twitter
    For Quick Alerts
    ALLOW NOTIFICATIONS  
    For Daily Alerts

    Rider Movie Review: ಚಿನ್ನು- ಕಿಟ್ಟಿಯ ಪ್ರೀತಿಯ ಕಥೆ ವ್ಯಥೆಯೇ ರೈಡರ್!

    |

    'ರೈಡರ್' ನಟ ನಿಖಿಲ್ ಕುಮಾರ್‌ ಅಭಿನಯದ 3ನೇ ಸಿನಿಮಾ. ಹಾಗಾಗಿ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಈ ಚಿತ್ರ ಹೆಚ್ಚಾಗಿ ನಿರೀಕ್ಷೆ ಹುಟ್ಟು ಹಾಕಿದ್ದೇ ನಿಖಿಲ್ ಅಭಿನಯದ ಸಿನಿಮಾ ಎನ್ನುವ ಕಾರಣಕ್ಕಾಗಿ. ಸದ್ಯ ಚಿತ್ರ ರಿಲೀಸ್‌ ಆಗಿದೆ. ಹಾಗಿದ್ದರೆ 'ರೈಡರ್' ಹೇಗಿದೆ. 'ರೈಡರ್'‌ ಇರುವ ನಿರೀಕ್ಷೆಗಳನ್ನೆಲ್ಲಾ ಮುಟ್ಟಿದ್ದಾನ ಎನ್ನುವ ವಿಮರ್ಶೆ ಇಲ್ಲಿದೆ ಮುಂದೆ ಓದಿ...

    ಚಿತ್ರದ ಟೈಟಲ್‌ 'ರೈಡರ್'. ಚಿತ್ರ ನೋಡುವವರಿಗೆ ಈ ಟೈಟಲ್ ಚಿತ್ರಕ್ಕೆ ಯಾಕೆ ಇಟ್ಟರು ಎನ್ನು ಪ್ರಶ್ನೆ ಮೂಡುತ್ತದೆ. ಉತ್ತರ ಸಿಗುವುದಿಲ್ಲ. ಇಲ್ಲಿ 'ರೈಡರ್' ಜೊತೆಗೆ ಚಿತ್ರಕ್ಕೆ ಇರುವ ಒಂದೇ ಒಂದು ಕನೆಕ್ಷನ್‌ ಅಂದರೆ ಅದು ಚಿತ್ರದ ನಟ ಸೂರ್ಯ ಬಾಸ್ಕೆಟ್‌ ಬಾಲ್‌ ಪ್ಲೇಯರ್‌ ಎನ್ನುವುದು. ಹಾಗಂತ ಬಾಸ್ಕೆಟ್‌ ಬಾಲ್‌ ಆಟದ ಮೇಲೆ ಚಿತ್ರ ಆಧಾರವಾಗಿಲ್ಲ. ಇದು ಒಂದು ಸರಳ ಪ್ರೇಮ ಕಥೆ.

    Rating:
    2.5/5

    'ರೈಡರ್' ಚಿತ್ರ ಸರಳವಾದ ಒಂದು ಫೀಲ್ ಗುಡ್‌ ಚಿತ್ರ ಎಂದು ಹೇಳಬಹುದು. ಆದರೆ ನಿರ್ದೇಶಕ ಚಿತ್ರ ನೋಡುವ ಪ್ರೇಕ್ಷಕರನ್ನು ಕಷ್ಟ ಪಟ್ಟು ಸೀಟಿನಲ್ಲಿ ಕೂರುವ ಹಾಗೆ ಮಾಡಿದ್ದಾರೆ. ಇಡೀ ಚಿತ್ರವನ್ನು ಕೇವಲ ಕ್ಲೈಮ್ಯಾಕ್ಸ್‌ಗಾಗಿಯೇ ನೋಡಬೇಕು. ಪ್ರೇಕ್ಷಕರು ಚಿತ್ರದಲ್ಲಿ ಎಂಗೇಜ್‌ ಆಗುವ ಸಮಯಕ್ಕೆ ಕಥೆಯನ್ನು ಬೇರೆ ಕಡೆಗೆ ಬಲಂತವಾಗಿ ಎಳೆಯಲಾಗುತ್ತದೆ.

    ಚಿತ್ರದ ಆರಂಭದಲ್ಲೇ ಅಂತ್ಯದ ಸುಳಿವು!

    ಚಿತ್ರದ ಆರಂಭದಲ್ಲೇ ಅಂತ್ಯದ ಸುಳಿವು!

    ಇನ್ನು ರೈಡರ್‌ ಚಿತ್ರ ಆರಂಭ ಆದಾಗಲೇ ಅಂತ್ಯ ಏನು ಎನ್ನುವುದನ್ನು ಸರಳವಾಗಿ ಊಹಿಸಬಹುದು. ಆದರೆ ಆ ಊಹೆ ಸರಿಯೋ, ತೊಪ್ಪೋ ಎನ್ನುವ ಕುತೂಹಲ ಚಿತ್ರವನ್ನು ನೋಡುವಂತೆ ಮಾಡುತ್ತದೆ. ಅನಾಥಾಶ್ರಮದಲ್ಲಿ ಆಪ್ತ ಸ್ನೇಹಿತರಾಗುವ ಕಿಟ್ಟಿ ಮತ್ತು ಚಿನ್ನು ಬೇರೆ ಆಗುತ್ತಾರೆ. ನಂತರ ಅವರು ಕೊನೆಯಲ್ಲಿ ಒಂದಾಗುತ್ತಾರೆ. ಇದು ಚಿತ್ರದ ಒನ್ ಲೈನ್‌ ಸ್ಟೋರಿ. ಆರಂಭದಲ್ಲಿ ದೂರ ಆದ ಕಿಟ್ಟಿ, ಚಿನ್ನು ಅಂತ್ಯದಲ್ಲಿ ಒಂದಾಗುವುದೇ ರೈಡರ್. ಈ ನಡುವೆ ಏನೆಲ್ಲಾ ಆಗುತ್ತೆ. ಏನಲ್ಲಾ ಟ್ವಿಸ್ಟ್‌ಗಳು ಬರ್ತವೆ ಎನ್ನುವುದನ್ನು ಎರಡೂವರೆ ತಾಸು ಹೇಳಲಾಗಿದೆ.

    ನಾಯಕನಿಗಿಂತ ಕಥೆಗೆ ಹೆಚ್ಚು ಒತ್ತು!

    ನಾಯಕನಿಗಿಂತ ಕಥೆಗೆ ಹೆಚ್ಚು ಒತ್ತು!

    ಇನ್ನೂ ಈ ರೀತಿಯ ಚಿತ್ರಗಳಲ್ಲಿ ನಾಯಕ ನಟನನ್ನೇ ಇಡೀ ಚಿತ್ರ ಮೆರೆಸಲಾಗುತ್ತದೆ. ಈ ಹಿಂದೆ ಬಂದ ನಿಖಿಲ್‌ ಅವರ 'ಜಾಗ್ವಾರ್' ಮತ್ತು 'ಸೀತಾರಾಮ ಕಲ್ಯಾಣ' ಚಿತ್ರಗಳು ಕೂಡ ಹಾಗೆ ಇದ್ದವು. ಆದರೆ ಈ ವಿಚಾರದಲ್ಲಿ 'ರೈಡರ್' ಕೊಂಚ ವಿಭಿನ್ನವಾಗಿ ನಿಲ್ಲುತ್ತದೆ. 'ರೈಡರ್' ಎನ್ನುವ ಟೈಟಲ್ ಇದೊಂದು ಭಯಂಕರ ಮಾಸ್‌ ಚಿತ್ರ ಎನಿಸುತ್ತದೆ. ಆದರೆ ಚಿತ್ರದಲ್ಲಿ ನಾಕಯನನ್ನು ಆರಾಧಿಸುವ ಮಾಸ್‌ ಅಂಶಗಳು ಇಲ್ಲ. ಚಿತ್ರದಲ್ಲಿ ಆಗಾಗ ಫೈಟ್‌ ಸೀನ್‌ಗಳು ಬಂದು ಹೋಗುತ್ತವೆ. ಫೈಟ್‌ ದೃಶ್ಯಗಳನ್ನು ಅದ್ದೂರಿಯಾಗಿಯೇ ಕಂಪೋಸ್‌ ಮಾಡಲಾಗಿದೆ. ಹಾಗಂತಾ ಇದು ಒಬ್ಬ ವಿಲನ್ ಮತ್ತು ಹೀರೋ ನಡುವಿನ ಜಿದ್ದಾ ಜಿದ್ದಿ ಅಲ್ಲ.

    ಚಿತ್ರದಲ್ಲಿ ಸನ್ನಿವೇಶಗಳೇ ದೊಡ್ಡ ವಿಲನ್!

    ಚಿತ್ರದಲ್ಲಿ ಸನ್ನಿವೇಶಗಳೇ ದೊಡ್ಡ ವಿಲನ್!

    ಈ ಚಿತ್ರದ ಮತ್ತೊಂದು ಪ್ಲಸ್‌ ಪಾಯಿಂಟ್‌ ಎಂದರೆ ಇದು ಒಬ್ಬ ದೊಡ್ಡ ವಿಲನ್‌ ಮತ್ತು ಹೀರೋ ನಡುವಿನ ಜಿದ್ದಾ ಜಿದ್ದಿನ ಕಥೆಯಲ್ಲ. ಇಲ್ಲಿ ಬರುವ ಸನ್ನಿವೇಶಗಳೇ ಕಥೆಗೆ ವಿಲನ್. ಹೀಗೆ ಎಲ್ಲಾ ಕೆಟ್ಟ ಸನ್ನಿವೇಶಗಳನ್ನು ದಾಟಿ ಕಿಟ್ಟಿ, ಚಿನ್ನು ಪ್ರೀತಿ ಹೇಗೆ ಗೆಲ್ಲುತ್ತದೆ ಎನ್ನುವುದನ್ನು ಕಟ್ಟಿ ಕೊಡಲಾಗಿದೆ. ಆದರೆ ಆರಂಭದಿಂದಲೇ ಅಂತ್ಯಕ್ಕಾಗಿ ಪ್ರೇಕ್ಷಕರು ಕಾಯಬೇಕಾಗುತ್ತದೆ. ಹಾಗಾಗಿ ಒಂದಷ್ಟು ಕಡೆ ಲ್ಯಾಗ್‌ ಎನಿಸುತ್ತದೆ. ಇನ್ನೂ ಚಿತ್ರವನ್ನು ಕ್ಲೈಮ್ಯಾಕ್ಸ್‌ಗೆ ಮುಟ್ಟಿಸುವ ಭರದಲ್ಲಿ ಅಲ್ಲಲ್ಲಿ ಕತೆಯನ್ನು ರಬ್ಬರ್‌ ರೀತಿ ಎಳೆದು ಬಿಟ್ಟಿದ್ದಾರೆ ನಿರ್ದೇಶಕ.

    ಕಿಟ್ಟಿ ಅಲಿಯಾಸ್‌ ಸೂರ್ಯನಾಗಿ ನಿಖಿಲ್‌ ಕುಮಾರ್!

    ಕಿಟ್ಟಿ ಅಲಿಯಾಸ್‌ ಸೂರ್ಯನಾಗಿ ನಿಖಿಲ್‌ ಕುಮಾರ್!

    'ರೈಡರ್'‌ ಚಿತ್ರದ ಆಧಾರ ನಟ ಕಿಟ್ಟಿ ಮತ್ತು ನಟಿ ಚಿನ್ನು. ನಿಖಿಲ್‌ ಕುಮಾರ್‌ ಚಿಕ್ಕ ವಯಸ್ಸಿನಲ್ಲಿ ಕಿಟ್ಟಿಯಾಗಿ ನಂತರ ಸೂರ್ಯನಾಗಿ ಕಾಣಿಸಿಕೊಂಡಿದ್ದಾರೆ. ನಿಖಿಲ್ ಡಾನ್ಸ್‌ ಮತ್ತು ಫೈಟ್‌ ಬಗ್ಗೆ ಚೆನ್ನಾಗಿ ಇದೆ. ಇನ್ನು ಅಭಿನಯದ ವಿಚಾರಕ್ಕೆ ಬಂದರೆ ಹಿಂದಿನ ಎರಡು ಚಿತ್ರಗಳಿಗಿಂತ ಈ ಚಿತ್ರದಲ್ಲಿ ತುಂಬಾನೆ ಸಟಲ್‌ ಆಗಿ ಅಭಿನಯಿಸಿದ್ದಾರೆ. ಎಲ್ಲೂ ಕೂಡ ಇದು ಅಭಿನಯ ಎನಿಸುವುದಿಲ್ಲ. ನಿಖಿಲ್‌ ಅವರ ಸಹಜ ಅಭಿನಯ ಇಷ್ಟವಾಗುತ್ತೆ. ನಿಖಿಲ್ ಪಾತ್ರವನ್ನೂ ಕೂಡ ಹಾಗೆ ಎಣೆಯಲಾಗಿದೆ. ಅವರ ಆಕ್ರೋಶ, ರೋಷ ಎಲ್ಲವೂ ಫೈಟ್ ದೃಶ್ಯಕ್ಕೆ ಮಾತ್ರ ಸಿಮೀತ ಆಗಿದೆ. ಅದರ ಹೊರತಾಗಿ ನಿಖಿಲ್ ಒಬ್ಬ ಸಾಮಾನ್ಯ ಹುಡುಗನ ಹಾಗೆ ಕಾಣಿಸಿಕೊಂಡಿದ್ದಾರೆ.

    ಒಂದಲ್ಲಾ ಎರಡಲ್ಲಾ ನೂರಾರು ಟ್ವಿಸ್ಟ್‌ಗಳು!

    ಒಂದಲ್ಲಾ ಎರಡಲ್ಲಾ ನೂರಾರು ಟ್ವಿಸ್ಟ್‌ಗಳು!

    ಒಮ್ಮೆ ಕಿಟ್ಟಿ-ಚಿನ್ನು ಒಬ್ಬರನ್ನೊಬ್ಬರು ಹುಡುಕಲು ಶುರುಮಾಡಿದ ಬಳಿಕ, ಸಾಲು ಸಾಲು ಟ್ವಿಸ್ಟ್‌ಗಳು ಬಂದು ಹೋಗುತ್ತವೆ. ಚಿತ್ರ ಪೂರ್ತಿ ಈ ಟ್ವಿಸ್ಟ್‌ಗಳಲ್ಲೇ ಮುಗಿದು ಬಿಡುತ್ತೆ. ಆದರೆ ಕ್ಲೈಮ್ಯಾಕ್ಸ್‌ ಊಹೆ ಮಾಡುವ ಪ್ರೇಕ್ಷಕರಿಗೆ ಈ ಟ್ವಿಸ್ಟ್‌ಗಳು ಮಜಾ ಕೊಡುತ್ತವೆ. ಇನ್ನೇನು ಚಿನ್ನು-ಕಿಟ್ಟಿ ಒಂದಾಗಬೇಕು ಅಷ್ಟರಲ್ಲೇ ಅಲ್ಲೇನೋ ಒಂದು ಎಡವಟ್ಟು ಆಗಿ ಬಿಡುತ್ತದೆ. ಹೀಗೆ ಇಡೀ ಚಿತ್ರದಲ್ಲಿ ಹಲವು ಟ್ವಿಸ್ಟ್‌ಗಳು ಇವೆ. ಚಿತ್ರದಲ್ಲಿ ವಿಲನ್‌ ಪಾತ್ರವನ್ನು ಗರುಡರಾಮ್‌ ಮಾಡಿದ್ದಾರೆ. ಆದರೆ ಈ ವಿಲನ್‌ ಪಾತ್ರ ಕೊಂಚ ವಿಭಿನ್ನವಾಗಿದೆ. ಹೀರೋನನ್ನು ಒಬ್ಬ ಸಾಮಾನ್ಯ ಹುಡುಗಂತೆ ತೋರಿಸಿರುವ ಕಾರಣಕ್ಕೆ ಸಾವಿರಾರು ಕೋಟಿ ಬಂಡವಾಳ ಹೂಡಿ ವ್ಯವಹಾರ ಮಾಡಿದ ವಿಲನ್‌ ಹೀರೋ ಮುಂದೆ ತೊಡೆ ತಟ್ಟಿ ಫೈಟ್‌ ಮಾಡಲ್ಲ. ಇನ್ನೇನೂ ಹೀರೋ, ವಿಲನ್‌ಗೂ ಮಸ್ತ್‌ ಫೈಟ್‌ ನಡೆಯುತ್ತೆ ಎನ್ನುವಷ್ಟರದಲ್ಲಿ ಪರಿಸ್ಥಿತಿ ಬೇರೆ ರೂಪ ಪಡೆದುಕೊಳ್ಳುತ್ತದೆ. ಆ ಟ್ವಿಸ್ಟ್‌ ಏನು ಎನ್ನುವುದನ್ನು ನೀವು ಚಿತ್ರದಲ್ಲಿ ನೋಡಬೇಕು.

    ಚಿತ್ರದ ತಾಂತ್ರಿಕ ವರ್ಗದ ಕೈ ಚಳಕ ಚೆನ್ನಾಗಿದೆ. ತೆಲುಗಿನಲ್ಲಿ ಒಂದೆರಡು ಚಿತ್ರಗಳನ್ನು ಮಾಡಿರುವ ಅನುಭವ ನಿರ್ದೇಶಕ ವಿಜಯ್‌ಕೊಂಡ ಅವರಿಗೆ ಇದೆ. ಛಾಯಾಗ್ರಾಹಕ ಶ್ರೀಶ ಕುದುವಳ್ಳಿ ಅವರ ಕ್ಯಾಮೆರಾ ವರ್ಕ್ ಚೆನ್ನಾಗಿ ಮೂಡಿ ಬಂದಿದೆ. ಚಿತ್ರಗಳನ್ನೂ ಸುಂದರ ತಾಣದಲ್ಲಿ ಸುಂದರವಾಗಿ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಲಾಗಿದೆ. ಅರ್ಜುನ್‌ ಜನ್ಯ ಸಂಗೀತ ಹಾಡಿನಲ್ಲಿ ಮಾತ್ರ ಗಮನ ಸೆಳೆಯುತ್ತದೆ.

    ಕಲಾವಿದರ ದಂಡೇ ರೈಡರ್ ಚಿತ್ರದಲ್ಲಿ ಇದೆ!

    ಕಲಾವಿದರ ದಂಡೇ ರೈಡರ್ ಚಿತ್ರದಲ್ಲಿ ಇದೆ!

    ರೈಡರ್‌ ಚಿತ್ರದ ನಾಕಿಯಾಗಿ ಚಿನ್ನು ಪಾತ್ರದಲ್ಲಿ ಕಾಶ್ಮೀರ ಪರ್ದೇಶಿ ಅಭಿನಯಿಸಿದ್ದಾರೆ. ತಕ್ಷಣಕ್ಕೆ ಕನೆಕ್ಟ್‌ ಆಗದೇ ಇದ್ದರೂ ಸಿನಿಮಾ ಸಾಗುತ್ತಾ ಚಿನ್ನು ಪಾತ್ರದಲ್ಲಿ ಕಾಶ್ಮೀರ ಕೂಡ ಇಷ್ಟ ಆಗುತ್ತಾರೆ. ಇನ್ನು ಚಿತ್ರದ ಲಾಗ್‌ ಎನಿಸಿದಾಗ ಚಿಕ್ಕಣ್ಣ ಆಗಾಗ ಬಂದು ತಮ್ಮ ಕಾಮಿಡಿ ಕಚಗುಳಿ ಇಂದ ಪ್ರೇಕ್ಷಕರನ್ನು ನಗಿಸಿ ಹೋಗುತ್ತಾರೆ. ಇನ್ನು ಅಚ್ಚುತ್ ಕುಮಾರ್, ರಾಜೇಶ್‌ ನಟರಂಗ್, ಶಿವರಾಜ್‌ ಕೆ,ಆರ್‌ ಪೇಟೆ, ಶೋಭರಾಜ್, ದತ್ತಣ್ಣ, ಮಂಜು ಪಾವಗಡ ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


    ಒಟ್ಟಾರೆ ರೈಡರ್‌ ಚಿತ್ರವನ್ನು ಒಮ್ಮೆ ಆರಾಮಾಗಿ ನೋಡ ಬಹುದು. ಮೊದಲೇ ಹೇಳಿದ ಹಾಗೆ ಲ್ಯಾಗ್ ಅನಿಸಿದರೂ ನಿಮ್ಮದೇ ಆದ ಕ್ಲೈಮ್ಯಾಕ್ಸ್‌ ಊಹೆ ನಿಮ್ಮನ್ನು ಸಿನಿಮಾ ನೊಡುವಂತೆ ಮಾಡುತ್ತದೆ.

    English summary
    Rider Kannada Movie Review; Nikhil Kumar, Kashmira Pardeshi starrer Rider Kannada movie review and rating,
    Friday, December 24, 2021, 17:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X