twitter
    For Quick Alerts
    ALLOW NOTIFICATIONS  
    For Daily Alerts

    'ಜಾಗ್ವಾರ್' ನೋಡಿದ ವಿಮರ್ಶಕರು ಮಾಡಿದ ಕಾಮೆಂಟ್ ಗಳಿವು..

    By Harshitha
    |

    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ 'ಜಾಗ್ವಾರ್' ವಿಶ್ವದಾದ್ಯಂತ ತೆರೆಕಂಡು, ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ.

    ಮನರಂಜನೆಯ ಎಲ್ಲಾ ಮಸಾಲೆ ಮಿಕ್ಸ್ ಆಗಿರುವ 'ಜಾಗ್ವಾರ್' ಚಿತ್ರ ನೋಡಿರುವ ಸಿನಿ ಪ್ರಿಯರು ನಟ ನಿಖಿಲ್ ಕುಮಾರ್ ಗೆ ಜೈಕಾರ ಹಾಕಿದ್ದಾರೆ, ಶಿಳ್ಳೆ ಹೊಡೆದಿದ್ದಾರೆ, ಚಪ್ಪಾಳೆ ತಟ್ಟಿದ್ದಾರೆ. [ವಿಮರ್ಶೆ : ಮಿಂಚಿನ ವೇಗದ 'ಜಾಗ್ವಾರ್' ಚಿಂದಿ ಚಿತ್ರಾನ್ನ]

    ಸೇಮ್ ಟು ಸೇಮ್ ಇದೇ ರೀತಿ ನಮ್ಮ ವಿಮರ್ಶಕರು ಕೂಡ ನಿಖಿಲ್ ಕುಮಾರ್ ರನ್ನ ಬೆನ್ನು ತಟ್ಟಿ, 'ಜಾಗ್ವಾರ್' ಚಿತ್ರಕ್ಕೆ ಭೇಷ್ ಅಂದಿದ್ದಾರಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಜಾಗ್ವಾರ್' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ನೋಡಿ....

    ಆಕ್ಷನ್ ಆಂಗಲ್ ನಲ್ಲಿ 'ಜಾಗ್ವಾರ್' ಸೂಪರ್ : ವಿಜಯ ಕರ್ನಾಟಕ

    ಆಕ್ಷನ್ ಆಂಗಲ್ ನಲ್ಲಿ 'ಜಾಗ್ವಾರ್' ಸೂಪರ್ : ವಿಜಯ ಕರ್ನಾಟಕ

    ಸಿನಿಮಾ ಮೇಕಿಂಗ್ ಅದ್ಧೂರಿಯಾಗಿದೆ. ವಿಜಯೇಂದ್ರ ಪ್ರಸಾದ್‌ ಅವರ ಕಥೆಗೆ ಇನ್ನಷ್ಟು ವೇಗದ ಅವಶ್ಯಕತೆ ಇತ್ತು. ನಾಯಕ ನಟ ನಿಖಿಲ್ ಕುಮಾರ್‌ ನೃತ್ಯ ಮತ್ತು ಆಕ್ಷನ್ ದೃಶ್ಯಗಳಲ್ಲಿ ಪರ್ಫೆಕ್ಟ್. ನಟನೆಯಲ್ಲಿ ಪಳಗಬೇಕಿದ್ದರೂ ಮೊದಲ ಸಿನಿಮಾದಲ್ಲೇ ಉತ್ತಮ ಪ್ರದರ್ಶನ ನೀಡಿದ್ದಾರೆ. ಡಬಲ್ ಶೇಡ್ನಲ್ಲಿ ಕಷ್ಟಪಟ್ಟು ನಟಿಸಿದ್ದಾರೆ. ಕ್ಯಾಮೆರಾ ಕೆಲಸ ಅಚ್ಚುಕಟ್ಟಾಗಿದೆ. ನಾಯಕಿ ದೀಪ್ತಿ ಸತಿ ಪರವಾಗಿಲ್ಲ. ಗ್ಲಾಮರ್ ಲುಕ್‌ನಲ್ಲಿ ನೋಡಿದರೆ ಸೂಪರ್‌. ಥಮನ್ ಸಂಗೀತದಲ್ಲಿ ಬಂದಿರುವ ಹಾಡುಗಳಲ್ಲಿ ತೆಲುಗಿನ ಛಾಯೆ ಇದೆ. ಜಗಪತಿ ಬಾಬು, ಸಂಪತ್‌ಕುಮಾರ್‌, ಆದಿತ್ಯ ಮೆನನ್ ತಮಗೊಪ್ಪಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಾಗೆ ಬಂದು ಹೀಗೆ ಹೋಗುವ ರಮ್ಯಕೃಷ್ಣ ಗಮನ ಸೆಳೆಯುತ್ತಾರೆ. ಇನ್ನು ಭಜರಂಗಿ ಲೋಕಿ ಇಲ್ಲೂ ತಮ್ಮ ಅಬ್ಬರದ ನಟನೆಯನ್ನು ಮುಂದುವರಿಸಿದ್ದಾರೆ. ಆಕ್ಷನ್ ಪ್ರಿಯರಿಗೆ ‘ಜಾಗ್ವಾರ್' ಒಂದೊಳ್ಳೆ ರಸದೌತಣ ಎನ್ನಬಹುದು. ಸ್ವತಃ ಸುದ್ದಿ ವಾಹಿನಿ ಹೊಂದಿರುವ ನಿರ್ಮಾಪಕರ ಈ ಚಿತ್ರದಲ್ಲಿ ಸುದ್ದಿ ವಾಹಿನಿಗಳು ಟಿಆರ್ ಪಿಗಾಗಿ ಏನು ಬೇಕಾದರೂ ಮಾಡುತ್ತವೆ ಎಂದು ಹೇಳಿಸಿರುವುದು ಹೆಚ್ಚು ಗಮನ ಸೆಳೆಯುತ್ತದೆ! - ಹರೀಶ್ ಬಸವರಾಜ್

    ವೇಗೋತ್ಕರ್ಷ, ಮನರಂಜನೆ ಸೂತ್ರ! - ಪ್ರಜಾವಾಣಿ

    ವೇಗೋತ್ಕರ್ಷ, ಮನರಂಜನೆ ಸೂತ್ರ! - ಪ್ರಜಾವಾಣಿ

    ಕಥೆಯ ಹೊರತಾಗಿ ಹೊಸ ನಾಯಕನಟನನ್ನು ಪರಿಚಯಿಸಲು ಅಗತ್ಯವಿರುವ ಎಲ್ಲ ಪ್ರಮುಖ ಅಂಶಗಳನ್ನು ‘ಜಾಗ್ವಾರ್' ಒಳಗೊಂಡಿದೆ. ಶೀರ್ಷಿಕೆಯೇ ಹೇಳುವಂತೆ ನಾಯಕನಿಲ್ಲಿ ‘ಜಾಗ್ವಾರ್'ನಂತೆಯೇ ಬೇಟೆಯಾಡುವ, ವೇಗವಾಗಿ ಓಡುವ-ಜಿಗಿಯುವ ಚಾಣಾಕ್ಷ. ಈ ಮೂಲಕವೇ ಚಿತ್ರದ ಕಥೆಯ ಒಂದು ಎಳೆಯನ್ನು ಸುಲಭವಾಗಿ ಊಹಿಸಬಹುದು. ಅದ್ದೂರಿತನ, ಪ್ರತಿ ದೃಶ್ಯದಲ್ಲಿಯೂ ಎದ್ದುಕಾಣುವ ಸಿರಿವಂತಿಕೆ, ವೈರಿಗಳನ್ನು ಬಗ್ಗು ಬಡಿಯುವ ಕಿಚ್ಚು-ರೊಚ್ಚು, ಮೈನವಿರೇಳಿಸುವ ಸಾಹಸಗಳು, ಕೆಲವೊಂದು ಶಿಳ್ಳೆ ಹೊಡೆಸುವ ಸಂಭಾಷಣೆಗಳು, ಹೆಸರಾಂತ ಕಲಾವಿದರ ದಂಡು. ವಂಚನೆ, ದ್ರೋಹ, ಕ್ರೌರ್ಯ ಮತ್ತು ಸೇಡಿನ ತಥಾಕಥಿತ ಸಂಗತಿಗಳನ್ನು ಬದಿಗಿರಿಸಿದರೆ ‘ಜಾಗ್ವಾರ್' ಆರಂಭದಿಂದಲೂ ಕುತೂಹಲ ಉಳಿಸಿಕೊಳ್ಳುವ ಅಪ್ಪಟ ಮನರಂಜನೆಯ ಚಿತ್ರ. ಪ್ರತೀಕಾರದ ಕುಲುಮೆಯೊಳಗಿರುವ ನಾಯಕ, ಮತ್ತವನ ಸಾಹಸಗಳು ಮಾತ್ರವೇ ಇಡೀ ಸಿನಿಮಾವನ್ನು ಆವರಿಸಿಕೊಂಡಿಲ್ಲ. ತನ್ನ ತಾಯಿಯ ಬಯಕೆಯಂತೆ ವೈರಿಗಳನ್ನು ಸಂಹರಿಸಲು ಬರುವ ನಾಯಕನಲ್ಲದೆಯೇ, ಆದರ್ಶಗಳನ್ನು ಬೆಳೆಸಿಕೊಂಡ ಮತ್ತೊಬ್ಬ ವಿದ್ಯಾರ್ಥಿ ನಾಯಕನ ಸೃಷ್ಟಿ ಈ ಚಿತ್ರದ ವಿಶೇಷ. - ಅಮಿತ್.ಎಂ.ಎಸ್

    ಮೊದಲ ಮೋಡಿಗೆ ಹೇಳಿ ಮಾಡಿಸಿದ ಹೂರಣ - ಉದಯವಾಣಿ

    ಮೊದಲ ಮೋಡಿಗೆ ಹೇಳಿ ಮಾಡಿಸಿದ ಹೂರಣ - ಉದಯವಾಣಿ

    ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ಹೀರೋಗೆ ಏನು ಬೇಕೋ ಅವೆಲ್ಲವೂ ಚಿತ್ರದಲ್ಲಿದೆ ಮತ್ತು ಅದೆಲ್ಲದರಲ್ಲೂ ನಿಖಿಲ್ ಗಮನ ಸೆಳೆಯುತ್ತಾರೆ. ಹಾಡು ಮತ್ತು ಫೈಟು ಇವೆರಡೂ ನಿಖಿಲ್ ಗೆ ಪ್ಲಸ್ಸು. ಇನ್ನು ನಟನೆಯಲ್ಲಿ ಇನ್ನಷ್ಟು ಚಳಿ ಬಿಡಬೇಕಿದೆ. ನಾಯಕಿ ದೀಪ್ತಿಗೆ ಹೆಚ್ಚು ಕೆಲಸವಿಲ್ಲ. ಜಗಪತಿ ಬಾಬು, ಅವಿನಾಶ್, ಸಂಪತ್, ರಮ್ಯಾ ಕೃಷ್ಣ, ಆದಿತ್ಯ ಬಾಬು, ಲೋಕಿ ಎಲ್ಲರೂ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ - ಚೇತನ್ ನಾಡಿಗೇರ್

    Jaguar Review - Bangalore Mirror

    Jaguar Review - Bangalore Mirror

    For once, a hyped debut movie does not disappoint. Jaguar is not a great film but isn't a pushover either. It has the kind of budget-induced grandeur and big names that most debutants can only dream of. Nikhil Kumar manages to bring enough hard work from behind the scenes to make it worthwhile. He can dance well, look convincing in big stunt scenes and also has some acting abilities to claim a place for himself in Sandalwood. However, the film is packed with so many characters doing very little. It has an open-ended story with the protagonist murdering a judge on live television in the very first scene. - Shyam prasad

    Jaguar Review - Times of India

    Jaguar Review - Times of India

    There are two ways that one can make a debut today. One is go out all guns blazing with a commercial entertainer like the way star son vehicles have been. The other is to try and impress with a different subject. Nikhil Kumar, with the baggage of being a former Chief Minister's son (HD Kumaraswamy) and an ex-Prime Minister's grandson (HD Deve Gowda), has chosen the former. Jaguar is a slick, stylish film that has all the necessary commercial elements that one requires to impress the fans - Sunayana Suresh

    English summary
    Kannada Actor Nikhil Kumar starrer Kannada Movie 'Jaguar' has received positive response from the critics. Here is the collection of 'Jaguar' reviews by Top News Papers of Karnataka.
    Saturday, October 8, 2016, 13:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X