " ನವನ್ " ( ವಿಶ್ವ ) ನ ಕೆಲಸವಿಲ್ಲದ ಖಾಲಿ ಜೀವನಕ್ಕೆ ಆಗುವ ಪ್ರೀತಿಯ ಪರಿಚಯ , ಅದಕ್ಕೆ ತಕ್ಕಂತೆ ನಾಯಕಿ ಅಧಿತಿ ತೋರಿಸುವ ಕಾಳಜಿ ಮತ್ತು ನಾಯಕ , ನಾಯಕಿ ಸಂಭೋದಿಸುವ " ಪುಟ್ಟಿ " ಮತ್ತು " ನಿಜ್ಜ " ಈ ಎರಡೂ ಪದಗಳು ಪ್ರೇಕ್ಷಕನ ಮನಸಲ್ಲಿ ಉಳಿಯುವುದು ವಿಶೇಷ . ನಟನೆಯಲ್ಲಿ ಇನ್ನಷ್ಟು ಪಳಗಿದರೆ ವಿಶ್ವ ಅವರು ಚಂದನವನದ ಭವಿಷ್ಯದ ಸ್ಟಾರ್ ಆಗುವಲ್ಲಿ ಸಂಶಯವಿಲ್ಲ ..

ಮನಸ್ಸಿಗೆ ನಾಟುವ ಕಟುವಾದ ಸಂಭಾಷಣೆ

ಪ್ರೀತಿಯಲ್ಲಿನ ಬಿರುಕು , ಕಳೆದುಕೊಳ್ಳುವ ಭೀತಿ ಇಂಥ ಸನ್ನಿವೇಶಕ್ಕೆ ಪೂರಕವಾಗಿದ್ದು ಮನಸ್ಸಿಗೆ ನಾಟುವ ಕಟುವಾದ ಸಂಭಾಷಣೆಗಳು . ಒಂದು ಪ್ರೀತಿ ನಮ್ಮಿಂದ ದೂರಾದಾಗ ಇನ್ನೊಂದು ಪ್ರೀತಿ ನಮ್ಮನೇ ಹುಡುಕುತ್ತ ಬಳಿ ಬರುತ್ತದೆ ಎಂಬ ನಂಬಿಕೆಯನ್ನು ಈ ಚಿತ್ರ ಇಮ್ಮಡಿಗೊಳಿಸಿದೆ .

ಜೋಡಿಕುದುರೆಯ ಪ್ರಮುಖ ಆಕರ್ಷಣೆ

ಕುರುಡಿಯಾಗಿ ಅಭಿನಯಿಸರುವ ಮತ್ತೊಬ್ಬ ನಾಯಕಿ ಸಾಧ್ವಿ ತನ್ನ ಅಚ್ಚುಕಟ್ಟಾದ ಸಹಜ ನಟನೆ, ನೇರನುಡಿಯ ಮೂಲಕ ನೋಡುಗರ ಮನದಲ್ಲಿ ನೆಲೆಯೂರುತ್ತಾರೆ.
ಜೋಡಿಕುದುರೆಯ ಪ್ರಮುಖ ಆಕರ್ಷಣೆ ಎಂದರೆ ವಿಶ್ವಜೀತ್ ರಾವ್ ಛಾಯಾಗ್ರಹಣ . ಈ ಕಿರುಚಿತ್ರದ ಮೂಲಕ ಭವಿಷ್ಯದಲ್ಲಿ ಕನ್ನಡ ಚಿತ್ರಗಳಲ್ಲಿ ತನ್ನ ಕೈಚಳಕ ಮೂಲಕ ದೃಶ್ಯಗಳನ್ನು ಕಟ್ಟಿಕೊಡುವ ತೋರಿಸುವ ಭರವಸೆ ಮೂಡಿಸಿದ್ದಾರೆ.

ಮದನ್ ಸಿ ಪಿ ಅವರ ಕಲಾಚಿತ್ರಗಳು

ರಾಕಿ ಸೋನು ಅವರ ಹಿನ್ನಲೆ ಸಂಗೀತ , ಚಿತ್ರದ ಮುಖ್ಯ ಭಾಗದಲ್ಲಿ ಕಥೆಹೇಳಲು ಬರುವ ಮದನ್ ಸಿ ಪಿ ಅವರ ಕಲಾಚಿತ್ರಗಳು ಕಿರುಚಿತ್ರದ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ ..ಆದಷ್ಟು ಬೇಗ ಈ ತಂಡ ಬೆಳ್ಳಿತೆರೆಯ ಮೇಲೆ ವಿಜೃಂಭಿಸಲಿ, ಕನ್ನಡ ಚಿತ್ರ ರಸಿಕರನ್ನು ರಂಜಿಸಲಿ ಎಂಬುದು ನಮ್ಮ ಹಾರೈಕೆ ..

English summary
Jodi Kudure Kannada short Film by Navan Srinivas and team made a huge expectation on Social media. This romantic love story had special show at KH Kalasoudha, Bengaluru. Here is readers review on the film.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more