For Quick Alerts
  ALLOW NOTIFICATIONS  
  For Daily Alerts

  Connect Movie Review: ಕನೆಕ್ಟ್ ಆಗಲು ಹೋಗಿ ಎಡವಟ್ ಮಾಡಿಕೊಳ್ಳಬೇಡಿ!

  |

  ನಟಿ ನಯನತಾರಾ ನಟನೆಯ ಐದಾರು ಚಿತ್ರಗಳು ಈ ವರ್ಷ ಬಿಡುಗಡೆಗೊಂಡಿದ್ದು ಯಾವ ಚಿತ್ರವೂ ಸಹ ಅಬ್ಬರಿಸುವ ಸದ್ದು ಮಾಡಿಲ್ಲ. ಚಿರಂಜೀವಿ ನಟನೆಯ ಗಾಡ್ ಫಾದರ್ ಎಂಬ ತೆಲುಗು ಚಿತ್ರದಲ್ಲಿ, ಪೃಥ್ವಿರಾಜ್ ಸುಕುಮಾರನ್ ನಟನೆಯ ಗೋಲ್ಡ್ ಎಂಬ ಮಲಯಾಳಂ ಚಿತ್ರದಲ್ಲಿ ಹಾಗೂ ತನ್ನ ಪತಿ ವಿಘ್ನೇಶ್ ಶಿವನ್ ನಿರ್ದೇಶನದ 'ಕಾದುವಾಕುಲ ರೆಂಡು ಕಾದಲ್' ಚಿತ್ರದಲ್ಲಿ ನಟಿಸಿ ಸೋತಿದ್ದ ನಯನತಾರಾ ಇದೀಗ 'ಕನೆಕ್ಟ್' ಎಂಬ ಚಿತ್ರದಲ್ಲಿ ತಾವೇ ಲೀಡ್ ರೋಲ್ ನಿರ್ವಹಿಸಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

  ಹಾರರ್ ಥ್ರಿಲ್ಲರ್ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ನಿರ್ದೇಶಕ ಅಶ್ವಿನ್ ಸರವಣನ್ ಕನೆಕ್ಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಿತ್ರ ನಿನ್ನೆ ( ಡಿಸೆಂಬರ್ 22 ) ಬಿಡುಗಡೆಗೊಂಡಿದೆ. ಈ ಹಿಂದೆ ಮಾಯಾ ಎಂಬ ಥ್ರಿಲ್ಲರ್ ಚಿತ್ರ ಮಾಡಿ ಗೆದ್ದಿದ್ದ ನಯನತಾರಾ ಹಾಗೂ ನಿರ್ದೇಶಕ ಅಶ್ವಿನ್ ಸರವಣನ್ ಜೋಡಿ ಎರಡನೇ ಬಾರಿಗೆ ಜತೆಯಾಗಿದ್ದು, ಚಿತ್ರ ಬಿಡುಗಡೆಗೂ ಮುನ್ನವೇ ದೊಡ್ಡ ನಿರೀಕ್ಷೆಯನ್ನೇ ಹುಟ್ಟುಹಾಕಿತ್ತು.

  ಹಾರರ್ ಕಾಮಿಡಿ 'ಇಲ್ಲ್ ಒಕ್ಕೆಲ್' ತುಳು ಚಿತ್ರದ ಹೊಸ ಟ್ರೈಲರ್ ರಿಲೀಸ್ಹಾರರ್ ಕಾಮಿಡಿ 'ಇಲ್ಲ್ ಒಕ್ಕೆಲ್' ತುಳು ಚಿತ್ರದ ಹೊಸ ಟ್ರೈಲರ್ ರಿಲೀಸ್

  ಆದರೆ ಬಿಡುಗಡೆಯಾದ ಬಳಿಕ ಈ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ಚಿತ್ರ ಮಕಾಡೆ ಮಲಗಿ ವಿಫಲವಾಗಿದೆ. ಹೌದು, ಕನೆಕ್ಟ್ ಸಿನಿ ಪ್ರೇಕ್ಷಕರಿಗೆ ಕನೆಕ್ಟ್ ಆಗಿಲ್ಲ. ಅದಲ್ಲಿಯೂ ಊಜಾ ಬೋರ್ಡ್ ಮೂಲಕ ದೆವ್ವವನ್ನು ಆಹ್ವಾನಿಸಿ ಕಷ್ಟಕ್ಕೆ ಸಿಲುಕಿಕೊಳ್ಳುವ ಹಾಗೂ ನಂತರ ಅದಕ್ಕೆ ಪರಿಹಾರ ಹುಡುಕಲು ಕಷ್ಟ ಪಡುವಂತಹ ಚಿತ್ರಕತೆ ಇರುವ ಹಲವಾರು ಚಿತ್ರಗಳನ್ನು ನೀವೆಲ್ಲರೂ ನೋಡಿರುತ್ತೀರ. ಈ ಕನೆಕ್ಟ್ ಕೂಡ ಅದೇ ಮಾದರಿಯ ಸಿನಿಮಾ. ಇನ್ನು ಚಿತ್ರ ವೀಕ್ಷಿಸಿದ ಕೆಲವರು ಇದು ಹಾಲಿವುಡ್‌ನ ಹಲವು ಹಾರರ್ ಚಿತ್ರಗಳ ಮಿಶ್ರಣ ಎಂದೂ ಸಹ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

  ಚಿತ್ರದ ಕಥೆಯೇನು?

  ಚಿತ್ರದ ಕಥೆಯೇನು?

  ಕನೆಕ್ಟ್ ಚಿತ್ರದ ಕತೆ ಕೊರೊನಾ ವೈರಸ್ ಭಾರತದಲ್ಲಿ ವಿಪರೀತವಾಗಿದ್ದ ಸಮಯದಲ್ಲಿ ನಡೆಯುವ ಕತೆ. ನಾಯಕಿ ಸೂಸನ್ ( ನಯನತಾರಾ ) ತನ್ನ ಪತಿ ಜೋಸೆಫ್, ಮಗಳು ಆನ್ನಾ ಹಾಗೂ ತಂದೆ ಆರ್ಥರ್ ಜತೆ ನೆಮ್ಮದಿಯ ಜೀವನ ನಡೆಸುತ್ತಾ ಇರುತ್ತಾಳೆ. ವೃತ್ತಿಯಲ್ಲಿ ವೈದ್ಯನಾಗಿದ್ದ ಸೂಸನ್ ಪತಿ ಜೋಸೆಫ್ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ತನಗೂ ಸಹ ಸೋಂಕು ತಗುಲಿದ ಕಾರಣ ಅಸುನೀಗುತ್ತಾನೆ. ಇತ್ತ ತಂದೆಯನ್ನು ಕಳೆದುಕೊಂಡ ಮಗಳು ಆನ್ನಾ ತಂದೆಯ ಜತೆಯ ಜತೆ ಮಾತನಾಡಲು ಆತ್ಮವನ್ನು ಕರೆಸಲು ಆನ್‌ಲೈನ್ ಮೂಲಕ ವ್ಯಕ್ತಿಯೊಬ್ಬರನ್ನು ಸಂಪರ್ಕಿಸುತ್ತಾಳೆ. ಈ ಮೂಲಕ ಆನ್ನಾ ತನ್ನ ತಂದೆಯ ಆತ್ಮವನ್ನು ಸಂಪರ್ಕಿಸಿ ಮಾತನಾಡ್ತಾಳಾ, ಇದರಿಂದ ಆಕೆ ಎದುರಿಸುವ ಸಮಸ್ಯೆಗಳೇನು ಎಂಬುದೇ ಚಿತ್ರದ ಕತೆ.

  ಪಾಸಿಟಿವ್ ಹಾಗೂ ನೆಗೆಟಿವ್

  ಪಾಸಿಟಿವ್ ಹಾಗೂ ನೆಗೆಟಿವ್

  ಚಿತ್ರದ ಪ್ರೊಡಕ್ಷನ್ ವ್ಯಾಲ್ಯೂ, ಕ್ಯಾಮೆರಾ ವರ್ಕ್, ವಿಶೇಷವಾಗಿ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಚಿತ್ರದ ಪ್ಲಸ್ ಪಾಯಿಂಟ್ ಎನ್ನಬಹುದು. ಇನ್ನು ಚಿತ್ರದ ಕಥೆ ಸುಲಭವಾಗಿ ಗೆಸ್ ಮಾಡುವಂತಿದ್ದು, ಕಥೆಯಲ್ಲಿ ಟ್ವಿಸ್ಟ್ ಎಂಬುದಕ್ಕೆ ಸ್ಥಾನವಂತೂ ಇಲ್ಲ, ಕ್ಲೈಮ್ಯಾಕ್ಸ್ ಟೊಳ್ಳು. ನಾಯಕಿ ಸೂಸನ್ ಕುಟುಂಬ ಎದುರಿಸುವ ಸಮಸ್ಯೆಗಳಿಗೆ ಕಾರಣವೇನು, ಯಾಕಾದರೂ ಇದೆಲ್ಲಾ ನಡೆಯಿತು ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತೆ ಎಂದು ಕೊನೆಯವರೆಗೂ ಕುಳಿತರೆ ಸಮಯಹಾಳು. ಭೂತೋಚ್ಛಾಟನೆ ಕಥೆ ಇರುವ ಚಿತ್ರಗಳನ್ನು ನೋಡಿರುವ ಸಿನಿ ರಸಿಕರಿಗೆ ಈ ಚಿತ್ರ ವೀಕ್ಷಿಸುವಾಗ ಎಲ್ಲಿಯೋ ನೋಡಿದ ನೆನಪು ಎನಿಸುತ್ತೆ. ಚಿತ್ರ ಕೇವಲ 99 ನಿಮಿಷಗಳಷ್ಟು ಮಾತ್ರ ಇರುವುದು ಪ್ರೇಕ್ಷಕರಿಗೆ ದೊಡ್ಡ ಪ್ಲಸ್ ಪಾಯಿಂಟ್. ಹಾರರ್ ಚಿತ್ರ ವೀಕ್ಷಿಸಿ ಅಭ್ಯಾಸ ಉಳ್ಳವರು ಕನೆಕ್ಟ್ ಎಂಬ ಮತ್ತೊಂದು ಹಾರರ್ ಥ್ರಿಲ್ಲರ್ ನೋಡಿಬಿಡೋಣ ಎಂದುಕೊಂಡರೆ ಅದು ನಿಮ್ಮ ಎಡವಟ್ಟೇ ಸರಿ. ಹಾರರ್ ಥ್ರಿಲ್ಲರ್ ಚಿತ್ರಗಳನ್ನು ನೋಡಿಲ್ಲ, ಕೇವಲ ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌ಗೂ ಹೆದರುತ್ತೇನೆ ಎನ್ನುವ ಸಿನಿ ಪ್ರೇಕ್ಷಕರು ಮಾತ್ರ ಸಮಯವಿದ್ದರೆ ಈ ಚಿತ್ರವನ್ನು ಒಮ್ಮೆ ನೋಡಬಹುದು.

  ಕಲೆಕ್ಷನ್ ಕೂಡ ಕಡಿಮೆ

  ಕಲೆಕ್ಷನ್ ಕೂಡ ಕಡಿಮೆ

  ಇನ್ನು ಕನೆಕ್ಟ್ ಚಿತ್ರ ಬಿಡುಗಡೆಯ ದಿನ ತಮಿಳುನಾಡಿನಲ್ಲಿ ಒಂದು ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ವಿಶ್ವದಾದ್ಯಂತ 1.25 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಕಲೆಕ್ಷನ್ ವಿಚಾರದಲ್ಲಿ ಸಹ ಕನೆಕ್ಟ್ ಸರಿಯಾಗಿ ಕನೆಕ್ಟ್ ಆಗಿಲ್ಲ ಹಾಗೂ ಕಲೆಕ್ಟ್ ಮಾಡಿಲ್ಲ. ಈ ಪರಿ ನಿರಾಸೆ ಮೂಡಿಸಿರುವ ಈ ಚಿತ್ರವನ್ನು ಚಿತ್ರದ ನಿರ್ಮಾಪಕರಾದ ನಯನತಾರಾ ಪತಿ ವಿಘ್ನೇಶ್ ಶಿವನ್ ನೇರವಾಗಿ ಓಟಿಟಿಯಲ್ಲಿಯೇ ಬಿಡುಗಡೆಗೊಳಿಸಿದ್ದರೆ ಉತ್ತಮ ಆಯ್ಕೆಯಾಗಿರುತ್ತಿತ್ತು.

  English summary
  Nayanthara starrer Connect movie fail to connect with people. Take a look
  Friday, December 23, 2022, 15:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X